ವಿಸ್ಮಯ ಜಗತ್ತು, ಸುದ್ದಿ

ಇದು ನೋಡಲು ಜಲಪಾತದಂತೆ ಕಾಣುತ್ತದೆ..ಆದರೆ, ಜಲಪಾತ ಅಲ್ಲ …!ಮತ್ತಿನ್ನೇನು ಗೊತ್ತಾ?

107

ವ್ಹಾವ್…ಇಂತಹ ದೃಶ್ಯಗಳು ಎಲ್ಲಾ ಕಡೆ ಕಾಣಿಸುವುದಿಲ್ಲ, ಎಲ್ಲರ ಮನಸ್ಸನ್ನು  ಸೆಳೆಯುವ ನೋಟ… ನೋಡಿದ ಅರೆಕ್ಷಣದಲ್ಲಿಯೇ ಮನಸ್ಸು ಹಕ್ಕಿಯಂತೆ  ಹಾರುತ್ತದೆ ಎಂದರೆ  ತಪ್ಪೇನಿಲ್ಲ… ಅಂತಹ ಮನಮೋಹಕ ದೃಶ್ಯವಿದು… ತಕ್ಷಣಕ್ಕೆ ನೀರು ಹಾಲ್ನೊರೆಯುನ್ನುಕ್ಕಿಸಿ ಧುಮ್ಮಿಕ್ಕುವಂತೆ ಕಾಣುತ್ತದೆ. ಆದರೆ, ನಿಜವಾಗಿಯೂ ಇದು ಜಲಪಾತವೇ ಅಲ್ಲ…! ನಮ್ಮ ಕಣ್ಣನ್ನೇ ನಂಬದಂತೆ ಮಾಡುವ ಇಂತಹ ಅದ್ಭುತ ದೃಶ್ಯ ಸೆರೆಯಾಗಿದ್ದು ಮಿಜೋರಾಂನ ಐಜಾಲ್ ನಗರದಲ್ಲಿ. ಮಿಜೋರಾಂ ಪ್ರಕೃತಿಯ ರಮಣೀಯ ತಾಣಗಳಲ್ಲಿ ಒಂದು. ಇಲ್ಲಿನ ಬೆಟ್ಟ ಗುಡ್ಡಗಳನ್ನು ನೋಡುವುದೆಂದರೆ ಕಣ್ಣಿಗದು ಹಬ್ಬ. ಇದೇ ಬೆಟ್ಟದ ನಡುವೆ ಕಂಡದ್ದು ಈ ಜಲಪಾತದಂತಹ ದೃಶ್ಯ. ಆದರೆ, ಎಲ್ಲರನ್ನೂ ಮೋಡಿ ಮಾಡಿರುವ ಈ ದೃಶ್ಯ ಜಲಪಾತದಲ್ಲ, ಬದಲಾಗಿ ಮೋಡಗಳದ್ದು…!

ನಿಜ, ಇಲ್ಲಿ ಮೋಡಗಳು ಜಲಪಾತದಂತೆ ಕಾಣಿಸಿದೆ. ಬೆಟ್ಟದ ನಡುವೆ ಜಲಪಾತವೇ ಧುಮ್ಮಿಕ್ಕುತ್ತಿದೆ ಎಂದು ಭಾಸವಾಗುವಂತೆ ಮೋಡ ಇಲ್ಲಿ ರುದ್ರರಮಣೀಯ ದೃಶ್ಯವನ್ನು ಸೃಷ್ಟಿಸಿದೆ. ಈ ಮೋಡದ ದೃಶ್ಯ ಈಗ ಎಲ್ಲರನ್ನೂ ಬೆರಗುಗೊಳಿಸಿದೆ. ಜೊತೆಗೆ, ಸಹಜವಾಗಿಯೇ ಈ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಈ ಅಪೂರ್ವ ಸೊಬಗನ್ನು ಕಂಡು ಖುಷಿಪಟ್ಟಿದ್ದಾರೆ.

ಪರ್ವತ ವಿಜ್ಞಾನದಲ್ಲಿ ಇದನ್ನು `ಒರೊಗ್ರಾಫಿಕ್ ಕ್ಲೌಡ್ಸ್‌’ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಇದನ್ನು `ಜಲಪಾತದ ಮೋಡ’ಗಳು ಎಂದೂ ಗುರುತಿಸಲಾಗುತ್ತದೆ. ಪರ್ವತ ಪ್ರದೇಶದ ತೇವಾಂಶಯುಕ್ತ ಗಾಳಿಯಿಂದ ಮೋಡಗಳು ಇಲ್ಲಿ ಜಲಪಾತದಂತೆ ಕಾಣುತ್ತದೆ.

2017ರಲ್ಲಿ ಚೀನಾದ ಮೌಂಟ್ ಲುನಲ್ಲೂ ಇದೇ ರೀತಿ ಜಲಪಾತದ ಮೋಡಗಳು ಎಲ್ಲರನ್ನೂ ಸೆಳೆದಿದ್ದವು ಪ್ರಕೃತಿ ಅಂದರೇನೇ ಹಾಗೆ…ವಿಚಿತ್ರ, ವೈಶಿಷ್ಟಗಳ ಮೂಟೆ. ಪ್ರಕೃತಿಯ ಹಿರಿಯ, ವಿಶೇಷತೆಯನ್ನು ನಾವು ಊಹಿಸಲು ಸಾಧ್ಯವೇ ಇಲ್ಲ. ಈ ದೃಶ್ಯ ಕೂಡಾ ಪ್ರಕೃತಿ ಮಾತೆಯ ಮಾಯೆಯಲ್ಲಿ ಒಂದು..

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ