ಜ್ಯೋತಿಷ್ಯ

ದಿನ ಭವಿಷ್ಯ , ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ….

69

ನಿತ್ಯ ಭವಿಷ್ಯ…………
ಮೇಷ ರಾಶಿ
ನಿಮ್ಮ ಬುದ್ಧಿ ಚಾತುರ್ಯಕ್ಕೆ ಎಂತಹವರೂ ತಲೆ ಬಾಗುವರು. ಜೀವನದಲ್ಲಿನ ಕಷ್ಟಗಳ ಮೇಲೆ ಜಯ ಸಾಧಿಸುವಿರಿ. ಉತ್ತಮ ಸ್ನೇಹಿತರ ಬೆಂಬಲ ನಿಮಗೆ ದೊರೆಯುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ನಂಬಿದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಕ್ರಮೇಣ ತೊಂದರೆಗೆ ದಾರಿ ಆಗುವುದು.

ವೃಷಭ ರಾಶಿ
ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಪ್ರಗತಿಯತ್ತ ಸಾಗುವವು. ಕೆಲವರಿಗೆ ಬಡ್ತಿ ಸಿಗುವುದು.  ದೂರದೂರಿನ ಬಂಧುಗಳಿಂದ ಕಿರಿಕಿರಿ ಮಾತುಗಳು ಎದುರಾಗುವ ಸಂಭವವಿದೆ. ನೀವು ಮಾಡದೇ ಇರುವ ತಪ್ಪಿಗೆ ಮುನಿಸಿಕೊಳ್ಳುವ ಸಂದರ್ಭವಿದೆ. ಇದಕ್ಕೆ ಹೆಚ್ಚಿನ ಮಹತ್ವ ನೀಡದೆ

ಮಿಥುನ ರಾಶಿ
ಹಣಕಾಸಿನ ಹರಿವಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಿ ಹಣ ಬರುವ ಮಾರ್ಗ ನಿಚ್ಚಳವಾಗುವುದು. ದಿಢೀರ್‌ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಯಾವುದಕ್ಕೂ ಹಿಂದುಮುಂದು ಯೋಚಿಸಿ ಕಾರ್ಯಪ್ರವೃತ್ತರಾಗಿ.

ಕಟಕ ರಾಶಿ
ನಿಮ್ಮ ಹತ್ತಿರದ ಜನರು ವಿನಾಕಾರಣ ಜಗಳಗಳಿಗೆ ಮುಂದಾಗುವ ಸಂಭವವಿದೆ. ಬೇಸರಿಸಬೇಡಿ. ಜೀವನದ ಪ್ರತಿ ಘಟನೆಯು ನಿಮಗೆ ಉತ್ತಮ ಪಾಠ ನೀಡುವುದು. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ.

ಸಿಂಹ ರಾಶಿ
ನಿಮ್ಮ ಮಾತಿಗೆ ಬೆಲೆವುಂಟು ಎಂಬುದು ಒಳ್ಳೆಯದೇ. ಆದರೆ ಜನ ಒಂದೇ ರೀತಿಯಾಗಿ ಚಿಂತಿಸುವುದಿಲ್ಲ. ಹಾಗಾಗಿ ಮೇಲ್ನೋಟಕ್ಕೆ ನಿಮ್ಮಂತೆ ಇದ್ದರೂ ಅವರ ಒಳ ವಿಚಾರಧಾರೆಗಳು ನಿಮ್ಮನ್ನು ಸಂಕಷ್ಟಕ್ಕೆ ಗುರಿ ಮಾಡುವುದೇ ಆಗಿರುತ್ತದೆ. ಕೆಲ ಗ್ರಹಸ್ಥಿತಿಗಳು ನೀವು ಕೈಗೊಳ್ಳುವ ಕಾರ್ಯದಲ್ಲಿ ವಿಳಂಬ ಉಂಟು ಮಾಡುವುದು.

ಕನ್ಯಾ ರಾಶಿ
ಎಷ್ಟೇ ರೀತಿಯ ಜನರು ನಿಮ್ಮ ಮೇಲೆ ಪರಿಣಾಮ ಬೀರಿರಬಹುದು. ಆದರೆ ಇತ್ತೀಚೆಗೆ ಪರಿಚಯವಾದ ಗಣ್ಯರ ಮಾತು ನಿಮ್ಮ ಜನಜೀವನಕ್ಕೆ ಹತ್ತಿರವಾದಂತೆ ಎನಿಸುತ್ತಿರುವುದರಿಂದ ಅವರ ಬಗ್ಗೆ ಗೌರವ ಆದರಗಳು ಹೆಚ್ಚಾಗುವುವು. ಎಲ್ಲೆಡೆಯೂ ನಿಮ್ಮ ಕಾರ್ಯವೈಖರಿಯ ಬಗ್ಗೆ ಚರ್ಚೆ ನಡೆಯುವುದು.

ತುಲಾ ರಾಶಿ
ನಿಮ್ಮ ಗುರಿಯನ್ನು ಬೆನ್ನುಹತ್ತಿ ಸೋತಿದ್ದೀರಿ ಎನ್ನುವ ಬಳಲಿಕೆ ಬೇಡ. ಮುನ್ನುಗ್ಗಿರಿ ಜಯಶೀಲರಾಗುವಿರಿ. ಪತ್ನಿಯ ಸಕಾಲಿಕ ಎಚ್ಚರಿಕೆ ಮಾತುಗಳನ್ನು ಆಲಿಸಿ ಮತ್ತು ಅದರಂತೆ ಕಾರ್ಯ ಪ್ರವೃತ್ತರಾಗುವುದರಿಂದ ಒಳಿತಾಗುವುದು. ಮುಂದೆ ಬರಬಹುದಾದ ಉತ್ತಮ ದಿನಗಳನ್ನು ಎದುರಿಸಲು ಸನ್ನದ್ಧರಾಗುವಿರಿ,

ವೃಶ್ಚಿಕ ರಾಶಿ
ಬಹುರೂಪಿಯಾದ ಮತ್ತು ಅತ್ಯಂತ ಕರುಣಾಮಯಿಯಾದ ಭಗವಂತನ ಅನುಗ್ರಹ ನಿಮ್ಮ ಮೇಲಿರುವುದರಿಂದ ಹೆದರುವ ಅವಶ್ಯಕತೆಯಿಲ್ಲ. ನಿಮ್ಮ ಮನೆಗೆ ನೂತನ ಸದಸ್ಯನ ಸೇರ್ಪಡೆ ಸಾಧ್ಯತೆ ಇದೆ. ಭೂವ್ಯವಹಾರಕ್ಕೆ ಸಂಬಂಧಪಟ್ಟಂತೆ ಮೋಸ ಹೋಗುವ ಸಾಧ್ಯತೆ ಇದೆ.

ಧನಸ್ಸು ರಾಶಿ
ಯಾರು ಏನೇ ಅನ್ನಲಿ, ಬಿಡಲಿ ನಿಮ್ಮ ಕಾರ್ಯವನ್ನು ನೀವು ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ಇದು ನಿಮ್ಮನ್ನು ಇಚ್ಛಿತ ಗುರಿ ಎಡೆಗೆ ಕರೆದುಕೊಂಡು ಹೋಗುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿ ನಿಮಗೆ ಸಂತಸ ನೀಡುವುದು. ಆಸ್ತಿ ಖರೀದಿಯ ಬಗ್ಗೆ ನಿಧಾನ ಪ್ರಗತಿಯುಂಟಾಗುವುದು. ಸ್ನೇಹಿತರು ಸಹಾಯ ಮಾಡುವರು.

ಮಕರ ರಾಶಿ
ಹಳೆಯ ವ್ಯಾಜ್ಯಗಳು ನಿಮ್ಮನ್ನು ಬಳಲಿಸುತ್ತವೆ. ಶಾಂತಿಯಿಂದ ಇರಿ. ಮಾತು ಮಾತಿಗೂ ಆಣೆ ಪ್ರಮಾಣಗಳನ್ನು ಮಾಡದಿರಿ. ಮಾತು ಆಡಿದರೆ ಹೋಯಿತು ಮುತ್ತು ಒಡೆದರೂ ಹೋಯಿತು ಎನ್ನುವಂತೆ ಮೌನ ಧರಿಸಿ. ಕುಟುಂಬದಲ್ಲಿ ಒಡಕು ಮೂಡುವ ಸಾಧ್ಯತೆ ಇದೆ. ಬಾಳಸಂಗಾತಿ ಮತ್ತು ಮಕ್ಕಳಿಂದ ಪದೇ ಪದೇ ಪ್ರಶ್ನೆಗಳು ಬರುತ್ತವೆ.

ಕುಂಭ ರಾಶಿ
ಕೆಲಸದ ಸ್ಥಳದಲ್ಲಿ ಬಾಸ್‌ನಿಂದ ಪ್ರಶಂಸೆ ಪಡೆಯುವ ಅವಕಾಶ ಅಧಿಕವಾಗಿದೆ. ಮುಂದಿನ ಪದೋನ್ನತಿಗೆ ದಾರಿ ನಿರಾಳವಾಗುವುದು. ನಿಮ್ಮ ಕಾಯಕದಲ್ಲಿ ನಿಷ್ಠೆ ತೋರಿ. ಭಗವಂತನ ಆಶೀರ್ವಾದ ನಿಮ್ಮ ಮೇಲೆ ಇರುವುದು. ಬಾಳಸಂಗಾತಿಯನ್ನು ನಿರ್ಲಕ್ಷಿಸದಿರಿ. ಬಾಳಸಂಗಾತಿಯ ಇಚ್ಛೆಯನ್ನು ಅರಿತು ಸ್ಪಂದಿಸಿದಲ್ಲಿ ಸಂಸಾರವು ಸುಖಮಯವಾಗಿರುವುದು.

ಮೀನ ರಾಶಿ
ಹಿರಿಯರ ಮಾತಿಗೂ ಬೆಲೆ ಕೊಡುವುದನ್ನು ಕಲಿತರೆ ಜೀವನ ಸುಂದರಮಯವಾಗಿರುತ್ತದೆ. ಸಂಗಾತಿಯು ಮಾತಾಡುವ ವಿಷಯಗಳಿಗೆ ಅಪಾರ್ಥ ಕಲ್ಪಿಸಕೊಳ್ಳದಿರಿ. ಅತಿ ಸೂಕ್ಷ್ಮಮತಿಗಳಾದ ನಿಮಗೆ ಕೆಲವು ವಿಚಾರಗಳನ್ನು ಜೀರ್ಣಿಸಿಕೊಳ್ಳಲು ಆಗುವುದಿಲ್ಲ. ಅಂತೆಯೇ ಒಂದು ಪ್ರಸಂಗವು ನಿಮ್ಮ ಚಿತ್ತ ಕ್ಷೋಭೆಯನ್ನು ಕದಡುವುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜೀವನಶೈಲಿ

    ತನ್ನ ಸಂಗಾತಿ ಜೋತೆಗಿದ್ರೂ ಬೇರೆ ಹುಡುಗಿಯರನ್ನು ನೋಡುವ ಅಭ್ಯಾಸ ಏಕೆ ಗೊತ್ತಾ..?

    ಸಂಗಾತಿ ನಮ್ಮನ್ನು ಬಿಟ್ಟು ಇತರರನ್ನು ಹೊಗಳಿದ್ರೂ ಅಸೂಯೆ ಉಂಟಾಗೋದು ಸಹಜ. ಸಾಮಾನ್ಯವಾಗಿ ಪ್ರೇಯಸಿ ಎದುರಲ್ಲೇ ಹುಡುಗರು ಇತರ ಯುವತಿಯರತ್ತ ಕಣ್ಣು ಹಾಯಿಸ್ತಾರೆ. ಫ್ಲರ್ಟ್ ಮಾಡ್ತಾರೆ. ಇದನ್ನೆಲ್ಲ ಪ್ರೇಯಸಿ ತಮಾಷೆಯಾಗಿ ತೆಗೆದುಕೊಂಡ್ರೆ ಓಕೆ, ಇಲ್ಲದೇ ಇದ್ರೆ ಬ್ರೇಕಪ್ ಕೂಡ ಆಗಿಬಿಡಬಹುದು. ಎಂಥಾ ಸುದೀರ್ಘ ಕಾಲದ ಪ್ರೇಮಮಯ ಸಂಬಂಧವಾಗಿದ್ರೂ ಇತರರ ಕಡೆಗೆ ಆಕರ್ಷಿತರಾಗುವುದು ಸಹಜ ಎನ್ನುತ್ತಾರೆ ಸಂಶೋಧಕರು. ಯಾಕೆ ಎಲ್ಲರೂ ಈ ರೀತಿ ಮಾಡ್ತಾರೆ ಅನ್ನೋದಕ್ಕೆ ಕೂಡ ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದಾರೆ. ಗಂಡು-ಹೆಣ್ಣು ಪರಸ್ಪರ ಆಕರ್ಷಿತರಾಗುವುದು ಸಹಜ. ಮಹಿಳೆ ಸಾಮಾನ್ಯವಾಗಿ…

  • ಸುದ್ದಿ

    ಹಿರಿಯ ಸಾಹಿತಿ ,ಜ್ಞಾನಪೀಠ ಪ್ರಶಸ್ತಿ ವಿಜೇತ ಶ್ರೀ ಗಿರೀಶ್ ಕಾರ್ನಡ್ ಇನ್ನಿಲ್ಲ….

    ಹಿರಿಯ ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ವಿಧಿವಶರಾಗಿದ್ದಾರೆ. ನಟ ಹಾಗೂ ಸಾಹಿತಿ [81]ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗಿರೀಶ್ ಕಾರ್ನಾಡ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ.ಗಿರೀಶ್ ಕಾರ್ನಾಡ್ 1938 ಮೇ 19 ರಂದು ಮಹಾರಾಷ್ಟ್ರದ ಮಥೇರಾನ್ ನಲ್ಲಿ ಜನಿಸಿದ್ದರು. ತಂದೆ ಡಾ.ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ. ಪ್ರಗತಿ ಪರ ಮನೋಭಾವದ ಡಾ.ರಘುನಾಥ ಕಾರ್ನಾಡರು ಮದುವೆಯಾದ ಹೊಸತರಲ್ಲೇ ಪತ್ನಿಯನ್ನು…

  • ಸುದ್ದಿ

    11 ಕಿಮೀ‌ ಪ್ರಯಾಣ ಮಾಡಿ, ಹೆಲ್ಮೆಟ್ ತೆಗೆದು ನೋಡಿ ಶಾಕ್ ಆದ ಶಿಕ್ಷಕ. ಹೆಲ್ಮೆಟ್ ನಲ್ಲಿ ಏನಿತ್ತು.

    ನಮ್ಮ ನಮ್ಮ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಬಳಸೋದು ಕಾಮನ್.. ಆದರೆ ಇಲ್ಲೊಬ್ಬ ಶಿಕ್ಷಕ ಹೆಲ್ಮೆಟ್ ನಿಂದಾಗಿ ಆಸ್ಪತ್ರೆಗೆ ಸೇರುವಂತಾಗಿದೆ.. ಹೌದು ಕೇರಳದ ಶಿಕ್ಷಕರೊಬ್ಬರು 11 ಕಿಮೀ ಹೆಲ್ಮೆಟ್ ಧರಿಸಿಕೊಂಡು ಪ್ರಯಾಣ ಮಾಡಿ ಆನಂತರ ಅದನ್ನು ತೆರೆದು ನೋಡಿದಾಗ ಬೆಚ್ಚಿಬಿದ್ದು ಆಸ್ಪತ್ರೆಗೆ ಸೇರಿದ್ದಾರೆ.. ಕೇರಳದ ಸಂಸ್ಕೃತ ಶಿಕ್ಷಕ ರಂಜಿತ್ ಎಂಬುವವರು ಎಂದಿನಂತೆ ಬೆಳಿಗ್ಗೆ ತಮ್ಮ ಮನೆಯಿಂದ 5 ಕಿಮೀ ದೂರದಲ್ಲಿನ ಶಾಲೆಯೊಂದಕ್ಕೆ ಪಾಠ ಮಾಡಲು ತೆರಳಿದ್ದಾರೆ.. ಅಲ್ಲಿ ಪಾಠ ಮುಗಿಸಿ ನಂತರ ಮತ್ತೊಂದು ಶಾಲೆಗೆ 11.30 ಕ್ಕೆ ಪಾಠ…

  • ಸುದ್ದಿ

    ಮಾತ್ರೆಯಿಲ್ಲದೆ ತಲೆನೋವು ಮಾಯವಾಗಲು ಹೀಗೆ ಮಾಡಿ..!

    ತಲೆ ನೋವು ಕಾಣಿಸಿಕೊಳ್ಳಲು ಕಾರಣ ಒಂದಾ ಅಥವಾ ಎರಡ ಅನೇಕ ಕಾರಣಗಳಿವೆ. ಅದರಲ್ಲಿಯೂ ಅಧಿಕ ಒತ್ತಡ ಉಂಟಾದಾಗ ಹೆಚ್ಚಾಗಿ ತಲೆನೋವು ಕಾಣಿಸಿಕೊಳ್ಳುತ್ತಾದೆ ಇಂತಹ ಸಂದರ್ಭದಲ್ಲಿ ಮಾತ್ರೆ ಬಳಸದೆ ಮುಕ್ತಿ ಪಡೆಯಬಹುದು. ಮಾತ್ರೆಯಿಲ್ಲದೆ ತಲೆನೋವು ಮಾಯವಾಗಲು 10 ಸುಲಭ ಪರಿಹಾರಗಳು 1) ನಿದ್ದೆ ಕಡಿಮೆಯಾಗಿ ತಲೆನೋವು ಬಂದಿದ್ದರೆ ಬಸಳೆ ಸೊಪ್ಪಿನ ರಸವನ್ನು ತಲೆಗೆ ಲೇಪನ ಮಾಡಿಕೊಳ್ಳಬೇಕು ನಂತರ ನಿದ್ದೆ ಮಾಡಿ, ತಲೆನೋವು ಸರಿ ಹೋಗುತ್ತಾದೆ. 2) ಜಾಯಿಕಾಯಿಯ ಪುಡಿಯನ್ನು ತಣ್ಣಗಿನ ನೀರಲ್ಲಿ ಕಲಸಿ ಅದನ್ನು ದಿನದಲ್ಲಿ ಮೂರು ಭಾರೀ ಕುಡಿಯುವುದರಿಂದ ತಲೆನೋವು…

  • ಕರ್ನಾಟಕ

    ರಾಷ್ಟ್ರಪತಿ ಕರ್ನಾಟಕದ ಬಗ್ಗೆ ಹಾಗೂ ಕರ್ನಾಟಕದ ಗಣ್ಯರ ಬಗ್ಗೆ ಹೊಗಳಿದ್ದಾರೆ…!ತಿಳಿಯಲು ಇದನ್ನು ಓದಿ..

    ಟಿಪ್ಪು ಸುಲ್ತಾನ್ ಜಯಂತಿಯ ವಿಚಾರದಲ್ಲಿ ಕಾಂಗ್ರೆಸ್ -ಬಿಜೆಪಿ ನಡುವೆ ನಡೆಯುತ್ತಿರುವ ವಾಕ್ಸಮರದ ಮಧ್ಯೆಯೇ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಟಿಪ್ಪು ಗುಣಗಾನ ಮಾಡಿದ್ದಾರೆ.