ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ :ಅಂಬರೀಶ್ ನಂತರ ಶಿವಣ್ಣರಿಗೆ ಅಪ್ಪಾಜಿ ಸ್ಥಾನ ಕೊಟ್ಟಿದ್ಯಾಕೆ? ದರ್ಶನ್ ಹೇಳಿದ ಈ ಮಾತುಗಳನ್ನು ಕೇಳಿ,

51

ಸ್ಯಾಂಡಲ್ ವುಡ್ ದಿಗ್ಗಜ ನಟರಿಬ್ಬರು (ದರ್ಶನ್ ಮತ್ತು ಶಿವಣ್ಣ) ಒಂದೇ ವೇದಿಕೆಯಲ್ಲಿ ಇಂದು ಸಿನಿಮಾ ಒಂದರ ಮೂಹೂರ್ತದಲ್ಲಿ ಕಾಣಿಸಿಕೊಂಡು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅಣ್ಣಾವ್ರ ಸಂಬಂಧಿಕರು ಪಾರ್ವತಮ್ಮ ರಾಜಕುಮಾರ್ ಸಹೋದರಿಯ ಮಗ ಆಗಿರುವ ಧ್ರುವನ್ ಅವರ ಚಿತ್ರಕ್ಕೆ  ಕಂಠೀರವ ಸ್ಟುಡಿಯೋದಲ್ಲಿ ಇಂದು ಮುಹೂರ್ತ ನಡೆದಿದ್ದು ಅಲ್ಲಿ ಹ್ಯಾಟ್ರಿಕ್ ಹೀರೋ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಹಾಗೂ ಡಿ ಬಾಸ್ ದರ್ಶನ್ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು ನೋಡುಗರನ್ನು ಅಚ್ಚರಿ ಪಡುವಂತೆ ಮಾಡಿತು.‌ ಧ್ರುವನ್ ಅವರು‌ ನಟಿಸುವ ಈ ಚಿತ್ರಕ್ಕೆ ಶಿವಣ್ಣ ಕ್ಲಾಪ್ ಮಾಡಿದರೆ ದಚ್ಚು ಕ್ಯಾಮೆರಾ ಆನ್ ಮಾಡಿ ಚಿತ್ರದ ಮುಹೂರ್ತಕ್ಕೆ ಚಾಲನೆ ನೀಡಿದರು.

ಆ ಸಂದರ್ಭದಲ್ಲಿ ಶಿವಣ್ಣ ಹಾಗೂ ದರ್ಶನ್ ಅವರು ಮಾಧ್ಯಮದವರ ಜೊತೆ ಮಾತನಾಡಿದರು. ಮಾಧ್ಯಮದವರು ಇಬ್ಬರೂ ಒಟ್ಟಿಗೆ ನಟಿಸುವಿರಾ? ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ ಇಬ್ಬರಿಗೂ ಹೊಂದಿಕೆ ಆಗುವಂತಹ‌ ಒಳ್ಳೆಯ ಕಥೆ ಸಿಕ್ಕರೆ ಖಂಡಿತಾ ಒಟ್ಟಾಗಿ ನಟಿಸುತ್ತೇವೆ ಎಂದು ಹೇಳಿದರೆ. ದರ್ಶನ್ ಅವರು ನಮ್ಮಿಬ್ಬರನ್ನೂ ಒಟ್ಟಾಗಿ ಸಿನಿಮಾದಲ್ಲಿ ಸರಿ ತೋಗಿಸುವಂತಹ (ಹ್ಯಾಂಡಲ್) ನಿರ್ದೇಶಕರು ಯಾರೂ ಇಲ್ಲ? ಅಂತಹ ನಿರ್ದೇಶಕರು ಸಿಕ್ಕರೆ ಖಂಡಿತಾ ಒಟ್ಟಾಗಿ ‌ಸಿನಿಮಾ ಮಾಡುತ್ತೇವೆ ಎಂದರು. ಮಾದ್ಯಮದವರ ಮತ್ತೊಂದು ಪ್ರಶ್ನೆ ಒಟ್ಟಾಗಿ ನಟಿಸಿದರೆ ತಾವಿಬ್ಬರೂ ಲಾಂಗ್ ಅನ್ನು ಯಾರು ಹಿಡಿಯುತ್ತೀರಿ ಎಂದು ಕೇಳಿದರು.

ತಕ್ಷಣ ಪ್ರತಿಕ್ರಿಯೆ ನೀಡಿದ ದಚ್ಚು “ಲಾಂಗ್ ಹಿಡಿಯೋದ್ರಲ್ಲಿ ಶಿವಣ್ಣ ಸೀನಿಯರ್ , ಅವರೇ ಲಾಂಗ್ ಹಿಡಿದರೆ ನಾನು ಅವರ ಹಿಂದೆ ಇರುತ್ತೇನೆ” ಅಪ್ಪಾಜಿ ಬಂದಿರೋದು ವಿಶ್ ಮಾಡಿರೋದು ದೊಡ್ಡ ವಿಷಯ ಅವರು ಬಂದಿದ್ದು ತುಂಬಾ ಖುಷಿ ಎಂದು ಶಿವಣ್ಣರನ್ನು ಸ್ಮರಿಸಿದ ಡಚ್ಚು ಮಾದ್ಯಮಗಳ ಎದುರು ತಮ್ಮ ಅನಿಸಿಕೆ ಬಿಚ್ಚಿಟ್ಟರು. ಈ ಮೂಲಕ ಇಬ್ಬರು ಸ್ಟಾರ್ ನಟರು ಒಟ್ಟಾಗಿ ತೆರೆಯನ್ನು ಹಂಚಿಕೊಳ್ಳಲು ‌ತಮ್ಮಗಳ ಅಭ್ಯಂತರ ಇಲ್ಲ ಎಂದು ಹೇಳಿಕೆಯನ್ನು ನೀಡಿದ್ದಾರೆ.

ಇನ್ನೇನಿದ್ದರೂ ಗಟ್ಟಿ ಎದೆಗಾರಿಕೆಯ ನಿರ್ದೇಶಕರು ಯಾರಾದರೂ ಇವರಿಬ್ಬರಿಗೂ ಹೊಂದಿಕೆ ಆಗುವಂತಹ ಸ್ಕ್ರಿಪ್ಟ್ ತಾಯಾರಿಸಿ ಇವರ ದಿನಾಂಕಕ್ಕೆ ಕಾಯಬೇಕಷ್ಟೇ. ಕಾರಣ ಇಬ್ಬರೂ ಸಹ ಸದ್ಯ ಸಾಕಷ್ಟು ಸಿನಿಮಾಗಳನ್ನು ಕೈಯಲ್ಲಿ ಇಟ್ಟುಕೊಂಡಿದ್ದು ಅವೆಲ್ಲದರ ಚಿತ್ರೀಕರಣ ಮುಗಿದ ಬಳಿಕವಷ್ಟೇ ಹೊಸ ಸಿನಿಮಾದತ್ತ ಅವರಿಬ್ಬರ ಚಿತ್ತ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಕುಷ್ಠ ರೋಗಿಯ ಅನ್ನ, ಪಿಂಚಣಿ ಕಿತ್ತುಕೊಂಡ ಆಧಾರ್..! ಓದಿ ಈ ಮನಕಲುಕುವ ಸ್ಟೋರಿ…

    ಆಧಾರ್ ಕಾರ್ಡ್ ಎಂಬ ಸಾರ್ವತ್ರಿಕ ಗುರುತಿನ ಚೀಟಿ, ಒಂದೆಡೆ ಅಕ್ರಮ ನುಸುಳುಕೋರರನ್ನು ತಡೆಗಟ್ಟಲು, ಸರ್ಕಾರದ ಯೋಜನೆಗಳು ನೈಜ ಫಲಾನುಭವಿಗಳಿಗೆ ಸಿಗುವಂತೆ ಮಾಡಲು ಸಹಕಾರಿಯಾಗುತ್ತಿರುವ ಹೊತ್ತಲ್ಲೇ, ಇನ್ನೊಂದೆಡೆ ಹಲವು ಬಡವರ ಪಾಲಿಗೆ ಆಧಾರ್ ಕಾರ್ಡ್ ಒಂದು ಶಾಪವಾಗಿ ಪರಿಣಮಿಸಿದೆ!

  • ದೇಶ-ವಿದೇಶ

    ಮೋದಿ ಸರಕಾರದ ಮೂರು ವರುಷದ ಸಂಭ್ರಮಾಚರಣೆಗೆ, ರಾಷ್ಟ್ರಕ್ಕೆ ಸಮರ್ಪಿತವಾದ ದೇಶದ ಅತಿ ದೊಡ್ಡದಾದ ಸೇತುವೆ

    ಬ್ರಹ್ಮಪುತ್ರದ ಉಪ ನದಿಯಾದ ಲೋಹಿತ ನದಿಗೆ ಅಡ್ಡವಾಗಿ ಅಸ್ಸಾಂನಲ್ಲಿ ನಿರ್ಮಿಸಿರುವ ದೇಶದ ಅತಿ ದೊಡ್ಡ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಕ್ಕೆ ಸಮರ್ಪಿಸುವ ಜೊತೆಗೆ ಮೂರು ಯೋಜನೆಗಳಿಗೆ ಚಾಲನೆ ನೀಡಿದರು. ಈ ಮೂಲಕ ಸರ್ಕಾರದ ಮೂರು ವರ್ಷಗಳ ಸಂಭ್ರಮಾಚರಣೆಗೆ ಮೋದಿ ಅಧಿಕೃತ ಚಾಲನೆ ನೀಡಿದಂತಾಯಿತು.

  • ಉಪಯುಕ್ತ ಮಾಹಿತಿ

    ಅತಿ ಸುಲಭವಾಗಿ ತಯಾರಿಸುವ ಈರುಳ್ಳಿ ದೋಸೆ ರೆಸಪಿ, ನೀವು ಒಮ್ಮೆ ಮಾಡಿ ಸವಿಯಿರಿ.

    ಈರುಳ್ಳಿ ದೋಸೆಯನ್ನು ನಿಮ್ಮ ಮನೆಯಲ್ಲೇ ರುಚಿಯಾಗಿ ಈ ಸರಳ ವಿಧಾನದ ಮೂಲಕ ತಯಾರಿಸಿ ಸವಿಯಿರಿ. ದೋಸೆಯನ್ನು ಹೇಗೆ ಮಾಡುವುದು ಅನ್ನೋ ಚಿಂತೆ ಬಿಡಿ ಈ ವಿಧಾನ ಅನುಸರಿಸಿ… ತಯಾರಿಸಲು ಬೇಕಾಗುವ ಸಾಮಗ್ರಿಗಳುಎರಡು ಕಪ್ ಹುಳಿ ಬಂದ ದೋಸೆ ಹಿಟ್ಟು2-3 ಈರುಳ್ಳಿ3-4 ಹಸಿಮೆಣಸಿನ ಕಾಯಿಸ್ವಲ್ಪ ಕರಿಬೇವು ಸ್ವಲ್ಪ ಕೊತ್ತಂಬರಿ ಸೊಪ್ಪುಎರಡು ಚಮಚ ತುರಿದ ಕ್ಯಾರೇಟ್ರುಚಿಗೆ ತಕ್ಕಷ್ಟು ಉಪ್ಪುಎರಡು ಚಮಚ ಎಣ್ಣೆ ತಯಾರಿಸುವ ವಿಧಾನ: ಮೊದಲನೆಯದಾಗಿ ಹುಳಿ ಬಂದ ದೋಸೆ ಹಿಟ್ಟಿಗೆ ಈರುಳ್ಳಿ, ಹಸಿಮೆಣಸು, ಕರಿಬೇವು, ಕೊತ್ತಂಬರಿ ಸೊಪ್ಪು, ತುರಿದ…

  • ಸುದ್ದಿ

    ಇನ್ಮುಂದೆ ಹೊಸ ಅಂಕಪಟ್ಟಿ ಪಡೆಯಬೇಕೆಂದರೆ ಆಧಾರ್‌ ಕಡ್ಡಾಯ,.!

    ನೀವು ಎಸೆಸೆಲ್ಸಿ ಅಂಕಪಟ್ಟಿ ಕಳೆದುಕೊಂಡಿದ್ದರೆ ಹೊಸತಾಗಿ ಪಡೆಯಲು ಇನ್ನು ಆಧಾರ್‌ ಕಡ್ಡಾಯ. ಇಷ್ಟು ಮಾತ್ರವಲ್ಲ ಅಂಕಪಟ್ಟಿಯಲ್ಲಿ ಏನಾದರೂ ಲೋಪಗಳು ಇದ್ದರೆ ಅದನ್ನು ಸರಿಪಡಿಸಿ ಹೊಸತನ್ನು ಪಡೆಯಲೂ ಅದು ಬೇಕು. ಈ ಬಗ್ಗೆ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಸುತ್ತೋಲೆ ಹೊರಡಿಸಿದೆ. ಅಂಕಪಟ್ಟಿ ಕಳೆದುಕೊಂಡವರು ಅಥವಾ ಯಾವುದೇ ಅಭ್ಯರ್ಥಿ ದ್ವಿತೀಯ, ತೃತೀಯ ಅಥವಾ ನಾಲ್ಕನೇ ಅಂಕಪಟ್ಟಿಗೆ ಶಾಲೆಯ ಮೂಲಕವೇ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿಗದಿ ಪಡಿಸಿರುವ ಶುಲ್ಕ ಪಾವತಿಸಿ, ಸಂಬಂಧ ಪಟ್ಟ…

  • ಜ್ಯೋತಿಷ್ಯ

    ಗಣೇಶನನ್ನು ನೆನೆಯುತ್ತಾ ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(20 ಮಾರ್ಚ್, 2019) ತೀರಾ ಖರ್ಚು ಮಾಡುವ ಮತ್ತು ಮನರಂಜನೆಗೆ ತುಂಬಾ ಖರ್ಚ ಮಾಡುವ ನಿಮ್ಮ ಪ್ರವೃತ್ತಿಗೆ…

  • ಸುದ್ದಿ

    ‘ಬ್ಯಾಂಕ್’ಉದ್ಯೋಗಹುಡುಕುತ್ತಿರುವವರಿಗೊಂದು ಮುಖ್ಯ ಮಾಹಿತಿ…!

    ಬ್ಯಾಂಕ್ ನಲ್ಲಿ ಉದ್ಯೋಗ ಮಾಡುವ ಆಸೆಯೇ? ಹಾಗಿದ್ದರೆ ಎಸ್.ಬಿ.ಐ. ವೆಬ್ ಸೈಟ್ ಗೊಮ್ಮೆ ಭೇಟಿ ಕೊಡಿ, ಅವಕಾಶಗಳು ನಿಮಗಾಗಿ ಎದುರು ನೋಡುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 20-28 ವಯೋಮಿತಿಯವರು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ. ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶದ ತನ್ನ ಶಾಖೆಗಳಲ್ಲಿ ಕಾರ್ಯನಿರ್ವಹಿಸಲು ಒಟ್ಟು 700 ಮಂದಿಗೆ ಅವಕಾಶ ನೀಡಲು ನಿರ್ಧರಿಸಿದೆ. ಮಾನ್ಯತೆಪಡೆದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದವರು ಅಕ್ಟೋಬರ್ 16ರೊಳಗೆ ಆನ್ ಲೈನ್ ನಲ್ಲಿ ಅರ್ಜಿಸಲ್ಲಿಸಬೇಕು.ಆನ್ ಲೈನ್ ನಲ್ಲೇ ಪರೀಕ್ಷೆ…