ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
9 ವರ್ಷಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆಯನ್ನ ಆಧರಿಸಿ, ವಿಕಾಸ್ ಪುಷ್ಪಗಿರಿ ಕಟ್ಟಿಕೊಟ್ಟಿರೋ ಸಿನಿಮಾ ನ್ಯೂರಾನ್. ಕೆಲವು ದಿನಗಳ ಹಿಂದೆಯಷ್ಟೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಚಿತ್ರದ ಟ್ರೈಲರ್ ಮತ್ತು ಸಾಂಗ್ಸ್ ರಿಲೀಸ್ ಮಾಡಿದರು.ಈ ಚಿತ್ರದ ಮೂಲಕ ಉದಯೋನ್ಮುಖ ನಟ ಯುವ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ನೇಹಾ ಪಾಟೀಲ್, ವೈಷ್ಣವಿ ಮತ್ತು ಶಿಲ್ಪಾ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ.
ಪಿಎಚ್ಡಿಗಾಗಿ ಸಂಶೋಧನೆ ನಡೆಸಲು ಹೊರಡುವ ಸ್ಟೂಡೆಂಟ್ಸ್ ಕಾಣೆಯಾಗುತ್ತಾರೆ. ಅವರು ಎಲ್ಲೋದ್ರು..? ಏನಾದ್ರು..? ಮುಂದೇನಾಗುತ್ತೆ ಅನ್ನೋ ರೋಚಕ ಕಥೆ ನ್ಯೂರಾನ್ ಸಿನಿಮಾದಲ್ಲಿದೆ. ಒಂದಷ್ಟು ಟ್ವಿಸ್ಟ್ಗಳ ಜೊತೆಗೆ ಈ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನ ಹೇಳಲಾಗ್ತಿದೆ.. ಮೊದಲ ಪ್ರಯತ್ನದಲ್ಲೇ ಯುವ ಗಮನ ಸೆಳೆಯೋ ಸುಳಿವು ಸಿಕ್ತಿದೆ. ನ್ಯೂರಾನ್ ಸಿನಿಮಾ ಟೀಸರ್, ಟ್ರೈಲರ್ ಮತ್ತು ಸಾಂಗ್ಸ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.
ಕಬೀರ್ ದುಹಾನ್ ಸಿಂಗ್ ಚಿತ್ರದಲ್ಲಿ ನೆಗೆಟೀವ್ ರೋಲ್ ಪ್ಲೇ ಮಾಡಿದ್ದಾರೆ. ಆರಂಭದಿಂದ ಕೊನೆಯವರೆಗೂ ಕುತೂಹಲಭರಿತವಾಗಿ ಸಾಗುವ ಸಿನಿಮಾ ಪ್ರೇಕ್ಷಕರನ್ನ ಸೀಟಿನ ತುದಿಗೆ ತಂದು ಕೂರಿಸುವಂತಿದೆ. ಮಡಿಕೇರಿ, ಸಕಲೇಶಪುರ, ಬೆಂಗಳೂರಿನ ಸುತ್ತಾಮುತ್ತಾ ನ್ಯೂರಾನ್ ಸಿನಿಮಾ ಶೂಟಿಂಗ್ ನಡೆದಿದೆ. ಗುರುಕಿರಣ್ ಸಂಗೀತ, ಶೋಯಬ್ ಅಹಮದ್ ಛಾಯಾಗ್ರಹಣ ನ್ಯೂರಾನ್ ಚಿತ್ರಕ್ಕಿದೆ.
ವಿನಯ್ ಕುಮಾರ್ ವಿ.ಆರ್ ನಿರ್ಮಾಣದ ನ್ಯೂರಾನ್ ಸಿನಿಮಾ ಸದ್ಯ ಸೆನ್ಸಾರ್ ಅಂಗಳದಲ್ಲಿದ್ದು, ರಿಲೀಸ್ಗೆ ಸಿದ್ಧತೆ ನಡೀತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಡಾ. ಶಿವರಾಜ್ಕುಮಾರ್, ಶ್ರೀಮುರಳಿ ಮತ್ತು ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ನವೆಂಬರ್ ಫಸ್ಟ್ ಅಥವಾ ಸೆಕೆಂಡ್ ವೀಕ್, ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪಂಜಾಬಿ ಕುಟುಂಬದಲ್ಲಿ ಜನಿಸಿದ ವಿರಾಟ್ ಕೊಹ್ಲಿ, ಹುಟ್ಟಿದ್ದು-ಬೆಳೆದದ್ದು ಎಲ್ಲವೂ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ. ಅಂದಹಾಗೆ ಕೊಹ್ಲಿ ತಮ್ಮ ಬಾಲ್ಯದ ದಿನಗಳಲ್ಲಿ ಭಾರಿ ತಿಂಡಿ ಪೋತರಾಗಿದ್ದರು. ಬಾಯಲ್ಲಿ ನೀರು ತರುವಂತಹ ರುಚಿಕರ ತಿಂಡಿ ತಿನಿಸುಗಳೆಂದರೆ ಕೊಹ್ಲಿಗೆ ಅಚ್ಚುಮೆಚ್ಚು. ಇತ್ತೀಚೆಗೆ 31ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ವಿರಾಟ್ ಕೊಹ್ಲಿ ಇನ್ನು ಹೆಚ್ಚೆಂದರೆ 5-6 ವರ್ಷ ಟೀಮ್ ಇಂಡಿಯಾದಲ್ಲಿ ಆಡಬಹುದು. ಈ ಅವಧಿಯಲ್ಲಿ ಅವರು ಸಾಧಿಸುವುದು ಬಹಳಷ್ಟಿದೆ. ಆದರೆ, ಇವೆಲ್ಲವೂ ಮುಗಿದನಂತರ ಅವರು ಮಾಡುವುದಾದದರೂ ಏನು? ಕೊಹ್ಲಿ ನಿವೃತ್ತಿ ನಂತರದ ದಿನಗಳ ಕುರಿತಾಗಿ…
ಅವಕಾಡೊ ಹಣ್ಣು ಎಲ್ಲರಿಗೂ ಬಟರ್ ಫ್ರೂಟ್ ಅಥವಾ ಬೆಣ್ಣೆ ಹಣ್ಣು ಹೆಸರಿನಲ್ಲಿ ಚಿರಪರಿಚಿತ. ಭಾರತದಲ್ಲಿ ಈ ಹಣ್ಣನ್ನು ಶ್ರೀಲಂಕಾದಿಂದ ಪರಿಚಯಿಸಲ್ಪಟ್ಟಿತು ಎನ್ನಲಾಗಿದೆ. ಸದ್ಯ ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈ ಬಟರ್ ಫ್ರೂಟ್ನ್ನು ಬೆಳೆಯಲಾಗುತ್ತದೆ. ತನ್ನ ಹೆಸರಿಗೆ ತಕ್ಕಂತೆ ಇದು ಬೆಣ್ಣೆಯಂತೆಯೇ ಇದೆ. ಇದನ್ನು ಹಾಗೆ ತಿನ್ನಲು ತುಂಬಾ ರುಚಿಕರ ದೇ ರೀತಿಯಾಗಿ ಇದನ್ನು ಹಲವಾರು ಖಾದ್ಯಗಳಲ್ಲೂ ಬಳಕೆ ಮಾಡಲಾಗುತ್ತದೆ. ಬೇರೆಲ್ಲಾ ಹಣ್ಣಿಗಿಂತಲೂ ಅವಕಾಡೊ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಯಾಕೆಂದರೆ…
ಏಪ್ರಿಲ್ನಲ್ಲಿ ನಡೆದಿದ್ದ 2019 ಸಿಇಟಿ(ಸಾಮಾನ್ಯ ಪ್ರವೇಶ ಪರೀಕ್ಷೆ) ಫಲಿತಾಂಶ ಶನಿವಾರ ಬೆಳಗ್ಗೆ 11 ಗಂಟೆಗೆ ಪ್ರಕಟವಾಗಲಿದೆ. ಶನಿವಾರ ಬೆಳಗ್ಗೆ 11 ಗಂಟೆಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡರಿಂದ ಸುದ್ದಿಗೋಷ್ಟಿ ನಡೆಯಲಿದ್ದು, ಈ ವೇಳೆ ಸಿಇಟಿ ಫಲಿತಾಂಶವನ್ನು ಪ್ರಕಟಗೊಳಿಸಲಾಗುತ್ತದೆ. ಮಧ್ಯಾಹ್ನ 1 ಗಂಟೆಯ ನಂತರ ಕೆಇಎ ವೆಬ್ ಸೈಟ್ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಎ. 29 ಹಾಗೂ 30ರಂದು ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯಲು ಮುಂದಾದ ವಿದ್ಯಾರ್ಥಿಗಳಿಗೆ ಸಿಇಟಿ ಪರಿಕ್ಷೆಯನ್ನು ನಡೆಸಲಾಗಿತ್ತು. ಒಟ್ಟು 1,94,311 ಮಂದಿ ವಿದ್ಯಾರ್ಥಿಗಳು ನೋಂದಣಿ…
ಸ್ಮಾರ್ಟ್ಫೋನ್ಸ್ ಇಂದು ನಮ್ಮ ಜೀವನವನ್ನು ಯಾವುದೋ ಒಂದು ವಿಧದಲ್ಲಿ ಪ್ರಭಾವಿಸುತ್ತಿದೆ ಎಂದು ಎಲ್ಲರಿಗೂ ಗೊತ್ತಿರುವುದೇ. ಅಂಗೈಯಲ್ಲಿ ಜಗತ್ತನ್ನು ತೋರಿಸುವ ಹೈಸ್ಪೀಡ್ ಇಂಟರ್ನೆಟ್, ಸಾಮಾಜಿಕ ನೆಟ್ವರ್ಕಿಂಗ್, ಮ್ಯಾಪ್ಸ್, ಗೇಮ್ಸ್, ಎಂಟರ್ ಟೇನ್ಮೆಂಟ್…. ಹೀಗೆ ಸಾಕಷ್ಟು ರೀತಿಯಲ್ಲಿ ಸ್ಮಾರ್ಟ್ಫೋನ್ಸ್ನ್ನು ನಾವು ಬಳಸುತ್ತಿದ್ದೇವೆ. ಅತ್ಯಂತ ಕಡಿಮೆ ಬೆಲೆಗೆ ಇವು ಈಗ ನಮಗೆ ಲಭ್ಯವಾಗುತ್ತಿವೆ
ನಾವೆಲ್ಲ ತಿಳಿದಂತೆ ರಾಮನ ಸದ್ಭಕ್ತ ಆಂಜನೇಯ. ರಾಮನ ನೆರಳಿನಂತೆ ಆತನನ್ನು ಸದಾ ಹಿಂಬಾಲಿಸುವ ವ್ಯಕ್ತಿ ಹನುಮಂತ. ರಾಮನ ಪರಿಚಯವಾದಂದಿನಿಂದ ಇಂದಿನವರೆಗೂ ಕಲ್ಪದಲ್ಲಿ ನೆಲೆಸಿದ್ದು ಸದಾ ರಾಮ ಸ್ಮರಣೆಯಲ್ಲಿ ನಿರತ ನಮ್ಮ ಹನುಮಣ್ಣ. ವಜಕಾಯಿಯೆಂದು ಕ್ಯಾತಿ ಪಡೆದು ಶತಯೋಜನ ವಿಸ್ತೀರ್ಣದ ಸಾಗರವನ್ನೇ ಹಾರಿ ಲಂಕೆಯನ್ನು ತಲ್ಪಿದ ಏಕಮೇವಾದ್ವಿತೀಯ ಸಾಹಸಿ ಈ ಗುಣವಂತ. ರಮನನ್ನು ನೆನೆಸದೇ ತೊಟ್ಟು ನೀರನ್ನೂ ಸೇವಿಸದ ಅನನ್ಯ ಭಾವದ ಶ್ರದ್ಧಾಳು ಈ ಭಗವಂತ. ಬಯಸದೇ ಮುಂದಿನ ಕಲ್ಪದಲ್ಲಿ ಬ್ರಹ್ಮಪದವನ್ನು ಪಡೆದ ಅಸೀಮ ಸಾಧಕ ಈ ಮಹಾನ್…
ಇಂಡಿಯನ್ ರಿಯಾಲಿಟಿ ಶೋ ವಿನ್ನರ್ ಮತ್ತು ಬಿಗ್ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿ ಈಗ ಪೋಲೀಸರ ಅತಿಥಿಯಾಗಿದ್ದಾರೆ.