ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತಂದೆ-ತಾಯಿ ಮಕ್ಕಳಿಗೋಸ್ಕರ ತಮ್ಮ ಇಡೀ ಬದುಕನ್ನೇ ಮುಡಿಪಾಗಿ ಇಡುತ್ತಾರೆ. ಕಷ್ಟಪಟ್ಟು ಮಕ್ಕಳನ್ನು ಸಾಕಿದರೂ ಕೊನೆಗೆ ತಂದೆ ತಾಯಿಗೆ ದ್ರೋಹ ಬಗೆಯುವ ಮಟ್ಟಕ್ಕೆ ಕೆಲವರು ಹೋಗುತ್ತಾರೆ. ಆದರೆ ಇಲ್ಲಿ ನೋಡಿ ಹೆಣ್ಣುಮಕ್ಕಳು ಕುಟುಂಭದ ಕಣ್ಣು ಎನ್ನುವಂತೆ ಸಾಕಿ ಸಲಹಿದರು ಅದೇ ಮಕ್ಕಳು ಆಸ್ತಿಯ ಆಸೆಗೆ ಹೆತ್ತವರಿಗೆ ದ್ರೋಹ ಬಗೆದಿದ್ದಾರೆ.
ಮಕ್ಕಳಿಗೋಸ್ಕರ, ಅವರ ಸುಖ ಸಂತೋಷಕ್ಕೋಸ್ಕರ ತಂದೆ ತಾಯಿ ತಮ್ಮ ಜೀವನವನ್ನೆ ಮುಡಿಪಾಗಿಡುತ್ತಾರೆ. ಆದರೆ ಇಲ್ಲಿ ವೆಲ್ಲಿಯನ್, ಕಮಲಮ್ಮ ಎಂಬ ದಂಪತಿಗೆ ತಮ್ಮ ಮಕ್ಕಳೇ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ವೆಲ್ಲಿಯನ್ ದಂಪತಿಗೆ ಒಟ್ಟು ನಾಲ್ಕು ಜನ ಹೆಣ್ಣುಮಕ್ಕಳಿದ್ದು. ಈ ಹೆಣ್ಣು ಮಕ್ಕಳನ್ನು ಚೆನ್ನಾಗಿ ಓದಿಸಿ, ಅವರಿಗೊಂದು ಬದುಕು ಕಟ್ಟಿಕೊಟ್ಟಿದ್ದಾರೆ. ನಾಲ್ಕು ಜನರಿಗೂ ಸಹ ಚಾಮರಾಜಪೇಟೆಯಲ್ಲಿ ಸ್ವಂತ ಮನೆಯನ್ನು ಸಹ ಕಟ್ಟಿಕೊಟ್ಟಿದ್ದಾರೆ. ಇಷ್ಟೆಲ್ಲ ಸೌಕರ್ಯಗಳನ್ನು ಮಾಡಿದರೂ ಕೂಡ ಹೆತ್ತವರಿಗೆ ಈ ಮಕ್ಕಳು ಭಾರವಾಗಿದ್ದಾರೆ. ನಾಲ್ವರಲ್ಲಿ ಮೂವರು ಮಕ್ಕಳು ಆಸ್ತಿಯ ಅತಿ ಆಸೆಗೆ ಆಸ್ತಿಯ ಪತ್ರಕ್ಕೆ ಫೋರ್ಜರಿ ಸಹಿ ಮಾಡುವ ಮೂಲಕ ತಮ್ಮ ಹೆಸರಿಗೆ ಮಾಡಿಕೊಂಡು. ತಂದೆ- ತಾಯಿಯನ್ನು ಮನೆಗೆ ಸೇರಿಸಿಕೊಳ್ಳುತ್ತಿಲ್ಲ.
ಆದರೆ ಒಬ್ಬಳು ಪುತ್ರಿ ಮಾತ್ರ ಹೆತ್ತವರನ್ನು ಮನೆಗೆ ಕರೆದುಕೊಂಡು ಬಂದು ಸಾಕಲು ಮುಂದಾದಾಗ ಆಕೆಯ ಮನೆ ಮತ್ತು ಆಸ್ತಿಯನ್ನು ಕೂಡ ಲಪಟಾಯಿಸಲು ಉಳಿದ ಮೂವರು ಸ್ಕೆಚ್ ಹಾಕಿದ್ದಾರಂತೆ. ಹೆಣ್ಣು ಮಕ್ಕಳ ಈ ವರ್ತನೆಗೆ ವೃದ್ದ ದಂಪತಿ ಕಣ್ಣೀರಿಟ್ಟಿದ್ದಾರೆ. ಮಕ್ಕಳಿಗೋಸ್ಕರ ಈ ದಂಪತಿಳು ವಿಲ್ ಸಹ ಮಾಡಿದ್ದರು.
ಅದನ್ನ ನಂಬದೇ ಮಕ್ಕಳು ಫೋರ್ಜರಿ ಮಾಡಿ ಆಸ್ತಿಯನ್ನ ಮಕ್ಕಳು ಕಬಳಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಇರಲು ಸ್ವಂತ ಮನೆ ಮಾಡಬೇಕೆಂದು ದೊಡ್ಡ ಸೈಟುಗಳಲ್ಲಿ ನಾಲ್ಕು ಮನೆಗಳನ್ನ ನಿರ್ಮಿಸಿ, ಎಲ್ಲರ ಹೆಸರಲ್ಲೂ ಕೂಡ ಒಂದೊಂದು ಮನೆಯನ್ನ ಬರೆದು ವಿಲ್ ಮಾಡಿದ್ದರು. ಆದರೆ ಆ ವಿಲ್ ಅನ್ನು ಹೆಣ್ಣು ಮಕ್ಕಳಿಗೆ ತೋರಿಸಿರಲಿಲ್ಲ. ಈ ಕಾರಣಕ್ಕೆ ತಂದೆ ತಾಯಿ ಮೇಲೆ ಮಕ್ಕಳು ಮುನಿಸಿಕೊಂಡು ಈ ನಿರ್ಧಾರಕ್ಕೆ ಕೈ ಹಾಕಿದ್ದಾರೆ.
ನಂತರ ಜನವರಿಯಲ್ಲಿ ಜಿಗಣಿಯಲ್ಲಿ ರಿಜಿಸ್ಟ್ರಾರ್ ಆಫೀಸಿನಲ್ಲಿ ಸಬ್ ರಿಜಿಸ್ಟ್ರಾರ್ ಆಗಿದ್ದ ಮಂಜುನಾಥ್ ಅನ್ನೋರು ಚಿನ್ನಪ್ಪ ಎಂಬವರಿಗೆ ಜನರಲ್ ಪವರ್ ಆಫ್ ಅಟಾರ್ನಿಯ(ಜಿಪಿಎ) ಕೊಟ್ಟು ನಂತರ ಅದನ್ನ ದಾನದ ರೂಪದಲ್ಲಿ ಈ ಹೆಣ್ಣು ಮಕ್ಕಳು ಫೋರ್ಜರಿ ಮಾಡಿ ಬರೆಸಿಕೊಂಡಿದ್ದಾರೆ. ಈಗ ತಾವೇ ನಿರ್ಮಿಸಿದ ಮನೆಯಲ್ಲಿ ಇರಲೂ ಆಗದೇ ಕಣ್ಣೀರಿಡುತ್ತಿದ್ದಾರೆ. ಹೆಣ್ಣುಮಕ್ಕಳ ಬಗ್ಗೆ ತಂದೆಗೆ ಹೆಚ್ಚು ಪ್ರೀತಿ ಅಂತಾರೆ ಆದರೆ ಈ ಹೆಣ್ಣುಮಕ್ಕಳಿಂದಲೇ ತಂದೆ ಇಷ್ಟೊಂದು ನೋವು ಅನುಭವಿಸುತ್ತಿದ್ದಾರೆ.
ತಂದೆ ತಾಯಿ ಕಣ್ಣಿಗೆ ಕಾಣೋ ದೇವರು ಅಂತಾರೆ ಆದರೆ ಕೇವಲ ತಂದೆ ತಾಯಿಯೇ ಕಷ್ಟ ಪಟ್ಟು ಸಂಪಾದಿಸಿದ ಆಸ್ತಿಗಾಗಿ ಅವರನ್ನೇ ಬೀದಿ ಪಾಲು ಮಾಡಲು ಹೊರಟಿರುವ ಇಂತಹ ಮಕ್ಕಳಿಗೆ ಕಾನೂನು ತಕ್ಕ ಶಾಸ್ತಿ ಮಾಡಬೇಕು ಅನ್ನೊದು ನೊಂದವರ ಒತ್ತಾಯವಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಿರಿಯಾ’ ಇದು ನೈರುತ್ಯ ಏಷ್ಯಾದಲ್ಲಿರುವ ಒಂದು ಅರಬ್ ದೇಶ.ಪಶ್ಚಿಮ ಏಷ್ಯಾದ ಸಿರಿಯಾ ಕಳೆದ ಏಳು ವರ್ಷಗಳಿಂದ ಆಂತರಿಕ ಕ್ಷೋಭೆಯಿಂದ ತತ್ತರಿಸುತ್ತಿದೆ. ಕಳೆದ 22 ತಿಂಗಳಿನಿಂದ ನಿರಂತರವಾಗಿ ಸಿರಿಯಾದಲ್ಲಿ ನಡೆಯುತ್ತಿರುವ ಜನಾಂಗೀಯ ಕಲಹದಿಂದಾಗಿ 60 ಸಾವಿರಕ್ಕೂ ಹೆಚ್ಚು ಅಮಾಯಕ ಪ್ರಜೆಗಳು ಬಲಿಯಾಗಿದ್ದಾರೆ. ಏಕೆ ಈ ಯುದ್ದ..? ಕಳೆದ 18 ವರ್ಷಗಳಿಂದ ಬಷರ್ ಅಲ್ ಅಸ್ಸಾದ್ ಅವರು ಸಿರಿಯಾ ಅಧ್ಯಕ್ಷರಾಗಿದ್ದಾರೆ. ಇವರು ಅಲ್ಪ ಸಂಖ್ಯಾತರಾಗಿರುವ ಶಿಯಾ ಉಪಪಂಗಡ ಅಲಾವಿ ಸಮುದಾಯಕ್ಕೆ ಸೇರಿದವರು. ಶಿಯಾ ಪ್ರತಿನಿಧಿಯೊಬ್ಬರು ತಮ್ಮ ದೇಶ ಆಳುವುದನ್ನು…
ಪುದೀನಾ ಎಲೆಗಳು ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸಿ ಕೆಟ್ಟ ಉಸಿರನ್ನು ತಡೆಯುವುದು. ಪುದೀನಾವನ್ನು ಏಶ್ಯಾ, ಯುರೋಪ್ ಮತ್ತು ಮಧ್ಯಪೂರ್ವ ದೇಶಗಳಲ್ಲಿ ಬೆಳೆಸಲಾಗುತ್ತದೆ. ಇದನ್ನು ತಾಜಾ, ಒಣಗಿಸಿ ಹಾಗೂ ಸಾರಭೂತ ತೈಲವಾಗಿ ಬಳಸಿಕೊಳ್ಳಲಾಗುವುದು. ಯಾವುದೇ ರೂಪದಲ್ಲಿ ಬಳಸಿದರೂ ಪುದೀನಾವು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ರಾಜೀನಾಮೆ ನೀಡಿದ್ದ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್,ಭೈರತಿ ಬಸವರಾಜು, ಮುನಿರತ್ನ, ಎಂಟಿಬಿ ನಾಗರಾಜ್, ಹಾಗೂ ಪಕ್ಷೇತರ ಶಾಸಕ ಹೆಚ್. ನಾಗೇಶ್ ನಿನ್ನೆ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಬೆಂಗಳೂರು (ಜು.29): ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿರುವ 14 ಶಾಸಕರನ್ನು ನಿನ್ನೆ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. ಅದರ ಬೆನ್ನಲ್ಲೇ ಮುಂಬೈನಲ್ಲಿದ್ದ 6 ಅತೃಪ್ತ ಶಾಸಕರು ನಿನ್ನೆ ಮಧ್ಯರಾತ್ರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ರಾಜೀನಾಮೆ ನೀಡಿದ್ದ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್, ಭೈರತಿ ಬಸವರಾಜು, ಮುನಿರತ್ನ, ಎಂಟಿಬಿ…
ದೇಶದ ಖ್ಯಾತ ಧಾರ್ಮಿಕ ನಾಯಕ, ಸ್ವಘೋಷಿತ ದೇವಮಾನವ, ಗುರುಮೀತ್ ರಾಮ್ ರಹೀಂ ಬಾಬಾ ವಿರುದ್ಧದ ಅತ್ಯಾಚಾರ ಆರೋಪ ಸಾಬೀತಾಗಿದೆ.
ಮೇಷ ರಾಶಿ ಭವಿಷ್ಯ (Monday, November 22, 2021) ಮೇಷರಾಶಿಯಲ್ಲಿ ಹುಟ್ಟಿದವರಲ್ಲಿ ನಿಮ್ಮ ಅಸೂಯೆ ವರ್ತನೆ ನಿಮ್ಮನ್ನು ದುಃಖಿಗಳಾಗಿಯೂ ಮತ್ತು ಖಿನ್ನರಾಗಿಯೂ ಮಾಡಬಹುದು. ಆದರೆ ಇದು ಒಂದು ಸ್ವಯಂಕೃತ ಗಾಯವಾಗಿರುವುದರಿಂದ ಇದರ ಬಗ್ಗೆ ಪ್ರಲಾಪಿಸುವ ಅಗತ್ಯವಿಲ್ಲ. ಇತರರ ಸಂತೋಷ ಮತ್ತು ಅತೃಪ್ತಿಯನ್ನು ಹಂಚಿಕೊಳ್ಳುವ ಮೂಲಕ ಇದನ್ನು ತೊಡೆದುಹಾಕಲು ಪಣತೊಡಿ. ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಬೇಕು. ನೀವು ಕುಟುಂಬದ ಸದಸ್ಯರ ಜೊತೆ ಸ್ವಲ್ಪ ತೊಂದರೆ ಹೊಂದಿದ್ದರೂ ಇದು ನಿಮ್ಮ ಮನಶ್ಶಾಂತಿಯನ್ನು ಹಾಳು ಮಾಡಲು ಅವಕಾಶ ನೀಡಬೇಡಿ….
ಮುಂಬರುವ 2019ರ ಲೋಕಸಭೆ ಚುನಾವಣೆಗೆ ಬಿಜೆಪಿ ತಯಾರಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಸಂಸದರ ಸಭೆ ನಡೆಸಿರುವ ಬೆನ್ನಲ್ಲೆ ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಗೆ ಸೋನಿಯಾ ಪುತ್ರಿ ಪ್ರಿಯಾಂಕಾ ಗಾಂಧಿಯನ್ನು ಕರ್ನಾಟಕದಿಂದ ಕಣಕ್ಕಿಳಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.