ಆರೋಗ್ಯ

ಕ್ಯಾರೆಟ್ ನಲ್ಲಿದೆ ಅದ್ಬುತ ಅರೋಗ್ಯಕರ ಅಂಶಗಳು.

31

ಕ್ಯಾರೆಟ್ಟುಗಳಲ್ಲಿ ಕ್ಯಾಲೋರಿ ಪ್ರೋಟೀನ್ ಹಾಗೂ ಕೊಬ್ಬಿನ ಅಂಶಗಳು ತುಂಬ ಕಡಿಮೆ ಇದ್ದು, ಸುಮಾರು 86-95 ಶೇಖಡಾದಷ್ಟು ನೀರಿನ ಅಂಶವನ್ನು ಒಳಗೊಂಡಿದೆ. ಒಂದು ಮಧ್ಯಮ ಗಾತ್ರದ ಕ್ಯಾರೆಟ್ ಸೇವಿಸುವುದರಿಂದ ಕೇವಲ ಇಪ್ಪತ್ತೈದು ಕ್ಯಾಲೋರಿಗಳು ಹಾಗೂ ಕೇವಲ ನಾಲ್ಕು ಗ್ರಾಂ ನಷ್ಟು ಜೀರ್ಣವಾಗುವ ಕಾರ್ಬೋಹೈಡ್ರೇಟುಗಳು ಲಭ್ಯವಾಗುತ್ತವೆ. ವಿವಿಧ ಪ್ರೋಟಿನ್, ವಿಟಮಿನ್ ಗಳನ್ನು ಹೇರಳವಾಗಿ ಹೊಂದಿರುವ ಕ್ಯಾರೆಟ್ ರೋಗ ನಿರೋಧಕ ಶಕ್ತಿಯನ್ನು ಕೂಡ ಹೊಂದಿದೆ. ಇದು ತ್ವಚೆಗೆ ಸಹಕಾರಿಯಾಗಿದ್ದು, ಹಲವಾರು ರೋಗಗಳನ್ನು ದೂರವಿಡುತ್ತದೆ.ರಕ್ತದ ಶುದ್ಧತೆಗೆ ಹಾಗೂ ಹರಿಯುವಿಕೆಗೆ ನೆರವಾಗುವ ಅಲ್ಕಾಲೈನ್ ಅಂಶಗಳನ್ನು ಕ್ಯಾರೆಟ್ ಯಥೇಚ್ಚವಾಗಿ ಹೊಂದಿದೆ. ಇದರಲ್ಲಿ ಬೀಟಾ-ಕ್ಯಾರೋಟಿನ್, ವಿಟಮಿನ್ ಎ, ಖನಿಜಾಂಶಗಳು ಮತ್ತು ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಿದ್ದು, ಕ್ಯಾರೆಟ್ ತಿನ್ನುವುದರಿಂದ ನಮ್ಮ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ.

ಇದರಲ್ಲಿರುವ ವಿಟಮಿನ್ ಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ , ಅಲ್ಲದೇ ಇದರಲ್ಲಿರುವ ಬಂಧಿಸುವ ಅಂಗಾಂಶದ ಅಂಶವು ಮೂಳೆ, ಸ್ನಾಯು , ಹಲ್ಲು ಹಾಗೂ ಒಸಡುಗಳನ್ನೂ ದೃಢಗೊಳಿಸುತ್ತದೆ. ಕ್ಯಾರೆಟ್ ಅನ್ನು ಹಸಿಯಾಗಿಯೂ, ಬೇಯಿಸಿಯೂ ಸೇವಿಸಬಹುದು. ಚಿಕ್ಕದಾಗಿ ತುರಿದು ಸಾಲಾಡ್ ನಲ್ಲಿ, ಬಟಾಣಿ, ಆಲುಗಡ್ಡೆ ಮೊದಲಾದವುಗಳ ಜೊತೆಗೆ ವಿವಿಧ ಬಗೆಯ ಖಾದ್ಯಗಳ ರೂಪದಲ್ಲಿ ಸೇವಿಸಬಹುದು. ಕ್ಯಾರೆಟ್ಟುಗಳ ರಸವನ್ನು ಕೆಲವಾರು ವ್ಯಾಧಿಗಳಿಗೆ ಔಷಧಿಯ ರೂಪದಲ್ಲಿ ಸೇವಿಸುತ್ತಾರೆ.

ಕ್ಯಾರೆಟ್ಟುಗಳಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಸಹಾ ಇದೆ. ಇವುಗಳು ಮಲಬದ್ದತೆಯಾಗದಂತೆ ನೆರವಾಗುವುದಲ್ಲದೆ ಕರುಳುಗಳಲ್ಲಿ ಆಹಾರದ ಚಲನೆ ಸುಲಭವಾಗಿಸಿ ಆರೋಗ್ಯ ವೃದ್ದಿಸುತ್ತದೆ. ಕ್ಯಾರೆಟ್ಟುಗಳಲ್ಲಿ ಹೆಚ್ಚಿನ ಪ್ರಮಾಣದ ಖನಿಜಗಳಿವೆ ನಿಮ್ಮ ಆರೋಗ್ಯಕ್ಕೆ ಅಗತ್ಯವಾದ ಎಲ್ಲಾ ಖನಿಜಗಳನ್ನು ಕ್ಯಾರೆಟ್ ನೀಡಲು ಶಕ್ತವಾಗಿದ್ದು ಶ್ವಾಸಕೋಶ ಹಾಗೂ ಬಾಯಿಯ ಕುಳಿಗಳ ಕ್ಯಾನ್ಸರ್ ನಿಂದಲೂ ಸಹ ರಕ್ಷಿಸುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ