ಸುದ್ದಿ

ಇವತ್ತಿಗೆ ನನಸಾಯ್ತು ನನ್ನ 30 ವರ್ಷಗಳ ಅರಣ್ಯದ ಕನಸು – ಸದಾಶಿವ ಮರಿಕೆ,.!

44

ಒಂದಿಂಚು ಜಾಗ ಇದ್ದರೆ ಅದರಲ್ಲಿ ಲಾಭ ಪಡೆಯಬೇಕೆನ್ನುವವರೇ ಹೆಚ್ಚು. ಅದರಲ್ಲೂ ಪಿತ್ರಾರ್ಜಿತ ಆಸ್ತಿ ಸಿಕ್ಕಿದರೆ ಅದನ್ನು ತಿಂದು ಮುಗಿಸೋದು ಹೇಗೆ ಅನ್ನೋದನ್ನೇ ಕಾಯುತ್ತಿರುವ ಜನ ಇರೋ ಕಾಲ ಇದು. ಆದರೆ ಇಲ್ಲೊಬ್ಬರು ತಮ್ಮ ಎಕರೆಗಟ್ಟಲೆ ಜಾಗವನ್ನು ಪರಿಸರಕ್ಕಾಗಿಯೇ ಅರ್ಪಣೆಗೈದಿದ್ದಾರೆ. ಅರಣ್ಯ ಇಲಾಖೆ, ಸರ್ಕಾರವನ್ನು ನಾಚಿಸುವಂತೆ ಎಕರೆಗಟ್ಟಲೆ ತಮ್ಮ ಸ್ವಂತ ಜಾಗದಲ್ಲಿ ದಟ್ಟ ಅರಣ್ಯವನ್ನು ಬೆಳೆಸಿದ್ದಾರೆ. ಇಂತಹ ಅಪರೂಪದ ಪರಿಸರ ಪ್ರೇಮಿ ಪುತ್ತೂರು ತಾಲೂಕಿನ ಸಂಟ್ಯಾರು ನಿವಾಸಿ ಪ್ರಗತಿಪರ ಕೃಷಿಕ ಸದಾಶಿವ ಮರಿಕೆ ನಮ್ಮ ಪಬ್ಲಿಕ್ ಹೀರೋ.

ಪರಿಸರದ ಬಗ್ಗೆ ಅತಿಯಾದ ಕಾಳಜಿ ಇರುವ ಸದಾಶಿವ ಮರಿಕೆ ತಮ್ಮಿಂದ ಏನಾದರೂ ಈ ಪ್ರಕೃತಿಗೆ ಅಳಿಲು ಸೇವೆ ಮಾಡಬೇಕೆಂದು ಕಳೆದ 30 ವರ್ಷಗಳ ಹಿಂದೆ ಕಂಡಿದ್ದ ಕನಸನ್ನು ಇದೀಗ ನನಸಾಗಿಸಿದ್ದಾರೆ. ನಾಶವಾಗುತ್ತಿರುವ ಪರಿಸರವನ್ನು ಉಳಿಸಬೇಕು, ಜೊತೆಗೆ ಪ್ರಾಣಿ ಪಕ್ಷಿಗಳಿಗೆ ಅದರಿಂದ ಸಹಕಾರಿ ಆಗಬೇಕೆಂದುಕೊಂಡ ಸದಾಶಿವರವರು ಅದಕ್ಕಾಗಿ ದಟ್ಟ ಅರಣ್ಯವನ್ನು ಮಾಡಬೇಕೆಂದು ಪಣ ತೊಟ್ಟಿದ್ದರು. ಅದರಂತೆ ತಮ್ಮ ಪೂರ್ವಜರಿಂದ ಬಂದಿರುವ ಒಟ್ಟು 25 ಎಕರೆ ಜಮೀನಿನ ಪೈಕಿ ಕೃಷಿ ರಹಿತ ಹತ್ತು ಎಕರೆ ಬರಡು ಭೂಮಿಯಲ್ಲಿ ಕಾಡು ಬೆಳೆಸಬೇಕೆಂದು ನಿರ್ಧರಿಸಿದ್ದರು. ಅದಕ್ಕಾಗಿ ಕಾಡಿನಲ್ಲಿರುವ ವಿವಿಧ ತಳಿಯ ಮರಗಳ ಗಿಡಗಳನ್ನು ತಂದು ಗುಡ್ಡದ ಉದ್ದಕ್ಕೂ ನೆಟ್ಟಿದ್ದರು.

30 ವರ್ಷಗಳ ಸತತ ಪರಿಶ್ರಮದ ಬಳಿಕ ಗಿಡಗಳು ಮರವಾಗಿ ಬೆಳೆದಿದ್ದು ಇದೀಗ ದಟ್ಟ ಅರಣ್ಯವಾಗಿದೆ. ತಮ್ಮ ಸ್ವಂತ ಜಮೀನಿನಲ್ಲೇ ಅರಣ್ಯ ಇಲಾಖೆ ಹಾಗೂ ಸರ್ಕಾರವನ್ನು ನಾಚಿಸುವಂತಹ ದಟ್ಟ ಅರಣ್ಯವನ್ನು ಬೆಳೆಸಿದ್ದಾರೆ. ಇದರಿಂದಾಗಿ ಒಂದೆಡೆ ಸಮೃದ್ಧ ಕಾಡು, ಅದರಿಂದಾಗಿ ಜಮೀನಿನಲ್ಲಿ ನೀರಿನ ಉತ್ಪತ್ತಿಯೂ ಆಗಿದೆ. ಇದೀಗ ತಾವೇ ಬೆಳೆಸಿದ ದಟ್ಟ ಅರಣ್ಯದಲ್ಲಿ ಪ್ರತಿದಿನ ಒಂದು ಸುತ್ತು ಹೊಡೆಯುವ ಸದಾಶಿವರವರು ಅರಣ್ಯದಿಂದ ತೃಪ್ತಿ ಕಂಡಿದ್ದಾರೆ. ಕಾಡಿನಲ್ಲಿ ಹಕ್ಕಿಗಳ ಇಂಚರ, ಚಿಲಿಪಿಲಿಯ ನಾದ ಕೇಳುತ್ತಾರೆ. ಭೂಮಿಯಲ್ಲಿ ಕಾಡು, ಹಸಿರು ಇಲ್ಲದೇ ಇದ್ದರೆ ಮನುಷ್ಯನ ಉಳಿವು ಸಾಧ್ಯವಿಲ್ಲ ಎಂಬುವುದು ಸದಾಶಿವ ಅವರ ಮಾತು.

ಆರಂಭದಲ್ಲಿ ಜಮೀನಿನ ಮಧ್ಯೆ ಇದ್ದ ಕೆರೆಯಿಂದಲೇ ಗಿಡಗಳಿಗೆ ನೀರುಣಿಸುತ್ತಿದ್ದರು. ಬೇಸಿಗೆಯಲ್ಲಿ ನೀರು ಪೂರೈಸುವುದು ಕಷ್ಟವೂ ಆಗಿತ್ತು. ಆದರೆ ಕಾಡು ಬೆಳೆದಂತೆ ಜಮೀನಿನಲ್ಲಿ ನೀರಿನ ಸಮಸ್ಯೆಯೂ ಇಲ್ಲದಾಗಿದೆ. ಕಾಡಿನ ಮಧ್ಯೆ ಬಿದ್ದ ಮಳೆ ನೀರು ಅಲ್ಲಿಯೇ ಇಂಗುವಂತೆ ಇಂಗು ಗುಂಡಿಗಳನ್ನು ನಿರ್ಮಿಸಿದ್ದಾರೆ. ಈಗ ಒಂದೆಡೆ ಸಮೃದ್ಧ ಕಾಡು, ಇನ್ನೊಂದೆಡೆ ಯಾವ ಬರಗಾಲ ಬಂದರೂ ಕಡಿಮೆಯಾಗದಷ್ಟು ಯಥೇಚ್ಛ ನೀರು ಜಮೀನಿನಲ್ಲಿ ಸೃಷ್ಟಿಯಾಗಿದ್ದು ಕೃಷಿ ಬದುಕಿನಲ್ಲಿ ಸಂತೃಪ್ತಿ ಕಂಡಿದ್ದಾರೆ. ಇವರ ದಟ್ಟ ಕಾಡಿನಿಂದಾಗಿ ಅಕ್ಕಪಕ್ಕದ ಜಮೀನುಗಳಲ್ಲಿಯೂ ಅಂತರ್ಜಲ ಮಟ್ಟ ಹೆಚ್ಚಾಗಿದೆ.

ಕಾಡು ಕಡಿದು ನಾಶ ಮಾಡುವ ಸರ್ಕಾರ, ತಮ್ಮ ಜಮೀನುಗಳಲ್ಲಿ ಬೆಳೆದು ನಿಂತ ಮರಗಳನ್ನು ಕಡಿದು ಮಾರಾಟ ಮಾಡೋ ಜನಸಾಮಾನ್ಯರ ಮಧ್ಯೆ ಸದಾಶಿವ ಮರಿಕೆ ತಮ್ಮದೇ ಜಾಗದಲ್ಲಿ ದಟ್ಟಾರಣ್ಯವನ್ನೇ ಬೆಳೆಸಿ ಗಮನ ಸೆಳೆದಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ರಾಜಕೀಯ

    ಕೋಲಾರದಿಂದ ಸ್ಪರ್ಧೆ ಮಾಡಲು ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ಘೋಷಣೆ

    ಕೋಲಾರ: ನಾನು ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಕೋಲಾರದ ಜೂನಿಯರ್ ಕಾಲೇಜು ಮೈದಾನದಲ್ಲಿ ಇಂದು ನಡೆದ ಕೋಲಾರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನಗೆ ಸ್ಪರ್ಧಿಸಲು ಸರಿಯಾದ ಕ್ಷೇತ್ರವೇ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ವರುಣಾದಿಂದ ಮತ್ತೆ ಸ್ಪರ್ಧೆ ಮಾಡಿ ಎಂದು ಹೇಳುತ್ತಿದ್ದಾರೆ, ಬಾದಾಮಿ ದೂರ ಆಯ್ತು ಎಂಬ ಕಾರಣಕ್ಕೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ ಎಂದಿದ್ದಕ್ಕೆ…

  • ಆಧ್ಯಾತ್ಮ

    ಇಂದು ವೈಕುಂಠ ಏಕಾದಶಿ ರಾತ್ರಿ 9 ಗಂಟೆಒಳಗೆ ಈ ಚಿಕ್ಕ ಕೆಲಸ ಮಾಡಿದರೆ ಕೋಟ್ಯಾಧಿಪತಿಯಾಗುತ್ತೀರ..!

    ಇಂದು ವೈಕುಂಟ ಏಕಾದಶಿಯ ದಿನವಾಗಿದ್ದು ಶ್ರೀ ಮಹಾ ವಿಷ್ಣುವು ನೆಲೆಸಿರುವ ವೈಕುಂಟದ ಬಾಗಿಲು ತೆರೆದಿರುತ್ತದೆ ಎಂಬ ಪ್ರತೀತಿ ಇದೆ. ತಿರುಪತಿ ವೆಂಕಟೇಶ್ವರ ಸೇರಿದಂತೆ ಶ್ರೀಮನ್ನಾರಯಾಣ ಅವತಾರದ ಎಲ್ಲಾ ದೇವಸ್ಥಾನಗಳಲ್ಲಿ ಈ ದಿನವಂತೂ ಕಿಕ್ಕಿರಿದು ಜನ ತುಂಬಿರುತ್ತಾರೆ. ಈ ಏಕಾದಶಿಯು ತುಂಬಾ ವಿಶಿಷ್ಟವಾಗಿದ್ದು ಈ ಸಮಯದಲ್ಲಿ ಮಾಡುವ ಕೆಲವೊಂದು ಆಚರಣೆಗಳು ಭಕ್ತರ ಇಸ್ಥಾರ್ಥ ಸಿದ್ದಿಗಳು ನೆರವೇರುತ್ತವೆ ಎಂದು ನಂಬಲಾಗಿದೆ. ಈ ಶುಭ ದಿನದಂದು ಈ ಒಂದು ಚಿಕ್ಕ ಕೆಲಸ ಮಾಡಿದ್ದಲ್ಲಿ ಅಪಾರ ಪುಣ್ಯ ಪ್ರಾಪ್ತಿಯಾಗಿ ಕೋಟ್ಯಾಧೀಶವರರಾಗುತ್ತಾರೆ ಎಂದು ಹೇಳಲಾಗಿದೆ.!…

  • ಉಪಯುಕ್ತ ಮಾಹಿತಿ

    ಲೈಫಲ್ಲಿ ಗೆಲ್ಲಲೇಬೇಕು ಅನ್ನೋರು, ಇದನ್ನ ಮಿಸ್ ಮಾಡದೇ ಓದಿ..!

    ಸೋಲು.. ಯಾರಿಗಾಗಿಲ್ಲ..? ಎಷ್ಟು ಜನ ಎದುರಿಸಿಲ್ಲ..? ಸೋಲದೇ ಇದ್ದವನು ಗೆದ್ದ ಉದಾಹರಣೇನೇ ಇಲ್ಲ..! ಸೋತಾಗ ಸತ್ತೆ ಅನ್ಕೊಂಡ್ರೆ ನೀವು ಶಾಶ್ವತವಾಗಿ ಸೋತಹಾಗೆ..! ಸೋತಾಗ, ಇದ್ಯಾವ ಸೋಲು, ನಾನು ಗೆದ್ದೇ ಗೆಲ್ತೀನಿ ಅನ್ಕೊಂಡ್ರೆ ಮಾತ್ರ ಲೈಫ್ ಜಿಂಗಾಲಾಲ..! ತುಂಬಾ ಸೋತವನನ್ನು ಕೇಳಿನೋಡಿ…

  • ಸುದ್ದಿ

    ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಂಡು ಅಭಿವೃದ್ಧಿಗೆ ಮುಂದಾದ ಡಿಬಾಸ್ ಫ್ಯಾನ್ಸ್,.!

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ ‘ಡಿ ಕಂಪನಿ’ ಜಿಲ್ಲೆಯ ಕುಗ್ರಾಮವೊಂದರ ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಂಡಿದ್ದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ. ಸಕಲೇಶಪುರ ತಾಲೂಕಿನ ರಾಮೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯನ್ನು ಎರಡು ವರ್ಷಕ್ಕೆ ದತ್ತು ಪಡೆದಿರುವ ದರ್ಶನ್ ಅಭಿಮಾನಿಗಳು ಶಾಲಾ ಅಭಿವೃದ್ಧಿಗೆ ಮುಂದಾಗಿದ್ದಾರೆ. ಶಾಲೆಯ ಮಕ್ಕಳಿಗೆ ಸಮವಸ್ತ್ರಗಳು, ಪುಸ್ತಕ, ಶಾಲಾ ಕಟ್ಟಡಕ್ಕೆ ಬಣ್ಣ, ಪೀಠೋಪಕರಣ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ನೀಡುವ ವಾಗ್ದಾನವನ್ನು ದರ್ಶನ್ ಅಭಿಮಾನಿಗಳು ನೀಡಿದ್ದಾರೆ. ಈ ನಿಟ್ಟಿನಲ್ಲಿ ಡಿ ಕಂಪನಿ ಈಗಾಗಲೇ ಶಿಕ್ಷಣ ಇಲಾಖೆಯಿಂದ…

  • ದೇವರು-ಧರ್ಮ

    ಶವದ ಕಾಲಿನ ಎರಡು ಹೆಬ್ಬೆರಳನ್ನು ಒಟ್ಟಿಗೆ ಸೇರಿಸಿ ಕಟ್ಟುತ್ತಾರೆ ಯಾಕೆ ಗೊತ್ತಾ…? ತಿಳಿಯಲು ಈ ಲೇಖನ ಓದಿ …

    ಮನುಷ್ಯ ಮರಣಿಸಿದ ನಂತರ ಆತನ ಶ್ರಾದ್ಧ ಕರ್ಮಗಳನ್ನು ಮಾಡುವವರೆಗೂ ಆತನ ಆತ್ಮ ಈ ಲೋಕದಲ್ಲೇ ತಿರುಗಾಡುತ್ತಿರುತ್ತದೆ ಎಂದು ಹಿಂದು ಪುರಾಣಗಳು ನಂಬುತ್ತವೆ.

  • ಸುದ್ದಿ

    ನೀವು ʼಟೀʼ ಪ್ರಿಯರೆ …? ಹಾಗಾದ್ರೆ ತಪ್ಪದೇ ಈ ಸುದ್ದಿ ಓದಿ…

    ನೀವು ಟೀ ಕುಡಿಯುತ್ತೀರಾ…? ಹಾಗಿದ್ದರೆ ನಿಮ್ಮ ಬುದ್ಧಿಮತ್ತೆ ಭಾರಿ ಚುರುಕಾಗಿರುತ್ತೆ. ನಾವು ಇದನ್ನು ಹೇಳುತ್ತಿಲ್ಲ. ಅಧ್ಯಯನ ಒಂದು ಹೇಳುತ್ತಿದೆ. ಚಹಾ ಕುಡಿಯುವವರು ಮತ್ತು ಕುಡಿಯದವರನ್ನು ಅಧ್ಯಯನಕ್ಕೆ ಒಳಪಡಿಸಿದಾಗ, ಚಹಾ ಕುಡಿಯುವವರ ಮೆದುಳಿನ ಬೆಳವಣಿಗೆ ಚೆನ್ನಾಗಿರುವುದಲ್ಲದೆ, ಅವರ ಬುದ್ಧಿ ಮತ್ತೆ ಸಹ ಚುರುಕಾಗಿರುತ್ತದೆ ಎನ್ನುವ ಅಂಶ ತಿಳಿದು ಬಂದಿದೆ. ‘ನಮ್ಮ ಸಂಶೋಧನೆಯಲ್ಲಿ ತಿಳಿದು ಬಂದ ಮೊದಲ ಸಕಾರಾತ್ಮಕ ಅಂಶವೆಂದರೆ ನಿತ್ಯವೂ ಚಹಾ ಸೇವಿಸುವವರ ಮೆದುಳು ಚುರುಕಾಗಿರುವುದಲ್ಲದೆ, ವಯಸ್ಸಾದ ಬಳಿಕ ಕುಂಠಿತವಾಗುವ ಸಾಮರ್ಥ್ಯವನ್ನು ರಕ್ಷಣೆ ಮಾಡುವಲ್ಲಿ ಸಹಕರಿಸುತ್ತದೆ’ ಎಂದು ಸಿಂಗಾಪುರದ…