ಸುದ್ದಿ

ದೇವೇಗೌಡರಿಗೆ 87ನೇ ಹುಟ್ಟುಹಬ್ಬದ ಶುಭಾಶಯವನ್ನುತಿಳಿಸಿದ ಪ್ರಧಾನಿ ನರೇಂದ್ರ ಮೋದಿ…,

33

ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ 87ನೇ ಹುಟ್ಟುಹಬ್ಬವನ್ನು ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆಯೊಂದಿಗೆ ಆಚರಿಸಿಕೊಳ್ಳಲು ಸಿಎಂ ಎಚ್‌.ಡಿ.ಕುಮಾರಸ್ವಾಮಿ ದಂಪತಿ ಸೇರಿ ಇಡೀ ಕುಟುಂಬ ಶುಕ್ರವಾರ ಸಂಜೆಯೇ 2 ವಿಶೇಷ ವಿಮಾನಗಳಲ್ಲಿ ತಿರುಪತಿಗೆ ತೆರಳಿದೆ.

ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರಿಗೆ 87ನೇ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಮತ್ತು ಉತ್ತಮ ಆರೋಗ್ಯವನ್ನು ದೇವರು ಕರುಣಿಸಲಿ ಎಂದು ನರೇಂದ್ರ ಮೋದಿ ಟ್ವೀಟ್‌ ಮೂಲಕ ಶುಭ ಹಾರೈಸಿದ್ದಾರೆ. ರಾಜಕೀಯ ಕಚ್ಚಾಟಗಳ ನಡುವೆ ರಾಷ್ಟ್ರೀಯ ನಾಯಕರ ನಡುವೆ ಇಂತಹ ಬಾಂಧವ್ಯವನ್ನು ಹಲವು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ 87ನೇ ಹುಟ್ಟುಹಬ್ಬವನ್ನು ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆಯೊಂದಿಗೆ ಆಚರಿಸಿಕೊಳ್ಳಲು ಸಿಎಂ ಎಚ್‌.ಡಿ.ಕುಮಾರಸ್ವಾಮಿ ದಂಪತಿ ಸೇರಿ ಇಡೀ ಕುಟುಂಬ ಶುಕ್ರವಾರ ಸಂಜೆಯೇ 2 ವಿಶೇಷ ವಿಮಾನಗಳಲ್ಲಿ ತಿರುಪತಿಗೆ ತೆರಳಿದೆ.

ದೇವೇಗೌಡ, ಪತ್ನಿ ಚನ್ನಮ್ಮ, ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ, ಭವಾನಿ ರೇವಣ್ಣ, ದೇವೇಗೌಡರ ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಸೇರಿ ಒಟ್ಟು 23 ಮಂದಿ ತೆರಳಿದರು. ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣ ಅವರೂ ದೇವೇಗೌಡರ ಕುಟುಂಬದ ಜತೆಗಿದ್ದಾರೆ.

86 ವಸಂತಗಳನ್ನು ಪೂರೈಸಿರುವ ದೇವೇಗೌಡರು ಶನಿವಾರ (ಮೇ 18) 87ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಹುಟ್ಟುಹಬ್ಬದಂದು ಪ್ರತಿಬಾರಿ ತಿರುಪತಿಗೆ ತೆರಳಿ ಸುಪ್ರಭಾತ ಸೇವೆ ಮತ್ತು ಮೊದಲ ಪೂಜೆಯಲ್ಲಿ ದೇವೇಗೌಡರು ಪಾಲ್ಗೊಳ್ಳುತ್ತಿದ್ದರು. ಈ ಬಾರಿ ದೇವೇಗೌಡರು ಇಡೀ ಕುಟುಂಬವನ್ನು ತಿರುಪತಿಗೆ ಕರೆದೊಯ್ದಿದ್ದಾರೆ. ಶನಿವಾರ ಮಧ್ಯಾಹ್ನ ತಿರುಪತಿಯಿಂದ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ, ಉಪಯುಕ್ತ ಮಾಹಿತಿ

    ‘ಒಣ ದ್ರಾಕ್ಷಿ’ಯಲ್ಲಿರುವ ಆರೋಗ್ಯಕಾರಿ ಗುಣಗಳ ಬಗ್ಗೆ ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ಒಣದ್ರಾಕ್ಷಿ ಎಂದರೆ ಒಣಗಿಸಿದ ದ್ರಾಕ್ಷಿ. ಒಣದ್ರಾಕ್ಷಿಯನ್ನು ವಿಶ್ವದ ಹಲವು ಪ್ರದೇಶಗಳಲ್ಲಿ ಉತ್ಪಾದಿಸಲಾಗುತ್ತದೆ ಮತ್ತು ಇದನ್ನು ಹಸಿಯಾಗಿ ತಿನ್ನಬಹುದು ಅಥವಾ ಅಡುಗೆ, ಬೇಕಿಂಗ್ ಮತ್ತು ಮದ್ಯ ತಯಾರಿಕೆಯಲ್ಲಿ ಬಳಸಬಹುದು.

  • ಆಧ್ಯಾತ್ಮ

    ಧ್ಯಾನ ಮಾಡೋದ್ರಿಂದ ಏನೆಲ್ಲಾ ಚಮತ್ಕಾರ ಆಗುತ್ತೆ ಗೊತ್ತಾ!ಹಾಗಾದ್ರೆ ಧ್ಯಾನ ಹೇಗೆ ಮಾಡಬೇಕು,ಹೇಗೆ ಮಾಡಬಾರದು?ತಿಳಿಯಲು ಈ ಲೇಖನಿ ಓದಿ…

    ಧ್ಯಾನವು ಚಿನ್ನದ ಹಾಗೆ ಬಹು ಮೂಲ್ಯವುಳ್ಳದು. ಭೌತಿಕ ಐಶ್ವರ್ಯಕ್ಕೂ,ಮುಕ್ತೀಗೂ,ಶಾಂತಿಗೂ ಧ್ಯಾನವು ಒಳ್ಳೆಯದು. ಅದಕ್ಕಾಗಿ ಉಪಯೋಗಿಸುವ ಸಮಯ ಎಂದಿಗೂ ನಷ್ಟವಾಗುವಂತದಲ್ಲ. ಧ್ಯಾನದ ಲಾಭಗಳು ವರ್ಣಿಸಲು ಹೋದರೆ ಅದಕ್ಕೆ ಅಂತ್ಯವೇ ಇಲ್ಲ.

  • ರೆಸಿಪಿ

    ಆನೇಕ ರೀತಿಯ ಬಗೆ ಬಗೆಯ ಇಡ್ಲಿಗಳು ಮಾಡುವುದು ಹೇಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ..

    ದಕ್ಷಿಣ ಭಾರತದ ಪ್ರಮುಖ ಬ್ರೇಕ್‌ಫಾಸ್ಟ್‌ಗಳಲ್ಲಿ ಇಡ್ಲಿ ಕೂಡಾ ಒಂದು. ಪ್ರತಿಯೊಬ್ಬರ ಫೇವರಿಟ್‌ ತಿಂಡಿಯಾಗಿರುವ ಬಿಸಿ ಬಿಸಿ ಇಡ್ಲಿಗಳು ಆರೋಗ್ಯಕ್ಕೂ ಉತ್ತಮ. ಇದರಲ್ಲಿ ಕೊಬ್ಬು, ಕೊಲೆಸ್ಟ್ರಾಲ್‌ ಇಲ್ಲ. ಕ್ಯಾಲೊರಿ ಅಂಶವೂ ಅತ್ಯಂತ ಕಡಿಮೆ ಇದೆ. ಹೊಟ್ಟೆಗೂ ಹಿತವಾಗಿರುವ ಈ ಆಹಾರದಲ್ಲಿ ಹಲವಾರು ವೆರೈಟಿಗಳಿವೆ.

  • ಆರೋಗ್ಯ

    ಕೊಲೆಸ್ಟ್ರಾಲ್ ನಿಯಂತ್ರಿಸಲು ನೆಲ್ಲಿಕಾಯಿ ಉಪಯೋಗ ತಿಳಿಯಲು ಈ ಲೇಖನಿ ಓದಿ…

    ಇಂದಿನ ಸವಲತ್ತುಗಳ ಜೀವನದಲ್ಲಿ ದೈಹಿಕ ವ್ಯಾಯಾಮ ಕಡಿಮೆಯಾಗಿರುವ ಮತ್ತು ಸಿದ್ಧ ಆಹಾರಗಳ ಮೂಲಕ ಮತ್ತು ಸರಿಯಾದ ಸಮಯ ಮತ್ತು ಕ್ರಮದಲ್ಲಿ ಆಹಾರ ಸೇವಿಸದೇ ಇರುವ ಮೂಲಕಕೊಲೆಸ್ಟ್ರಾಲ್ ಮಟ್ಟಗಳು ಏರುಪೇರಾಗುತ್ತಾ ಇರುತ್ತವೆ. ರಕ್ತಪರೀಕ್ಷೆಗೆ ಒಳಪಟ್ಟವರಲ್ಲಿ ಹೆಚ್ಚಿನವರ ಫಲಿತಾಂಶ ಕೊಲೆಸ್ಟ್ರಾಲ್ ಇದೆ ಎಂದೇ ಇರುತ್ತದೆ. ಇಲ್ಲಿ ಕೊಲೆಸ್ಟ್ರಾಲ್ ಇದೆ ಎಂದರೆ ಮೂರೂ ಅಂಶಗಳ ಒಟ್ಟು ಪ್ರಮಾಣದಲ್ಲಿ ಎಲ್‌ಡಿಎಲ್ ಪ್ರಮಾಣ ಶೇಖಡಾವಾರು ಹೆಚ್ಚಿದ್ದು ವೈದ್ಯರು ಸೂಕ್ತ ಔಷಧಿ ಮತ್ತು ಆಹಾರದಲ್ಲಿ ಕಟ್ಟುಟ್ಟು ಸಾಧಿಸಲು ಸಲಹೆ ಮಾಡುತ್ತಾರೆ. ಕೊಲೆಸ್ಟ್ರಾಲ್  ಪ್ರಮಾಣ ಹೆಚ್ಚಿದಷ್ಟು ಹೃದಯ ಸಂಬಂಧಿ ರೋಗಗಳಿಗೆ ಮುಕ್ತ ಆಹ್ವಾನ ನೀಡಿದಂತೆ. ಒಂದು…

  • ಆಧ್ಯಾತ್ಮ

    ಈ 5 ವಸ್ತುಗಳಿಂದ ಭಗವಾನ್ ಶಿವ ಲಿಂಗವನ್ನು ಎಂದಿಗೂ ಪೂಜಿಸಬಾರದು..!

    ಭಗವಾನ್ ಶಿವ, ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ಒಬರಾಗಿದ್ದು, ತ್ರಿಮೂರ್ತಿಗಳಲ್ಲಿ ಭಗವಾನ್ ಶಿವನನ್ನು ಲಯಕರ್ತ(ವಿನಾಶಕ) ದೇವರಾಗಿ ಪರಿಗಣಿಸಲಾಗಿದೆ. ಹಿಂದೂ ಧರ್ಮದ ಪ್ರಕಾರ ಭಗವಾನ್ ಶಿವ ದೇವರನ್ನು ದೇವರ ದೇವ ಮಹಾದೇವ ಎಂದು ಹೇಳಲಾಗಿದೆ. ಮಹಾದೇವನು ಅನಂತವಾಗಿದ್ದು, ಅವರಿಗೆ ಹುಟ್ಟು ಇಲ್ಲ, ಸಾವೂ ಇಲ್ಲ ಎಂದು ಹೇಳಲಾಗಿದೆ. ನೈಜ ಪ್ರಪಂಚದಲ್ಲಿ ಮತ್ತು ಶೂನ್ಯ ಪ್ರಪಂಚದಲ್ಲಿ ಭಗವಾನ್ ಶಿವ ದೇವರು ಇದ್ದಾರೆ ಎಂದು ಹೇಳಲಾಗಿದೆ.

  • Health

    ನೆನೆಸಿಟ್ಟ ಒಣದ್ರಾಕ್ಷಿ ದಿನಾ ಒಂದೆರಡು ತಿಂದ್ರೆ, ಏನೆಲ್ಲಾ ಲಾಭವಿದೆ ಗೊತ್ತಾ?

    ಸಾಮಾನ್ಯವಾಗಿ ಸಿಹಿತಿಂಡಿಗಳ ರುಚಿಯನ್ನು ಹೆಚ್ಚಿಸಲು ಗೋಡಂಬಿಯ ಜೊತೆಗೆ ದ್ರಾಕ್ಷಿಯನ್ನು ಸೇರಿಸುತ್ತಾರೆ. ಹಲವು ಅಡುಗೆಗಳಿಗೆ ಈ ದ್ರಾಕ್ಷಿ ಗೋಡಂಬಿಗಳನ್ನು ಬಳಸುತ್ತಾರೆ. ಆದರೆ ಒಣದ್ರಾಕ್ಷಿಯ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೂ ಹಲವು ಲಾಭಗಳಿವೆ ಏನೆಂದು ತಿಳಿಯೋಣ ಬನ್ನಿ. ಹೃದಯದ ತೊಂದರೆಗಳಿಂದ ರಕ್ಷಿಸುತ್ತದೆ : ಒಣದ್ರಾಕ್ಷಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಇದ್ದು ಇದರೊಂದಿಗೆ ಹಲವು ಇತರ ಪೋಷಕಾಂಶಗಳೂ ಇವೆ. ಈ ಪೋಷಕಾಂಶಗಳು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆದು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ. ತನ್ಮೂಲಕ ಹೃದಯ ಸಂಬಂಧಿ…