ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೆಲ ರೈತರು ಹೊಂದಲ್ಲ ಒಂದು ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಈ ಹೊಸ ಪ್ರಯೋಗಗಳನ್ನು ಮಾಡಿ ತಮ್ಮ ಕೃಷಿಯಲ್ಲಿ ಲಾಭವನ್ನು ಗಳಿಸುತ್ತಾರೆ. ರಾಯಚೂರು ಜಿಲ್ಲೆ ಒಂದೆಡೆ ಪ್ರವಾಹಕ್ಕೆ ಸಿಲುಕಿ ಬರಗಾಲದಿಂದ ತತ್ತರಿಸಿ ಹೋಗಿದೆ. ಇಂತಹ ಸಮಯದಲ್ಲೂ ಕೂಡ ಜಿಲ್ಲೆಯ ದೇವದುರ್ಗ ತಾಲೂಕಿನ ರೈತರು ಅಡುಗೆ ಎಣ್ಣೆಯನ್ನು ಬಳಸಿ ಉತ್ತಮ ಕೃಷಿ ಮಾಡಿ ರೈತರ ಪಾಲಿಗೆ ಸ್ಫೂರ್ತಿಯಾಗಿದ್ದಾರೆ.

ನಾರಾಯಣಪುರ ಬಲದಂಡೆ ಎಂಬುವ ಕಾಲುವೆಯ ನೀರನ್ನು ನಂಬಿಕೊಂಡು ಕೃಷಿ ಮಾಡುತ್ತಿರುವ ಅನೇಕ ರೈತರ ಮುಖ್ಯ ಬೆಳೆಗಳೆಂದರೆ ಭತ್ತ, ಹತ್ತಿ ಹಾಗೂ ಮೆಣಸಿನಕಾಯಿ. ಆದರೆ ರಸಗೊಬ್ಬರ, ಕ್ರಿಮಿನಾಶಕ, ಕೂಲಿಯಾಳುಗಳು ಸೇರಿ ಎಕರೆಗೆ 40 ರಿಂದ 50 ಸಾವಿರ ಖರ್ಚುಮಾಡಿ ಬೆಳೆ ಬೆಳೆಯುತ್ತಿದ್ದ ರೈತರು ತುಂಬಾ ನಷ್ಟ ಅನುಭವಿಸುತ್ತಿದ್ದರು. ಈಗ ರೈತರ ಹೊಸ ಪ್ರಯೋಗ ಕೃಷಿಯಲ್ಲಿ ಅಡುಗೆಎಣ್ಣೆ ಬಳಸುವ ಮೂಲಕ ಎಕರೆಗೆ ಕೇವಲ 5 ರಿಂದ 8 ಸಾವಿರ ರೂ. ಖರ್ಚು ಬರುತ್ತಿದೆ. ಇದರಿಂದ ಹೆಚ್ಚು ಲಾಭವನ್ನು ಸಹ ಗಳಿಸುತ್ತಿದ್ದಾರೆ. ಅಡುಗೆ ಎಣ್ಣೆಯನ್ನು ಕೃಷಿಯಲ್ಲಿ ಕ್ರಿಮಿಕೀಟಗಳ ನಾಶಕ್ಕೆ ಉತ್ತಮ ಪೋಷಕಾಂಶ ವನ್ನು ನೀಡುವ ಔಷಧಿಯಾಗಿ ಬಳಕೆ ಮಾಡಬಹುದು ಎಂಬುವ ಉಪಯೋಗವನ್ನು ಇಲ್ಲಿನ ರೈತರು ಕಂಡುಕೊಂಡಿದ್ದಾರೆ.

ದೇವದುರ್ಗಾ ತಾಲೂಕಿನ ಗಬ್ಬೂರು ಸೇರಿದಂತೆ ಸುತ್ತಲಿನ ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿನ ರೈತರು ಈ ಪ್ರಯೋಗದಿಂದ ಯಶಸ್ವಿಯ ನ್ನು ಕಂಡುಕೊಂಡಿದ್ದಾರೆ. ಅಡುಗೆ ಎಣ್ಣೆಗಳಾದ ಪಾಮ್, ಶೇಂಗಾ, ಕೊಬ್ಬರಿ ಹಾಗೂ ಹತ್ತಿ ಕಾಳು ಎಣ್ಣೆ, ಸೋಯಾಬಿನ್ ಎಣ್ಣೆ ಹೀಗೆ ಹಲವಾರು ಎಣ್ಣೆಗಳಿಗೆ ಕೋಳಿ ಮೊಟ್ಟೆ ಮಿಶ್ರಣ ಮಾಡಿ ವಾರಕ್ಕೊಮ್ಮೆ ಸಿಂಪಡಣೆ ಮಾಡುವುದರಿಂದ ಬೆಳೆಗಳಿಗೆ ಮುಖ್ಯವಾಗಿ ಮುರುಟು ರೋಗ, ಜೀಗಿ ರೋಗ ಸೇರಿದಂತೆ ವಿವಿಧ ರೋಗಗಳನ್ನು ನಿಯಂತ್ರಣ ಮಾಡಬಹುದು. ಅಲ್ಲದೆ ಬೆಳೆಗಳಿಗೆ ಅಧಿಕ ಪೋಷಕಾಂಶ ನೀಡಬಹುದು ಎನ್ನುವುದನ್ನು ರೈತರು ಕಂಡುಕೊಂಡಿದ್ದಾರೆ. ರಾಸಾಯನಿಕ ಗೊಬ್ಬರ ಹಾಗೂ ಕೀಟ ನಾಶಕ ಬಳಸಿ ಕೃಷಿ ಮಾಡುವ ಪದ್ಧತಿಯ ಖರ್ಚಿಗಿಂತ ಎಣ್ಣೆ ಬಳಸಿ ಕೃಷಿ ಮಾಡುವುದರಿಂದ ಕೇವಲ ಶೇ.10ರಷ್ಟು ಹಣವನ್ನು ಖರ್ಚು ಮಾಡುತ್ತಿದ್ದಾರೆ.

ಮಿಶ್ರಣ ಹೇಗೆ?
ಮೆಣಸಿನಕಾಯಿ, ಹತ್ತಿ ನಾಟಿ ಅಥವಾ ಬಿತ್ತನೆ ಮಾಡಿದ ನಂತರ ಬೆಳೆ ಬೆಳೆಯುತ್ತಿರುವಾಗ ಪ್ರತಿ ವಾರಕ್ಕೊಮ್ಮೆ ಈ ಔಷಧಿಯನ್ನು ಸಿಂಪಡಣೆ ಮಾಡಬೇಕು, ಇಲ್ಲಿ ಮುಖ್ಯವಾಗಿ ಅಡುಗೆ ಎಣ್ಣೆಯೊಂದಿಗೆ ನೀರು ಮಿಶ್ರಣ ಮಾಡಲು ಒಂದು ಮೀಡಿಯೇಟರ್ ಬೇಕು. ಅದಕ್ಕೆ ಅವರು ಕೋಳಿ ಮೊಟ್ಟೆಯನ್ನು ಮಿಶ್ರಣ ಮಾಡುತ್ತಾರೆ. ಈ ಮೊದಲು ಎಂಎಸ್ ಫೈರ್ ಎಂಬ ಔಷಧಿಯನ್ನು ಮಿಶ್ರಣಕ್ಕೆ ಬಳಸುತ್ತಿದ್ದರು. ಇದನ್ನು ಸಹ ಪ್ರತಿ 100 ಎಂ ಎಲ್ ಗೆ 40 ರೂಪಾಯಿ ಕೊಟ್ಟು ಖರೀದಿಸಬೇಕಾಗಿತ್ತು.
ಪ್ರತಿ ಎಕರೆಗೆ ಒಂದು ಕೆಜಿ ಅಡುಗೆ ಎಣ್ಣೆ ಹಾಗೂ ಅದಕ್ಕೆ ಆರು ಕೋಳಿ ಮೊಟ್ಟೆಗಳನ್ನು ಚೆನ್ನಾಗಿ ಮಿಶ್ರಣ ಮಾಡಿ 19 ಲೀಟರ್ ನಂತೆ ನೀರನ್ನ ಬೆರೆಸಿ ಆರು ಟ್ಯಾಂಕ್ ಗಳ ಔಷಧಿಯನ್ನು ಸಿಂಪಡಣೆ ಮಾಡಬೇಕು. ನಿಗಿದಿತ ಸಮಯಕ್ಕೆ ಸರಿಯಾಗಿ ಸಿಂಪಡಣೆ ಮಾಡಿದರೆ ಉತ್ತಮ ಇಳುವರಿ ಬರುತ್ತದೆ. ಪ್ರತಿ ಬಾರಿಯೂ ಔಷಧಿಗಾಗಿ ಅಡುಗೆ ಎಣ್ಣೆ ಪ್ರತಿ ಕೆಜಿಗೆ 60 ರಿಂದ 120 ರೂಪಾಯಿ, ಆರು ಮೊಟ್ಟೆಗಳಿಗೆ 40 ರೂಪಾಯಿ, ಕೂಲಿ 300 ರೂಪಾಯಿ ಹೀಗೆ ಕೇವಲ 450 ರೂಪಾಯಿಯಲ್ಲಿ ಔಷಧಿಯನ್ನು ಸಿಂಪಡಣೆ ಮಾಡಬಹುದು, ಆದೇ ರಸಾಯನಿಕ ಬಳಸಿದರೆ ಪ್ರತಿ ಲೀಟರ್ ಗೆ 1000-1500 ರೂಪಾಯಿ ಹಾಗು ರಸಗೊಬ್ಬರಕ್ಕೆ ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ.

ಈ ಹಿಂದೆ ಇಸ್ರೇಲಿನ ಕೃಷಿ ವಿಜ್ಞಾನಿಯೊಬ್ಬರು ಪ್ರಯೋಗ ಮಾಡಿ ಯಶಸ್ವಿಯಾಗಿದ್ದರಂತೆ. ತೆಲಂಗಾಣದಲ್ಲೂ ರೈತರು ಈ ಪ್ರಯೋಗದಿಂದ ಯಶಸ್ಸು ಕಂಡಿದ್ದು ಕಳೆದ ಕೆಲ ವರ್ಷಗಳಿಂದ ಇಲ್ಲಿನ ರೈತರು ಈ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ರೈತರು ಸಹ ಈ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಸಾಲದ ಹೊರೆಯನ್ನು ಇಳಿಸಿಕೊಳ್ಳುತ್ತಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಂದೆಕರೆ ಕ್ಷಣದಲ್ಲೇ ಪರಿಹಾರ, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ಹಣಕಾಸಿನ ವ್ಯವಸ್ಥೆ ಉತ್ತಮವಾಗಿರುವುದರಿಂದ ಬಹು ಬಂಡವಾಳದ ಉದ್ಯಮವನ್ನು ಆರಂಭಿಸಲು ತೊಡಗುವಿರಿ. ಇದಕ್ಕೆ ನಿಮ್ಮ ಸಂಗಾತಿಯ ಮತ್ತು ಸ್ನೇಹಿತರ ಬೆಂಬಲ ದೊರೆಯುವುದು. .ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ…
ಮೆಟ್ರೋ ರೈಲು ಪ್ರಯಾಣಿಕರು ಇನ್ನು ಮುಂದೆ 25 ಕೆಜಿವರೆಗೂ ಲಗೇಜ್ ಕೊಂಡೊಯ್ಯಬಹುದಾಗಿದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಲಗೇಜ್ ತೂಕ ಮಿತಿಯನ್ನು 25 ಕೆಜಿ ಗೆ ಹೆಚ್ಚಳ ಮಾಡಿದೆ. ಪ್ರಸ್ತುತ ಮೆಟ್ರೋ ರೈಲುಗಳಲ್ಲಿ 15 ಕೆಜಿ ತೂಕದ ಲಗೇಜ್ ಕೊಂಡೊಯ್ಯಲು ಅವಕಾಶವಿದೆ. ಅದನ್ನು 25 ಕೆಜಿಗೆ ಹೆಚ್ಚಿಸಲಾಗಿದೆ. ಆದರೆ ಇಷ್ಟು ತೂಕದ ಒಂದು ಬ್ಯಾಗ್ ಗೆ ಮಾತ್ರ ಅನುಮತಿ ಇರುತ್ತದೆ. ಮೊದಲಿಗೆ ಮೆಟ್ರೋ ರೈಲ್ವೆ ಅಧಿಕಾರಿಗಳಿಂದಲೂ ಪೂರ್ವ ಅನುಮತಿ ಪಡೆಯಬೇಕಿದೆ. ವಿಮಾನ ನಿಲ್ದಾಣಗಳಿಗೆ ಸಂಪರ್ಕ…
ಇಂದು ಗುರುವಾರ 08/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ರಾಯಚೂರು: ಗ್ರಾಮ ವಾಸ್ತವ್ಯಕ್ಕೆಂದು ಕರೇಗುಡ್ಡಗೆ ಕೆಎಸ್.ಆರ್.ಟಿ.ಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಿಎಂ ಸಿಟ್ಟಾಗಿ ಪ್ರತಿಭಟನಾಕಾರರು ಮತ್ತು ಸಚಿವರ ವಿರುದ್ಧ ಗರಂ ಆದ ಪ್ರಸಂಗ ಇಂದು ನಡೆಯಿತು. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಯರಮರಸ್ ಸರ್ಕೀಟ್ ಹೌಸ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ, ವೈಟಿಪಿಎಸ್ನ ನೂರಾರು ಜನ ಕಾರ್ಮಿಕರು ಸಿಎಂ ಬಸ್ಗೆ ಮುತ್ತಿಗೆ ಹಾಕಿದರು. ಈ ವೇಳೆ ಸಿಟ್ಟಿಗೆದ್ದ ಮುಖ್ಯಮಂತ್ರಿಗಳು, ನರೇಂದ್ರ ಮೋದಿಗೆ ವೋಟ್ ಹಾಕಿ ನಮ್ಮತ್ರ ಸಮಸ್ಯೆ ಬಗೆಹರಿಸಿ ಅಂತೀರಾ? ನಿಮಗೆಲ್ಲಾ ಮರ್ಯಾದೆ ಕೊಡಬೇಕೇ? ಲಾಠಿಚಾರ್ಜ್ ಮಾಡ್ಬೇಕು ನಿಮಗೆ ಎಂದು…
ಇಂದು ಭಾನುವಾರ, 04/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಗಂಡನನ್ನು ಕಳೆದುಕೊಂಡ ತಾಯಿಗೆ ಆಸರೆಯಾಗಿ ನಿಂತ 22 ವರ್ಷದ ಮಗಳು. ವಿಧವೆಯಾದ ತನ್ನ 53 ವರ್ಷಗಳ ತಾಯಿಗಾಗಿ ವರನನ್ನು ಹುಡುಕಿ ತಂದಳು. ಹತ್ತಿರದಲ್ಲೇ ಇದ್ದು ಮದುವೆ ಮಾಡಿಸಿದಳು. ಈ ಘಟನೆ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಡೆದಿದೆ.