ಸುದ್ದಿ

ಈ ಜಾಗದಲ್ಲಿ ನಿಜಕ್ಕೂ ಸಿಗ್ತಾ 3350 ಟನ್ ಚಿನ್ನ, ಸತ್ಯ ಬಾಯ್ಬಿಟ್ಟ ವಿಜ್ಞಾನಿಗಳು.

293

ಪ್ರತಿಯೊಂದು ದೇಶವೂ ಕೂಡ ತನ್ನ ದೇಶದ ಭೌಗೋಳಿಕ ಸಂಪತ್ತನ್ನು ಹುಡುಕುವ ಪ್ರಯತ್ನವನ್ನು ಯಾವಾಗಲೂ ಕೂಡ ಮಾಡುತ್ತಲೇ ಇರುತ್ತದೆ. ಅದೇ ರೀತಿಯಲ್ಲಿ ಭಾರತದಲ್ಲಿ ಕೂಡ ಅದೆಷ್ಟೋ ಭಾಗಗಲ್ಲಿ ಚಿನ್ನದ ಗಣಿಯನ್ನು ಹುಡುಕುವ ಅದೆಷ್ಟೋ ಪ್ರಯತ್ನಗಳು ನಡೆದಿದ್ದವು. ಆದರೆ ಯಾವುದು ಕೂಡ ಅಷ್ಟೊಂದು ದೊಡ್ಡ ಮಟ್ಟದ ಯಶಸ್ಸು ನೀಡಿರಲಿಲ್ಲ. ಆದರೆ ಸದ್ಯಕ್ಕೆ ಈಗ ಭಾರತದಲ್ಲಿ ಇರುವ ಒಟ್ಟಾರೆ ಚಿನ್ನದ ನಿಕ್ಷೇಪಕ್ಕಿಂತ ಐದು ಪಟ್ಟು ಹೆಚ್ಚು ಚಿನ್ನದ ಗಣಿ ಪತ್ತೆಯಾಗಿದೆ ಎನ್ನುವ ಸುದ್ದಿಯೊಂದು ಇದ್ದಕಿದ್ದಂತೆ ದೇಶದ ಎಲ್ಲ ಮಾಧ್ಯಮಗಳು ಈ ಸುದ್ದಿ ಹೇಳಿದ್ದವು ಆದರೆ ಸದ್ಯಕ್ಕೆ ಸರ್ಕಾರ ಈ ಸುದ್ದಿಯನ್ನು ತಳ್ಳಿ ಹಾಕಿದೆ. ಹೌದು ದೇಶ ಹಿಂದೆಂದೂ ಕಂಡಿರದ ಅದ್ಬುತ ಯಶಸ್ಸೊಂದನ್ನು ಪತ್ತೆಹಚ್ಚುವಲ್ಲಿ ವಿಜ್ಞಾನಿಗಳು ಯಶಸ್ಸನ್ನು ಪಡೆದಿರುವುದು ನಿಜ. ಆದರೆ ನಿಜಕ್ಕೂ ಈ ಸ್ಥಳದಲ್ಲಿ ಅಷ್ಟೊಂದು ಪ್ರಮಾಣದ ಚಿನ್ನದ ಗಣಿ ಇದೆಯಾ ಇದರ ಬಗ್ಗೆ ವಿಜ್ಞಾನಿಗಳು ಹೇಳಿದ್ದೇನು ನೋಡೋಣ.

ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್‌ಐ) ಮತ್ತು ಉತ್ತರ ಪ್ರದೇಶ ಭೂವಿಜ್ಞಾನ ಮತ್ತು ಗಣಿಗಾರಿಕೆ ನಿರ್ದೇಶನಾಲಯವು ಉತ್ತರಪ್ರದೆಶದಲ್ಲಿನ ಸೋನ್‌ಭದ್ರ ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪಗಳನ್ನು ಕಂಡುಹಿಡಿದಿದೆ. ವರದಿಗಳ ಪ್ರಕಾರ, ಚಿನ್ನದ ನಿಕ್ಷೇಪಗಳು ಸೋನ್‌ಪಹಡಿ ಮತ್ತು ಹಾರ್ಡಿ ಕ್ಷೇತ್ರ ಎಂಬ ಎರಡು ಸ್ಥಳಗಳಲ್ಲಿ ಕಂಡುಬಂದಿವೆ. ಆದರೆ ಈ ಪ್ರದೇಶದಲ್ಲಿ ಟನ್ ಗಟ್ಟಲೆ ಚಿನ್ನ ಸಿಕ್ಕಿದೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳು ಈಗ ತಳ್ಳಿ ಹಾಕಿದ್ದಾರೆ. ನಮಗೆ ಸಿಕ್ಕಿರುವ ಅಂದಾಜಿನ ಪ್ರಕಾರ 160 ಕೆಜಿ ಚಿನ್ನವನ್ನಷ್ಟೇ ತೆಗೆಯಬಹುದಾಗಿದೆ. ಒಟ್ಟಾರೆ 56000 ಟನ್ ಚಿನ್ನದ ಅದಿರು ದೊರಕಬಹುದು ಅಷ್ಟೇ ಅದರಿಂದ ಶುದ್ದೀಕರಣ ಆದ ಬಳಿಕ ಏನಿಲ್ಲವೆಂದರೂ 160 ಕೆಜಿ ಚಿನ್ನ ಸಿಗಬಹುದು ಎಂದಿದ್ದಾರೆ.

ಉತ್ತರ ಪ್ರದೇಶದ ಸೋನ್‌ಭದ್ರದಲ್ಲಿ ಸುಮಾರು 3,350 ಟನ್ ಚಿನ್ನದ ಠೇವಣಿ ಪತ್ತೆಯಾಗಿಲ್ಲ ಎಂದು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ಶನಿವಾರ ತಿಳಿಸಿದೆ ಎಂದು ಸ್ಥಳೀಯ ಗಣಿಗಾರಿಕೆ ಅಧಿಕಾರಿಗಳನ್ನು ಉಲ್ಲೇಖಿಸಿ ಹೇಳಲಾಗಿದೆ. ನಮ್ಮ ಹುಡುಕಾಟದ ಸಮಯದಲ್ಲಿ, ನಾವು 120 ಮೀಟರ್ ಮತ್ತು 50 ಮೀಟರ್ ಆಳದ ಕಂದಕವನ್ನು ಹೊಂದಿರುವ ಬಾವಿಗಳನ್ನು ಅಗೆದಿದ್ದೇವೆ. ನಮ್ಮ ವರದಿಯಲ್ಲಿ, ನಾವು ಆಳವಾಗಿ ಹೋದರೆ ಮತ್ತು ಬಾವಿಗಳನ್ನು ಹತ್ತಿರಕ್ಕೆ ಅಗೆದರೆ (120 ಮೀ ಗಿಂತ ಕಡಿಮೆ) ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಚಿನ್ನವನ್ನು ಕಂಡುಹಿಡಿಯುವ ಸಾಧ್ಯತೆಯಿದೆ ಎಂದು ನಾವು ಸೂಚಿಸಿದ್ದೇವೆ. ಆದರೆ ಖಂಡಿತವಾಗಿಯೂ 3,350 ಟನ್ ಅಲ್ಲ ” ವಿಜ್ಞಾನಿ ಓರ್ವರು ತಿಳಿಸಿದ್ದಾರೆ.

ಸದ್ಯಕ್ಕೆ ಏಳು ಸದಸ್ಯರ ತಂಡವೊಂದು ಈ ಜಾಗದಲ್ಲಿ ಇನ್ನು ಅಧ್ಯಯನ ನಡೆಸುತ್ತಿದೆ. ಚಿನ್ನದ ಹೊರತಾಗಿ, ಈ ಪ್ರದೇಶದಲ್ಲಿ ಯುರೇನಿಯಂನಂತಹ ಅಪರೂಪದ ಖನಿಜಗಳ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಉತ್ತರಪ್ರದೇಶದ ಬುಂದೇಲ್‌ಖಂಡ್ ಮತ್ತು ವಿಂಧ್ಯಾನ್ ಜಿಲ್ಲೆಗಳಲ್ಲಿ ಚಿನ್ನ, ವಜ್ರ, ಪ್ಲಾಟಿನಂ, ಸುಣ್ಣದ ಕಲ್ಲು, ಗ್ರಾನೈಟ್, ಫಾಸ್ಫೇಟ್, ಸ್ಫಟಿಕ ಶಿಲೆ ಮತ್ತು ಚೀನಾ ಜೇಡಿಮಣ್ಣಿನಂತಹ ಖನಿಜಗಳಿವೆ ಎನ್ನಲಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಚಿನ್ನದ ರಾಶಿ ರಾಶಿ ಗಣಿಯೆ ಸಿಕ್ಕರೆ ಭಾರತ ಮತ್ತಷ್ಟು ಸೂಪರ್ ಪವರ್ ಆಗಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    300 ವರ್ಷ ನಮ್ಮ ದೇಶ ಅಳಿದ ಕುಟುಂಬದ ಕೊನೆಯ ರಾಣಿ ಯಾವ ಕೆಲಸ ಮಾಡ್ತಿದ್ದಾರೆ ಗೊತ್ತಾ?

    ಭಾರತವನ್ನು ಸುಮಾರು ಮುನ್ನೂರು ವರ್ಷ ಆಳಿದ ರಾಜರ ಕುಟುಂಬದ ಕೊನೆಯ ರಾಣಿ ಈಗ ಎಲ್ಲಿದ್ದಾರೆ..? ಏನು ಮಾಡುತ್ತಿದ್ದಾರೆ..? ಅಂತ ತಿಳಿದರೆ ಶಾಕ್ ಆಗೋದು ಗ್ಯಾರಂಟಿ. ಭಾರತ ದೇಶವನ್ನು ಆಳಿದವರಲ್ಲಿ ಮೊಘಲರ ಪಾತ್ರ ಬಹು ದೊಡ್ಡದು. ಬಾಬರ್ ನಿಂದ ಹಿಡಿದು ಅಕ್ಬರ್, ಔರಂಗಜೇಬ್ ವರೆಗೂ ಅವರ ಆಳ್ವಿಕೆ ಇತ್ತು. 1526 ರಿಂದ 1857 ರವರೆಗೂ ನಮ್ಮ ದೇಶವನ್ನು ಆಳಿದರು. ಮೊಗಲ್ ರಾಜ್ಯ ಪತನದ ನಂತರ ಅವರ ವಂಶಸ್ಥರು ಎಲ್ಲಿಗೆ ಹೋದರು ಎಂದು ಗೊತ್ತಾಗಲಿಲ್ಲ. ಆದರೆ ಈಗ ಮೊಘಲ್ ವಂಶದ…

  • ಜ್ಯೋತಿಷ್ಯ

    ನಿಮಿಷ್ಟದ ದೇವರನ್ನು ನೆನಯುತ್ತಾ ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿರಿ

    ಮೇಷ ರಾಶಿ ಭವಿಷ್ಯ (Sunday, December 5, 2021) ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ. ಇಂದು ನೀವು ನಿಮ್ಮ ಹಣವನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಬಹುದು, ಇದರಿಂದ ನೀವು ಮಾನಸಿಕ ಶಾಂತಿಯನ್ನು ಪಡೆಯುವ ಸಂಪೂರ್ಣ ಸಾಧ್ಯತೆ ಇದೆ. ಇತರರ ಸಲಹೆಗಳನ್ನು ಕೇಳುವುದು ಮತ್ತು ಕಾರ್ಯಗತಗೊಳಿಸುವುದು ಪ್ರಮುಖವಾದ ಒಂದು ದಿನ. ನೀವು ಪ್ರಣಯದ ಆಲೋಚನೆಗಳು ಮತ್ತು ಹಿಂದಿನ ಕನಸುಗಳಲ್ಲಿ ಕಳೆದುಹೋಗುತ್ತೀರಿ. ನಿಮ್ಮ ಕೆಲಸದಿಂದ ವಿರಾಮವನ್ನು ತೆಗೆದುಕೊಂಡು ಇಂದು ನೀವು ನಿಮ್ಮ ಸ್ವಲ್ಪ ಸಮಯವನ್ನು ನಿಮ್ಮ ಜೀವನ ಸಂಗಾತಿಯೊಂದಿಗೆ ಕಳೆಯಬಹುದು….

  • ಸಿನಿಮಾ, ಸುದ್ದಿ

    ವಿಜಯ್ ದೇವರಕೊಂಡ ಖರೀದಿಸಿದ ಮನೆ ಬೆಲೆ ಎಷ್ಟು ಗೊತ್ತಾ..? ಕೇಳಿದರೆ ಶಾಕ್ ಆಗ್ತೀರಾ,.!

    ಸೌತ್​ ಸೆನ್ಸೇಷನಲ್​ ಹೀರೋ ವಿಜಯ್​ ದೇವರಕೊಂಡ ಖರೀದಿಸಿರೋ ಹೊಸ ಮನೆ ಟಾಲಿವುಡ್​ನಲ್ಲಿ ಹಾಟ್​ ಟಾಪಿಕ್​ ಆಗಿದೆ. ಬರೋಬ್ಬರಿ 18 ಕೋಟಿಗೆ ವಿಜಯ್​, ಈ ಮನೆ ಖರೀದಿಸಿದ್ದಾರೆ ಅಂತ ಹೇಳಲಾಗ್ತಿದೆ ಇತ್ತೀಚೆಗೆ ವಿಜಯ್ ಅವರು ಹೈದರಾಬಾದ್‍ನ ಜುಬ್ಲಿ ಹಿಲ್ಸ್ ನಲ್ಲಿ ಇರುವ ತಮ್ಮ ಹೊಸಮನೆಯ ಗೃಹ ಪ್ರವೇಶವನ್ನು ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಹತ್ತಿರದ ಸಂಬಂಧಿಕರು ಹಾಗೂ ಆತ್ಮೀಯ ಸ್ನೇಹಿತರು ಭಾಗವಹಿಸಿದ್ದರು. ವಿಜಯ್ ಗೃಹಪ್ರವೇಶದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಕೇವಲ ನಾಲ್ಕೈದು ಹಿಟ್​ ಕೊಟ್ಟು, ಸೂಪರ್​ ಸ್ಟಾರ್​ ಪಟ್ಟಕ್ಕೇರಿದ…

  • ಸಿನಿಮಾ

    ಹಾಲಿವುಡ್’ಗೆ ಹಾರಲಿರುವ ಸೂಪರ್ ಸ್ಟಾರ್ ‘ಕಿಚ್ಚ ಸುದೀಪ್’!

    ಕನ್ನಡ ಸೂಪರ್ ಸ್ಟಾರ್ ಕಿಚ್ಚ ಸುದೀಪ್’ರವರು ಸ್ಯಾಂಡಲ್‍ವುಡ್,ಕಾಲಿವುಡ್, ಟಾಲಿವುಡ್, ಮತ್ತು ಬಾಲಿವುಡ್ ಚಿತ್ರಗಳಲ್ಲಿ ನಟಿಸಿ ಈಗ ಹಾಲಿವುಡ್ ಸಿನಿಮಾ ಮಾಡಲು ಸಹಿ ಹಾಕಿದ್ದಾರೆ ಎಂಬ ಸುದ್ದಿ ವರದಿಯಾಗಿದೆ.

  • ಉಪಯುಕ್ತ ಮಾಹಿತಿ, ಹಣ

    ನೀವು ದುಡ್ಡು ಉಳಿಸಬೇಕು, ಅಂದ್ರೆ ಮಾತ್ರ ಓದಿ..ಶೇರ್ ಮಾಡಿ..

    ಏನ್ಮಾಡಿದರು ಖರ್ಚು ಕಡಿಮೆ ಆಗ್ತಿಲ್ಲ !ನಮ್ಮನ ಬಡವರು ಅಂತ ನಾವೇ ಕರೆದುಕೊಳ್ಳೋ ಸ್ಥಿತಿ ಬಂದ್ಬಿಟ್ಟಿದೆ. ಇದಕ್ಕೆ ಸರಿಯಾದ ಪರಿಹಾರ ನಿಮ್ಮ ಹತ್ತಿರಾನೆ ಇದೆ. ಈ ಹಳ್ಳಿ ಹುಡುಗರು ಮಾಡುವ ಬುದ್ದಿವಂತಿಕೆ ಮಾಡಿ ಸಾಕು – ಏನದು ತಿಳಿಹಿರಿ.

  • ಸುದ್ದಿ

    ತಾಮ್ರ ಬಳಸುವುದರಿಂದ ಆಗುವ ಉಪಯೋಗಗಳೇನು ಗೊತ್ತಾ? ತಾಮ್ರದಲ್ಲಿದೆ ರೋಗಮುಕ್ತ ಗುಣಗಳು..!

    ಇದು ಪ್ಲಾಸ್ಟಿಕ್ ಯುಗ ಮನುಷ್ಯ ಪ್ರತಿಯೊಂದಕ್ಕೂ ಪ್ಲಾಸ್ಟಿಕ್ ಮೇಲೆ ಅವಲಂಬಿತವಾಗಿದ್ದಾರೆ. ತಾನು ಬಳಸುವ ದಿನನಿತ್ಯದ ಹಲವು ವಸ್ತುಗಳು ಅಷ್ಟಲ್ಲದೆ ತಿನ್ನಲು, ಕುಡಿಯಲು ಬಳಸುವ ವಸ್ತು ಸಹ ಪ್ಲಾಸ್ಟಿಕ್ ನಿಂದಲೇ ಕೂಡಿರುತ್ತದೆ. ಆದರೆ ಈ ಪ್ಲಾಸ್ಟಿಕ್ ಮನುಷ್ಯನ ಜೀವಕ್ಕೆ ಮುಂದೊಂದು ದಿನ ಕುತ್ತು ತರುತ್ತದೆ ಎಂದು ತಿಳಿದು ಎಚ್ಚೆತ್ತುಕೊಳ್ಳುವುದು ಬಹಳ ಮುಖ್ಯ. ಮನುಷ್ಯನ ಆರೋಗ್ಯ ಹದಗೆಡದಂತೆ ಕಾಪಾಡಿಕೊಳ್ಳಬೇಕಾದ ಸಣ್ಣದೊಂದು ಈ ಸಲಹೆಯನ್ನು ಅನುಸರಿಸಿ. ಏನಾದು ಅಂತೀರಾ? ಹೌದು ನಾವು ದಿನನಿತ್ಯ ಬಳಸುವ ಕೆಲವು ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ,…