ಸುದ್ದಿ

132 ಕೋಟಿಮೌಲ್ಯ ಬೆಲೆ ಬಾಳುವ ಈ ನಂಬರ್ ಪ್ಲೇಟನ್ನು ಮಾರಟಕ್ಕೆ ಇಟ್ಟಿದ್ದಾರೆ, ಇಷ್ಟಕ್ಕೂ ಇದರ ವಿಶೇಷತೆಯಾದರು ಏನು?

93

ನಮ್ಮ ದೈನಂದಿನ ದಿನ ಪತ್ರಿಕೆಗಳಲ್ಲಿ ಲಕ್ಷಗಟ್ಟಲೆ ಖರ್ಚು ಮಾಡಿ ಫ್ಯಾನ್ಸಿ ನಂಬರ್‌ಗಳನ್ನು ಖರೀದಿಸುವ ಸುದ್ದಿಗಳನ್ನು ಓದಿರುತ್ತೇವೆ. ಆದರೇ, ಇಲ್ಲೊಬ್ಬ ಉದ್ಯಮಿ ತನ್ನ ದುಬಾರಿ ಸೂಪರ್ ಕಾರಿನ ಫ್ಯಾನ್ಸಿ ನಂಬರ್ ಪ್ಲೇಟ್ ಅನ್ನು ಮಾರಾಟ ಮಾಡಲು ನಿರ್ಧರಿಸಿದ್ದು, ಇದರ ಬೆಲೆಯು ಕೇವಲ 132 ಕೋಟಿ ಎಂದು ಹೇಳಿಕೊಂಡಿದ್ದಾನೆ.ಹೌದು, ಬ್ರಿಟನ್‌ನಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ‘ಎಫ್1’ ನಂಬರ್ ಪ್ಲೇಟ್‌ಗೆ ಇದೀಗ ಭಾರೀ ಬೇಡಿಕೆ ಸೃಷ್ಠಿಯಾಗಿದೆ. ಈ ಹಿಂದೆ 2008ರಲ್ಲಿ ಕೇವಲ 4.5 ಕೋಟಿ ಬೆಲೆ ಹೊಂದಿದ್ದ ಎಫ್1 ನಂಬರ್ ಪ್ಲೇಟ್‌ಗಳು ಇದೀಗ 132 ಕೋಟಿ ಮೌಲ್ಯ ಹೊಂದಿದ್ದು, ಆಟೋ ಮೊಬೈಲ್ ಉದ್ಯಮದಲ್ಲೇ ಹೊಸ ಸಂಚಲನ ಸೃಷ್ಠಿಸಿದೆ.

2008ರಿಂದ ಎಫ್1 ನಂಬರ್ ಪ್ಲೇಟ್ ಮಾಲೀಕನಾಗಿರುವ ಖಾನ್ ಡಿಸೈನ್ ಮಾಲೀಕ ಅಫ್ಜಲ್ ಖಾನ್ ಇದೀಗ ಅದೇ ನಂಬರ್ ಅನ್ನು ಮಾರಾಟ ಮಾಡುತ್ತಿದ್ದು, ಫ್ಯಾನ್ಸಿ ನಂಬರ್ ಪ್ಲೇಟ್‌ನ ಬೆಲೆಯನ್ನು 132 ಕೋಟಿಗೆ ನಿಗದಿಪಡಿಸಿದ್ದಾನೆ.
F1 ಎಂಬುದು ಖಾನ್ ಅವರ ಫೇವರಿಟ್ ನಾವೆಲ್ಟಿ ಪ್ಲೇಟ್ ನಂಬರ್ ಆಗಿದ್ದು, ಇದು 109 ವರ್ಷಗಳ ಇತಿಹಾಸವನ್ನು ಹೊಂದಿದೆ. 2008ರಲ್ಲಿ ಖಾನ್ ಅವರು 4,40,000 ಬ್ರಿಟಿಷ್ ಪೌಂಡ್ ನೀಡಿ ( ಅಂದಾಜು 4.5 ಕೋಟಿ ರು.) ಖರೀದಿಸಿದ್ದರು.

ಅಂದರೆ 10 ವರ್ಷದೊಳಗೆ ‘F1’ ನಾವೆಲ್ಟಿ ಪ್ಲೇಟ್ ಮೌಲ್ಯವು ಶೇ.33 ಪಟ್ಟು ದುಪ್ಪಟ್ಟುಗೊಂಡಿದೆ. ಈ ಎಫ್1 ನಂಬರ್ ಪ್ಲೇಟ್ ಅತಿ ದುಬಾರಿ ಬುಕಾಟಿ ವೆರೊನ್ ಹಾಗೂ ಮರ್ಸಿಡಿಸ್ ಬೆಂಝ್ ಎಸ್‌ಎಲ್‌ಎರ್ ಮೆಕ್‌ಲ್ಯಾರೆನ್‌ನಲ್ಲಿ ಆಳವಡಿಸಲಾಗಿದೆ. ಇದರ ಜೊತೆಗೆ ಖಾನ್ ಅವರು ‘4HRH’ ಮತ್ತು ‘NO1’ ನಂಬರ್‌ನ ಹೆಮ್ಮೆಯ ಮಾಲೀಕರೂ ಕೂಡಾ ಆಗಿದ್ದಾರೆ.ಅಂದಹಾಗೆ ಇದು ಮೊದಲ ಬಾರಿಯೇನಲ್ಲ. ಇಂತಹದ್ದೆ ಘಟನೆ ಈ ಹಿಂದೆ ಸಯೀದ್ ಖೋರಿ ಎಂಬ ಅಬುದಾಬಿ ಉದ್ಯಮಿ ಯುನೈಟೈಡ್ ಅರಬ್ ಎಮಿರೇಟ್ಸ್‌‌ಗೆ 70 ಕೋಟಿ ನೀಡಿ ರುಪಾಯಿ ನೀಡಿ ‘1’ ಫ್ಯಾನ್ಸಿ ನಂಬರ್ ಖರೀದಿಸಿದ್ದರು. ಇದುವರೆಗೂ ಇದೇ ಜಗತ್ತಿನ ಅತಿ ದುಬಾರಿ ನಂಬರ್ ಪ್ಲೇಟ್ ಖರೀದಿಯಾಗಿತ್ತು.

ಆದರೆ ಇದನ್ನು ಹಿಂದಿಕ್ಕಿಲಿರುವ ಬ್ರಿಟನ್ ಜನಪ್ರಿಯ ಎಫ್1 ನಂಬರ್ ಪ್ಲೇಟ್ ಇದೀಗ 132 ಕೋಟಿ ಆರಂಭಿಕ ಬೆಲೆ ಹೊಂದಿದ್ದು, ಇದು ಹರಾಜು ವೇಳೆ ಇನ್ನು ಹೆಚ್ಚಾಗುವ ಸಾಧ್ಯತೆಗಳು ಕೂಡಾ ಇವೆ. ಇನ್ನು ಹೊಸ ಫ್ಯಾನ್ಸಿ ನಂಬರ್ ಖರೀದಿಸುವ ಕಾರು ಮಾಲೀಕನು ಮುಂದಿನ ಐದು ವರ್ಷಗಳ ಅವಧಿಗೆ ಆ ನಂಬರ್ ಮೇಲೆ ಅವರು ಅಧಿಕಾರ ಹೊಂದಿರುತ್ತಾರೆ.ತದನಂತರ ಅವರು ಹೆಚ್ಚುವರಿ ಮೊತ್ತಕ್ಕೆ ಮಾರಾಟ ಮಾಡಬಹುದಾಗಿದ್ದು, ಇಲ್ಲವೇ ಹೆಚ್ಚುವರಿ ಮೊತ್ತ ಪಾವತಿಸಿ ಅದೇ ನಂಬರ್ ಪ್ಲೇಟ್ ಅನ್ನು ಮುಂದುವರಿಸುವ ಅವಕಾಶ ಕೂಡಾ ಇರುತ್ತದೆ. ಆದ್ರೆ ಅದೇನೇ ಇರಲಿ ಒಂದು ಫ್ಯಾನ್ಸಿ ನಂಬರ್ ಪ್ಲೇಟ್‌ಗಾಗಿ ನೂರಾರು ಕೋಟಿ ವ್ಯಯ ಮಾಡುವ ಜನ ಇದ್ದಾರೆ ಅಲ್ಲಾ ಅನ್ನೋದೆ ವಿಚಿತ್ರ ಅನಿಸುತ್ತೆ. ಆದ್ರೂ ಇದು ಸತ್ಯ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ವೆಂಕಟೇಶ್ವರ ಸ್ವಾಮಿ ಕೃಪೆಯಿಂದ ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(6 ಫೆಬ್ರವರಿ, 2019) ಹಣದ ಪರಿಸ್ಥಿತಿ ದಿನದಲ್ಲಿ ನಂತರ ಸುಧಾರಿಸುತ್ತದೆ. ಸಂಜೆ ಸ್ನೇಹಿತರೊಡನೆ ಹೋಗಿ, ಇದುತುಂಬ ಒಳ್ಳೆಯದನ್ನು…

  • ಆರೋಗ್ಯ

    ಅತಿಯಾದರೆ ಅಮೃತವೂ ವಿಷ, ಹೆಚ್ಚು ನಿಂಬೆರಸ ಸೇವನೆ ಆರೋಗ್ಯಕ್ಕೆ ಹಾನಿಕರ.

    ನಿಂಬೆಹಣ್ಣು ಆರೋಗ್ಯಕ್ಕೆ ಒಳ್ಳೆದು ಎನ್ನುವ ವಿಚಾರ ಸಾಮಾನ್ಯವಾಗಿ ಎಲ್ಲರಿಗು ತಿಳಿದಿದೆ. ಆದ್ರೆ ಅತಿಯಾದರೆ ಅಮೃತವೂ ವಿಷ ಎನ್ನುವ ಹಾಗೆ ಒಳ್ಳೆದು ಎಂದು ಹೆಚ್ಚು ನಿಂಬೆರಸ ಸೇವಿಸಿದರೆ ಆರೋಗ್ಯ ಹಾನಿಕರ ಎನ್ನುವ ಬಗ್ಗೆ ಹಲವರಿಗೆ ತಿಳಿದಿಲ್ಲ. ಹೌದು. ಅನೇಕ ಮನೆಮದ್ದುಗಳಲ್ಲಿ ನಿಂಬೆರಸ ಬಳಸಲಾಗುತ್ತದೆ. ಬೆಳಗ್ಗೆ ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಹಾಕಿ ಕುಡಿದರೆ ದೇಹದ ಕೊಬ್ಬು ಕರಗುವುದರ ಜೊತೆಗೆ ಕ್ಯಾನ್ಸರ್ ತಡೆಗಟ್ಟಬಹುದೆಂದು ಅಧ್ಯಯನಗಳು ಹೇಳಿವೆ. ಇದರ ಜೊತೆಗೆ ಅತಿಯಾಗಿ ನಿಂಬೆರಸ ಸೇವಿಸಿದರೆ ಎಷ್ಟು ಅಪಾಯಕಾರಿ ಎನ್ನುವುದನ್ನ ಕೂಡ ಅಧ್ಯಯನಗಳೇ…

  • ವಿಚಿತ್ರ ಆದರೂ ಸತ್ಯ

    ಈ ಮಹಿಳೆಯ ಕಾಲಿನಿಂದ ಸೂಜಿ, ಸಿರಿಂಜಿನ ಮುಳ್ಳು, ಪಿನ್ನುಗಳು ಹೊರಬರುತ್ತಿವೆ..!ತಿಳಿಯಲು ಈ ಲೇಖನ ಓದಿ…

    ಭಾರತದಲ್ಲಿ ಓರ್ವ ಮಹಿಳೆ ತನ್ನ ಕಾಲಿನಿಂದ ಸೂಜಿಗಳು, ಸಿರಿಂಜಿನ ಮುಳ್ಳುಗಳು ಹಾಗೂ ಪಿನ್ನುಗಳು ನಿಯಮಿತವಾಗಿ ಹೊರಗೆ ಬರುತ್ತಿವೆ ಎಂದು ಹೇಳಿಕೊಂಡಿದ್ದಾಳೆ. ಈ ತೊಂದರೆ ತನಗೆ ಕೆಲವು ಕಾಲದಿಂದಲೂ ಇದ್ದು ತುಂಬಾ ತೊಂದರೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾಳೆ.

  • ಆರೋಗ್ಯ

    ರಾತ್ರಿ ಮಲಗುವ ಮೊದಲು ಬೆಲ್ಲ ತಿಂದರೆ ಏನಾಗುತ್ತದೆ ಗೊತ್ತಾ, ಬಹಳಷ್ಟು ಜನರಿಗೆ ಗೊತ್ತಿಲ್ಲ ಬೆಲ್ಲದ ಮಹತ್ವ.

    ಹಳೆಯ ಕಾಲದಲ್ಲಿ ಜನರು ಬೆಲ್ಲವನ್ನು ಮಾತ್ರ ಸಿಹಿ ವಸ್ತುವಾಗಿ ಹೆಚ್ಚು ಸೇವಿಸುತ್ತಿದ್ದರು ಆದರೆ ಕಾಲ ಕಳೆದಂತೆ ಇತ್ತೀಚಿನ ದಿನಗಳಲ್ಲಿ ಜನರು ಸಿಹಿ ಎಂದರೆ ಸಕ್ಕರೆಯ ಮೊರೆ ಹೋಗುತ್ತಾರೆ, ಸಕ್ಕರೆ ಸಿಹಿಯಾಗಿ ಹೆಚ್ಚು ಪ್ರಚಾರ ಪಡೆದಿದೆ. ನಮ್ಮ ಆಯುರ್ವೇದದಲ್ಲಿ ಉತ್ತಮ ಆಹಾರವು ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಬಹಳಷ್ಟು ಜನರಿಗೆ ಗೊತ್ತಿರಲು ಸಾಧ್ಯವಿಲ್ಲ ಬೆಲ್ಲವನ್ನು ತಿನ್ನುವುದರಿಂದ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ 12, ಆಂಟಿಆಕ್ಸಿಡೆಂಟ್ಸ್, ಕ್ಯಾಲ್ಸಿಯಂ ಮತ್ತು ಫೈಬರ್ ನಂತಹ ಸಾಕಷ್ಟು ಪೋಷಕಾಂಶಗಳು ದೊರೆಯುತ್ತವೆ….

  • ಆರೋಗ್ಯ, ಉಪಯುಕ್ತ ಮಾಹಿತಿ

    ‘ಒಣ ದ್ರಾಕ್ಷಿ’ಯಲ್ಲಿರುವ ಆರೋಗ್ಯಕಾರಿ ಗುಣಗಳ ಬಗ್ಗೆ ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ಒಣದ್ರಾಕ್ಷಿ ಎಂದರೆ ಒಣಗಿಸಿದ ದ್ರಾಕ್ಷಿ. ಒಣದ್ರಾಕ್ಷಿಯನ್ನು ವಿಶ್ವದ ಹಲವು ಪ್ರದೇಶಗಳಲ್ಲಿ ಉತ್ಪಾದಿಸಲಾಗುತ್ತದೆ ಮತ್ತು ಇದನ್ನು ಹಸಿಯಾಗಿ ತಿನ್ನಬಹುದು ಅಥವಾ ಅಡುಗೆ, ಬೇಕಿಂಗ್ ಮತ್ತು ಮದ್ಯ ತಯಾರಿಕೆಯಲ್ಲಿ ಬಳಸಬಹುದು.

  • ಸುದ್ದಿ

    ಭಾರತೀಯ ಸೇನೆಗಾಗಿ ವಿಶೇಷವಾಗಿ ತಯಾರಾದ ಈ ಬೈಕ್ ವಿಶೇಷತೆ ಏನು ಗೊತ್ತಾ?

    ಭಾರತೀಯ ಸೇನಗಾಗಿ ಟಾಟಾ ಮೋಟಾರ್ಸ್ ತಮ್ಮ ಸಫಾರಿ ಸ್ಟೋರ್ಮ್ ಕಾರನ್ನು ತಯಾರಿಸಿ ನೀಡುತ್ತಿರುವ ಬಗ್ಗೆ ನಾವು ಈಗಾಗಲೇ ತಿಳಿದಿದ್ದೇವೆ. ಆದ್ರೆ ಸೇನೆಯಲ್ಲಿ ಬಳಸಲಾಗುತ್ತಿರವ ದ್ವಿಚಕ್ರ ವಾಹನಗಳು ಕಡಿಮೆ ಶಕ್ತಿಶಾಲಿಯಾದ ಕಾರಣ ಚತ್ತೀಸ್‍ಗಢ್‍ನ ಯುವಕನೊಬ್ಬ 800ಸಿಸಿ ಸಾಮರ್ಥ್ಯವಿರುವ ವಿಶೇಷ ಬೈಕ್ ಒಂದನ್ನ ತಯಾರು ಮಾಡಿದ್ದಾನೆ.ಪ್ರಸ್ತುತ ಭಾರತೀಯ ಸೇನೆಯಲ್ಲಿ ರಾಯಲ್ ಎನ್‍ಫೀಲ್ಡ್ ಸಂಸ್ಥೆಯ 350ಸಿಸಿ ಮತ್ತು 500ಸಿಸಿ ಬೈಕ್‍ಗಳನ್ನು ಬಳಸಲಾಗುತ್ತಿದ್ದು, ಅಮೆರಿಕನ್ ಸೇನೆಯು ಹೆಚ್ಚು ಸಾಮರ್ಥ್ಯವಿರುವ ಯುನೈಟೆಡ್ ಮೋಟಾರ್ಸ್‍ನ ಮತ್ತು ಹಾರ್ಲೇ ಡೇವಿಡ್ಸನ್ ಸಂಸ್ಥೆಯ ಅಧಿಕ ಸಾಮರ್ಥ್ಯವಿರುವ ಬೈಕ್‍ಗಳನ್ನು ಬಳಸುತ್ತಿದ್ದಾರೆ….