ಸುದ್ದಿ

ಕಾಲ್​ ರಿಸೀವ್​ ಮಾಡಿ, ಮಾಡದೇ ಇರಿ ರಿಂಗ್ ಆಗುವುದು ಮಾತ್ರ 30 ಸೆಕೆಂಡ್ ಅಷ್ಟೇ,,.!

54

ಮೊಬೈಲ್​ ಫೋನ್​ ಬಳಕೆದಾರರು ತಮ್ಮ ಮೊಬೈಲ್​ಗೆ ಬರುವ ಕರೆಯನ್ನು ಸ್ವೀಕರಿಸಲಿ ಅಥವಾ ಸ್ವೀಕರಿಸದಿರಲಿ. ಇನ್ಮುಂದೆ ಕೇವಲ 30 ಸೆಕೆಂಡ್​ ರಿಂಗಣಿಸಲಿದೆ!ಅಂತೆಯೇ ಲ್ಯಾಂಡ್​ಲೈನ್​ ಫೋನ್​ಗಳು 60 ಸೆಕೆಂಡ್​ ರಿಂಗಣಿಸಲಿವೆ!

ಅರೆ, ಇದೇನಿದು ಎಂದು ಹುಬ್ಬೇರಿಸಬೇಡಿ.ಮೊಬೈಲ್​ ಫೋನ್​ಗಳ ರಿಂಗಣವನ್ನು30 ಸೆಕೆಂಡ್​ಗಳಿಗೆ ಮತ್ತು ಲ್ಯಾಂಡ್​ಲೈನ್​ ಫೋನ್​ಗಳ ರಿಂಗಣವನ್ನು 60 ಸೆಕೆಂಡ್​ಗಳಿಗೆ ಸೀಮಿತಗೊಳಿಸಿ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್​) ಆದೇಶ ಹೊರಡಿಸಿದೆ.

ಒಳ ಬರುವ ಕರೆಗಳ ರಿಂಗಣ ಸಮಯವನ್ನು ಸೀಮಿತಗೊಳಿಸುವ ನಿಯಮದ ತಿದ್ದುಪಡಿಯಿಂದಾಗಿ ಮೊಬೈಲ್​ಫೋನ್​ ಮತ್ತು ಲ್ಯಾಂಡ್​ಲೈನ್​ ಗ್ರಾಹಕರಿಗೆ ನೀಡಲಾಗುವ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸಲು ಅನುಕೂಲವಾಗಲಿದೆ ಎಂದು ಟ್ರಾಯ್​ ಹೇಳಿದೆ.

ಕರೆ ರಿಂಗಣ ಸಮಯದ ವಿಷಯವಾಗಿ ರಿಲಯನ್ಸ್​ ಜಿಯೋ ಮತ್ತು ಭಾರ್ತಿ ಏರ್​ಟೆಲ್​ ನಡುವೆ ಜಟಾಪಟಿ ಏರ್ಪಟ್ಟಿತ್ತು. ಮೊಬೈಲ್​ಫೋನ್​ಗಳ ರಿಂಗಣ ಸಮಯವನ್ನು 45 ಸೆಕೆಂಡ್​ಗಳಿಗೆ ನಿಗದಿಪಡಿಸಬೇಕು.ಆ ಮೂಲಕ ಕರೆಸ್ವೀಕರಿಸುತ್ತಿರುವ ನೆಟ್​ವರ್ಕ್​ಗೆ ಕರೆ ಸ್ವೀಕಾರಕ್ಕೆ ಸಾಕಷ್ಟು ಸಮಯಾವಕಾಶ ನೀಡಬೇಕುಎಂದು ಭಾರ್ತಿ ಏರ್​ಟೆಲ್ ​ವಾದಿಸಿತ್ತು. ಈ ಅವಧಿಯನ್ನು 20ರಿಂದ25 ಸೆಕೆಂಡ್​ಗೆ ಸೀಮಿತಗೊಳಿಸಬೇಕು ಎಂದು ರಿಲಯನ್ಸ್​ ಜಿಯೋ ಪ್ರತಿಪಾದಿಸಿತ್ತು. ಆದರೆ  ವೊಡೋಫೋನ್​ ಐಡಿಯಾ ಮಾತ್ರ ರಿಂಗಣದ ಸಮಯವನ್ನು 30 ಸೆಕೆಂಡ್​ಗೆ ಸೀಮಿತಗೊಳಿಸುವಂತೆ ಮನವಿ ಮಾಡಿಕೊಂಡಿತ್ತು. 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    30 ಸೆಕೆಂಡಿಗೆ ಮೊಬೈಲ್ ಫುಲ್ ಚಾರ್ಜ್ ಆಗುವ ಡಿವೈಸ್ ಕಂಡುಹಿಡಿದ ಭಾರತದ ಹುಡುಗಿ, ದೊಡ್ಡ ದೊಡ್ಡ ಕಂಪನಿಗಳು ಶಾಕ್.

    ನಮ್ಮ ಬಳಿ ಹಣ ಇದ್ದರೆ ಅದನ್ನ ಯಾರು ಬೇಕಾದರೂ ಕದ್ದುಕೊಂಡು ಹೋಗಬಹುದು ಆದರೆ ನಮ್ಮ ಬಳಿ ಇರುವ ಬುದ್ದಿವಂತಿಕೆಯನ್ನ ಪ್ರಪಂಚದ ಯಾವ ಶಕ್ತಿಯಿಂದ ಕೂಡ ಕದ್ದುಕೊಂಡು ಹೋಗಲು ಸಾಧ್ಯವಿಲ್ಲ. ನಾವು ನಮ್ಮ ಬುದ್ಧಿಶಕ್ತಿಯಿಂದ ಇಡೀ ಪ್ರಪಂಚವನ್ನ ಆಳಬಹುದು, ತನ್ನ ಬುದ್ದಿಶಕ್ತಿಯಿಯನ್ನ ಬಳಸಿಕೊಂಡ ಈ ಭಾರತದ ಹುಡುಗಿ ಇಡೀ ಪ್ರಪಂಚವೇ ತನ್ನ ಕಡೆ ತಿರುಗಿ ನೋಡುವಂತೆ ಮಾಡಿದ್ದಾಳೆ. ಇನ್ನು ಈಕೆ ಮಾಡಿದ ಕೆಲಸಕ್ಕೆ ದೊಡ್ಡ ದೊಡ್ಡ ಕಂಪನಿಗಳು ಶಾಕ್ ಆಗಿದ್ದು ಈಕೆಯನ್ನ ತಮ್ಮ ಕಂಪನಿಗೆ ಸೇರಿಸಿಕೊಳ್ಳಲು ದೊಡ್ಡ ದೊಡ್ಡ…

  • ಸುದ್ದಿ

    ನಾಳೆ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ…..!

    ಏಪ್ರಿಲ್‍ನಲ್ಲಿ ನಡೆದಿದ್ದ 2019 ಸಿಇಟಿ(ಸಾಮಾನ್ಯ ಪ್ರವೇಶ ಪರೀಕ್ಷೆ) ಫಲಿತಾಂಶ ಶನಿವಾರ ಬೆಳಗ್ಗೆ 11 ಗಂಟೆಗೆ ಪ್ರಕಟವಾಗಲಿದೆ. ಶನಿವಾರ ಬೆಳಗ್ಗೆ 11 ಗಂಟೆಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡರಿಂದ ಸುದ್ದಿಗೋಷ್ಟಿ ನಡೆಯಲಿದ್ದು, ಈ ವೇಳೆ ಸಿಇಟಿ ಫಲಿತಾಂಶವನ್ನು ಪ್ರಕಟಗೊಳಿಸಲಾಗುತ್ತದೆ. ಮಧ್ಯಾಹ್ನ 1 ಗಂಟೆಯ ನಂತರ ಕೆಇಎ ವೆಬ್ ಸೈಟ್‍ನಲ್ಲಿ ಫಲಿತಾಂಶ ಪ್ರಕಟವಾಗಲಿದೆ. ಎ. 29 ಹಾಗೂ 30ರಂದು ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯಲು ಮುಂದಾದ ವಿದ್ಯಾರ್ಥಿಗಳಿಗೆ ಸಿಇಟಿ ಪರಿಕ್ಷೆಯನ್ನು ನಡೆಸಲಾಗಿತ್ತು. ಒಟ್ಟು 1,94,311 ಮಂದಿ ವಿದ್ಯಾರ್ಥಿಗಳು ನೋಂದಣಿ…

  • ದೇವರು-ಧರ್ಮ

    ಶಾಸ್ತ್ರಗಳ ಪ್ರಕಾರ ಒಂದು ಸಣ್ಣ ಅಡಿಕೆಯಿಂದ ನೀವು ಸುಲಭವಾಗಿ ಶ್ರೀಮಂತರಾಗಬಹುದು..!ತಿಳಿಯಲು ಈ ಲೇಖನ ಈ ಲೇಖನ ಓದಿ..

    ಪೂಜೆಯಲ್ಲಿ ದೀಪ, ಧೂಪದ ಜೊತೆ ಅಡಿಕೆಗೂ ಮಹತ್ವದ ಸ್ಥಾನವಿದೆ. ಸಣ್ಣ ಅಡಿಕೆ ದೊಡ್ಡ ಖುಷಿಗೆ ಕಾರಣವಾಗಬಹುದು. ವಾಸ್ತು ಶಾಸ್ತ್ರದ ಪ್ರಕಾರ ಪೂಜೆ ಮಾಡಿದ್ದ ಅಡಿಕೆ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಸುಖ-ಶಾಂತಿ ಜೊತೆಗೆ ಆರ್ಥಿಕ ಸಮಸ್ಯೆಗೆ ಪರಿಹಾರ ನೀಡುತ್ತದೆ.

  • ಸುದ್ದಿ

    ಅನ್ನದಾತನಿಗೆ ಬಂಪರ್ ಆಫರ್!ಪ್ರತೀ ರೈತನ ಅಕೌಂಟ್’ಗೆ ಬೀಳಲಿದೆ 10,000.!ಏನಿದು ಯೋಜನೆ ಮುಂದೆ ಓದಿ…

    ಮುಖ್ಯಮಂತ್ರಿ ಸಿದ್ದರಾಮಯ್ಯನವರು 2018-19ನೇ ಸಾಲಿನ ಬಜೆಟ್ ಮಂಡಿಸಿದ್ದು,ಹಲವಾರು ಹೊಸ ಯೋಜನೆಗಳನ್ನು ಪ್ರಕಟಿಸಿದ್ದಾರೆ.ಇದರಲ್ಲಿ ರೈತರಿಗೂ ಹಲವಾರು ಯೋಜನೆಗಳನ್ನು ಪ್ರಕಟಿಸಿದ್ದು,ಕೃಷಿಗೆ ಹೆಚ್ಚು ಮಾನ್ಯತೆ ನೀಡಿದ್ದಾರೆ.

  • Health, ಆಯುರ್ವೇದ, ಆರೋಗ್ಯ, ಉಪಯುಕ್ತ ಮಾಹಿತಿ

    ಪಾರಿಜಾತದ ಆರೋಗ್ಯಕರ ಗುಣಗಳು !!!

    ಪಾರಿಜಾತಕ ಎಂಬ ರಾಜಕುಮಾರಿ ಸೂರ್ಯನೊಡನೆ ಪ್ರೀತಿಗೆ ಬಿದ್ದಳು. ಆದರೆ, ಸೂರ್ಯ ಮುಲಾಜಿಲ್ಲದೆ ಅವಳ ಪ್ರೀತಿಯನ್ನು ತಿರಸ್ಕರಿಸಿದ. ಇದರಿಂದ ನೊಂದ ಪಾರಿಜಾತಕ ಆತ್ಮಹತ್ಯೆ ಮಾಡಿಕೊಂಡಳು. ಅವಳ ದೇಹದ ಬೂದಿಯಿಂದ ಉದಯಿಸಿದ್ದೇ ಸುಂದರವಾದ ಪಾರಿಜಾತದ ಗಿಡ. ಹೀಗೆ ಗಿಡವಾಗಿ ಹುಟ್ಟಿದ ಪಾರಿಜಾತಕಳಿಗೆ ದಿನ ಬೆಳಗಾದರೆ ಕಣ್ಣಿಗೆ ಬೀಳುವ ತನ್ನ ಪ್ರೇಮಿಯ ನೋಟ ನೋವನ್ನು ನೀಡುತ್ತದೆ. ಅದಕ್ಕಾಗಿಯೇ ಪಾರಿಜಾತದ ಹೂವುಗಳು ಬೆಳಗಿನ ಹೊತ್ತು ಬಾಡಿದ್ದು, ಸಂಜೆಯ ನಂತರ ಅರಳುತ್ತವೆ ಎನ್ನುತ್ತದೆ ಪುರಾಣ. ಸಸ್ಯದ ಸ್ವಭಾವಕ್ಕೆ ತಕ್ಕಂತಿದೆ ಈ ಕತೆ. ಇದೇ ಕಾರಣಕ್ಕೆ…

  • Cinema

    ದರ್ಶನ್ ಸಿನಿಮಾ ಬಗ್ಗೆ ಧುನಿಯಾ ರಶ್ಮಿ ಹೇಳಿದ ಶಾಕಿಂಗ್ ಮಾತೇನು ಗೊತ್ತಾ?

    ಬಿಗ್ ಬಾಸ್ ಕನ್ನಡ 7ನೇ ಆವೃತ್ತಿಯ ಮೂರನೇ ವಾರ ದುನಿಯಾ ರಶ್ಮಿ ಎಲಿಮಿನೇಟ್ ಆಗಿದ್ದಾರೆ. ಬಿಗ್ ಮನೆಯಿಂದ ಹೊರಬಂದ ಬಳಿಕ ಸಂದರ್ಶನ ಒಂದರಲ್ಲಿ ಭಾಗವಹಿಸಿದ್ದರು. ಬಿಗ್ ಬಾಸ್ ಜರ್ನಿ ಬಗ್ಗೆ  ತಮ್ಮ ಅನುಭವಗಳನ್ನ ಹೇಳಿದ ರಶ್ಮಿ,  ಒಬ್ಬ ಸೂಪರ್ ಸ್ಟಾರ್ ಜೊತೆ ನಟಿಸಬೇಕು ಎಂಬ ಆಸೆಯನ್ನು ಅಂಚಿಕೊಂಡಿದ್ದಾರೆ. ರಶ್ಮಿ  ಅವರನ್ನು ನಿಮಗೆ ಕನ್ನಡದ ಯಾವ ನಟ ಇಷ್ಟ ಎಂದು ಸಂದರ್ಶನದಲ್ಲಿ ಕೇಳಿದರು. ಇದಕ್ಕೆ ಉತ್ತರವಾಗಿ  ಇಬ್ಬರು ನಟರ  ಹೆಸರನ್ನು ಹೇಳಿದರು, ಒಬ್ಬರನ್ನು  ಆಯ್ಕೆ ಮಾಡಬೇಕಿತ್ತು. ದುನಿಯಾ ರಶ್ಮಿ…