ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಿಚ್ಚ ಸುದೀಪ್,ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ಸೈರಾ’ ಬೆನ್ನಲ್ಲೇ ಮತ್ತೊಂದು ಭಾರೀ ಬಜೆಟ್ನ ಸಿನಿಮಾ ‘ದಬಾಂಗ್ 3’ ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗಲಿದೆ. ಸೈರಾ ಚಿತ್ರವಂತೂ ಯಾವುದೇ ಅಡ್ಡಿ ಇಲ್ಲದೆ ರಿಲೀಸ್ ಆಗಿದೆ. ಇನ್ನು ಸುದೀಪ್ ನಟಿಸಿದ್ದಾರೆಂಬ ಕಾರಣಕ್ಕೆ ದಬಾಂಗ್-3ಸಿನಿಮಾ ಕೂಡ ಅಷ್ಟೇ ಸಲೀಸಾಗಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಡಿಸೆಂಬರ್ನಲ್ಲಿಕ್ರಿಸ್ಮಸ್ ಹಬ್ಬದ ಹೊತ್ತಿಗೆ ದಬಾಂಗ್-3 ಬಿಡುಗಡೆಯಾಗುವ ಸಾಧ್ಯತೆ ಇದೆ. ಇದೇ ವೇಳೆ ಕನ್ನಡಕ್ಕೆ ಡಬ್ ಆಗಿರುವ ‘ಸೈರಾ’ ಸಿನಿಮಾಗೆ ಕನ್ನಡಿಗರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕ ಬೆನ್ನಲ್ಲೇ ದಬಾಂಗ್ 3 ಸಿನಿಮಾ ಬಗ್ಗೆಯೂ ಭರ್ಜರಿ ನಿರೀಕ್ಷೆ ಮೂಡಿದೆ. ಈ ಸಿನಿಮಾದಲ್ಲಿಕಿಚ್ಚ ಸುದೀಪ್ ಖಳನಟರಾಗಿ ನಟಿಸಿದ್ದು, ಸ್ವತಃ ಅವರೇ ತಮ್ಮ ಪಾತ್ರಕ್ಕೆ ಡಬ್ ಮಾಡಲಿದ್ದಾರೆ. ಹಾಗಾಗಿ ಕನ್ನಡದ ಪ್ರೇಕ್ಷಕರು ಈ ಸಿನಿಮಾವನ್ನು ಎದುರು ನೋಡುತ್ತಿದ್ದಾರೆ. ದಸರಾ ಹಬ್ಬದ ದಿನದಂದು ಈ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು, ಸುದೀಪ್ ಇರುವಂಥ ಸಿನಿಮಾದ ಹೊಸ ಲುಕ್ ರಿಲೀಸ್ ಮಾಡಿದೆ ಚಿತ್ರತಂಡ. ಈ ಪೋಸ್ಟರ್ ಅನ್ನುವ ಸ್ವತಃ ಸುದೀಪ್ ಟ್ವಿಟ್ ಮಾಡಿ, ಅಭಿಮಾನಿಗಳ ಜತೆ ಚಿತ್ರದ ಕುರಿತಾಗಿ ಹಲವು ಅಂಶಗಳನ್ನು ಹಂಚಿಕೊಂಡಿದ್ದಾರೆ.

ಈ ಟ್ವಿಟ್ಗೆ ಪ್ರತಿಕ್ರಿಯೆ ನೀಡಿರುವ ಸುದೀಪ್, ‘ಹೀರೋ ಜತೆ ಹೋರಾಡುವ ಮಾತೇ ಇಲ್ಲ. ಏಕೆಂದರೆ ವಿಲನ್ಗೆ ನಾಯಕನ ಮೇಲೆ ಎಲ್ಲಿಲ್ಲದ ಪ್ರೀತಿ. ನಿಮ್ಮ ಜೊತೆಗಿನ ಕೆಲಸ ಮತ್ತು ಹಂಚಿಕೊಂಡಿರುವ ಪ್ರೀತಿ ಯಾವತ್ತಿಗೂ ಶಾಶ್ವತ. ಅದು ಅಮೂಲ್ಯವಾದ ಕ್ಷಣ’ ಎಂದಿದ್ದಾರೆ. ಪ್ರಭುದೇವ ನಿರ್ದೇಶನದಲ್ಲಿಈ ಸಿನಿಮಾ ಮೂಡಿ ಬಂದಿದೆ. ಕನ್ನಡದಲ್ಲಿಮಾತ್ರವಲ್ಲ, ತಮಿಳು, ತೆಲುಗು, ಹಿಂದಿ ಮತ್ತು ಮಲೆಯಾಳಂನಲ್ಲೂಈ ಸಿನಿಮಾ ಬಿಡುಗಡೆ ಆಗುತ್ತಿದೆ

ಉತ್ತಮ ಡಬ್ಬಿಂಗ್ ಸಿನಿಮಾ ಕೊಟ್ಟಾಗ ಪ್ರೇಕ್ಷಕರು ತಪ್ಪದೇ ನೋಡುತ್ತಾರೆಂಬುದನ್ನು ಸೈರಾ ನಿರೂಪಿಸಿದೆ. ಮೊದಲು ಈ ಚಿತ್ರವನ್ನು ರಿಲೀಸ್ ಮಾಡಲು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲೀಕರು ಒಪ್ಪಲಿಲ್ಲ. ನಾವು ಮನವಿ ಮಾಡಿಕೊಂಡ ನಂತರ ರಿಲೀಸ್ ಮಾಡಿದರು. ಅಲ್ಲದೆ, ಈ ಚಿತ್ರದಲ್ಲಿಸುದೀಪ್ ಅವರೇ ನಟಿಸಿ ಕನ್ನಡದಲ್ಲೇ ತಮ್ಮ ಪಾತ್ರಕ್ಕೆ ವಾಯ್್ಸ ನೀಡಿದ್ದಾರೆ. ಹೀಗಾಗಿ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇವತ್ತಿನವರೆಗೂ ಶೇ.70ಕ್ಕೂ ಹೆಚ್ಚು ಪ್ರಮಾಣದಲ್ಲಿ ಚಿತ್ರಮಂದಿರಗಳು ಬೆಂಗಳೂರಿನಲ್ಲಿ ಭರ್ತಿಯಾಗುತ್ತಿವೆ ಎಂದು ಬನವಾಸಿ ಬಳಗದ ಅರುಣ್ ಜಾವಗಲ್ ತಿಳಿಸಿದ್ದಾರೆ. ದಬಾಂಗ್-3ಚಿತ್ರಕ್ಕೂ ಇದೇ ರೀತಿಯ ನಿರೀಕ್ಷೆ ಇದೆ. ಸುದೀಪ್ ಅವರೇ ಮಹತ್ವದ ಪಾತ್ರ ಮಾಡಿರುವುದು ಇದಕ್ಕೆ ಕಾರಣ. ಮುಂದಿನ ದಿನಗಳಲ್ಲಿ ಡಬ್ಬಿಂಗ್ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇತ್ತೀಚಿನ ದಿನಗಳಲ್ಲಿ ಎಲ್ಲರೂ ಆನ್ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಬಳಸುತ್ತಿದ್ದಾರೆ, ತಂತ್ರಜ್ಙಾನ ಬೆಳೆಯುತ್ತಿದ್ದಂತೆ ಬ್ಯಾಂಕಿಂಗ್ ವ್ಯವಹಾರಗಳು ಸಹ ಎಲ್ಲರಿಗೂ ಸುಲಭವಾಗುತ್ತಿದೆ. ಹಾಗೆಯೇ ಇಂಟರ್ನೆಟ್ ಹ್ಯಾಕಿಂಗ್ , ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಸಾರ್ವಜನಿಕರಿಗೆ ಹೆಚ್ಚು ಉಪಯುಕ್ತವಾಗುತ್ತಿವೆ.ಸಮಯದ ಉಳಿತಾಯದ ಜೊತೆಗೆ ಸುಲಭವಾಗಿ ಹಣದ ವರ್ಗಾವಣೆ, ಬಿಲ್ ಪಾವತಿಯನ್ನು ಮಾಡಬಹುದಾಗಿದೆ. ಆದರೆ ಕೆಲ ನಿಯಮಗಳನ್ನು ಪಾಲಿಸದಿದ್ದರೆ ಮೋಸಕ್ಕೂ ಒಳಗಾಗಬೇಕಾಗುತ್ತದೆ. ಬ್ಯಾಂಕಿನಲ್ಲಿ ಸಾಲುಗಟ್ಟಿ ನಿಂತು ಹಣ ಪಾವತಿ ಮಾಡುವುದು, ಹಣವನ್ನು ಹಿಂತೆಗೆದುಕೊಳ್ಳುತ್ತಿದ್ದ ಕಾಲ ಬದಲಾಗಿದೆ. ATM ಮಷಿನ್ ಗಳು ಬಂದ ಮೇಲಂತೂ ಜನರು ಹಣವನ್ನು…
ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ ಮೊದಲ ಬಾರಿಗೆ ತಮ್ಮ ವೈಯುಕ್ತಿಕ ಜೀವನ ಅನುಭವಗಳೊಂದಿಗೆ, ತಮ್ಮ ಜೀವನಕ್ಕೆ ಸಂಬಂಧಿಸಿದ ಹಲವಾರು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈವರೆಗೆ ಯಾರಿಗೂ ತಿಳಿದಿರದ ಕೆಲ ಮಾಹಿತಿಗಳನ್ನೂ ಮೋದಿ ನಟ ಅಕ್ಷಯ್ ಜೊತೆಗೆ ಹಂಚಿಕೊಂಡಿದ್ದಾರೆ. 1 ಗಂಟೆ 10 ನಿಮಿಷದ ಈ ಸಂದರ್ಶನದಲ್ಲಿ ಮೋದಿ ಹೇಳಿದ ಕೆಲ ಆಸಕ್ತಿಕರ ವಿಚಾರಗಳು ಇವೆ.ನಿಮಗೆ ಮಾವಿನ ಹಣ್ಣು ಇಷ್ಟವೇ ಎಂದು ಅಕ್ಷಯ್ ಕುಮಾರ್ ಕೇಳಿದ್ದಕ್ಕೆ ನಾನು ಮಾವಿನ ಹಣ್ಣು…
ಮೈತ್ರಿಯಲ್ಲಿ ಸಚಿವ ಸಂಪುಟ ವಿಸ್ತರಣೆ ವಿಷಯದ ಬೆನ್ನೆಲ್ಲೇ ಇದೀಗ ನಿಗಮ ಮಂಡಳಿಗಾಗಿ ಫೈಟ್ ಶುರುವಾಗಿದೆ. ಖಾಲಿ ಇರುವ ನಿಗಮ ಮಂಡಳಿಗಾಗಿ ತೆನೆ ಕಾರ್ಯಕರ್ತರಲ್ಲಿ ಮತ್ತೊಂದು ಹಂತದ ಕುಸ್ತಿ ಶುರುವಾಗಿದೆ. ಏನೋ ಮಾಡೋಕೆ ಹೋಗಿ ಇನ್ನೇನೋ ಆಯ್ತು ಅಂತಾರಲ್ಲ ಇದಕ್ಕೇ ಅನ್ಸತ್ತೆ. ಮೈತ್ರಿ ಸರ್ಕಾರ ಉಳಿಸಿಕೊಳ್ಳೋಕೆ ಬರೀ ಶಾಸಕರಿಗಷ್ಟೇ ನಿಗಮ ಮಂಡಳಿ ಸ್ಥಾನ ಕರುಣಿಸಿದ್ದ ದಳಪತಿಗಳಿಗೆ ಹೊಸ ಸಂಕಷ್ಟ ಶುರುವಾಗಿದೆ. ಜೆಡಿಎಸ್ ವರಿಷ್ಠರ ನಡೆಗೆ ಹತ್ತಾರು ವರ್ಷ ಪಕ್ಷಕ್ಕಾಗಿ ದುಡಿದ ತೆನೆ ಕಾರ್ಯಕರ್ತರು ಕೆಂಡಾಮಂಡಲರಾಗಿದ್ದಾರೆ. ದೇವೇಗೌಡರ ಎದುರೇ ಪಟ್ಟಕ್ಕಾಗಿ…
ಕನ್ನಡ ಚಿತ್ರಗಳಿಗೆ ಎಸಿ ಹಾಕೋಲ್ಲ. ಫಿಲ್ಮ್ ನೋಡೋರಿದ್ರೆ ನೋಡ್ಬಹುದು, ಇಲ್ಲ ಎದ್ದು ಹೋಗ್ಬಹುದು. ಇದು ಬೆಂಗಳೂರಿನ ಎಲಿಮೆಂಟ್ಸ್ ಮಾಲ್ ಸಿಬ್ಬಂದಿಯ ಉದ್ಧಟತನದ ಮಾತುಗಳು. ನಾಗವಾರ ಬಳಿ ಇರೋ `ಎಲಿಮೆಂಟ್ಸ್ ಮಾಲ್’ನ ಪಿವಿಆರ್ನಲ್ಲಿ ರಾಜಕುಮಾರ ಚಿತ್ರ ಪ್ರದರ್ಶನ ನಡೀತಿತ್ತು. ಚಿತ್ರ ಪ್ರಾರಂಭವಾಗಿ ಅರ್ಧ ತಾಸು ಕಳೆದ್ರೂ ಥಿಯೇಟರ್ನಲ್ಲಿ ಎಸಿ ಆನ್ ಆಗಿರಲಿಲ್ಲ. ಸೆಕೆಯಿಂದ ಬೇಸರಗೊಂಡ ಪ್ರೇಕ್ಷಕರು ಎಸಿ ಆನ್ ಮಾಡುವಂತೆ ಮಾಲ್ ಸಿಬ್ಬಂದಿಯನ್ನ ಕೇಳಿದ್ದಾರೆ. ಆದ್ರೆ ಎಸಿ ಆನ್ ಮಾಡುವ ಬದಲಿಗೆ ಮಾಲ್ನವವರು ಉದ್ಧಟತನದಿಂದ ಪ್ರತಿಕ್ರಿಯಿಸಿದ್ದಾರೆ. ಕನ್ನಡ ಚಲನಚಿತ್ರಗಳಿಗೆಲ್ಲಾ ಎಸಿ…
ದೇಶದ ರಾಜಕಾರಣದಲ್ಲಿ ತಮಿಳುನಾಡಿನ ಸೂಪರ್ ಸ್ಟಾರ್ಗಳಾದ ರಜನಿಕಾಂತ್ ಹಾಗೂ ಕಮಲಹಾಸನ್ ಅವರು ರಾಜಕೀಯಕ್ಕೆ ಬರುತ್ತಿರುವ ಬೆನ್ನಲ್ಲೇ ನಮ್ಮ ನಾಡಿನ ರಿಯಲ್ಸ್ಟಾರ್ ಉಪೇಂದ್ರ ಸಹ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಬಾಲಿವುಡ್ ನಟಿ ಅಲಿಯಾ ಭಟ್ ಇದೀಗ ಅಂಡರ್ವಾಟರ್ ಫೋಟೋಶೂಟ್ ಮಾಡಿಸಿದ್ದಾರೆ. ಆ ಫೋಟೋಗಳಲ್ಲಿ ಮಿಂಚುತ್ತಿರುವ ಅಲಿಯಾ ಭಟ್ ಈಗ ವೈರಲ್ ಆಗುತ್ತಿದ್ದಾರೆ. ಇತ್ತೀಚೆಗೆ ಅಲಿಯಾ ವೋಗ್ ಮ್ಯಾಗಜೀನ್ಗಾಗಿ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳನ್ನು ಅಲಿಯಾ ಹಾಗೂ ವೋಗ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಫೋಟೋದಲ್ಲಿ ಅಲಿಯಾ ಚಿಕ್ ಮೊನೊಕಿನಿ ಧರಿಸಿದ್ದಾರೆ. ಅಲಿಯಾ ಫೋಟೋಶೂಟ್ನಲ್ಲಿ ನಿಯಾನ್ ಗ್ರೀನ್, ಶಿಮರಿ ಬ್ಲೂ ಹಾಗೂ ಗುಲಾಬಿ ಬಣ್ಣದ ಮೊನೊಕಿನಿಯನ್ನು ಧರಿಸಿದ್ದಾರೆ. ಅಂಡರ್ವಾಟರ್ನಲ್ಲಿ ಫೋಟೋಗಳಿಗೆ ಬೇರೆ ಬೇರೆ ರೀತಿ ಪೋಸ್ಗಳನ್ನು ನೀಡುವ ಮೂಲಕ ಹಾಟ್ ಆಗಿ…