ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕನ್ನಡ ಸಿನಿಪ್ರಿಯರ ಬಹುದಿನಗಳ ಕನಸು ಏನೆಂದರೆ, ದರ್ಶನ್ ಮತ್ತು ಸುದೀಪ್ ಒಟ್ಟಿಗೆ ನಟಿಸುವುದು! ಬೆಳ್ಳಿತೆರೆ ಮೇಲೆ ಅವರಿಬ್ಬರನ್ನು ಏಕಕಾಲಕ್ಕೆ ನೋಡಲು ಅಭಿಮಾನಿಗಳು ಕಾದಿದ್ದಾರೆ.
ಇಬ್ಬರು ಕನ್ನಡದ ಸ್ಟಾರ್ ನಟರು. ಅವರದ್ದೇ ಆದ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹೀಗಿರುವಾಗ ಅವರಿಬ್ಬರು ಒಟ್ಟಿಗೆ ನಟಿಸಿಬಿಟ್ಟರೆ? ಅದು ಅಭಿಮಾನಿಗಳಿಗೆ ಹಬ್ಬವೇ ಸರಿ. ಅದಿನ್ನೂ ಸಾಧ್ಯವಾಗಿಲ್ಲ. ಮುಂದೆ ಯಾವತ್ತು ಆಗುತ್ತದೆಯೋ ಅದು ಗೊತ್ತಿಲ್ಲ. ಆದರೆ, ಬಹುವರ್ಷಗಳ ಈ ಹಿಂದೆ ಸ್ಟಾರ್ ನಟರನ್ನು ಒಟ್ಟಿಗೆ ಇಟ್ಟುಕೊಂಡು ಸಿನಿಮಾ ಮಾಡುವ ಪ್ರಯತ್ನವೊಂದು ನಡೆದಿತ್ತು! ಅವರಿಬ್ಬರು ಒಟ್ಟಿಗೆ ನಟಿಸಬೇಕಾಗಿದ್ದ ಸಿನಿಮಾಕ್ಕೆ ಇಂದ್ರಜಿತ್ ಲಂಕೇಶ್ ನಿರ್ದೇಶಕರಾಗಿ ಕೆಲಸ ಮಾಡಬೇಕಿತ್ತು!
ಆಗತಾನೇ ಚಿತ್ರರಂಗದಲ್ಲಿ ಸುದೀಪ್ ಮತ್ತು ದರ್ಶನ್ ಎಂಟ್ರಿ ಕೊಟ್ಟ ಸಮಯ. ಹಿಟ್ ಸಿನಿಮಾಗಳನ್ನು ನೀಡುತ್ತ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರುತ್ತಿದ್ದರು. ಇಂದ್ರಜಿತ್ ಲಂಕೇಶ್ ಕೂಡ ಅದೇ ಸಮಯಕ್ಕೆ ನಿರ್ದೇಶರಕಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದರು. ಅವರಿಗೆ ಹಿಂದಿಯ ‘ದೀವಾರ್’ ಸಿನಿಮಾ ಭಾರೀ ಇಷ್ಟವಾಗಿ ಬಿಟ್ಟಿತ್ತು. ಅದನ್ನು ಕನ್ನಡಕ್ಕೆ ರಿಮೇಕ್ ಮಾಡುವ ಸಲುವಾಗಿ ಅದರ ಹಕ್ಕಗಳನ್ನು ಅವರು ಪಡೆದುಕೊಂಡು ಬಂದಿದ್ದರು.
‘ದೀವಾರ್’ನಲ್ಲಿ ಅಮಿತಾಭ್ ಬಚ್ಚನ್ ಮತ್ತು ಶಶಿ ಕಪೂರ್ ಪ್ರಮುಖ ಪಾತ್ರವನ್ನು ಮಾಡಿದ್ದರು. ವಿಜಯ್ ವರ್ಮ-ರವಿ ವರ್ಮ ಎಂಬ ಸಹೋದರರ ಪಾತ್ರಗಳಲ್ಲಿ ಅವರಿಬ್ಬರು ನಟಿಸಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಅಬ್ಬರದ ಕಲೆಕ್ಷನ್ ಮಾಡಿದ ‘ದೀವಾರ್’ ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ರಿಮೇಕ್ ಆಗಿತ್ತು. ಕನ್ನಡದಲ್ಲಿ ಇಬ್ಬರು ನಿಭಾಯಿಸಿದ್ದ ಪಾತ್ರಗಳನ್ನು ಯಾರು ಮಾಡಲಿದ್ದಾರೆ ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ‘ಅಮಿತಾಭ್ ಬಚ್ಚನ್ ಅವರು ನಿಭಾಯಿಸಿದ ಪಾತ್ರವನ್ನು ಮಾಡುವಂತೆ ನಾನು ಸುದೀಪ್ ಅವರ ಬಳಿ ಕೇಳಿಕೊಂಡೆ. ಅವರು ತುಂಬ ಖುಷಿಯಿಂದಲೇ ಒಪ್ಪಿಕೊಂಡಿದ್ದರು’ ಎಂದಿದ್ದಾರೆ ಇಂದ್ರಜಿತ್.
ಶಶಿ ಕಪೂರ್ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡುವುದು ಎಂಬ ಚರ್ಚೆ ಶುರುವಾಯಿತು. ‘ಆ ಪಾತ್ರಕ್ಕಾಗಿ ನಾನು ನಟ ದರ್ಶನ್ ಅವರನ್ನು ಅಪ್ರೋಚ್ ಮಾಡಿದೆ. ಅವರು ಸಿನಿಮಾದ ಕಥೆ ಕೇಳಿ, ನಟಿಸಲು ಒಪ್ಪಿಕೊಂಡರು. ಆದರೆ, ಅವರಿಗೂ ಅಮಿತಾಭ್ ಬಚ್ಚನ್ ನಿಭಾಯಿಸಿದ್ದ ಪಾತ್ರವೇ ತುಂಬ ಇಷ್ಟವಾಗಿಬಿಟ್ಟಿತ್ತು. ಇಬ್ಬರು ಬಚ್ಚನ್ ಅವರ ಆ್ಯಂಗ್ರಿಮ್ಯಾನ್ ಪಾತ್ರವನ್ನೇ ಮಾಡುವುದಕ್ಕೆ ಇಷ್ಟಪಟ್ಟರು. ಆ ಸಿನಿಮಾ ಟೇಕ್ ಆಫ್ ಆಗದೇ ಇರುವುದಕ್ಕೆ ಇದೇ ಕಾರಣ. ಈಗಲೂ ಆ ಸಿನಿಮಾ ಹಕ್ಕಗಳು ನನ್ನ ಬಳಿ ಇವೆ’ ಎಂದು ಮಾಹಿತಿ ನೀಡಿದ್ದಾರೆ ಇಂದ್ರಜಿತ್ ಲಂಕೇಶ್. ಒಂದುವೇಳೆ, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಅಂದೇ ಕನ್ನಡ ಸಿನಿಪ್ರಿಯರು ದರ್ಶನ್ ಮತ್ತು ಸುದೀಪ್ ಅವರನ್ನು ಒಟ್ಟಿಗೆ ತೆರೆಮೇಲೆ ನೋಡಬಹುದಿತ್ತು!
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈ ಬಾರಿಯ ವಿಶ್ವಕಪ್ನ ಹೈವೋಲ್ಟೇಜ್ ಪಂದ್ಯ ಭಾನುವಾರ ನಡೆಯಲಿದ್ದು, ಭಾರತ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಈ ಬಾರಿಯ ವಿಶ್ವಕಪ್ ಪಂದ್ಯಗಳಿಗೆ ಮಳೆರಾಯನೇ ವಿಲನ್ ಆಗುತ್ತಿದ್ದು, ಭಾನುವಾರವೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶ್ವಕಪ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ಇದುವರೆಗೆ 6 ಪಂದ್ಯಗಳಲ್ಲಿ ಸೆಣಸಾಡಿದ್ದು, ಆರು ಬಾರಿಯೂ ಭಾರತವೇ ಗೆದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಭಾನುವಾರ 7ನೇ ಪಂದ್ಯ ನಡೆಯಲಿದ್ದು ವಿಜಯಲಕ್ಷ್ಮಿ ಯಾರ ಪರವಾಗಿದ್ದಾಳೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ವಿಶ್ವಕಪ್ ಪಂದ್ಯಾವಳಿಯಲ್ಲಿ ಬೆಂಗಳೂರಿನ…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9663218892, ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9663218892 call/ whatsapp/ mail raghavendrastrology@gmail.com ಮೇಷ ರಾಶಿ ಬಿಡುವಿಲ್ಲದ ಕೆಲಸಗಳ…
ನಾವೆಲ್ಲರೂ ರಸ್ತೆಯಲ್ಲಿ ಹೋಗುವಾಗ ಕಿಲೋಮೀಟರ್ ಸೂಚಕಗಳನ್ನು ಕಾಣುವುದು ಸಾಮಾನ್ಯ. ಈ ಮೈಲಿಗಲ್ಲುಗಳನ್ನು ಕೇವಲ ಕಿಲೋಮೀಟರ್ ಬಗ್ಗೆ ಅರಿತುಕೊಳ್ಳಲು ಮಾತ್ರ ಉಪಯೋಗಿಸುತ್ತೇವೆ ಎನ್ನವುದು ಸತ್ಯ ಸಂಗತಿ.
ಮೈಸೂರು ಜಿಲ್ಲೆಯಲ್ಲಿ ಪ್ರವಾಹದಿಂದ ಸಂತ್ರಸ್ತರಾದ ರೈತರ ಬ್ಯಾಂಕಿನ ಸಾಲ ಮರುಪಾವತಿ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ. ಪ್ರವಾಹದಿಂದ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ, ಟಿ. ನರಸೀಪುರ, ಪಿರಿಯಾಪಟ್ಟಣ, ನಂಜನಗೂಡು, ಹುಣಸೂರು ತಾಲ್ಲೂಕಿನ ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ಇದರಿಂದ ಸಕಾಲಕ್ಕೆ ಬ್ಯಾಂಕ್ ಸಾಲವನ್ನು ಮರುಪಾವತಿಸಲು ಸಾಧ್ಯವಾಗಿಲ್ಲ. ಭಾರತೀಯ ರಿಸರ್ವ್ ಬ್ಯಾಂಕಿಗೆ ರಾಜ್ಯ ಸರ್ಕಾರ ಈ ಕುರಿತಾಗಿ ಮನವಿ ಸಲ್ಲಿಸಿದ್ದು, ಸರ್ಕಾರದ ಮನವಿ ಮೇರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ರೈತರು ಪಡೆದ ಸಾಲ ಮರುಪಾವತಿ ಅವಧಿಯನ್ನು ಒಂದು ವರ್ಷದ…
ಬಿಜೆಪಿ ಆಡಳಿತ ಸರ್ಕಾರವಿರುವ ಉತ್ತರಪ್ರದೇಶ, ಮಹಾರಾಷ್ಟ್ರದಲ್ಲಿ ರೈತರ ಸಾಲಮನ್ನಾ, ಹಾಗೂ ಕಾಂಗ್ರೆಸ್ ಆಡಳಿತದ ಪಂಜಾಬ್ ನಲ್ಲಿಯೂ ರೈತರ ಸಾಲ ಮನ್ನಾ ಘೋಷಣೆಯಾದ ನಂತರ ಕರ್ನಾಟಕದಲ್ಲಿಯೂ ರೈತರ ಸಾಲ ಮನ್ನಾ ಮಾಡಬೇಕೆಂದು ಪ್ರತಿಪಕ್ಷಗಳು ತೀವ್ರವಾಗಿ ಆಗ್ರಹಿಸಿದ್ದವು.
2018ರ ಮೊದಲ ದಿನದ ಪ್ರಕಾರ ವಿಶ್ವದಲ್ಲಿ 3,86,000 ಲಕ್ಷ ಶಿಶುಗಳ ಜನನವಾಗಿದೆ. ಆದ್ರೆ ಇದರಲ್ಲಿ ಭಾರತದ ಪಾಲು 69,070. ಈ ಮೂಲಕ ಈ ವರ್ಷದ ಮೊದಲ ದಿನ ಹೆಚ್ಚು ಮಕ್ಕಳು ಜನಿಸಿದ ದೇಶದ ಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ ಲಭಿಸಿದೆ.