Sports

ಟೀಂ ಇಂಡಿಯಾ ಗೆದ್ದ ಖುಷಿಯಲ್ಲಿ ದೇಶಾದ್ಯಂತ ಯುದ್ಧವನ್ನೇ ಗೆದ್ದ ಸಂಭ್ರಮ…!

32

ಬೆಂಗಳೂರು: ಭಾರತ-ಪಾಕ್ ಹೈ ವೋಲ್ಟೇಜ್ ಪಂದ್ಯಕ್ಕೆ ತೆರೆ ಬಿದ್ದಿದೆ. ಟೀಂ ಇಂಡಿಯಾ ಗೆದ್ದ ಖುಷಿಯಲ್ಲಿ ದೇಶಾದ್ಯಂತ ಯುದ್ಧವನ್ನೇ ಗೆದ್ದ ಸಂಭ್ರಮ ಮನೆ ಮಾಡಿದೆ. ಈ ನಡುವೆ ಗೆಲುವು ತಂದು ಕೊಟ್ಟ ಟೀಂ ಇಂಡಿಯಾಗೆ ಕೋಟಿ ಕೋಟಿ ಭಾರತೀಯರು ಭೇಷ್, ಇಂಡಿಯಾ ಭೇಷ್ ಎಂದು ಬೆನ್ನು ತಟ್ಟಿದರು.

ಹೌದು. ಬದ್ಧ ವೈರಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲೇ ಏಳನೇ ಬಾರಿಗೆ ಪಾಕ್ ವಿರುದ್ಧ ಭಾರತಕ್ಕೆ ಐತಿಹಾಸಿಕ ಜಯ ಲಭಿಸಿದೆ. ಟೀಂ ಇಂಡಿಯಾ ಒಡ್ಡಿದ್ದ 337 ರನ್ ಟಾರ್ಗೆಟ್ ಬೆನ್ನತ್ತಿದ ಪಾಕಿಸ್ತಾನ ಆಟಕ್ಕೆ ಮಳೆಯೂ ಅಡ್ಡಿಯಾಗಿತ್ತು. ಮಳೆ ನಿಂತು ಮತ್ತೆ ಪಂದ್ಯ ಪ್ರಾರಂಭವಾದಾಗ ಡೆಕ್ವರ್ತ್ ನಿಯಮದ ಪ್ರಕಾರ ಪಾಕ್‍ಗೆ ಗೆಲ್ಲಲು 30 ಎಸೆತಗಳಲ್ಲಿ 136ರನ್ ಟಾರ್ಗೆಟ್ ನೀಡಲಾಗಿತ್ತು. ಕೊನೆಗೆ ಭಾರತಕ್ಕೆ 86 ರನ್‍ಗಳ ರೋಚಕ ಗೆಲುವು ಸಿಕ್ಕಿದೆ.


ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು- ಟೀಂ ಇಂಡಿಯಾ ಬೌಲರ್ ಗಳ ಅಬ್ಬರಕ್ಕೆ ಪಾಕ್ ತತ್ತರ ಇತ್ತ ಟೀಂ ಇಂಡಿಯಾ ಗೆದ್ದ ಖುಷಿಯಲ್ಲಿ ಸಿಲಿಕಾನ್ ಸಿಟಿಯಲ್ಲೂ ಕ್ರಿಕೆಟ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಮನೆ, ಅಂಗಡಿ, ಹೊಟೇಲುಗಳಲ್ಲಿ ಜನ ಉಸಿರು ಬಿಗಿ ಹಿಡಿದು ಪಂದ್ಯ ವೀಕ್ಷಿಸಿದ್ರು. ಕೊನೆಗೆ ಪಾಕಿಗಳ ಹುಟ್ಟಡಗಿಸಿದ ಭಾರತ ತಂಡ ಗೆದ್ದ ಖುಷಿಯಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ರು.

ಧಾರವಾಡದಲ್ಲಿಯೂ ಅಭಿಮಾನಿಗಳು ಭಾರತ್ ಮಾತಾಕಿ ಜೈ ಘೋಷಣೆಗಳೊಂದಿಗೆ ನಡುರಾತ್ರಿಯಲ್ಲಿಯೂ ಪಟಾಕಿ ಸಿಡಿಸಿ ಜೈ ಘೋಷ ಹಾಕಿದ್ರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಅಂಬೇಡ್ಕರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಶಿಕ್ಷಣ ಇಲಾಖೆ ನಿರ್ದೇಶಕ ಅಮಾನತು..!

    ಹಿರಿಯ ಅಧಿಕಾರಿಗಳ ಅನುಮೋದನೆ ಪಡೆಯದೆ ‘ಸಂವಿಧಾನ ದಿನಾಚರಣೆ’ಗೆ ಸಂಬಂಧಿಸಿದ ಸುತ್ತೋಲೆ ಹೊರಡಿಸಿ, ಇಲಾಖೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ (ಪ್ರೌಢ ಶಿಕ್ಷಣ) ಕೆ.ಎಸ್‌.ಮಣಿ ಸೇರಿ ನಾಲ್ವರನ್ನು ಸರಕಾರ ಅಮಾನತು ಮಾಡಿದೆ. ಇಲಾಖೆಯು ನ.26ರಂದು ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಹಮ್ಮಿ ಕೊಂಡಿರುವ ‘ಸಂವಿಧಾನ ದಿನಾಚರಣೆ’ಯ ಜಾಗೃತಿ ಅಭಿಯಾನದ ಮಾರ್ಗ ದರ್ಶಿಗಳನ್ನು ಖಾಸಗಿ ಸಂಸ್ಥೆಯೊಂದು ಸಿದ್ಧಪಡಿಸಿಕೊಟ್ಟಿತ್ತು. ಈ ಮಾರ್ಗದರ್ಶಿಯಲ್ಲಿ, ‘ಡಾ.ಬಿ.ಆರ್‌.ಅಂಬೇಡ್ಕರ್‌ ಒಬ್ಬರೇ ಸಂವಿಧಾನ ರಚಿಸಿಲ್ಲ’ ಎಂಬ ವಿವಾದಾತ್ಮಕ ವಾಕ್ಯವನ್ನು ಸೇರಿಸಲಾಗಿತ್ತು. ಈ ಮಾರ್ಗಸೂಚಿಗಳನ್ನು…

  • Uncategorized, ಆರೋಗ್ಯ

    ಮೊಟ್ಟೆಯಲ್ಲಿರುವ ಪೌಷ್ಟಿಕಾಂಶಗಳು ಮನುಷ್ಯನಿಗೆ ಎಷ್ಟು ಉಪಯೋಗ ಅಥವಾ ಎಷ್ಟು ಹಾನಿಕರ ಗೊತ್ತಾ ನಿಮ್ಗೆ..?

    ಮೊಟ್ಟೆ ಮೊದಲೋ ಕೋಳಿ ಮೊದಲೋ ಅಥವ ಮೊಟ್ಟೆ ಶಾಖಾಹಾರವೊ ಮಾಂಸಾಹಾರವೊ’ ಎನ್ನುವ ಚರ್ಚೆ ಬಹಳ ಹಿಂದಿನಿಂದಲೂ ಇದೆ. ಈ ಚರ್ಚೆಯ ಆಚೆಗೆ ಮೊಟ್ಟೆಯಲ್ಲಿರುವ ಪೌಷ್ಟಿಕಾಂಶಗಳು ಮನುಷ್ಯನಿಗೆ ಎಷ್ಟು ಉಪಯೋಗ ಅಥವ ಎಷ್ಟು ಹಾನಿಕರ ಎಂಬುದರ ಬಗ್ಗೆ ಒಂದು ನೋಟ.

  • ಸುದ್ದಿ

    ಹುಟ್ಟುಹಬ್ಬದಂದು ಸ್ಲಂ ನಿವಾಸಿಗಳಿಗೆ ಉಚಿತ ವೈದ್ಯಕೀಯ ಪರೀಕ್ಷೆ ಮಾಡಿಸಿ ಆಚರಿಸಿದ ನಟಿ ಪ್ರಣಿತ…!

    ಸ್ಯಾಂಡಲ್‍ವುಡ್ ನಟಿ ಪ್ರಣಿತಾ ಸುಭಾಷ್ ಇಂದು ತಮ್ಮ 28ನೇ ವರ್ಷದ ಹುಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ನಗರದ ರಾಗಿ ಗುಡ್ಡ ಸ್ಲಂ ನಿವಾಸಿಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದಾರೆ. ಪ್ರಣಿತಾ ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಹುಟ್ಟುಹಬ್ಬದಂದು ಪ್ರಣಿತಾ ಸರ್ಕಾರಿ ಶಾಲೆ ದತ್ತು ಪಡೆದುಕೊಂಡು, 5 ಲಕ್ಷ ರೂ. ಹಣವನ್ನು ನೀಡಿದ್ದರು. ಈ ಬಾರಿ ರಾಗಿ ಗುಡ್ಡ ಸ್ಲಂ ನಿವಾಸಿಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದಾರೆ. ಪ್ರಣಿತಾ ಸಮಾಜಮುಖಿ ಕಾರ್ಯಕ್ರಮಗಳನ್ನು…

  • ಉಪಯುಕ್ತ ಮಾಹಿತಿ

    ನಿಮ್ಮ ಜಮೀನಿನ ಪಹಣಿ (ಆರ್.ಟಿ.ಸಿ.) ಪತ್ರದ ಮಾಹಿತಿಯನ್ನು ನಿಮ್ಮ ಮೊಬೈಲ್’ನಲ್ಲೇ ನೋಡಿ ಪಡೆಯಿರಿ..!ತಿಳಿಯಲು ಈ ಲೇಖನ ಓದಿ…

    ನಮ್ಮ ಜಮೀನುಗಳಿಗೆ ಸಂಬಂದಪಟ್ಟಪಹಣಿ (RTC), ಮತ್ತು ಮಿಟೆಶನ್ ಗಳನ್ನೂ ನಾವು ನಿಮ್ಮ ಮೊಬೈಲ್ನಲ್ಲಿ ಚೆಕ್ ಮಾಡಿಕೊಳ್ಳಬಹುದು.

  • ಸಿನಿಮಾ

    ಈ ನಟಿಯ ಮದುವೆಗೆ ಬೆತ್ತಲೆಯಾಗಿ ಹೋದ್ರೆ ಮಾತ್ರ ಪ್ರವೇಶವಂತೆ..!

    ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿರುವ ಬಾಲಿವುಡ್ ಹಾಟ್ ನಟಿ ರಾಖಿ ಸಾವಂತ್ ತಾವು ದೀಪಕ್ ಕಲಾಲ್ ಎಂಬುವವರ ಜೊತೆ ಮದುವೆ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿದ್ದರು. ತಾವು ಬೆತ್ತಲೆಯಾಗಿ ಮದುವೆಯಾಗುತ್ತೇನೆ ಎಂದು ಹೇಳುವುದರ ಮುಖಾಂತರ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು. ಈಗ ಮತ್ತೊಂದು ಸುದ್ದಿಯಲ್ಲಿರುವ ರಾಖಿ ಸಾವಂತ್ ತಮ್ಮ ಮದುವೆಗೆ ಬೆತ್ತಲೆಯಾಗಿ ಬಂದರೆ ಮಾತ್ರ ಪ್ರವೇಶ ಇರಲಿದೆ ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ಮದುವೆಯಾದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಕುರಿತು ಹೇಳಿಕೆ ಕೊಟ್ಟಿರುವ ರಾಖಿ ಸಾವಂತ್ ನಿಕ್…

  • ದೇವರು-ಧರ್ಮ

    ಈ ದಿನದಂದು ತುಳಸಿ ಎಲೆ ಕಿತ್ತರೆ ಕಷ್ಟ ಬರುವುದು ಪಕ್ಕ…! ಯಾಕೆ ಹಾಗು ಯಾವ ದಿನ ಗೊತ್ತಾ?

    ಹಿಂದೂ ದೇವಾಲಯಗಳ ಸುತ್ತ, ಮನೆಯ ಮುಂಭಾಗದಲ್ಲಿ ತುಳಸಿ ಗಿಡಗಳು ಇರುವುದನ್ನು ಕಾಣಬಹುದು. ಇದು ಪುಟ್ಟ ಸಸ್ಯವಾದರೂ ಇದರ ಎಲೆಗಳು ಅಥವಾ ದಳಗಳು ಭಗವಾನ್ ವಿಷ್ಣುವಿಗೆ ಅತ್ಯಂತ ಶ್ರೇಷ್ಠವಾದದ್ದು. ಹಾಗಾಗಿ ದೇವತೆಗಳ ಆರಾಧನೆಯ ಸಂದರ್ಭದಲ್ಲಿ ತುಳಸಿ ಎಲೆಯನ್ನು ಕಡ್ಡಾಯವಾಗಿ ಬಳಸುತ್ತಾರೆ. ಇದು ಧಾರ್ಮಿಕವಾಗಿ ಪವಿತ್ರ ಸ್ಥಾನವನ್ನು ಪಡೆದುಕೊಂಡಂತೆಯೇ ವೈಜ್ಞಾನಿಕ ವಾಗಿಯು ಅತ್ಯುತ್ತಮ ಗಿಡ ಮೂಲಿಕೆಯ ಸಸ್ಯ. ತುಳಸಿ ಗಿಡವನ್ನು ಸೂಕ್ತ ಸ್ಥಳದಲ್ಲಿ ಇಟ್ಟು ಆರಾಧನೆ ಮಾಡಿದಾಗ ಮಾತ್ರ ಮನೆಯಲ್ಲಿ ಸಕಲ ದೇವತೆಗಳು ಆಗಮಿಸುತ್ತಾರೆ. ದುಷ್ಟ ಶಕ್ತಿಗಳು ಮನೆಯಿಂದ ದೂರ…