ಸುದ್ದಿ

1200 ಕೋಟಿ ಕೊಡುತ್ತೇನೆಂದರೂ ತನ್ನ ಮಗಳನ್ನು ಯಾರು ಸಹ ಮದುವೆಯಾಗಲು ಮುಂದೆ ಬರುತ್ತಿಲ್ಲ. ಈ ಕೋಟಿ ಅಧಿಪತಿಯ ರೋದನೆ ತೀರುವುದು ಯಾವಾಗ.?

118

ಒಬ್ಬ ತಂದೆ ಮಗಳಿಗೆ ಯಾವ ರೀತಿಯೂ ಕಷ್ಟ ಬರದಂತೆ ನೋಡಿಕೊಳ್ಳುತ್ತಾನೆ. ತಂದೆಗೆ ಮಗಳೇ ಜೀವನ ಸರ್ವಸ್ವ. ತನಗೆ ಎಷ್ಟೇ ಕಷ್ಟ ನೋವುಗಳಿದ್ದರೂ ಕೂಡ, ಅವುಗಳನ್ನು ತೋರಿಸಿಕೊಳ್ಳದೆ ಮನೆಯ ದೇವತೆಯ ರೂಪದಲ್ಲಿ ನೋಡುಕೊಳ್ಳುತ್ತಾನೆ. ಆಕೆಯ ಮದುವೆ ಮಾಡಿ ಒಳ್ಳೆಯ ಕುಟುಂಬಕ್ಕೆ ಸೇರಿಸಲು ದಿನನಿತ್ಯ ಹಗಲು- ರಾತ್ರಿ ಶ್ರಮಿಸುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ತಂದೆ ಮಗಳನ್ನು ಮದುವೆಯಾಗುವವನಿಗೆ 1200 ಕೋಟಿ ನೀಡುತ್ತೇನೆಂದು ಘೋಷಣೆ ಮಾಡಿದರು ಯಾರು ಸಹ ಮದುವೆಯಾಗಲು ಮುಂದೆ ಬರುತ್ತಿಲ್ಲ.!

ಹಾಂಗ್ ಕಾಂಗ್ ನ ಸಿಸೀಲ್ ಚಾವ್ ಅವರು ಬಿಲಿಯನೇಯರ್ ಅಗಿದ್ದು, ಚೀಕ್ ನಾಂಗ್ ಹೋಲ್ಡಿಂಗ್ಸ್ ಲಿಮಿಟೆಡ್ ನ ಮಾಲೀಕರಾಗಿದ್ದಾರೆ. ಸಾವಿರಾರು ಕೋಟಿಯ ಆಸ್ತಿಯನ್ನು ಹೊಂದಿರುವ ಇವರು, ಹಾಂಗ್ ಕಾಂಗ್ ನ ಟಾಪ್ 10 ಶ್ರೀಮಂತರಲ್ಲಿ ಇವರು ಕೂಡ ಒಬ್ಬರು. ಈ ಕೋಟಿ ಅಧಿಪತಿಗೆ ಚಾವ್ ಎಂಬ ಮುದ್ಧಾದ ಮಗಳಿದ್ದಾಳೆ. ಈ ಮಗಳಿಗೆ ಒಳ್ಳೆಯ ಹುಡುಗನನ್ನು ಹಡುಕಿ, ಇಡೀ ಪ್ರಪಂಚವೇ ತಿರುಗಿ ನೋಡುವ ಹಾಗೆ ಮದುವೆ ಮಾಡಬೇಕು ಎಂಬುದು ಸಿಸೀಲ್ ಚಾವ್ ಅವರ ಕನಸಾಗಿತ್ತು.! ಸ್ವರ್ಗ ಲೋಕವನ್ನೆ ಧರೆಗಿಳಿಸುವಂತೆ ಮದುವೆ ಮಾಡಬೇಕೆಂದುಕೊಂಡಿದ್ದ ಸಿಸೀಲ್ ಚಾವ್ ಅವರಿಗೆ ಬಯಸಿದ್ದೆ ಒಂದು ಆಗಿದ್ದೆ ಒಂದು, ಅಚ್ಚರಿ ಸುದ್ಧಿ ಕಾದಿತ್ತು.!

ಅದ್ಧೂರಿಯಾಗಿ ವಿವಾಹ ಮಾಡಬೇಕೆಂದುಕೊಂಡಿದ್ದ ತಂದೆಯ ಬಳಿ ಬಂದ ಗಿಗಿ ಚಾವ್, ಅಪ್ಪ ನನ್ನ ಸಂಗಾತಿಯನ್ನು ನಾನೆ ಹುಡುಕಿಕೊಳ್ಳುತ್ತೇನೆ ನಾನು ಸಲಿಂಗ ಕಾಮಿ ನನಗೆ ಹುಡುಗನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ತಕ್ಷಣ ತಂದೆ ಸಿಸೀಲ್ ಚಾವ್ ತತ್ತರಿಸಿ ಹೋಗುತ್ತಾರೆ. ಈ ವಿಚಾರ ಎಲ್ಲೆಡೆ ಕೂಡ ಹರಡುತ್ತದೆ. ಆದರೆ ಈ ತಂದೆ ನನ್ನ ಮಗಳು ಚೆನ್ನಾಗಿ ಇರಬೇಕು, ಕುಷಿಯಾಗಿರಬೇಕು, ವಿವಾಹ ಮಾಡಬೇಕು ಎಂದು ಆಸೆಯನ್ನು ಹೊಂದಿದ್ದ ಇವರು, ನನ್ನ ಮಗಳನ್ನು ವಿವಾಹವಾಗುವ ವರನಿಗೆ 400 ಕೋಟಿ ಕೊಡುತ್ತೇನೆ ಎಂದು ಘೋಷಣೆ ಮಾಡುತ್ತಾರೆ.

400 ಕೋಟಿ ಕೊಡುತ್ತೇನೆ ಎಂದು ಘೋಷಣೆ ಮಾಡಿದರು ಕೂಡ ಯಾರು ಮದುವೆಯಾಗಲು ಮುಂದೆ ಬರುವುದಿಲ್ಲ. ನಂತರ ತನ್ನ ಮಗಳನ್ನು ವಿವಾಹವಾಗುವ ವರನಿಗೆ ಬಂಪರ್ ಆಫರ್ ನೀಡಿದ ಸಿಸೀಲ್ ಚಾವ್ 1200 ಕೋಟಿ ಕೊಡುತ್ತೇನೆ ಎಂದು ಘೋಷಿಸುತ್ತಾರೆ. ಯಾವುದಾದರು ಹುಡುಗ ತನ್ನ ಮಗಳನ್ನು ಮದುವೆಯಾದರೆ ಆಕೆಯ ಮನಸ್ಸು ಮತ್ತು ಆಲೋಚನೆಗಳು ಬದಲಾಗಿ ಮತ್ತೆ ಹುಡುಗಿಯಂತಾಗುವ ಸಾಧ್ಯತೆ ಇದೆ ಎಂಬುದು ಈ ತಂದೆಯ ಆಶಯ.

ಸಿಸೀಲ್ ಚಾವ್ ಎಷ್ಟೇ ಪ್ರಯತ್ನ ಪಟ್ಟರು ಎಲ್ಲ ವಿಫಲವಾಗುತ್ತಿದೆ. ಮಗಳನ್ನು ಮದುವೆಯಾಗಲು ಯಾರು ಮುಂದೇ ಬಂದಿಲ್ಲ. ಆದರೆ ಮಧ್ಯೆ ಗಿಗಿ ಚಾವ್ ತನ್ನ ತಂದೆಗೆ ಒಂದು ಪತ್ರವನ್ನು ಬರೆಯುತ್ತಾಳೆ. ಆ ಪತ್ರದಲ್ಲಿ ಅಪ್ಪ ನಾನು ಲೆಸ್ಬಿಯನ್ (ನಾನು ಸಲಿಂಗ ಕಾಮಿ) ಅನ್ನುವದನ್ನು ನೀವೂ ಒಪ್ಪಿಕೊಳ್ಳಿ. ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಈ ತಂದೆ ಸಿಸೀಲ್ ತನ್ನ ಮಗಳಿಗೆ ವರವನ್ನು ಹುಡುಕೆ ಹುಡುಕುತ್ತೇನೆಂದು ಹುಡುಕುವ ಕಾರ್ಯವನ್ನು ಮಾತ್ರ ಬಿಟ್ಟಿಲ್ಲ. ವಿಪರ್ಯಾಸವೆನೆಂದರೆ ಈಗಲೂ ಕೂಡ ಇವರು ಆ ಪ್ರಯತ್ನದಲ್ಲೇ ಇದ್ದಾರೆ.!

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜೀವನಶೈಲಿ

    ಈ 5 ತಿಂಡಿ ತಿನಿಸುಗಳನ್ನು ತಿಂದರೆ ಏನಾಗುತ್ತೆ ಗೊತ್ತಾ..?

    ನಾವು ದಿನಾಲೂ ಬಳಸುವ ಕೆಲವು ತಿಂಡಿ ತಿನಿಸುಗಳಿಂದ, ನಮಗೆ ಅರಿವಿಲ್ಲದಂತಯೇ ಕೆಲವೊಂದು ಪ್ರಭಾವಗಳು ನಮ್ಮ ದೇಹದ ಮೇಲೆ ಆಗುತ್ತವೆ.ಅದರಲ್ಲಿ ನಿದ್ದೆಯೂ ಒಂದು. ಹೌದು, ಕೆಲವೊಂದು ತಿಂಡಿಗಳು ನಮಗೆ ಗೊತ್ತಿಲ್ಲದೇ ನಿದ್ದೆ ಬರಿಸುತ್ತವೆ.

  • ಜ್ಯೋತಿಷ್ಯ

    ನಿಮ್ಮ ಉಗುರಿನ ಮೇಲೆ ಅರ್ಧ ಚಂದ್ರಾಕೃತಿ ಇದೆಯೇ?ಇದು ನಿಮ್ಮ ಜೀವನದಲ್ಲಿ ಏನನ್ನು ಸೂಚಿಸುತ್ತೆ ಗೊತ್ತಾ?

    ಮನುಷ್ಯನ ದೇಹದ ರಚನೆ ಆತನ ಭವಿಷ್ಯವನ್ನು ಹೇಳುತ್ತದೆ. ನಮ್ಮ ಕೈ, ಕಾಲು ಸೇರಿದಂತೆ ದೇಹದ ಪ್ರತಿಯೊಂದು ಭಾಗವೂ ನಮ್ಮ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಮ್ಮ ಕೈ, ಕಾಲು, ಮಚ್ಚೆಯನ್ನೇ ನೋಡಿ ಪಂಡಿತರು ನಮ್ಮ ಭವಿಷ್ಯ ಹೇಳ್ತಾರೆ. ಸಾಮಾನ್ಯವಾಗಿ ಮನುಷ್ಯನ ಕೈ, ಕಾಲಿನ ಸೌಂದರ್ಯವನ್ನು ಉಗುರು ಹೆಚ್ಚಿಸುತ್ತದೆ. ಇದೇ ಕಾರಣಕ್ಕೆ ಮಹಿಳೆಯರು ಉಗುರಿನ ಸೌಂದರ್ಯಕ್ಕೆ ಹೆಚ್ಚಿನ ಗಮನ ನೀಡ್ತಾರೆ. ಉಗುರಿಗೆ ಚೆಂದದ ಆಕಾರ ನೀಡಿ, ಬಣ್ಣ ಹಚ್ಚಿಕೊಳ್ತಾರೆ. ಆದ್ರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಗುರಿನ ಬಗ್ಗೆ ಬೇರೆಯದೇ ನಂಬಿಕೆಯಿದೆ….

  • ಉಪಯುಕ್ತ ಮಾಹಿತಿ, ಗ್ಯಾಜೆಟ್

    ಮಿಲಿಯನ್ ಬಳಕೆದಾರರಿಗೆ ಜಿಯೋ ಕ್ರಿಸ್‌ಮಸ್’ಗೆ ನೀಡುತ್ತಿದೆ ಹೊಸ ಸೇವೆ.! ತಿಳಿಯಲು ಈ ಲೇಖನ ಓದಿ…

    ರಿಲಾಯನ್ಸ್ ಮಾಲೀಕತ್ವದ ಜಿಯೋ ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಕೇವಲ ಡೇಟಾ-ಉಚಿತ ಕರೆಗಳ ಸೇವೆಯನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯಲಿಲ್ಲ. ಇದರ ಬದಲಿಗೆ ಹೊಸ ಮಾದರಿಯ ಆಪ್‌ ಸೇವೆಗಳನ್ನು ನೀಡುವ ಮೂಲಕ ಹೊಸ ಹಾದಿಯನ್ನು ಟೆಲಿಕಾಂ ಕಂಪನಿಗಳಿಗೆ ತೋರಿಸಿಕೊಟ್ಟಿತ್ತು.

  • inspirational

    ಮದುವೆಯಾದ ಎರಡು ವಾರದಲ್ಲೇ ಗಂಡ ಬಿಟ್ಟು ಹೋದ್ರು, ದೃತಿಗೆಡದೆ ಐಎಎಸ್ ಅಧಿಕಾರಿಯಾದ ಮಹಿಳೆ!

    ಸಾಧಿಸುವವನಿಗೆ ಛಲ ಹಾಗು ಶ್ರಮ ಇದ್ರೆ ತಮ್ಮ ಗುರು ಮುಟ್ಟದೆ ಇರೋದಿಲ್ಲ ಅನ್ನೋದಕ್ಕೆ ಈ ಮಹಿಳೆ ಒಂದೊಳ್ಳೆ ಉದಾಹರಣೆಯಾಗಿದ್ದಾರೆ, ನಿಜಕ್ಕೂ ಇವರ ಈ ಸಾಧನೆಯ ಹಾದಿಯನ್ನು ತಿಳಿದರೆ ನಾವು ಜೀವನದಲ್ಲಿ ಯಾವುದೇ ಕಷ್ಟಗಳಿಗೆ ನೋವುಗಳಿಗೆ ಕುಗ್ಗದೆ ಏನನ್ನ ಬೇಕಾದರೂ ಸಾಧಿಸಬೇಕು ಅನ್ನೋ ಹಠ ನಿಮ್ಮಲ್ಲಿ ಬೆಳೆಯುತ್ತದೆ. ಅಷ್ಟಕ್ಕೂ ಈ ಮಹಿಳೆಯ ಸಾಧನೆಯ ಹಿಂದಿನ ದಾರಿ ಹೇಗಿತ್ತು ಇವರು ಐಎಎಸ್ ಅಧಿಕಾರಿಯಾಗಲು ಹೇಗೆಲ್ಲ ಶ್ರಮ ಪಟ್ಟಿದ್ದಾರೆ ಅನ್ನೋದ ಅನ್ನೋ ಸ್ಪೋರ್ತಿದಾಯಕ ಮಾತುಗಳಿಗಾಗಿ ಮುಂದೆ ನೋಡಿ. ಹೆಸರು ಕೋಮಲ್ ಗಣಾತ್ರ…

  • ಸುದ್ದಿ

    ವ್ಯಕ್ತಿಯ ಹೊಟ್ಟೆಯಲ್ಲಿದ್ದವು 8 ಚಮಚ, 2 ಸ್ಕ್ರೂ ಡ್ರೈವರ್, 2 ಹಲ್ಲುಜ್ಜುವ ಬ್ರಷ್ , 1 ಚಾಕು, ನಂತರ ಏನಾಯ್ತು..?

    ಮಂಡಿ ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿಯೊಬ್ಬನನ್ನು ಪರೀಕ್ಷಿಸಿದ ವೈದ್ಯರು ಆತನ ಹೊಟ್ಟೆಯಲ್ಲಿರುವ ವಸ್ತುಗಳನ್ನು ಕಂಡು ಬೆಚ್ಚಿ ಬಿದ್ದ ಪ್ರಸಂಗ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. 35 ವರ್ಷದ ವ್ಯಕ್ತಿ ಕಳೆದ ಕೆಲವು ದಿನಗಳಿಂದ ಸಹಿಸಲಾಗದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಮಂಡಿಯಲ್ಲಿರುವ ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರೀ ಸರಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಾಗಿದ್ದ. ಎಕ್ಸ್‌ರೇ ಮಾಡಿ ನೋಡಿದಾಗ ಆತನ ಹೊಟ್ಟೆಯಲ್ಲಿ ಚಮಚ, ಚಾಕು ಸೇರಿದಂತೆ ಏನೇನೋ ಕಂಡಿವೆ. ಗಾಬರಿ ಬಿದ್ದ ವೈದ್ಯರು ತಕ್ಷಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆಪರೇಶನ್ ನಡೆಸಿದಾಗ…

  • ಸಿನಿಮಾ

    ಸ್ಯಾಂಡಲ್ ವುಡ್ ನಟರ ಮನೆಯ ಮೇಲೆ ಐಟಿ ದಾಳಿ…ರೊಚ್ಚಿಗೆದ್ದ ಅಭಿಮಾನಿಗಳು ಮೋದಿಯವರಿಗೆ ಹೇಳಿದ್ದೇನು ಗೊತ್ತೆ?

    ಇಂದು ಮುಂಜಾನೆ ಸ್ಯಾಂಡಲ್ ವುಡ್ ಸ್ಟಾರ್ ನಟರು ಗಳಾದ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ , ಪವರ್ ಪುನೀತ್ ರಾಜಕುಮಾರ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮನೆಯ ಮೇಲೆ ಐಟಿ ದಾಳಿ ನಡೆದಿದೆ. ಅಲ್ಲದೆ ನಿರ್ಮಾಪಕರುಗಳಾದ ಕೆಜಿಎಫ್ ಖ್ಯಾತಿಯ ಸ್ಟಾರ್ ನಿರ್ಮಾಪಕರಾದ ಕಿರಂಗದೂರ್ ವಿಜಯ್, ಮನೋಹರ್, ರಾಕ್ ಲೈನ್ ವೆಂಕಟೇಶ್ ಅವರ ಮನೆಯ ಮೇಲೂ ಸಹ ದಾಳಿ ನಡೆದಿದೆ. ಸಿನಿಮಾ ಕ್ಷೇತ್ರದಲ್ಲಿ ಬ್ಲ್ಯಾಕ್ ಮನಿಯನ್ನು ವೈಟ್ ಮನಿ ಆಗಿ ಬದಲಾವಣೆ…