ಸುದ್ದಿ

ಬಿಗ್ ಶಾಕಿಂಗ್!ತರಗತಿಯಲ್ಲೇ ಕುಡಿದು ರಂಪಾಟ ಮಾಡಿ ಸಿಕ್ಕಿ ಬಿದ್ದ ವಿದ್ಯಾರ್ಥಿನಿಯರು…

228

ಒಂಬತ್ತನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಕ್ಲಾಸ್ ರೂಂನಲ್ಲಿ ಮದ್ಯ ಸೇವನೆ ಮಾಡಿ ಸಿಕ್ಕಿಬಿದ್ದಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ ವಿಜಯವಾಡ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ.

9ನೇ ತರಗತಿ ವಿದ್ಯಾರ್ಥಿನಿಯರಿಬ್ಬರು ಈ ರೀತಿ ಮಾಡಿದ್ದು, ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದರು. ಈ ವೇಳೆ ವಿದ್ಯಾರ್ಥಿನಿಯರು ತಂಪು ಪಾನೀಯಾದ ಬಾಟಲಿಗೆ ಮದ್ಯ ಸೇವನೆ ಮಾಡಿ ಕುಡಿದಿದ್ದಾರೆ.

ತಂಪು ಪಾನೀಯದ ಬಾಟಲಿಯಲ್ಲಿ ಲಿಕ್ಕರ್ ಬೆರೆಸಿಕೊಂಡು ತಂದಿದ್ದ ವಿದ್ಯಾರ್ಥಿನಿಯರು, ಶಿಕ್ಷಕರು ಪಾಠ ಮಾಡುವಾಗಲೇ ಸೇವಿಸಿದ್ದಾರೆ. ಮದ್ಯ ಸೇವನೆ ಬಳಿಕ ತರಗತಿಯಲ್ಲಿ ತೂರಾಡುತ್ತಾ ಏನೇನೋ ಮಾತನಾಡಲು ಶುರು ಮಾಡಿದ್ದು, ಅನುಮಾನಗೊಂಡ ಶಿಕ್ಷಕರು ಬಾಟಲಿಯನ್ನು ಪಡೆದು ಮೂಸಿ ನೋಡಿದ್ದಾರೆ.

ನಂತರ ಜ್ಯೂಸ್ ಬಾಟಲನ್ನು ಕಿತ್ತುಕೊಂಡು ಪರಿಶೀಲಿಸಿದಾಗ ಮದ್ಯ ಮಿಕ್ಸ್ ಆಗಿರುವುದು ಪತ್ತೆಯಾಗಿದೆ. ಇದರಿಂದ ಕೋಪಗೊಂಡ ಶಾಲೆಯ ಆಡಳಿತ ಮಂಡಳಿ ತಕ್ಷಣ ಇಬ್ಬರು ವಿದ್ಯಾರ್ಥಿನಿಯರಿಬ್ಬರನ್ನು ಶಾಲೆಯಿಂದ ಅಮಾನತುಗೊಳಿಸಿದೆ.

ಸಿಕ್ಕಿ ಬಿದ್ದಿರುವ ವಿದ್ಯಾರ್ಥಿನಿಯರು, ಪ್ರತಿದಿನ ನಮ್ಮ ತಂದೆ ಮನೆಯಲ್ಲಿಯೇ ಕುಡಿಯುತ್ತಾರೆ. ಒಮ್ಮೆ ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ಬಾಟಲ್ ತೆಗೆದುಕೊಂಡು ಕುಡಿದಿದ್ದೆವು. ಬಳಿಕ ನಮಗೂ ಅದು ಹವ್ಯಾಸವಾಗಿ ಬೆಳೆಯಿತು” ಎಂದು ವಿದ್ಯಾರ್ಥಿನಿಯರು ಹೇಳಿರುವುದಾಗಿ ಶಾಲೆಯ ಮುಖ್ಯೋಪಾಧ್ಯಾಯ ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ನಿಮ್ಮ ಫೋನ್ ಒರ್ಜಿನಲ್ ಹೌದೋ? ಅಲ್ಲವೋ? ಎಂದು ತಿಳಿಯುವುದು ಹೇಗೆ ಗೊತ್ತಾ..?ಇದನ್ನು ಓದಿ …

    ಆನ್‌ಲೈನ್‌ ಮಾರುಕಟ್ಟೆ ಇಂದಿನ ದಿನದಲ್ಲಿ ಮೊಬೈಲ್ ಫೋನ್‌ಗಳ ಮಾರಾಟವನ್ನು ಹೆಚ್ಚು ಮಾಡುತ್ತಿದೆ. ವಿವಿಧ ಆಫರ್‌ಗಳು, ಹೊಸ ಫೋನ್ ಲಾಂಚ್ ಗಳು ಸೇರಿದಂತೆ ಎಕ್ಸ್‌ಕ್ಲೂಸಿವ್ ಸೇಲ್‌ಗಳು ಸೇರಿದಂತೆ ಅನೇಕ ಆಫರ್ ಗಳು ಲಭ್ಯವಿದೆ.

  • ಆಯುರ್ವೇದ

    ಆಯುರ್ವೇದ ಮೂಲಕ ಕರೊನಾ ಸೋಂಕು ಗೆದ್ದ ಬ್ರಿಟನ್​ ರಾಜ, ಬೆಂಗಳೂರಿನ ಸೌಖ್ಯದಿಂದ ಚಿಕಿತ್ಸೆ

    ಬೆಂಗಳೂರು ಮೂಲದ ಆರೋಗ್ಯ ರೆಸಾರ್ಟ್ ಆಯುರ್ವೇದ ಮತ್ತು ಹೋಮಿಯೋಪತಿ ಬಳಕೆಯಿಂದ ಕರೋನವೈರಸ್ನ ಬ್ರಿಟಿಷ್ ಸಿಂಹಾಸನದ ಉತ್ತರಾಧಿಕಾರಿಯಾದ ಪ್ರಿನ್ಸ್ ಚಾರ್ಲ್ಸ್ ಅವರನ್ನು ಗುಣಪಡಿಸಿದೆ ಎಂದು ಕೇಂದ್ರ ಆಯುಷ್ ರಾಜ್ಯ ಸಚಿವ ಶ್ರೀಪಾಡ್ ನಾಯಕ್ ಗುರುವಾರ ಹೇಳಿದ್ದಾರೆ.

  • ಸುದ್ದಿ

    ಸಾಧನೆಗೆ ವೈಖಲ್ಯಗಳು ಅಡ್ಡಿಯಲ್ಲ. ಸಾಧಿಸುವ ಛಲವೊಂದಿದ್ದರೆ ಸಾಕು ಏನನ್ನು ಬೇಕಾದರೂ ಸಾಧಿಸಬಹುದು. ಇದಕ್ಕೆ ಸಾಕ್ಷಿ ನೀರಜ್ ಜಾರ್ಜ್‌ ಬೇಬಿ….

    ನೀರಜ್ ಜಾರ್ಜ್‌ ಬೇಬಿ. ಊರುಗೋಲಿನ ಸಹಾಯದಿಂದ ಅತ್ತಿಂದಿತ್ತ ಓಡಾಡುವ ಯುವಕ. ಸದ್ಯ ಇದೇ ಯುವಕ ವಿಶ್ವದ ಗಮನ ಸೆಳೆದಿದ್ದಾರೆ. ಅದು ತಮ್ಮ ಸಾಧನೆಯ ಮೂಲಕ ಕೇರಳದ ಅಲುವಾ ಮೂಲದ 32 ವರ್ಷದ ನೀರಜ್ ಜಾರ್ಜ್ ಸಂಪೂರ್ಣ ಹಿಮದಿಂದ ಆವೃತವಾದ ಆಫ್ರಿಕಾದ ಅತೀ ಎತ್ತರದ ಕಿಲಿಮಂಜಾರೋ ಪರ್ವತವನ್ನೇರಿದ್ದಾರೆ. ಈ ಮೂಲಕ ತಮ್ಮ ಕನಸನ್ನು ಸಾಕಾರಗೊಳಿಸಿದ್ದಾರೆ. ಇದು ನನ್ನ ಬದುಕಿನ ಅತ್ಯಂತ ಅಪೂರ್ವ ಕ್ಷಣ. ಈ ಕನಸಿನ ಈಡೇರಿಕೆಗೆ ಅತ್ಯಂತ ನೋವಿನಿಂದ ನಾನು ಐದು ವರ್ಷದಿಂದ ಕಾಯುತ್ತಿದ್ದೇನೆ’ ಎಂದು ನೀರಜ್…

  • corona, Health, karnataka, ಆರೋಗ್ಯ, ಕರ್ನಾಟಕ

    ರಾಜ್ಯದಲ್ಲಿ ಟಫ್ ರೂಲ್ಸ್ ಮತ್ತೆ ಜಾರಿ

    ರಾಜ್ಯ ಸರ್ಕಾರವು ಇಂದಿನಿಂದ ನೈಟ್ ಕರ್ಫ್ಯೂ & ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲು ನಿರ್ಧರಿಸಲಾಗಿದೆ.ಈಗಾಗಲೇ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ ಮುಂದಿನ 2ವಾರಗಳ ಕಾಲ ಮುಂದುವರಿಸಲು ನಿರ್ಧರಿಸಲಾಗಿದೆ ರಾತ್ರಿ 10ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.ವಾರಾಂತ್ಯದ ಕರ್ಫ್ಯೂವನ್ನು ದಿನಾಂಕ 7ರಿಂದ ಶುಕ್ರವಾರ ರಾತ್ರಿ 10 ಗಂಟೆಯಿಂದ 10 ರ ಸೋಮವಾರ ಬೆಳಿಗ್ಗೆ 5 ರವರೆಗೆ ಜಾರಿ ಮಾಡಲಾಗಿದೆ   ಸರ್ಕಾರಿ ಕಚೇರಿಗಳು ಮಾಲ್​ಗಳಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗುವುದು. * ಚಿತ್ರಮಂದಿರ, ಮಾಲ್,…

    Loading

  • ಸುದ್ದಿ

    “ಬರದ ನಾಡಿಗೆ ಭಗೀರಥನ ಪ್ರಯತ್ನ” ಕೆಸಿ ವ್ಯಾಲಿ ಯೋಜನೆಯಿಂದ ಜಿಲ್ಲೆಯನೂರಾರು ಕೆರೆಗಳಿಗೆ ನೀರು…!

    ಬಯಲು ಸೀಮೆ ಕೋಲಾರದಲ್ಲಿ ಸಾವಿರಾರು ಅಡಿ ಭೂಗರ್ಭವನ್ನು ಕೊರೆದರು ನೀರು ಸಿಗುವುದು ಕಷ್ಟ ಸಿಕ್ಕರೂ ಫ್ಲೋರೈಡ್ ಅಂಶ, ಜಿಲ್ಲೆಯಲ್ಲಿ ನದಿಯ ಮೂಲವಿಲ್ಲ ಕೆರೆ ಕುಂಟೆ ಬಾವಿ ನಾಲೆಗಳು ಕಾಲಿ ಕಾಲಿ! ಕೃಷಿಗೆ ನೀರಿಲ್ಲ. ಕೃಷಿಗಿರಲಿ ಕುಡಿಯಲು ಮತ್ತು ದಿನ ಬಳಕೆಗೆ ಹಾಹಾಕಾರ.. ಮಳೆಗೆ ಕಾದು ಕಾದು ಸುಸ್ತಾಗಿರುವ ಪರಿಸ್ಥಿತಿ. ಇಂತಹ ಪರಿಸ್ಥಿತಿಯಲ್ಲೂ ನಮ್ಮ ಜಿಲ್ಲೆ ತರಕಾರಿ, ಹೂ,ಮಾವು ಮತ್ತು ಹೈನುಗಾರಿಕೆಯಲ್ಲಿ ಮುಂದಿದೆ… ಎಷ್ಟೋ ರಾಜಕಾರಣಿಗಳು ಜಿಲ್ಲೆಗೆ ನೀರು ತರಲು ಅವಿರತ ಶ್ರಮಿಸಿ ಸೋತಿದ್ದಾರೆ.. ಸೋತು ದಾರಿ ಕಾಣದೆ…

  • ಸುದ್ದಿ

    ಸರ್ಕಾರದಿಂದ ಬಿಗ್ ಶಾಕ್..!ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಉದ್ಯೋಗವಿಲ್ಲ…

    ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಸರ್ಕಾರಿ ಉದ್ಯೋಗ ನೀಡಲಾಗುವುದಿಲ್ಲವೆಂದು ಅಸ್ಸಾಂ ಸರ್ಕಾರ ನಿರ್ಧಾರ ಕೈಗೊಂಡಿದೆ.ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು 2021 ರಿಂದ ಈ ನೀತಿ ಅನುಷ್ಠಾನಗೊಳ್ಳುತ್ತದೆ. 2017 ರಲ್ಲಿ ಅಸ್ಸಾಂ ವಿಧಾನಸಭೆಯಲ್ಲಿ  “ಅಸ್ಸಾಂ ಜನಸಂಖ್ಯೆ ಮತ್ತು ಮಹಿಳಾ ಸಬಲೀಕರಣ ನೀತಿ” ಅಂಗಿಕಾರವಾಗಿತ್ತು. ಇದರ ಅನ್ವಯ ಎರಡು ಅಥವಾ ಒಂದು ಮಕ್ಕಳನ್ನು ಹೊಂದಿದ್ದರವರು ಮಾತ್ರ ಸರ್ಕಾರಿ ಉದ್ಯೋಗ ಪಡೆಯಲು ಅರ್ಹರಾಗಿದ್ದರು. ಈ ನೀತಿ ಪ್ರಸ್ತುತ ಸರ್ಕಾರಿ ಉದ್ಯೋಗದಲ್ಲಿರುವವರಿಗೂ ಅನ್ವವಾಗಲಿದ್ದು 2021 ರಿಂದ ಅಧಿಕೃತವಾಗಿ…