ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂಗ್ಲೆಂಡ್‍ನ ಗ್ರಾಮವೊಂದರಲ್ಲಿ ಅದರ್ಶ ಕೃಷಿ ದಂಪತಿ ಇದ್ದಾರೆ. ಪರಿಸರ ಸ್ನೇಹಿ ಪೀಠೋಪಕರಣಗಳನ್ನು ಉತ್ಪಾದಿಸುವ ಜೊತೆಗೆ ಅರಣ್ಯ ಸಂರಕ್ಷಣೆಗೂ ಕೈಜೋಡಿಸಿದ್ದಾರೆ. ಈ ಅಗ್ರಿ-ಕಪಲ್‍ನನ್ನು ನಾವೀಗ ಭೇಟಿ ಮಾಡೋಣ. ಇಂಗ್ಲೆಂಡ್‍ನ ಮಿಡ್‍ಲ್ಯಾಂಡ್ಸ್‍ನ ಎರಡು ಎಕರೆ ಜಮೀನಿನಲ್ಲಿ ಗೋವಿನ್ ಮತ್ತು ಅಲೈಸ್ ಮುನ್ರೋ ಎಂಬ ದಂಪತಿಯ ಅರಣ್ಯ ಸಂರಕ್ಷಣೆ ಅಭಿಯಾನ ಗಮನ ಸೆಳೆದಿದೆ.
ಈ ಕೃಷಿಕ ದಂಪತಿ ಕುರ್ಚಿ ಗಿಡವನ್ನು ಬೆಳೆಸುತ್ತಿರುವ ಜೊತೆಗೆ ಪರಸರ ರಕ್ಷಣೆಯ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಡರ್ಬಿಶೈರ್‍ನಲ್ಲಿ ಗೋವಿನ್ ದಂಪತಿ ಫರ್ನಿಚರ್ ಫಾರಂ ಹೊಂದಿದ್ದಾರೆ. ಈ ಪೀಠೋಪಕರಣ ತೋಟದಲ್ಲಿ ಕುರ್ಚಿ ಗಿಡಗಳನ್ನು ಸ್ವಾಭಾವಿಕವಾಗಿ ಬೆಳೆಸಲಾಗುತ್ತಿದೆ. ಗಿಡಗಳ ಮೂಲಕ ಇಲ್ಲಿ 250 ಚೇರ್‍ಗಳು, 100 ಲ್ಯಾಂಪ್‍ಗಳು ಮತ್ತು 50 ಟೇಬಲ್‍ಗಳನ್ನು ಅಭಿವೃದ್ದಿಗೊಳಿಸಲಾಗುತ್ತಿದೆ.ಕುರ್ಚಿ ಗಿಡ ಬೆಳೆಯಲು ಗೋವಿನ್‍ಗೆ ಬಾಲ್ಯವೇ ಪ್ರೇರಣೆ. ಬೋನ್ಸಾಯಿ ಗಿಡಗಳು ಬೆಳೆದು ಕುರ್ಚಿಯಂತೆ ಕಾಣುತ್ತಿತ್ತು. ಅಲ್ಲದೇ ಗೋವಿನ್‍ಗೆ ಬೆನ್ನುಲುಬು ಸಮಸ್ಯೆ ಇತ್ತು. ಬಾಲ್ಯದಲ್ಲಿ ಅವರ ಬೆನ್ನು ಮೂಳೆ ಸೊಟ್ಟವಾಗಿತ್ತು. ಅದನ್ನು ಸರಿಪಡಿಸಲು ಹಲವು ವರ್ಷಗಳ ಕಾಲ ಮೆಟಲ್ ಫ್ರೇಮ್ ಧರಿಸಿದ್ದರು. ಕುರ್ಚಿ ಗಿಡ ಬೆಳೆಯಲು ಗೋವಿನ್ 2006ರಲ್ಲಿ ಯತ್ನಿಸಿದರು. ಇಂಗ್ಲೆಂಡ್‍ನ ಪೀಕ್ ಜಿಲ್ಲೆಯಲ್ಲಿ ಎರಡು ತುಂಡು ನೆಲದಲ್ಲಿ ಅವರು ಮರದ ಕುರ್ಚಿಗಳನ್ನು ಸ್ವಾಭಾವಿಕವಾಗಿ ಬೆಳೆಸಲು ಮುಂದಾದರು.
2012ರಲ್ಲಿ ತಮ್ಮ ಯೋಜನೆಯನ್ನು ವಿಸ್ತರಿಸಿದರು. ಅದೇ ವರ್ಷ ಅಲೈಸ್ ಜೊತೆ ಗೋವಿನ್ ವಿವಾಹವಾಯಿತು. ದೊಡ್ಡ ಮಟ್ಟದಲ್ಲಿ ಮರದ ಕುರ್ಚಿಗಳನ್ನು ಬೆಳೆಯಬೇಕೆಂಬ ಅಭಿಲಾಷೆ ದುರಂತದಲ್ಲಿ ಅಂತ್ಯವಾಯಿತು. ಈ ಗಿಡಗಳನ್ನು ಹಸುಗಳು ಮತ್ತು ಮೊಲಗಳು ತಿಂದು ಹಾಕಿದವು. ಇದರಿಂದ ದೃತಿಗಡೆದ ದಂಪತಿ ಬೆಳವಣಿಗೆಯನ್ನು ಕುಂಠಿತ ಗೊಳಿಸದೆ ಮರವನ್ನು ಕುರ್ಚಿ ಆಕಾರದಲ್ಲಿ ಬೆಳೆಸಲು ಪರಿಣಾಮಕಾರಿ ಮಾರ್ಗ ಕಂಡುಕೊಂಡರು.
ಬೆಳೆಯುತ್ತಿರುವ ಕಾಂಡಗಳನ್ನು ಸರಿಯಾದ ದಿಕ್ಕಿನಲ್ಲಿ ಹಬ್ಬಿ ಕುರ್ಚಿಯ ಆಕಾರ ಪಡೆಯುವಂತೆ ಮಾಡಿದರು. ರೆಂಬೆಗಳು ಒಂದಕ್ಕೊಂದು ಬೆಸೆದುಕೊಳ್ಳಲು ಕಸಿ ವಿಧಾನ ಅನುಸರಿಸಿದರು. ಇವರ ಶ್ರಮ ಫಲ ನೀಡಿತು. ಕುರ್ಚಿಗಳು 12,480 ಡಾಲರ್, ಲ್ಯಾಂಪ್‍ಗಳು 2,870 ಡಾಲರ್ ಹಾಗೂ ಮೇಜುಗಳು 15,600 ಡಾಲರ್ ಮೌಲ್ಯ ಹೊಂದಿವೆ.ತೋಟದಲ್ಲೇ ಬೆಳೆಯುವ ಈ ಗಿಡ ಪೂರ್ಣಪ್ರಮಾಣದಲ್ಲಿ ಕುರ್ಚಿಯ ರೂಪ ಪಡೆಯಲು ಆರರಿಂದ ಒಂಭತ್ತು ವರ್ಷಗಳು ಬೇಕು. ಅಲ್ಲದೇ ಇದು ಸಂಪೂರ್ಣ ಒಣಗಲು ತೆಗೆದುಕೊಳ್ಳುವ ಅವಧಿ ಒಂದು ವರ್ಷ. 2030ರ ವೇಳೆಗೆ ಈ ಫರ್ನಿಚರ್ ಫಾರಂನನ್ನು ಮತ್ತಷ್ಟು ವಿಸ್ತರಿಸಲು ದಂಪತಿ ಬಯಸಿದ್ದಾರೆ. ಇದು ನಿವೃತ್ತರಾಗಿ ವಿಶ್ರಾಂತಿ ಪಡೆಯುವ ಮಂದಿಗೆ ಸೂಕ್ತವಾದ ಕುರ್ಚಿ ಎನಿಸಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸರ್ಕಾರವು ಈಗಾಗಲೇ ಆರೋಗ್ಯ ಭಾಗ್ಯ,ಶಾದಿ ಭಾಗ್ಯ,ಜ್ಯೋತಿ ಭಾಗ್ಯ ಅನ್ನ ಭಾಗ್ಯ ಹೀಗೆ ಹಲವಾರು ಭಾಗ್ಯಗಳನ್ನು ಜನರಿಗೆ ಕೊಟ್ಟಿದೆ.ಈಗ ಇದಕ್ಕೆ ಮತ್ತೊಂದು ಭಾಗ್ಯ ಸೇರ್ಪಡೆಯಾಗಿದೆ.
ಪ್ರಗತಿಪರ ಚಿಂತಕೆರೆನಿಸಿಕೊಂಡವರು ಐತಿಹಾಸಿಕ ಸ್ಥಳಗಳ ರಕ್ಷಣೆ, ಅವುಗಳ ನವೀಕರಣಕ್ಕಾಗಿ ಸರಕಾರಕ್ಕೆ ಪತ್ರ ಬರೆಯುವುದನ್ನು ನಾವು ನೋಡಿದ್ದೇವೆ. ಮಾನ ಮುಚ್ಚಲು ಬಾಹುಬಲಿ ಪತ್ರಿಮೆಗೆ ಬಟ್ಟೆ ಹಾಕುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರಕರ್ತರೊಬ್ಬರು ಪತ್ರದ ಮೂಲಕ ವಿಚಿತ್ರ ಮನವಿ ಸಲ್ಲಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ಬಾಲಿವುಡ್ ನಟ ಅಕ್ಷಯ್ ಕುಮಾರ್ ಜೊತೆ ಮೊದಲ ಬಾರಿಗೆ ತಮ್ಮ ವೈಯುಕ್ತಿಕ ಜೀವನ ಅನುಭವಗಳೊಂದಿಗೆ, ತಮ್ಮ ಜೀವನಕ್ಕೆ ಸಂಬಂಧಿಸಿದ ಹಲವಾರು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈವರೆಗೆ ಯಾರಿಗೂ ತಿಳಿದಿರದ ಕೆಲ ಮಾಹಿತಿಗಳನ್ನೂ ಮೋದಿ ನಟ ಅಕ್ಷಯ್ ಜೊತೆಗೆ ಹಂಚಿಕೊಂಡಿದ್ದಾರೆ. 1 ಗಂಟೆ 10 ನಿಮಿಷದ ಈ ಸಂದರ್ಶನದಲ್ಲಿ ಮೋದಿ ಹೇಳಿದ ಕೆಲ ಆಸಕ್ತಿಕರ ವಿಚಾರಗಳು ಇವೆ.ನಿಮಗೆ ಮಾವಿನ ಹಣ್ಣು ಇಷ್ಟವೇ ಎಂದು ಅಕ್ಷಯ್ ಕುಮಾರ್ ಕೇಳಿದ್ದಕ್ಕೆ ನಾನು ಮಾವಿನ ಹಣ್ಣು…
ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಹಾನಿ ತಪ್ಪಿಸುವ ದೃಷ್ಟಿಯಿಂದ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತವಾಗಿರುವ ವಿನೂತನ ಶೈಲಿಯ ಸಿಲಿಂಡರ್ಗಳನ್ನು ‘ಗೋ ಗ್ಯಾಸ್’ ಮಾರುಕಟ್ಟೆಗೆ ಪರಿಚಯಿಸಿದೆ.
ಯಾಕೆಂದ್ರೆ ಇನ್ನು ಮುಂದೆ ಎಲ್ಲಾ ಬಗೆಯ ಚಿನ್ನದ ವ್ಯವಹಾರಗಳಿಗೆ ಪಾನ್ ಕಾರ್ಡ್ ಕಡ್ಡಾಯವಾಗಿದೆ. ಹೌದು, ಎಲ್ಲಾ ರೀತಿಯ ಚಿನ್ನದ ವಹಿವಾಟುಗಳಿಗೆ ಪಾನ್ ಸಂಖ್ಯೆ ನಮೂದಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ.
ಮನುಷ್ಯನ ಉಗುರಿನ ಮೇಲೆ ನಿಂತಿರುವ ಪುಟ್ಟಪಕ್ಷಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದರೊಂದಿಗೆ ಇದು ಜಗತ್ತಿನ ಅತಿ ಚಿಕ್ಕ ಹಕ್ಕಿ ಹಮ್ಮಿಂಗ್ ಬರ್ಡ್ ಎಂದು ಹೇಳಲಾಗಿದೆ. ‘ಬ್ಯಾನ್ ಬಾಯ್ ಸಹೀದ್’ ಎನ್ನುವ ಫೇಸ್ಬುಕ್ ಬಳಕೆದಾರರು ಈ ಫೋಟೋವನ್ನು ಮೊದಲು ಪೋಸ್ಟ್ ಮಾಡಿದ್ದು ಬಂಗಾಳಿ ಭಾಷೆಯಲ್ಲಿ ‘ಜಗತ್ತಿನ ಅತಿ ಚಿಕ್ಕ ಪಕ್ಷಿ ಹಮ್ಮಿಂಗ್ ಬರ್ಡ್. ನಾನು ಮೊದಲ ಬಾರಿಗೆ ನೋಡಿದ್ದು’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ. ಸದ್ಯ ಇದೀಗ ವೈರಲ್ ಆಗುತ್ತಿದ್ದು 15000 ಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ಆದರೆ ನಿಜಕ್ಕೂ ಇದು…