ಸುದ್ದಿ

ನೆನಪಿಡಿ ಊಟದ ನಂತರ ಅಪ್ಪಿತಪ್ಪಿಯೂ ಸಹ ಇಂತಹ ತಪ್ಪುಗಳನ್ನು ಮಾಡದೆ ಹೆಚ್ಚರವಹಿಸಿ,.!

103

ಸಾಮಾನ್ಯವಾಗಿಮಧ್ಯಾಹ್ನ ಊಟ ಮಾಡಿದ ಬಳಿಕಸ್ವಲ್ಪ ನಿದ್ರೆ ಮಾಡಬೇಕು ಎಂದುಹೇಳುವುದನ್ನು ನಾವೆಲ್ಲರೂ ಕೇಳಿದ್ದೇವೆ. ಆದರೆ ಊಟವಾದ ತಕ್ಷಣವೇಮಲಗಿದರೆ ಆಗ ಜೀರ್ಣಕ್ರಿಯೆ ಮೇಲೆಪರಿಣಾಮ ಬೀರುವುದು ಮತ್ತು ಆಹಾರವು ಜೀರ್ಣವಾಗದೆಹಾಗೆ ಇರುವುದು.ಹೊಟ್ಟೆ ತುಂಬಾ ಊಟ ಮಾಡಿದ ಬಳಿಕ ನಮಗನಿಸುವುದು ನಿದ್ರೆ ಮಾಡಬೇಕು ಎಂದು. ಅದು ಮಧ್ಯಾಹ್ನವೇ ಆಗಿರಬಹುದು ಅಥವಾ ರಾತ್ರಿಯ ಊಟವೇ ಆಗಿರಬಹುದು. ಯಾಕೆಂದರೆ ಹೊಟ್ಟೆ ಭಾರವಾದ ಕೂಡಲೇ ದೇಹದಲ್ಲಿ ಜಡತ್ವ ತುಂಬುವುದು. ಇದು ನಿದ್ರೆಗೆ ಜಾರುವಂತೆ ಮಾಡುವುದು. ಆದರೆ ಊಟವಾದ ತಕ್ಷಣವೇ ಮಲಗುವುದು ಸರಿಯಾದ ಕ್ರಮವಲ್ಲ ಮತ್ತು ಇದು ಆರೋಗ್ಯದ ಮೇಲೆ ಪರಿಣಾಮ ಕೂಡ ಬೀರುವುದು. ಅದೇ ರೀತಿಯಾಗಿ ಊಟವಾದ ಬಳಿಕ ನೀವು ಮಾಡಲೇಬಾರದ ಕೆಲವೊಂದು ಕೆಲಸಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿದುಕೊಳ್ಳಿ.

ತಂಪಾದ ನೀರು ಕುಡಿಯಬೇಡಿ  : ನಮ್ಮ ದೇಹದಲ್ಲಿ ಶೇ. 70ರಷ್ಟು ನೀರಿನಾಂಶವಿದೆ ಎಂದು ಹೇಳಲಾಗುತ್ತದೆ. ಇದರಿಂದ ನೀರು ನಮ್ಮದೇಹಕ್ಕೆ ಅತ್ಯಗತ್ಯವಾಗಿರುವುದು. ಜೀರ್ಣಕ್ರಿಯೆಗೂ ನೀರು ತುಂಬಾ ಸಹಕಾರಿ. ಆದರೆ ಊಟವಾದ ಕೂಡಲೇ ತಂಪಾದ ನೀರು ಕುಡಿಯಬಾರದು. ಯಾಕೆಂದರೆ ತಂಪಾದ ನೀರು ಆಹಾರವನ್ನು ಅಂಟಿಕೊಳ್ಳುವಂತೆ ಮಾಡುವುದು ಮತ್ತು ಇದರಿಂದ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದು. ಜೀರ್ಣಕ್ರಿಯೆ ಬೆಂಕಿ ಎಂದು ಭಾವಿಸಿದರೆ, ತಂಪು ನೀರು ಶಾಮಕದಂತೆ!

ನಿದ್ರಿಸುವುದು : ಮಧ್ಯಾಹ್ನ ಊಟ ಮಾಡಿದ ಬಳಿಕ ಸ್ವಲ್ಪ ನಿದ್ರೆ ಮಾಡಬೇಕು ಎಂದು ಹೇಳುವುದನ್ನು ನಾವೆಲ್ಲರೂ ಕೇಳಿದ್ದೇವೆ. ಆದರೆ ಊಟವಾದ ತಕ್ಷಣವೇ ಮಲಗಿದರೆ ಆಗ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದು ಮತ್ತು ಆಹಾರವು ಜೀರ್ಣವಾಗದೆ ಹಾಗೆ ಇರುವುದು. ಇದರಿಂದ ನೀವು ನಿದ್ರೆಯಿಂದ ಎದ್ದ ಬಳಿಕವೂ ಹೊಟ್ಟೆ ಭಾರವಾದಂತೆ ಆಗುವುದು.

ಧೂಮಪಾನ : ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ ಕೆಲವರಿಗೆ ಕೆಲವರಿಗೆ ಊಟವಾದ ಕೂಡಲೇ ಧಂ ಎಳೆಯಲೇ ಬೇಕು. ಇಲ್ಲದೆ ಇದ್ದರೆ ಅವರಿಗೆ ಸರಿಯಾಗಿ ಊಟ ಮಾಡಿದ ಹಾಗೆ ಆಗುವುದೇ ಇಲ್ಲ. ಊಟವಾದ ತಕ್ಷಣ ಧೂಮಪಾನ ಮಾಡುವುದು ನೀವು ಒಮ್ಮೆಲೇ ಹತ್ತು ಸಿಗರೇಟ್ ಸೇದಿದಂತೆ. ನೀವು ಇನ್ನು ಮುಂದೆ ಧೂಮಪಾನ ಮಾಡಲೇಬಾರದು.

ಸ್ನಾನ ಮಾಡಬೇಡಿ  : ಊಟವಾದ ಬಳಿಕ ಸ್ನಾನ ಮಾಡುವುದರಿಂದ ಜೀರ್ಣಕ್ರಿಯೆಯು ವಿಳಂಬವಾಗುವುದು. ಹೊಟ್ಟೆಯ ಸುತ್ತಲಿನ ರಕ್ತವು ಜೀರ್ಣಕ್ರಿಯೆಗೆ ನೆರವಾಗುವ ಬದಲು ದೇಹದ ಬೇರೆ ಭಾಗಗಳಿಗೆ ತೆರಳುವುದು. ಇದರಿಂದ ಊಟವಾದ ಬಳಿಕ ಸ್ನಾನ ಮಾಡಬಾರದು. ನಾವು ಊಟ ಮಾಡುವ ವೇಳೆ ರಕ್ತವು ಹೊಟ್ಟೆಯ ಭಾಗಕ್ಕೆ ಹರಿಯಲು ಆರಂಭವಾಗುವುದು ಮತ್ತು ಜೀರ್ಣಕ್ರಿಯೆಗೆ ನೆರವಾಗುವುದು. ಆದರೆ ಊಟವಾದ ತಕ್ಷಣ ನಾವು ಸ್ನಾನ ಮಾಡಿದರೆ ಆಗ ಜೀರ್ಣಕ್ರಿಯೆ ಪ್ರಕ್ರಿಯೆ ಮೇಲೆ ಪರಿಣಾಮ ಬೀರುವುದು. ಇದು ದೇಹದ ತಾಪಮಾನ ತಗ್ಗಿಸುವುದು. ರಕ್ತವು ಕೈ, ಕಾಲು ಚರ್ಮದ ಭಾಗಕ್ಕೆ ತೆರಳಿ ದೇಹದ ಉಷ್ಣತೆ ಕಾಪಾಡಿಕೊಳ್ಳಲು ನೆರವಾಗುವುದು. ಇದರಿಂದ ಊಟವಾದ ತಕ್ಷಣವೇ ಸ್ನಾನ ಮಾಡಲೇಬಾರದು.

ಊಟವಾದ ತಕ್ಷಣ ಓಡುವುದು!: ಊಟವಾದ ತಕ್ಷಣವೇ ಓಡುವುದು ಸೆಳೆತ ಮತ್ತು ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಪರಿಣಾಮ ಬೀರಬಹುದು. ಇದರಿಂದ ನಿಮ್ಮ ದೇಹದಲ್ಲಿ ಜಡತ್ವ ಉಂಟಾಗಬಹುದು.

ಅತಿಯಾಗಿ ನೀರು ಕುಡಿಯುವುದು  : ಊಟವಾದ ತಕ್ಷಣ ಅತಿಯಾಗಿ ನೀರು ಕುಡಿದರೆ ಅದರಿಂದ ಜೀರ್ಣಕ್ರಿಯೆ ರಸದ ಮೇಲೆ ಪರಿಣಾಮ ಬೀರುವುದು ಮತ್ತು ಇನ್ಸುಲಿನ್ ಮಟ್ಟವನ್ನು ಅತಿಯಾಗಿ ಹೆಚ್ಚಿಸುವುದು.
ಹೊಟ್ಟೆ ತುಂಬ ಊಟ ಮಾಡಿ ಈಜಬೇಡಿ  : ಊಟವಾದ ಕೂಡಲೇ ನೀವು ಈಜಲು ಹೋಗಲೇಬಾರದು. ಊಟವಾದ ತಕ್ಷಣವೇ ನೀವು ನೀರಿಗೆ ಜಿಗಿದರೆ ಆಗ ಸೆಳೆತ ಕಾಣಿಸಬಹುದು ಮತ್ತು ನೀರಿನಲ್ಲಿ ಎಳೆದುಕೊಂಡು ಹೋಗಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಪುಟ್ಟ ಮಕ್ಕಳಿಗೆ ವಿಳ್ಯೆದೆಲೆ ಯನ್ನು ಹೊಟ್ಟೆಗೆ ಅಂಟಿಸುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ,.!ಇದನೊಮ್ಮೆ ತಿಳಿಯಿರಿ.

    ಹೌದು ಹುಟ್ಟಿದ ಮಕ್ಕಳಿಗೆ ಒಂದು ತಿಂಗಳಿನಿಂದ ವಿಳ್ಯೆದೆಲೆಯನ್ನು ಹೊಟ್ಟೆಗೆ ಅಂಟಿಸುತ್ತಾರೆ.. ಇದನ್ನು ಸಾಮಾನ್ಯವಾಗಿ 1 ವರ್ಷದವರೆಗೂ ಮುಂದುವರೆಸುತ್ತಾರೆ.. ಇದಕ್ಕೆ ಕಾರಣ ಮತ್ತು ಉಪಯೋಗ ಇಲ್ಲಿದೆ ನೋಡಿ.. ಹುಟ್ಟಿದ ಮಕ್ಕಳು ಸೂಕ್ಷ್ಮವಾಗಿರುತ್ತವೆ.. ಜೊತೆಗೆ ಗರ್ಭದಿಂದ ಹೊರ ಬಂದು ವಾತಾವರಣಕ್ಕೆ ಹೊಂದಿಕೊಳ್ಳಬೇಕು.. ಪುಟ್ಟ ಮಕ್ಕಳಿಗೆ ಆರೋಗ್ಯ ಕೆಟ್ಟರೆ ಚೇತರಿಸಿಕೊಳ್ಳುವುದು ಬಲು ಕಷ್ಟ.. ಅದಕ್ಕಾಗಿಯೇ ಮಕ್ಕಳ ಆರೋಗ್ಯ ಕೆಡದೇ ಇರುವ ರೀತಿಯಲ್ಲಿ ನೋಡಿಕೊಳ್ಳಬೇಕು. ಸಾಮಾನ್ಯವಾಗಿ ಅಜೀರ್ಣದ ಸಮಸ್ಯೆ ಮಕ್ಕಳಲ್ಲಿ ಬೇಗ ಕಾಣಿಸಿಕೊಳ್ಳುತ್ತವೆ. ಮಲ ಮೂತ್ರ ವಿಸರ್ಜಿಸಲು ತುಂಬಾ ಕಷ್ಟ ಪಡುತ್ತವೆ.. ಇದಕ್ಕಾಗಿಯೇ…

  • ರೆಸಿಪಿ

    106 ವರ್ಷದ ಈ ಅಜ್ಜಿ ವಿಶ್ವದ ಹಿರಿಯ ಯೂಟ್ಯೂಬ್ ಸ್ಟಾರ್..!ಈ ಅಜ್ಜಿ ಯೂಟ್ಯೂಬ್ ಸ್ಟಾರ್ ಆಗಿದ್ದು ಹೇಗೆ ಗೊತ್ತಾ?

    ಜಗತ್ತಿನಲ್ಲಿ ಯೂಟ್ಯೂಬ್ ವಿಡಿಯೋಗಳು ಸಖತ್ ಸದ್ದು ಮಾಡುತ್ತಿದ್ದು, ಯೂಟ್ಯೂಬ್‍ನಲ್ಲಿ ವಿವಿಧ ಬಗೆಯ ಅಡುಗೆಗಳನ್ನು ಹೇಳಿಕೊಡುವ ಅನೇಕ ಚಾನಲ್‍ಗಳಿವೆ. ಚೆಫ್‍ಗಳಿಂದ ಹಿಡಿದು ಗೃಹಿಣಿಯರೂ ಕೂಡ ಯೂಟ್ಯೂಬ್‍ನಲ್ಲಿ ಅಡುಗೆ ವಿಡಿಯೋಗಳನ್ನ ಹಾಕ್ತಿರ್ತಾರೆ. ಇಲ್ಲಿ ಯಾರ ಸಹಾಯವೂ ಇಲ್ಲದೇ ಸ್ಟಾರ್ ಆಗಬಹುದು. ತಮ್ಮದೇ ಚಾನಲ್ ಶುರು ಮಾಡಬಹುದು, ಹಣವನ್ನು ಸಂಪಾದನೆ ಮಾಡಬಹುದು. ಇದೇ ಮಾದರಿಯಲ್ಲಿ ಆಂಧ್ರ ಶತಾಯುಷಿ, 106 ವರ್ಷದ ಅಜ್ಜಿಯೊಬ್ಬರು ಹಳ್ಳಿ ಸ್ಟೈಲ್ ಅಡುಗೆಗಳ ಮೂಲಕ ಇಂಟರ್ನೆಟ್ ಸ್ಟಾರ್ ಆಗಿದ್ದಾರೆ.

  • ಸುದ್ದಿ

    ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋತರೂ ಸಹ ನೀಡಬೇಕಂತೆ ಸಚಿವ ಸ್ಥಾನ..!ಏಕೆ ಗೊತ್ತಾ..?

    ರಾಜ್ಯದಲ್ಲಿ ಚುನಾವಣೆ ಕಾವು ಮುಗಿದಿದೆ. ಆದ್ರೆ ಮೇ 23ರ ಫಲಿತಾಂಶದ ಮೇಲೆ ಎಲ್ಲಾ ರಾಜಕೀಯ ಪಕ್ಷಗಳು ಉಸಿರು ಬಿಗಿ ಹಿಡಿದು ಕಾಯುತ್ತಿವೆ. ಅದ್ರಲ್ಲೂ ಈ ಬಾರಿ ಹೈವೋಲ್ಟೇಜ್‍ ಕ್ಷೇತ್ರವಾಗಿದ್ದ ಮಂಡ್ಯದತ್ತ ಇಡೀ ದೇಶದ ಚಿತ್ತ ನೆಟ್ಟಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ನಿಖಿಲ್‍ ಕುಮಾರಸ್ವಾಮಿ ಕಣಕ್ಕಿಳಿದಿದ್ದು, ಜೆಡಿಎಸ್‍ ನಾಯಕರು ಸೋಲು-ಗೆಲುವಿನ ಲೆಕ್ಕಾಚಾರ ಹಾಕ್ತಿದ್ದಾರೆ. ಇಂತಹ ಸಂದರ್ಭದಲ್ಲೇ ಒಂದು ವೇಳೆ ಚುನಾವಣೆ ಫಲಿತಾಂಶ ಜೆಡಿಎಸ್‍ಗೆ ವ್ಯತಿರಿಕ್ತವಾಗಿ ಬಂದ್ರೆ ನಿಖಿಲ್‍ ಅವರನ್ನು ಸಚಿವರನ್ನಾಗಿ ಮಾಡಲೇಬೇಕು ಎಂಬ ಒತ್ತಾಯ ಕೇಳಿ ಬಂದಿದೆ….

  • ಉಪಯುಕ್ತ ಮಾಹಿತಿ

    ಈಗ ಬಂದಿದೆ ಹೊಸ ಸ್ಫೋಟಗೊಳ್ಳದ ಪಾರದರ್ಶಕ ಗ್ಯಾಸ್ ಸಿಲಿಂಡರ್..!ತಿಲಿಯಲು ಈ ಲೇಖನ ಓದಿ..

    ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಹಾನಿ ತಪ್ಪಿಸುವ ದೃಷ್ಟಿಯಿಂದ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತವಾಗಿರುವ ವಿನೂತನ ಶೈಲಿಯ ಸಿಲಿಂಡರ್‌ಗಳನ್ನು ‘ಗೋ ಗ್ಯಾಸ್’ ಮಾರುಕಟ್ಟೆಗೆ ಪರಿಚಯಿಸಿದೆ.

  • ಕರ್ನಾಟಕದ ಸಾಧಕರು

    ‘ತಿಮ್ಮಪ್ಪ ನಾಯಕ’ ಕನಕದಾಸರಾಗಿದ್ದು ಹೇಗೆ ಎಂದು ತಿಳಿಯ ಬೇಕಾ..!ಹಾಗದ್ರೆ ಈ ಲೇಖನ ಓದಿ..

    ಕನಕದಾಸರು ವೃತ್ತಿಯಲ್ಲಿ ಸೈನಿಕರಾಗಿದ್ದರು. ಒಮ್ಮೆ ಯುದ್ಧದಲ್ಲಿ ಹೆಚ್ಚು ಗಾಯವಾಗಿದ್ದಾಗ, ಬೇಸರಗೊಂಡು ಯುದ್ಧವನ್ನು ಬಿಟ್ಟು, ದೇವರನಾಮಗಳನ್ನು ಬರೆದು ಪರಮಾತ್ಮನನ್ನು ಧ್ಯಾನಿಸತೊಡಗಿದರು.

  • ಜ್ಯೋತಿಷ್ಯ

    ಶನಿ ದೇವರನ್ನು ನೆನೆಯುತ್ತ ನಿಮ್ಮ ಇಂದಿನ ಭವಿಷ್ಯ ಹೇಗಿದೆ ನೋಡಿರಿ

    ಮೇಷ ರಾಶಿ ಭವಿಷ್ಯ (Saturday, December 4, 2021) ನಿಮ್ಮ ದೈಹಿಕ ಆರೋಗ್ಯವನ್ನು ಸುಧಾರಿಸಲು ಸಮತೋಲಿತ ಆಹಾರ ತೆಗೆದುಕೊಳ್ಳಿ ಇಂದು ನೀವು ನಿಮ್ಮ ಮನೆಯ ಸದಸ್ಯರನ್ನು ಎಲ್ಲಿಗಾದರೂ ಸುತ್ತಾಡಲು ಕರೆದುಕೊಂಡು ಹೋಗಬಹುದು ಮತ್ತು ನಿಮ್ಮ ಸಾಕಷ್ಟು ಹಣವು ಖರ್ಚಾಗಬಹುದು ನಿಮ್ಮ ಜೊತೆಗಿರುವ ಯಾರಾದರೂ ನಿಮ್ಮ ಇತ್ತೀಚಿನ ಕ್ರಮಗಳಿಂದ ಕಿರಿಕಿರಿಗಳ್ಳಬಹುದು. ನ್ಯಾಯಯುತವಾದ ಮತ್ತು ಉದಾರ ಪ್ರೀತಿಯಿಂದ ಪುರಸ್ಕೃತಗೊಳ್ಳುವ ಸಾಧ್ಯತೆಯಿದೆ. ಇಂದು ಸಂವಹನ ನಿಮ್ಮ ಬಲವಾಗಿರುತ್ತದೆ. ನಿಮ್ಮ ಸಂಗಾತಿಯಿಂದ ನೀವು ಇಂದು ವಿಶೇಷ ಗಮನ ಪಡೆಯುತ್ತೀರಿ. ಬಹಳ ಸಮಯದ ನಂತರ…