ಸುದ್ದಿ

ಆನ್‌ಲೈನ್‌ನಲ್ಲಿ ಪಿಎಫ್‌ ಕ್ಲೇಮ್ ಮಾಡಿಕೊಳ್ಳಲು ಈಗ ಸುಲಭ ಅಂದ್ರೆ ಸುಲಭ..! ಹೇಗೆ ಅಂತಿರಾ..?

119

ಉದ್ಯೋಗಿಗಳಿಗೆ ನಿವೃತ್ತಿ ನಂತರ ಅನುಕೂಲವಾಗಲೆಂದು ಬಹಳಷ್ಟು ಸಂಸ್ಥೆಗಳು ಪಿಎಫ್ ಸೌಲಭ್ಯವನ್ನು ತಮ್ಮ ಕಂಪನಿಯಲ್ಲಿ ನೀಡುತ್ತಿವೆ. ಭಾರತ ಸರ್ಕಾರದ ಸ್ವಾಯತ್ತ ಸಂಸ್ಥೆಯಿಂದ ಪ್ರಾವಿಡೆಂಟ್‌ ಫಂಡ್‌ನ ಕಾರ್ಯಗಳು ನೆರವೇರುತ್ತಿದ್ದು, ಒಟ್ಟು ಮೊತ್ತಕ್ಕೆ ನಿಗದಿಪಡಿಸಿದ ಬಡ್ಡಿ ಸೇರಿಸಿ ಸರ್ಕಾರ ಹಣವನ್ನು ನೀಡುತ್ತದೆ. ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಅಡಿ ಸ್ಥಾಪನೆಯಾದ ಇಪಿಎಫ್‌ಒ ಉದ್ಯೋಗಿಗಳಿಗೆ ಪಿಎಫ್‌ ಸೌಲಭ್ಯವನ್ನು ನೀಡುತ್ತಿದೆ. ಉದ್ಯೋಗಿ ತನಗೆ ಅಗತ್ಯವಿದ್ದಾಗ ಅಥವಾ ನಿವೃತ್ತಿಯ ನಂತರ ಪಿಎಫ್‌ ಹಣವನ್ನು ಪಡೆಯಬಹುದಾಗಿದೆ.

ಇನ್ನು, ಪಿಎಫ್‌ ಹಣವನ್ನು ಪಡೆಯುವುದು ಸಹ ಈಗ ಬಹಳಷ್ಟು ಸುಲಭ ಅಂದ್ರೆ ಸುಲಭದ ಮಾತಾಗಿದೆ. ಯುನಿಫೈಡ್ ಮೆಂಬರ್ ಪೋರ್ಟಾಲ್‌ ಮೂಲಕ ಬ್ಯಾಂಕ್‌ ಅಕೌಂಟ್‌ಗೆ ನೇರವಾಗಿ ಪಿಎಫ್‌ ಹಣ ಬಂದು ಸೇರುತ್ತೆ. ಮೊದಲಿನ ರೀತಿ ಯಾವುದೇ ಕಚೇರಿಗೂ ಪಿಎಫ್‌ಗಾಗಿ ಅಲೆದಾಡಬೇಕಾದ ಪರಿಸ್ಥಿತಿಯಿಲ್ಲ.ಫಾರ್ಮ್‌ 19, ಫಾರ್ಮ್‌ 10C ಮತ್ತು ಫಾರ್ಮ್‌ 31ನ್ನು ಸೇರಿಸಿ ಒಂದೇ ಕ್ಲೇಮ್‌ ಫಾರ್ಮ್‌ನ್ನು ಇಪಿಎಫ್‌ಒ ರೂಪಿಸಿದೆ. ಹಾಗಾದ್ರೆ, ಪಿಎಫ್‌ ಹಣವನ್ನು ಆನ್‌ಲೈನ್‌ ಮೂಲಕ ಸುಲಭವಾಗಿ ಪಡೆಯುವುದು ಹೇಗೆ ಅಂತಿರಾ..? ಮುಂದೆ ನೋಡಿ..

ಈ ಮಾಹಿತಿ ಇರಲಿ ಮೊದಲಿಗೆ ನಿಮ್ಮ ಯುಎಎನ್‌ ನಂಬರ್‌ ಮತ್ತು ಪಿಎಫ್ ಖಾತೆ ಇಪಿಎಫ್‌ಒ ವೆಬ್‌ಸೈಟ್‌ನಲ್ಲಿ ಸಕ್ರಿಯವಾಗಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ವೆಬ್‌ಸೈಟ್‌ನಲ್ಲಿ ಕೇಳುವ ಅಗತ್ಯ ಮಾಹಿತಿಗಳನ್ನು ಪರಿಶೀಲಿಸಿಕೊಳ್ಳಬೇಕು. ನಂತರ ಬ್ಯಾಂಕ್ ವಿವರ, ಪ್ಯಾನ್‌, ಆಧಾರ್ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ನಮೂದಿಸಬೇಕು.ವೆಬ್‌ಸೈಟ್‌ಗೆ ಭೇಟಿ ನೀಡಿ ಮೊದಲು ಯುನಿಫೈಡ್‌ ಮೆಂಬರ್ ಪೋರ್ಟಾಲ್‌ ವೆಬ್‌ಸೈಟ್‌ಗೆ ಭೇಟಿ ನೀಡಿ. https://unifiedportal-mem.epfindia.gov.in/memberinterface/ ನಿಮ್ಮ ಬ್ರೌಸರ್‌ನಲ್ಲಿ ಲಿಂಕ್‌ ಕ್ಲಿಕ್ ಮಾಡಿ.

ಲಾಗಿನ್ ಆಗಿ ಯುಎಎನ್‌ ಸಂಖ್ಯೆ ಮತ್ತು ಪಾಸ್‌ವರ್ಡ್‌ ಮೂಲಕ ಲಾಗಿನ್ ಆಗಿ. ಒಂದು ವೇಳೆ ನಿಮ್ಮ ಯುಎಎನ್ ಸಂಖ್ಯೆ ಆಕ್ಟಿವ್ ಆಗಿಲ್ಲವೆಂದರೆ ‘ಇಂಪಾರ್ಟಂಟ್‌ ಲಿಂಕ್’ ವಿಭಾಗದ ಕೆಳಗಿರುವ ‘ಆಕ್ಟಿವೇಟ್‌ ಯುಎಎನ್’ ಎಂಬ ಲಿಂಕ್ ಕ್ಲಿಕ್ ಮಾಡಿ ಆಕ್ಟಿವೇಟ್ ಮಾಡಿಕೊಳ್ಳಬಹುದು. ಯುಎಎನ್, ಪ್ಯಾನ್, ಹೆಸರು, ಜನ್ಮದಿನಾಂಕ, ಮೊಬೈಲ್ ಸಂಖ್ಯೆ ಮತ್ತಿತರ ವಿವರಗಳನ್ನು ನೀವು ನಮೂದಿಸಬೇಕಾಗುತ್ತದೆ. ಎಲ್ಲಾ ವಿವರಗಳನ್ನು ನಮೂದಿಸಿದ 24 ಗಂಟೆಗಳೊಳಗೆ ಯುಎಎನ್ ಸಕ್ರಿಯವಾಗುತ್ತದೆ.

ವೆಬ್‌ಸೈಟ್‌ನಲ್ಲಿ ಮಾಹಿತಿ ಒಂದು ಸಲ ನೀವು ವೆಬ್‌ಸೈಟ್‌ಗೆ ಲಾಗಿನ್ ಆದ ನಂತರ ನಿಮಗೆ ಒಂದಿಷ್ಟು ಅಗತ್ಯ ಮಾಹಿತಿಗಳನ್ನು ವೆಬ್‌ಸೈಟ್‌ ನೀಡುತ್ತದೆ. ನಿಮ್ಮ ಹೆಸರು, ಯುಎಎನ್ ಸಂಖ್ಯೆ ಮತ್ತಿತರ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತದೆ. ವೆಬ್‌ಸೈಟ್‌ನಲ್ಲಿ ಪ್ರದರ್ಶಿತವಾದ ಮಾಹಿತಿಯನ್ನು ಒಂದು ಸಲ ಪರಿಶೀಲಿಸಿ.

ಆನ್‌ಲೈನ್‌ ಸೇವೆ ಕ್ಲಿಕ್ ಮಾಡಿ ನಂತರ ಮೇಲಿನ ಮೆನು ಬಾರ್‌ನಲ್ಲಿರುವ ‘ಆನ್‌ಲೈನ್‌ ಸರ್ವಿಸಸ್’ ಲಿಂಕ್‌ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಕ್ಲೇಮ್‌ (ಫಾರ್ಮ್‌ 19, ಫಾರ್ಮ್‌ 10C ಮತ್ತು ಫಾರ್ಮ್‌ 31) ಆಯ್ಕೆಯನ್ನು ಆಯ್ದುಕೊಳ್ಳಿ.

ಬ್ಯಾಂಕ್ ಮಾಹಿತಿ ಪರಿಶೀಲಿಸಿ ನಂತರ ನಿಮ್ಮ ಬ್ಯಾಂಕ್‌ ಖಾತೆಯನ್ನು ಪರಿಶೀಲಿಸಬೇಕಾಗುತ್ತದೆ. ಬ್ಯಾಂಕ್‌ ಅಕೌಂಟ್‌ನ ಕೊನೆಯ ನಾಲ್ಕು ಸಂಖ್ಯೆಗಳನ್ನು ನಮೂದಿಸಿ, ಪರಿಶೀಲಿಸಿ ಬಟನ್‌ ಕ್ಲಿಕ್ ಮಾಡಿ.

ಆನ್‌ಲೈನ್‌ ಕ್ಲೇಮ್‌ಗೆ ಮುಂದುವರೆಯಿರಿ ಬ್ಯಾಂಕ್‌ ಅಕೌಂಟ್‌ ಪರಿಶೀಲನೆಯಾದ ನಂತರ, ಆನ್‌ಲೈನ್‌ ಕ್ಲೇಮ್‌ಗೆ ಮುಂದುವರೆಯಬೇಕು. ಇದಕ್ಕಾಗಿ ನೀವು ಸ್ಕ್ರಾಲ್‌ ಡೌನ್‌ ಮಾಡಿ ‘ಪ್ರೊಸೀಡ್ ಫಾರ್‌ ಆನ್‌ಲೈನ್‌ ಕ್ಲೇಮ್‌’ ಬಟನ್‌ ಕ್ಲಿಕ್ ಮಾಡಬೇಕು. ನಂತರ ‘ಒನ್ಲೀ ಪಿಎಫ್‌ ವಿತ್‌ಡ್ರಾ ಫಾರ್ಮ್‌’ ಆಯ್ಕೆಯನ್ನು ಆಯ್ದುಕೊಳ್ಳಬೇಕು.

ಆಧಾರ್ ಪರಿಶೀಲಿಸಿ ಎಲ್ಲಾ ಮಾಹಿತಿಯನ್ನು ದಾಖಲಿಸಿದ ಮೇಲೆ ಆಧಾರ್‌ನ್ನು ಪರಿಶೀಲಿಸಬೇಕು. ನಿಮ್ಮ ನೊಂದಾಯಿತ ಮೊಬೈಲ್‌ ಸಂಖ್ಯೆಗೆ ಬಂದಿರುವ ಆಧಾರ್ ಒಟಿಪಿಯನ್ನು ನಮೂದಿಸಬೇಕು.

ಸ್ಟೇಟಸ್ ಚೆಕ್ ಮಾಡಿ ನಂತರ ನೀವು ನಿಮ್ಮ ಕ್ಲೇಮ್‌ನ ಸ್ಟೇಟಸ್‌ ಕೂಡ ನೋಡಬಹುದಾಗಿದ್ದು, ಆನ್‌ಲೈನ್‌ ಸರ್ವಿಸಸ್ ವಿಭಾಗದಲ್ಲಿ ಚೆಕ್‌ ಕ್ಲೇಮ್‌ ಸ್ಟೇಟಸ್‌ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ ನಿಮ್ಮ ಪಿಎಫ್‌ ಕ್ಲೇಮ್‌ ಸ್ಟೇಟಸ್‌ ಪರಿಶೀಲಿಸಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ