ಆರೋಗ್ಯ

9 ಕ್ಯಾನ್ಸರ್‌ ಔಷಧಗಳ ಬೆಲೆ ಇಳಿಕೆ

37

ಮಾರ್ಚ್‌ನಲ್ಲಿ ಸುಮಾರು 380 ಔಷಧಗಳ ದರಗಳನ್ನು ಸರಕಾರ ಕಡಿತಗೊಳಿಸಿತ್ತು.ಈ ಮೂಲಕ ಇದುವರೆಗೂ ಸುಮಾರು 1000 ಕ್ಯಾನ್ಸರ್‌ ಚಿಕಿತ್ಸೆ ಔಷಧಗಳ ದರವನ್ನು ಸರಕಾರ ಇಳಿಸಿದೆ ಎಂದು ತಿಳಿದುಬಂದಿದೆ. ಕಳೆದ ಫೆಬ್ರವರಿಯಲ್ಲಿ ಸರಕಾರ ಸುಮಾರು 42 ಕ್ಯಾನ್ಸರ್‌ ಔಷಧಗಳ ದರವನ್ನು ಶೇ. 30 ರಷ್ಟು ಇಳಿಸಿತ್ತು. ಇದರಿಂದ ಸುಮಾರು 355 ಬ್ರ್ಯಾಂಡ್‌ನ ಔಷಧಗಳ ಬೆಲೆಯಲ್ಲಿ ಕಡಿತವಾಗಿತ್ತು.

ಕ್ಯಾನ್ಸರ್‌ ಚಿಕಿತ್ಸೆಗೆ ಸಂಬಂಧಿಸಿದ ಕೆಲವು ಔಷಧಗಳ ಬೆಲೆಯನ್ನು ರಾಷ್ಟ್ರೀಯ ಔಷಧಗಳ ಬೆಲೆ ನಿಯಂತ್ರಣ ಆಯೋಗ (ಎನ್‌ಪಿಪಿಎ) ಶೇ. 60ರಷ್ಟು ಇಳಿಕೆ ಮಾಡಿದೆ. ಎರ್ಲೊಟಿನಾಬ್‌, ಪೆಮಿಟ್ರೆಕ್ಸಿಡ್‌, ಎಪಿರುಬಿಸಿಯನ್‌, ಲಿಯುಪ್ರೊಲೈಡ್‌, ಎವೆರೊಲಿಮಸ್‌ ಸೇರಿದಂತೆ 9 ನಾನ್‌ ಶೆಡ್ಯೂಲ್ಡ್‌ ಕ್ಯಾನ್ಸರ್‌ ನಿರೋಧಕ ಔಷಧಗಳ ದರವನ್ನು ಶೇ. 30 ರಿಂದ 60 ರಷ್ಟು ಕಡಿತಗೊಳಿಸಲಾಗಿದೆ ಎಂದು ಎನ್‌ಪಿಪಿಎ ಹೇಳಿದೆ. ಪ್ರೊಸ್ಪ್ರೇಟ್‌ ಮತ್ತು ಬ್ರೆಸ್ಟ್‌ ಕ್ಯಾನ್ಸರ್‌ ಚಿಕಿತ್ಸೆಗೆ ಸಂಬಂಧಿಸಿದ ಔಷಧಗಳು ಇವಾಗಿವೆ.

ಮಾರ್ಚ್‌ನಲ್ಲಿ ಸುಮಾರು 380 ಔಷಧಗಳ ದರಗಳನ್ನು ಸರಕಾರ ಕಡಿತಗೊಳಿಸಿತ್ತು.ಈ ಮೂಲಕ ಇದುವರೆಗೂ ಸುಮಾರು 1000 ಕ್ಯಾನ್ಸರ್‌ ಚಿಕಿತ್ಸೆ ಔಷಧಗಳ ದರವನ್ನು ಸರಕಾರ ಇಳಿಸಿದೆ ಎಂದು ತಿಳಿದುಬಂದಿದೆ. ಕಳೆದ ಫೆಬ್ರವರಿಯಲ್ಲಿ ಸರಕಾರ ಸುಮಾರು 42 ಕ್ಯಾನ್ಸರ್‌ ಔಷಧಗಳ ದರವನ್ನು ಶೇ. 30 ರಷ್ಟು ಇಳಿಸಿತ್ತು. ಇದರಿಂದ ಸುಮಾರು 355 ಬ್ರ್ಯಾಂಡ್‌ನ ಔಷಧಗಳ ಬೆಲೆಯಲ್ಲಿ ಕಡಿತವಾಗಿತ್ತು. ಔಷಧ ಮಾರಾಟ ಲಾಭವನ್ನು ಶೇ. 30ಕ್ಕೆ ಮಿತಿಗೊಳಿಸುವ ಸೂತ್ರವನ್ನು ಬೆಲೆ ಕಡಿತಕ್ಕಾಗಿ ಎನ್‌ಪಿಪಿಎ ಅನುಸರಿಸುತ್ತಿದೆ ಎಂದು ವರದಿಯಾಗಿದೆ.


ಭಾರತದಲ್ಲಿ ಪ್ರತಿ ವರ್ಷ 11.50 ಲಕ್ಷ ಮಂದಿ ಹೊಸದಾಗಿ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ ಎಂದು ಇಂಡಿಯಾ ಅಗೆನೆಸ್ಟ್‌ ಕ್ಯಾನ್ಸರ್‌ ಎಂಬ ಸಂಸ್ಥೆಯ ವರದಿ ತಿಳಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ