ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು, : ದುಬೈನ ಪ್ರವಾಸೋದ್ಯಮಮತ್ತು ವಾಣಿಜ್ಯ ಮಾರುಕಟ್ಟೆ (ದುಬೈ ಟೂರಿಸಂ) ತನ್ನ ದೇಶದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವನಿಟ್ಟಿನಲ್ಲಿ ಹೊಸ ಯೋಜನೆಯಾದ ದುಬೈ ಸ್ಟಾಪ್‍ಓವರ್ ಪಾಸ್ ಅನ್ನು ಪ್ರಕಟಿಸಿದೆ. ಇದು ವಿಶೇಷವಾಗಿ ದುಬೈನಲ್ಲಿಕಡಿಮೆ ಅವಧಿವರೆಗೆ ಭೇಟಿ ನೀಡಲಿರುವ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಯೋಜನೆಯಾಗಿದೆ.ಅಲ್ಲಿನ ಆಕರ್ಷಕ ತಾಣಗಳನ್ನು ಕಡಿಮೆ ದರದಲ್ಲಿ ವೀಕ್ಷಿಸಿ ಕಣ್ತುಂಬಿಕೊಳ್ಳುವ ಯೋಜನೆ ಇದು. ಅರೇಬಿಯನ್ಟ್ರಾವೆಲ್ ಮಾರ್ಕೆಟ್ 2019 (ಎಟಿಎಂ)ನಲ್ಲಿ ಈ ಹೊಸ ಯೋಜನೆಯನ್ನು ಪ್ರಕಟಿಸಲಾಗಿದೆ.

ದುಬೈ ಸ್ಟಾಪ್‍ಓವರ್ ಪಾಸ್ ಪ್ರವಾಸಿಗರಿಗೆ ಸಮಯ ಮತ್ತು ಹಣವನ್ನು ಉಳಿತಾಯ ಮಾಡಲಿದೆ.ಈ ಮೂಲಕ 36 ಗಂಟೆಗಳಲ್ಲಿ ಎರಡು, ಮೂರು ಅಥವಾ ನಾಲ್ಕು ಆಕರ್ಷಣೆಗಳನ್ನು ವೀಕ್ಷಿಸಬಹುದಾಗಿದೆ. ಇದುಪ್ರೀಪೇಯ್ಡ್ ಮಾದರಿಯ ಯೋಜನೆಯಾಗಿದ್ದು, ಅತ್ಯಲ್ಪ ಅವಧಿಯಲ್ಲಿ ಪ್ರವಾಸಿಗರು ದುಬೈನ ಸೌಂದರ್ಯಗಳನ್ನುಕಣ್ತುಂಬಿಕೊಳ್ಳಬಹುದು. ಪಾಸ್ ವಯಸ್ಕರಿಗೆ ಮತ್ತು ಮಕ್ಕಳಿಗೆ ಪ್ರತ್ಯೇಕ ದರದಲ್ಲಿರುತ್ತದೆ. ವಯಸ್ಕರರಿಗೆ 199 ಎಇಡಿಯಾದರೆ, ಮಕ್ಕಳಿಗೆ 169 ಎಇಡಿಯಾಗಿದೆ. ಮೊದಲ ಬಾರಿಗೆ ಭೇಟಿ ನೀಡುವ ಮತ್ತು ಮತ್ತೆ ಮತ್ತೆಬರುವ ಅಂತಾರಾಷ್ಟ್ರೀಯ ಅತಿಥಿಗಳಿಗೆ ವೈವಿಧ್ಯಮಯವಾದ ಅನುಭವಗಳನ್ನು ನಾವು ನೀಡುತ್ತಿದ್ದೇವೆ. ವ್ಯಕ್ತಿಗತವಾದಅನುಭವಗಳನ್ನು ಹೊಂದಬೇಕೆಂದು ಬಯಸುವ ಪ್ರವಾಸಿಗರಿಗೆ ಅಂಥ ಅನುಭವಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ.ಈ ದಿಸೆಯಲ್ಲಿ ನಮ್ಮ ಪಾಲುದಾರರು, ಅತ್ಯಲ್ಪ ಅವಧಿಯಲ್ಲಿ ಈ ಅನುಭವಗಳನ್ನು ಪ್ರವಾಸಿಗರಿಗೆ ನೀಡಲಿದ್ದಾರೆಎಂದು ದುಬೈ ಕಾರ್ಪೊರೇಷನ್ ಫಾರ್ ಟೂರಿಸಂ ಅಂಡ್ ಕಾಮರ್ಸ್ ಮಾರ್ಕೆಟಿಂಗ್ ಹೇಳಿದೆ.

ಶೇ.60 ರವರೆಗೆ ಉಳಿತಾಯ ಮಾಡಬಹುದಾಗಿದೆ ದುಬೈಗೆ ತಲುಪುವ ಮುನ್ನ ಸ್ಟಾಪ್‍ಓವರ್ಪಾಸ್ ಅನ್ನು ಖರೀದಿಸುವ ಪ್ರವಾಸಿಗರಿಗೆ ರೆಗ್ಯುಲರ್ ಕಂಬೈನ್ಡ್ ಎಂಟ್ರೆನ್ಸ್ ದರದಲ್ಲಿ ಶೇ.60 ರವರೆಗೆಉಳಿತಾಯ ಮಾಡಬಹುದಾಗಿದೆ. ಈ ಪಾಸ್ ದುಬೈನಲ್ಲಿ ಅತ್ಯಂತ ಮೌಲ್ಯವರ್ಧಿತ ಆಫರ್‍ಗಳನ್ನು ನೀಡಲಿದ್ದು,ಪ್ರವಾಸಿಗರು ಬುಜ್ ಖಲೀಫಾ (ಮೇಲೆ), ದುಬೈ ಫೌಂಟೇನ್ ಶೋ ಮತ್ತು ಲೇಕ್ ರೈಡ್, ಸಿಟಿ ಸೈಟ್‍ಸೀಯಿಂಗ್ಹಾಪ್ ಆನ್ ಹಾಪ್ ಆಫ್ ಬಸ್, ಮರೀನಾ ಧೋ ಕ್ರ್ಯೂಸ್ ಡಿನ್ನರ್, ದುಬೈ ಅಕ್ವೇರಿಯಂ & ಅಂಡರ್‍ವಾಟರ್ಝೂ ಮತ್ತು ದುಬೈ ಫ್ರೇಂಗಳನ್ನು ವೀಕ್ಷಿಸಬಹುದಾಗಿದೆ.

ಅಹ್ಮದ್ ಅಲ್ ಖಾಜಾ ಅವರು ಮಾತನಾಡಿ ದುಬೈ ಫೆಸ್ಟಿವಲ್ಸ್ ಅಂಡ್ ರೀಟೇಲ್ ಎಸ್ಟಾಬ್ಲಿಷ್‍ಮೆಂಟ್(ಡಿಎಫ್‍ಆರ್‍ಇ)ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಹ್ಮದ್ ಅಲ್ ಖಾಜಾ ಅವರು ಮಾತನಾಡಿ, “ದುಬೈ ಸ್ಟಾಪ್‍ಓವರ್ಪಾಸ್ ಅನ್ನು ಪರಿಚಯಿಸುವುದರೊಂದಿಗೆ ಪ್ರವಾಸಿಗರಿಗೆ ಅತ್ಯುತ್ತಮವಾದ ರೀತಿಯಲ್ಲಿ ನಗರದ ಪ್ರವಾಸಿತಾಣಗಳಆಕರ್ಷಣೆಯ ಅನುಭವವನ್ನು ವಿಶೇಷವಾಗಿ ಪಡೆಯುವಂತಹ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ. 36 ಗಂಟೆಗಳಲ್ಲಿಎಮಿರೇಟ್ಸ್‍ನ ಲೀಸರ್ ಪ್ರಪೋಶನ್ ಅನ್ನು ಅನುಭವಿಸಬಹುದಾಗಿದೆ. ನಗರದಾದ್ಯಂತ ಅಭಿವೃದ್ಧಿಗೆ ಭಾರೀ ಮಟ್ಟದಲ್ಲಿಹೂಡಿಕೆ ಮಾಡಿರುವ ನಮ್ಮ ಪಾಲುದಾರರಿಗೆ ಬೆಂಬಲವಾಗಿ ನಿಲ್ಲುತ್ತೇವೆ, ಇಡೀ ವಿಶ್ವಕ್ಕೆ ಮಾದರಿಯಾಗಬಲ್ಲಂತಹಪ್ರವಾಸಿ ತಾಣವನ್ನಾಗಿ ನಾವು ದುಬೈ ಅನ್ನು ಅಭಿವೃದ್ಧಿಪಡಿಸುತ್ತೇವೆ” ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಗರದ ಇಸ್ಕಾನ್ ದೇವಸ್ಥಾನದಲ್ಲಿ ಗೋವರ್ಧನ ಪೂಜೆ ಹಮ್ಮಿಕೊಳ್ಳಲಾಗಿತ್ತು. ಪ್ರತೀ ವರ್ಷ ಹಬ್ಬದಂತೆ ಆಚರಿಸುವ ಈ ದಿನವನ್ನ ಈ ಬಾರಿ ತುಂಬಾನೆ ವಿಶಿಷ್ಟವಾಗಿ ಆಚರಿಸಲಾಯಿತು. ಭಾರಿ ಮಳೆಯಿಂದಾಗಿ ದ್ವಾರಕವೇ ಮುಳುಗುತ್ತಿದ್ದಾಗ, ಶ್ರೀ ಕೃಷ್ಣ ತನ್ನ ಕಿರು ಬೆರಳಲ್ಲಿ ಗೋವರ್ಧನ ಬೆಟ್ಟವನ್ನ ಎತ್ತಿ ಹಿಡಿದು, ದ್ವಾರಕೆಯ ಜನರನ್ನ ರಕ್ಷಿಸುತ್ತಾನೆ. ಅಂದಿನಿಂದ ಈ ದಿನದಂದು ಗೋವರ್ಧನಗಿರಿ ಪೂಜೆ ಮಾಡಲಾಗುತ್ತೆ. ಇನ್ನು ಪ್ರತೀ ವರ್ಷ ಈ ದಿನವನ್ನ ಸಂಭ್ರಮದಿಂದ ನಗರದ ಇಸ್ಕಾನ್ ದೇವಸ್ಥಾನದಲ್ಲಿ ಗೋವರ್ಧನ ಪೂಜೆ ಮಾಡಲಾಗಿದ್ದು ಈ ಬಾರಿ ಬಹಳ ವಿಶಿಷ್ಟವಾಗಿ…
ಕನ್ನಡದ ಹೆಮ್ಮೆಯ ನಟ, ಅಭಿಮಾನಿಗಳ ಡಿ.ಬಾಸ್ ಸ್ಯಾಂಡಲ್ ವುಡ್ ನ ಬ್ರಾಂಡ್ ಅಂತೆಲ್ಲ ಕರೆಸಿಕೊಳ್ಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಕೂಡ ಚೀನಾ ವಸ್ತು ಹಾಗೂ ಅಪ್ಲಿಕೇಷನ್ ಅನ್ನು ಬ್ಯಾನ್ ಮಾಡುವ ನಿರ್ಧಾರ ಕೈಗೊಂಡಿದ್ದು, ಈ ವಿಚಾರವಾಗಿ ದರ್ಶನ್ ಫ್ಯಾನ್ಸ್ ಮೊದಲು ಟಿಕ್ ಟಾಕ್ ಗೆ ಗುಡ್ ಬೈ ಹೇಳಿದ್ದಾರೆ. ಟಿಕ್ ಟಾಕ್ ನಲ್ಲಿಯೂ ಡಿಬಾಸ್ ಹೆಸರು ದಾಖಲೆ ನಿರ್ಮಿಸಿತ್ತು. ಆದರೆ ಇದ್ಯಾವುದನ್ನು ಲೆಕ್ಕಿಸದೆ ದರ್ಶನ್ ಅಭಿಮಾನಿಗಳು ಖಾತೆ ಡಿಲೀಟ್ ಮಾಡಿ ರಾಷ್ಟ್ರ ಪ್ರೇಮ ಮೆರೆದಿದ್ದಾರೆ….
ಒಳ್ಳೆ ಹುಡುಗ ಪ್ರಥಮ್ ರವರು ಪ್ರೇಮ ಪತ್ರವನ್ನು ಬರೆದಿದ್ದಾರೆ. ಯಾರಿಗೆ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಷಯವೆ. ಪ್ರಥಮ್ ರವರು ಲೈವ್ ನಲ್ಲಿ ತಮ್ಮ ಬಿಗಬಾಸ್ ಗೆಳತಿ “ಸಂಜನವ”ರಿಗೆ ಪ್ರೇಮ ಪತ್ರವನ್ನು ಬರೆದಿದ್ದಾರೆ.
ನಮ್ಮ ಜಮೀನುಗಳಿಗೆ ಸಂಬಂದಪಟ್ಟಪಹಣಿ (RTC), ಮತ್ತು ಮಿಟೆಶನ್ ಗಳನ್ನೂ ನಾವು ನಿಮ್ಮ ಮೊಬೈಲ್ನಲ್ಲಿ ಚೆಕ್ ಮಾಡಿಕೊಳ್ಳಬಹುದು.
ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಸಬಲೀಕರಣಕ್ಕಾಗಿ ಹಾಗೂ ಅವರಿಗೆ ರಕ್ಷಣೆ ನೀಡಿ ಸಮಾಜದ ಮುಖ್ಯವಾಹಿನಿಯಲ್ಲಿ ತರಲು ಇಲಾಖಾವತಿಯಿಂದ ಹಲವಾರು ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಸ್ತ್ರಿ ಶಕ್ತಿ ಸಂಘವು ಒಂದು.ಸ್ತ್ರೀ ಶಕ್ತಿ ಸಂಘದ ಮಹಿಳೆಯರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಒಂದು ಸಂಘದಲ್ಲಿ ಒಂದೆ ಕುಟುಂಬದ ಒಬ್ಬರು ಸದಸ್ಯರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಒಂದೇ ಕುಟುಂಬದ ಹೆಚ್ಚು ಸದಸ್ಯರು ಒಂದೇ ಸಂಘದಲ್ಲಿ ಇದ್ದರೆ ಅದು ಅವ್ಯವಹಾರ, ಸರ್ಕಾರದ ಯೋಜನೆಗಳ ದುರ್ಬಳಕೆ ಆಗಬಹುದು ಎಂಬ ಕಾರಣದಿಂದ ಒಂದು ಸಂಘದಲ್ಲಿ…
ಸರ್ಕಾರ ನಿಗದಿಪಡಿಸಿದ ಸಮಯದ ಒಳಗೆ ಪಾನ್ಅನ್ನು ಆಧಾರ್ ಜೊತೆ ಲಿಂಕ್ ಮಾಡದಿದ್ದರೆ ಅದು ನಿಷ್ಕ್ರೀಯವಾಗುತ್ತದೆ. 31 ಮಾರ್ಚ್ 2022ರ ವರೆಗೆ ಇದ್ದ ಅವಧಿಯನ್ನು ಸರ್ಕಾರ ಮಾರ್ಚ್ 2023ರವರೆಗೆ ವಿಸ್ತರಿಸಿದೆ. ಆದ್ದರಿಂದ (ಏಪ್ರಿಲ್ 1ರಿಂದ) ಲಿಂಕ್ ಮಾಡುವವರಿಗೆ ಶುಲ್ಕ ಅಪ್ಲೈ ಆಗಲಿದೆ. ಅಂದರೆ ದಂಡ ಶುಲ್ಕ 1000 ರೂಪಾಯಿ ತನಕ ಬೀಳಲಿದೆ. ಹೀಗಾಗಿ ನೀವು ಈಗಾಗಲೇ ಪಾನ್ ಲಿಂಕ್ ಮಾಡಿದ್ದರೆ ಅದು ಯಶಸ್ವಿಯಾಗಿದೆಯೇ? ಇಲ್ಲವೇ ಅನ್ನೋದನ್ನು ತಿಳಿಯೋದು ಹೇಗೆ? ಇಲ್ಲಿದೆ ವಿವರ. ಆದಾಯ ತೆರಿಗೆ ಕಾಯ್ದೆ 139 ಎಎ…