ಸುದ್ದಿ

ಟಿಕ್‌ಟಾಕ್‌ಗೆ ಮತ್ತೊಂದು ಬಲಿ : ಕೋಲಾರದಲ್ಲಿ ಕೃಷಿ ಹೊಂಡದ ಬಳಿ ವಿಡಿಯೋ ಮಾಡಲು ಹೋಗಿ ವಿದ್ಯಾರ್ಥಿನಿ ಸಾವು…!

50

ಟಿಕ್ ಟಾಕ್ ಹಾವಳಿ ಎಲ್ಲೇ ಮೀರುತ್ತಿದೆ. ಈ ಆ್ಯಪ್​​ ನಿಷೇಧವಾಗಬೇಕೆಂಬ ಕೂಗು ಕೇಳಿಬರುತ್ತಿರುವ ಬೆನ್ನಲ್ಲೇ ಟಿಕ್​ಟಾಕ್​ ಆ್ಯಪ್​ನಿಂದ ಜೀವ ಕಳೆದುಕೊಳ್ಳುತ್ತಿರುವವ ಸಂಖ್ಯೆಯೂ ಹೆಚ್ಚುತ್ತಿದೆ. ತುಮಕೂರಿನಲ್ಲಿ ಯುವಕನೊರ್ವ ಪ್ರಾಣ ಕಳೆದುಕೊಂಡ ಬೆನ್ನಲ್ಲೇ, ಇದೀಗ ಕೋಲಾರದಲ್ಲಿ ಪದವಿ ವಿದ್ಯಾರ್ಥಿನಿಯೊಬ್ಬಳು ಟಿಕ್​ಟಾಕ್​ ಕ್ರೇಜ್​​ಗೆ ಬಲಿಯಾಗಿದ್ದಾಳೆ.


ಮಾಲಾಗೆ ವಿಪರೀತ ಟಿಕ್​ಟಾಕ್​ ಗೀಳು ಅಂಟಿಕೊಂಡಿತ್ತು. ಹೀಗಾಗಿ ಕೂತಲ್ಲಿ ನಿಂತಲ್ಲಿ ಟಿಕ್​ಟಾಕ್​ ಚಿತ್ರೀಕರಿಸುತ್ತಿದ್ದಳು. ಇದೇ ರೀತಿ ಅಪಾಯಕಾರಿ ಕೃಷಿ ಹೊಂಡದ ಬಳಿ ಟಿಕ್​ಟಾಕ್​ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾಳೆ. ಕೋಲಾರದ ಸರಕಾರಿ ಮಹಿಳಾ ಕಾಲೇಜಿನಲ್ಲಿ ಮಾಲಾ ಬಿಎ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದಳು. ಕೃಷಿ ಹೊಂಡದ ಬಳಿ ಟಿಕ್‌ ಟಾಕ್ ವೀಡಿಯೋ ಚಿತ್ರೀಕರಿಸೋ ವೇಳೆ ವಿದ್ಯಾರ್ಥಿನಿ ಕೃಷಿ ಹೊಂಡಕ್ಕೆ ಬಿದ್ದು ಉಸಿರುಗಟ್ಟಿ ಮಾಲಾ ಮೃತಪಟ್ಟಿದ್ದಾಳೆ. ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ

ಇತ್ತೀಚಿಗಷ್ಟೇ ತುಮಕೂರಿನ ಚಿಕ್ಕನಾಯಕನಹಳ್ಳಿಯ ಯುವಕನೊರ್ವ ಗೋಡೆಕೆರೆ ಗ್ರಾಮದಲ್ಲಿ ವೀಡಿಯೋ ಸ್ಟಂಟ್‌ ಮಾಡಲು ಹೋಗಿದ್ದ ಕುಮಾರ್‌ ಎಂಬವರು ಕತ್ತು, ಬೆನ್ನು ಮೂಳೆ ಮುರಿದುಕೊಂಡು ಆಸ್ಪತ್ರೆ ಸೇರಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು. ಇದೇ ರೀತಿ ದೇಶದಾದ್ಯಂತ ಟಿಕ್​ಟಾಕ್​ ಗೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ.


ಒಟ್ಟಾರೆ, ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯ ಆ್ಯಪ್‌ಗಳಲ್ಲಿ ಒಂದಾಗಿರುವ ಟಿಕ್‌ ಟಾಕ್‌ ಹೆಚ್ಚು ಕುಖ್ಯಾತಿ ಪಡೆದುಕೊಳ್ಳುತ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮಳೆಯಿಂದಾಗಿ ಈರುಳ್ಳಿ ಪೂರೈಕೆ ಕುಸಿತವಾದ ಕಾರಣ; ಗಗನಕ್ಕೇರಿದ ಈರುಳ್ಳಿ ದರ,.! ಇಲ್ಲಿದೆ ಮಾಹಿತಿ,…

    ನವದೆಹಲಿ, ದೇಶಾದ್ಯಂತ ಮುಂಗಾರು ಮಳೆ ಆರ್ಭಟದಿಂದಾಗಿ ಪೂರೈಕೆ ಕುಸಿತವಾದ ಬೆನ್ನಲ್ಲೇ, ಈರುಳ್ಳಿ ದರದಲ್ಲಿ ಭಾರೀ ಹೆಚ್ಚಳವಾಗಿದ್ದು, 20-30 ರು.ಗೆ ಬಿಕರಿಯಾಗುತ್ತಿದ್ದ ಈರುಳ್ಳಿ ದರ ಒಂದೇ ವಾರದಲ್ಲಿ 70-80ರು.ಗೆ ಏರಿಕೆಯಾಗಿದೆ. ಈರುಳ್ಳಿ ಬೆಳೆಯವ ರಾಜ್ಯಗಳಲ್ಲಿ ವಿಪರೀತ ಮಳೆ ಹಾಗೂ ಪೂರೈಕೆ ಕೊರತೆಯಿಂದಾಗಿ ಬೆಲೆ ಹೆಚ್ಚಾಗಿದೆ. ಅತೀ ಹೆಚ್ಚು ಈರುಳ್ಳಿ ಬೆಳೆಯುವ ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ಗುಜರಾತ್‌, ಪೂರ್ವ ರಾಜಸ್ತಾನ ಹಾಗೂ ಪಶ್ಚಿಮ ಮಧ್ಯಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಬೆಳೆ ನಾಶ ಹಾಗೂ ಸಾಗಣೆ ಸ್ಥಗಿತದಿಂದಾಗಿ…

  • ಉಪಯುಕ್ತ ಮಾಹಿತಿ

    ನಿಮ್ಮ ಮನೆಯಲ್ಲಿ ಗುಲಾಬಿ ಗಿಡಗಳು ಇವೆಯಲ್ಲಾ ಆ ಗಿಡಗಳಿಗೆ ಹೀಗೆ ಕಸಿ ಮಾಡಿದ್ರೆ,ಕೊಂಬೆಗೊಂದೊಂದು ಬಣ್ಣದ ಹೂಗಳು ನಿಮ್ಗೆ ಸಿಗುತ್ತೆ…

    ನಿಮ್ಮ ಮನೆಯಲ್ಲಿ ಗುಲಾಬಿ ಗಿಡಗಳು ಇವೆಯಲ್ಲಾ ಆ ಗಿಡಗಳಿಗೆ ಕಸಿ ಮಾಡುವುದರಿಂದ ಕೊಂಬೆಗೊಂದೊಂದು ಬಣ್ಣದ ಹೂಗಳನ್ನೂ ಸಹ ಪಡೆಯಬಹುದು.ಕಸಿ ಎಂದರೆ ನಿಮಗೆ ತಿಳಿಯದ್ದೇನಲ್ಲ ಆದರೆ ಈ ಮೊದಲಿನ ಸಾಂಪ್ರದಾಯಿಕ ಕಸಿ ಪದ್ಧತಿಯಂತೆ ಗಿಡದ ಕೊಂಬೆಯನ್ನೇ ಕತ್ತರಿಸಿ ಮತ್ತೊಂದು ಗಿಡಕ್ಕೆ ಜೋಡಿಸಿದ ನಂತರ ಅದೇನಾದರೂ ನೆಟ್ಟದೆ ಬೆಳೆಯದೆ ಹಳ್ಳ ಹಿಡಿದು ಮಕಾಡೆ ಮಲಗಿತೆಂದರೆ ಸಾಕು .

  • ಸುದ್ದಿ

    ಸರ್ಕಾರಿ ಶಾಲೆ ಒಂದರಲ್ಲಿ ಬಿಸಿ ಊಟದಲ್ಲಿ ಹಾವು ಪತ್ತೆ…ಎಲ್ಲಿ ಗೊತ್ತೇ?

    ಸರ್ಕಾರಿ ಶಾಲೆ ಯೊಂದರಲ್ಲಿ ಮಕ್ಕಳ ಬಿಸಿ ಊಟದಲ್ಲಿ ಹಾವು ಬಿದ್ದಿರುವ ಘಟನೆ ನಡೆದಿದೆ. ಈ ಶಾಲೆಗೆ ಊಟ ಸರಬರಾಜು ಮಾಡುತ್ತಿದ್ದದ್ದು ಒಂದು ಸರ್ಕಾರೇತರ ಖಾಸಗಿ ಸಂಸ್ಥೆ ಯಾಗಿದ್ದು , ಇದು ಶಾಲೆಗೆ ಕಳುಹಿಸಿಕೊಟ್ಟ ಆಹಾರದಲ್ಲಿ ಹಾವು ಇರುವುದು ಪತ್ತೆಯಾಗಿದೆ. ಮಾಧ್ಯಮಗಳಲ್ಲಿ ಈ ಸುದ್ಧಿ ವರದಿಯಾಗಿದ್ದು ಈ ಕುರಿತು ವಿಚಾರಣೆ ನಡೆಸಿ ಆ ಸಂಸ್ಥೆಯ ಮೇಲೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ.ಇಲ್ಲಿನ ಗಾರ್ಗವನ್…

  • ಸುದ್ದಿ

    ಮುಂಬೈನಲ್ಲಿ ಇಂದು ಭಾರೀ ಮಳೆ ಸಾಧ್ಯತೆ ಗೋಡೆ ಕುಸಿದು 18 ಮಂದಿ ಸಾವು…!

    ಮಹಾರಾಷ್ಟ್ರದಲ್ಲಿ ವರುಣನ ರೌದ್ರಾವತಾರ ಮುಂದುವರಿದಿದೆ. ಮಲಾಡ್‍ನ ಕರೂರ್ ಗ್ರಾಮದಲ್ಲಿ ಇಂದು ಬೆಳಗ್ಗೆ ಗೋಡೆ ಕುಸಿದು 18 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬೆಳ್ಳಂಬೆಳಗ್ಗೆ ಈ ದುರಂತ ನಡೆದಿದ್ದು, ಬೆಟ್ಟದ ಇಳಿಜಾರಿನಲ್ಲಿ ನಿರ್ಮಿಸಲಾಗಿರುವ ಗುಡಿಸಲುಗಳ ಮೇಲೆಯೇ 20 ಅಡಿ ಉದ್ದ ಹಾಗೂ ಬಹು ಎತ್ತರದ ಗೋಡೆ ಕುಸಿದಿದ್ದು, 18 ಮಂದಿ ಮೃತಪಟ್ಟಿದ್ದು, ಹಲವರು ತೀವ್ರ ಗಾಯಗೊಂಡಿರುವ ಪರಿಣಾಮ ಸಾವು, ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.ಈಗಾಗಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಫ್ ಪಡೆ…

  • govt, modi, ತಂತ್ರಜ್ಞಾನ

    ಹೊಸ ವರ್ಷಕ್ಕೆ ಹೊಸ ಕೊಡುಗೆ: 2018 ಕ್ಕೆ ದೇಶಿ ಜಿಪಿಎಸ್ ಹೊಂದಲಿರುವ ನಮ್ಮ ಭಾರತ!

    ದೇಶಿ ಜಿಪಿಎಸ್ ಗೆ ನಾವಿಕ್ ಎಂದು ನಾಮಕರಣ ಮಾಡಿದ್ದ ಪ್ರಧಾನಿ, ದೇಶದ ಯಾವುದೇ ಭಾಗದಲ್ಲಿ ಪ್ರಯಾಣಿಕರು ದಾರಿ ತಪ್ಪಿದರೆ, ಸರಿಯಾದ ದಾರಿ ತೋರಿಸುವ ದೇಶಿ ಜಿಪಿಎಸ್ (ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಂ ಅಥವಾ ದಿಕ್ಸೂಚಿ ವ್ಯವಸ್ಥೆಯ ತಂತ್ರಜ್ಞಾನ) ನಾವಿಕ್ ಅಂತಿಮ ಹಂತದ ಪರೀಕ್ಷಾರ್ಥ ಪ್ರಯೋಗದಲ್ಲಿದ್ದು, 2018 ವರ್ಷಾರಂಭಕ್ಕೆ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ.