ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಟ ಚಿರಂಜೀವಿ ಸರ್ಜಾ ಅಭಿನಯದ `ರಣಂ’ ಚಿತ್ರದ ಶೂಟಿಂಗ್ ವೇಳೆ ಇಬ್ಬರು ದುರ್ಮರಣಕ್ಕೀಡಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸಪ್ಪನ ಹಣದ ದಾಹಕ್ಕೆ ಇಬ್ಬರು ಅಮಾಯಕರು ಬಲಿಯಾಗಿರುವುದು ಆಂತರಿಕ ತನಿಖೆ ವೇಳೆ ಸ್ಫೋಟಕ ಸತ್ಯ ಬಯಲಾಗಿದೆ.ಶೂಟಿಂಗ್ಗೆ ಅನುಮತಿ ಇಲ್ಲದೇ ಹೋದರೂ 5 ಸಾವಿರ ಹಣ ಪಡೆದು ಪೇದೆ ಶೂಟಿಂಗ್ ಮಾಡಿಸಿದ್ದನು. ತನಿಖಾ ವರದಿ ಕೈ ಸೇರುತ್ತಿದ್ದಂತೆಯೇ ಪೊಲೀಸ್ ಪೇದೆಯನ್ನು ಅಮಾನತು ಮಾಡುವಂತೆ ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ಆದೇಶ ಹೊರಡಿಸಿದ್ದಾರೆ.

ಬಾಗಲೂರು ಠಾಣೆಯ ಪೇದೆಯಾಗಿದ್ದ ಭೀಮಾ ಶಂಕರ್ ಕೇವಲ 5,000 ರೂ. ಲಂಚ ಪಡೆದು ಇಬ್ಬರ ಸಾವಿಗೆ ಕಾರಣವಾಗಿದ್ದಾನೆ.ಮಾರ್ಚ್ ತಿಂಗಳ 29ರಂದು ಬಾಗಲೂರಿನ ಶೆಲ್ ಕಂಪನಿ ಬಳಿ ‘ರಣಂ’ ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಆಗ ಸಿಲಿಂಡರ್ ಬ್ಲಾಸ್ಟ್ ಆಗಿ ಸಮೀರಾ ಬಾನು (28) ಹಾಗೂ ಆಕೆಯ ಮಗಳು ಆಯೇಶಾ ಮೃತಪಟ್ಟಿದ್ದರು. ಪ್ರಕರಣದ ತನಿಖೆ ವೇಳೆ ಪೊಲೀಸರಲ್ಲೇ ಆಂತರಿಕ ವೈಫಲ್ಯದ ಅನುಮಾನ ಮೂಡಿತ್ತು. ಈ ಹಿನ್ನೆಲೆಯಲ್ಲಿ ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಆಂತರಿಕ ತನಿಖೆ ನಡೆಸುವಂತೆ ಸೂಚಿಸಿದ್ದರು.
ಶೂಟಿಂಗ್‍ಗೆ ಯಾವುದೇ ಅನುಮತಿ ಇಲ್ಲದಿದ್ದರೂ ವೈಯಕ್ತಿಕವಾಗಿ ಭೀಮಾ ಶಂಕರ್ ಹಣ ಪಡೆದಿದ್ದನು.

ಶೂಟಿಂಗ್ ನಡೆಸುವ ಮುನ್ನ ಚಿತ್ರದ ನಿರ್ದೇಶಕನ ಅನುಮತಿ ಕೋರಿ ಯಲಹಂಕ ಎಸಿಪಿ ಕಚೇರಿಗೆ ತೆರಳಿದ್ದರು. ಆದರೆ ಯಲಹಂಕ ಎಸಿಪಿ ಎಂಎಸ್ ಶ್ರೀನಿವಾಸ್ ಸೂಕ್ತ ದಾಖಲೆ ನೀಡುವವರೆಗೂ ಅನುಮತಿ ಇಲ್ಲ ಎಂದಿದ್ದರು. ಇದೇ ಸಮಯ ದುರುಪಯೋಗ ಪಡಿಸಿಕೊಂಡಿದ್ದ ಭೀಮಾ ಶಂಕರ್ ಚಿತ್ರತಂಡದಿಂದ ಐದು ಸಾವಿರ ಹಣ ಪಡೆದು ತಾನೇ ಸೆಕ್ಯೂರಿಟಿ ನೀಡುವ ರೀತಿ ಕೆಲಸ ಮಾಡಿದ್ದನು. ಯಾವುದೇ ಅನುಮತಿ ಇಲ್ಲದೆ ಚಿತ್ರೀಕರಣ ನಡೆಯುವ ವೇಳೆ ಸಿಲಿಂಡರ್ ಸ್ಫೋಟ ದುರಂತ ನಡೆದಿತ್ತು.

ಸದ್ಯಕ್ಕೆ ವಿದ್ಯಾರಣ್ಯಪುರ ಪೇದೆಯಾಗಿ ಭೀಮಾ ಶಂಕರ್ ಕಾರ್ಯನಿರ್ವಹಿಸುತ್ತಿದ್ದಾನೆ. ಈ ಬಗ್ಗೆ ವರದಿ ಬಂದ ಕೂಡಲೇ ಭೀಮಾ ಶಂಕರ್ ಅಮಾನತು ಮಾಡಲಾಗುತ್ತದೆ. ಈಶಾನ್ಯ ವಿಭಾಗದ ಡಿಸಿಪಿ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ವರಕವಿ ಬೇಂದ್ರೆಯವರ ಈ ಕವನ ಯಾರಿಗೆ ತಾನೇ ಗೊತ್ತಿಲ್ಲ.. ನಮ್ಮ ತಂಡದಿಂದ ಯುಗಾದಿ ಮತ್ತು ಹೊಸವರ್ಷದ ಆರ್ಥಿಕ ಶುಭಾಶಯಗಳು… ಯುಗಾದಿ ಅಂದ್ರೆ ಏನು… ಯುಗಾದಿ ಅಥವಾ ಉಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. “ಯುಗಾದಿ” ಪದದ ಉತ್ಪತ್ತಿ “ಯುಗ+ಆದಿ” – ಹೊಸ ಯುಗದ ಆರಂಭ ಎಂದು….
ಭಾರತದ ಮಹಾತ್ವಾಕಾಂಕ್ಷೆ ಯೋಜನೆಯಾಗಿರುವ ಚಂದ್ರಯಾನ-2 ಅನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ISRO ವಿಜ್ಞಾನಿಗಳು ಆಹೋರಾತ್ರಿ ಪ್ರಯತ್ನಪಡುತ್ತಿದ್ದಾರೆ. ಕಳೆದ ಸೆ.7ರಂದುಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್ ಈಗಚಂದ್ರನ ಮೇಲೆ ಲ್ಯಾಂಡ್ ಆಗಿದೆ.ವಿಕ್ರಮ್ ಲ್ಯಾಂಡರ್ ವಾಲಿದ ಸ್ಥಿತಿಯಲ್ಲಿದೆ ಎಂದುತಿಳಿದುಬಂದಿದೆ. ಆದರೆ ಸಂಪರ್ಕ ಇನ್ನೂಸಾಧ್ಯವಾಗಿಲ್ಲ. ನಾವಿನ್ನೂ ಭರವಸೆ ಕಳೆದುಕೊಂಡಿಲ್ಲ ಎಂದುವಿಜ್ಞಾನಿಗಳು ಹೇಳಿದ್ದಾರೆ. ಭೂಮಿಯ ಜತೆ ಸಂಪರ್ಕ ಕಳೆದುಕೊಂಡು ಚಂದ್ರನ ಮೇಲೆ ಅಪ್ಪಳಿಸಿರುವ ಚಂದ್ರಯಾನ-2 ನೌಕೆಯ ‘ಲ್ಯಾಂಡರ್’ ಛಿದ್ರವಾಗಿಲ್ಲ. ಆದರೆ ವಾಲಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಲ್ಯಾಂಡರ್ ಜತೆ ಸಂಪರ್ಕವನ್ನು ಮರುಸ್ಥಾಪಿಸಲು ಭಾರತೀಯ ಬಾಹ್ಯಾಕಾಶ…
ವೀಳ್ಯದೆಲೆ ತಾಂಬೂಲ ಕೊಡೋವಾಗ, ವೀಳ್ಯದೆಲೆ ಆಗಿ ಹೋಗಿದೆ, ಏನು ಅಂದುಕೊಳ್ಳಬೇಡಿ ಅಂಥ ಬರೀ ಹಣ್ಣು ಅಥವಾ ತೆಂಗಿನಕಾಯಿ ಕೊಟ್ಟರೆ. ನೀವು ಮಾಡುವ ಕಾರ್ಯಗಳಿಗೆ ತುಂಬಾ ಅಡಚಣೆ ಉಂಟಾಗುತ್ತದೆ ಶುಭಕಾರ್ಯಗಳಾದರೆ ತುಂಬಾ ತೊಂದರೆಗಳಾಗುತ್ತವೆ, ಜನಸಹಾಯ ದೊರೆಯುವುದಿಲ್ಲ. ಹಣಕಾಸಿಗೆ ಪರಾದಾಟವಾಗುತ್ತದೆ. ನೀವು ಕೊಡುವ ತಾಂಬೂಲದ ವೀಳ್ಯದೆಲೆ ಒಣಗಿದರೆ ಅತಿಯಾದ ನಷ್ಟ. ಅನಾರೋಗ್ಯವಾಗುತ್ತದೆ, ನಿಮ್ಮ ಕಾರ್ಯಗಳು ಅರ್ಧಕ್ಕೇ ನಿಂತು ಹೋಗುತ್ತವೆ. ಯಾರಾದರೂ ಕೊಟ್ಟ ತಾಂಬೂಲವನ್ನು ದೇವರಿಗೆ ಸಮರ್ಪಿಸದೇ, ಯಾವುದೋ ಮೂಲೆಯಲ್ಲಿ ಇಟ್ಟುಬಿಟ್ಟರೆ, ಸಮಾಜದಲ್ಲಿ, ಬಂಧುಗಳಲ್ಲಿ ಗೌರವ ಕಳೆದುಕೊಳ್ಳುತ್ತಾರೆ, ಮಕ್ಕಳಿಗೆ ಮರೆವಿನ ರೋಗ…
ಮೊದಲಿಗೆ ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಿರಿ. ನಂತರ ಅದನ್ನು ಚಿಕ್ಕ ಚಿಕ್ಕ ಪೀಸ್ ಗಳಾಗಿ ತುರಿಯಿರಿ . ಅದಕ್ಕೆ ಮೈದ ಹಿಟ್ಟು ಸೇರಿಸಿ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ. ಹಸಿಮೆಣಸು , ಕೊತ್ತಂಬರಿ ಸೊಪ್ಪನು ಸಣ್ಣದಾಗಿ ಹೆಚ್ಚಿ ಹಿಟ್ಟಿಗೆ ಸೇರಿಸಿ. ರುಚಿಗೆ ತಕ್ಕಸ್ಟು ಉಪ್ಪು ಹಾಕಿ.
ಈ ವರ್ಷದ ಡಿಸೆಂಬರ್ 1ರ ಒಳಗಾಗಿ ನಾಲ್ಕು-ಚಕ್ರ ವಾಹನ ಅಥವಾ ಎಲ್ಲಾ ಕಾರುಗಳ ಮುಂಭಾಗದ ವಿಂಡ್‌ಸ್ಕ್ರೀನ್‌ನಲ್ಲಿ ಹೊಸ ಟೋಲ್‌ಗಳಲ್ಲಿ ಫಾಸ್ಟ್ ಟ್ಯಾಗ್ ಸಾಧನಗಳನ್ನು ಹೊಂದಲು ರಸ್ತೆ ಸಾರಿಗೆ ಸಚಿವಾಲಯ ಸೂಚಿಸಿದೆ.
ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಆಟೋಗ್ರಾಫ್ ಪಡೆಯಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಭಾರತ ತಂಡದ ಅತ್ಯಂತ ಜನಪ್ರಿಯ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಆಟೋಗ್ರಾಫ್ ನೀಡುವ ಮೂಲಕ 7ರ ಹರೆಯದ ಬಾಲಕ ಅಚ್ಚರಿ ಮೂಡಿಸಿದ್ದಾರೆ. ವೆಸ್ಟ್‌ಇಂಡೀಸ್ ಪ್ರವಾಸದ ವೇಳೆಯಲ್ಲಿ ಜಮೈಕಾದಲ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆಯಲ್ಲಿರುವಾಗ ಅಚಾನಕ್ ಆಗಿ ಬಾಲಕನ ಭೇಟಿಯಾದರು. ಈ ಸಂದರ್ಭದಲ್ಲಿ ಬಾಲಕನೇ ನನ್ನ ಆಟೋಗ್ರಾಫ್ ಪಡೆಯುವೀರಾ ಎಂದು ವಿರಾಟ್ ಕೊಹ್ಲಿರನ್ನು ಪ್ರಶ್ನಿಸಿದರು. ಬಾಲಕನ ಪ್ರಶ್ನೆಯಿಂದ ಅಚ್ಚರಿಗೊಂಡರೂ ನಗುಮುಖದಿಂದಲೇ ಬಹಳ ತಾಳ್ಮೆಯಿಂದ…