ಸಾಧನೆ, ಸ್ಪೂರ್ತಿ

ಅಂಬುಲೆನ್ಸ್‌ಗೆ ದಾರಿ ತೋರಿದ ಹುಡ್ಗ, ತಮ್ಮನ ಪ್ರಾಣ ಉಳಿಸಿದ ಸೋದರಿಗೆ ಶೌರ್ಯ ಪ್ರಶಸ್ತಿ ಪುರಸ್ಕಾರ.

66

ರಾಯಚೂರಿನ ವೆಂಕಟೇಶ್, ಉತ್ತರ ಕನ್ನಡದ ಆರತಿ ಸೇಠ್ ಶೌರ್ಯ ಪ್ರಶಸ್ತಿ ಪುರಸ್ಕೃತ ಮಕ್ಕಳು. ಇಂದು ದೆಹಲಿಯಲ್ಲಿ ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ ವತಿಯಿಂದ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಘೋಷಣೆಯಾಗಿದ್ದು, ದೇಶದ 22 ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಮಕ್ಕಳಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ವೆಂಕಟೇಶ್, ಪ್ರವಾಹ ಸಂದರ್ಭದಲ್ಲಿ ರಸ್ತೆ ಕಾಣದೆ ನಿಂತಿದ್ದ ಅಂಬುಲೆನ್ಸ್ ಗೆ ದಾರಿ ತೋರಿಸುವ ಮೂಲಕ ಐದು ಮಂದಿಯ ಪ್ರಾಣ ರಕ್ಷಣೆ ಮಾಡಿದ್ದ. ಮೃತ ದೇಹದೊಂದಿಗೆ ಐದು ಮಂದಿ ಹೊತ್ತಿದ್ದ ಅಂಬುಲೆನ್ಸ್  ಜಾಗಟ್ಕಲ್ ನಿಂದ ಯಾದಗಿರಿ ಕಡೆಗೆ ಹೊರಟಿತ್ತು. ಗುಂಗಾಲ್ ರಸ್ತೆಯಲ್ಲಿ ರೋಡ್ ಸಂಪೂರ್ಣ ಪ್ರವಾಹ ನೀರಿನಿಂದ ಆವೃತಗೊಂಡು ರಸ್ತೆ ಕಾಣದ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಈ ವೇಳೆ ಅಂಬುಲೆನ್ಸ್‌ ನೆರವಿಗೆ ಬಂದಿದ್ದ ಬಾಲಕ ವೆಂಕಟೇಶ್, ಅಂಬುಲೆನ್ಸ್ ಡ್ರೈವರ್ ತನನ್ನು ಹಿಂಬಾಲಿಸುವಂತೆ ಸೂಚಿಸಿ ರಸ್ತೆ ದಾಟಿಸಲು ನೆರವು ನೀಡಿದ್ದ.

ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ನವಿಲಗೋಣು ಗ್ರಾಮದ ಆರತಿ ಸೇಠ್, ಕೋಪೊದ್ರಿಕ್ತ ಹಸುವಿನ ದಾಳಿಯಿಂದ ತನ್ನ ಎರಡು ವರ್ಷದ ತಮ್ಮನನ್ನು ರಕ್ಷಿಸಿದ್ದಳು. ಉದ್ರಿಕ್ತ ಹಸು ಬಾಲಕನ ಮೇಲೆ ದಾಳಿ ಮಾಡಲು ಬರುತ್ತಿತ್ತು. ಕೊಂಬಿನಿಂದ ಇನ್ನೇನು ತಿವಿಯುವುದರಲ್ಲಿ ಕ್ಷಣ ಮಾತ್ರದಲ್ಲಿ ತಮ್ಮನ ರಕ್ಷಣೆಗೆ ದಾವಿಸಿ, ಹಸು ಮತ್ತು ತಮ್ಮನ ನಡುವೆ ನಿಂತು ತಮ್ಮನ ಪ್ರಾಣ ರಕ್ಷಿಸಿದ್ದಳು. ಮಕ್ಕಳ ಈ ಧೈರ್ಯ ಪ್ರಶಂಸಿಸಿ ಈ ಪ್ರಶಸ್ತಿ ನೀಡಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇಶ-ವಿದೇಶ

    ಇದು ಪ್ರಪಂಚದ ಮೊದಲ ಅರಣ್ಯ ನಗರ!ಎಲ್ಲಿದೆ ಗೊತ್ತಾ?ಈ ಲೇಖನಿ ಓದಿ …

    ಚೀನಾ ದೇಶವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಅದರಲ್ಲೂ ಅಭಿವೃದ್ಧಿ ಮತ್ತು ಸಾಹಸ ವಿಷಯದಲ್ಲಿ ಚೀನಾದವರು ಬೇರೆ ದೇಶಗಳಿಗಿಂತ ಭಿನ್ನ.ಏಕೆಂದರೆ ಏನಾದರೂ ಹೊಸತೊಂದು ಜಗತ್ತಿಗೆ ತೋರಿಸುತ್ತಾ ಬಂದಿದ್ದಾರೆ. ಈಗ ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಅರಣ್ಯ ನಗರ ನಿರ್ಮಾಣ ಮಾಡುವ ಹೊಸ ಸಾಹಸಕ್ಕೆ ಚೀನಾ ಮುಂದಾಗಿದೆ.

  • ಜೀವನಶೈಲಿ

    ಊಟ ಮಾಡುವಾಗ ಈ ತಪ್ಪುಗಳನ್ನು ಮಾಡಲೇಬೇಡಿ! ಏನ್ ಗೊತ್ತಾ?ಮುಂದೆ ಓದಿ…

    ನಾವು ಮನೆಯಲ್ಲಿ ಊಟ ಮಾಡಬೇಕಾದ್ರೆ, ಟಿವಿ ಅಥವಾ ಮೊಬೈಲ್ ನೋಡುತ್ತಲೋ ಊಟ ಮಾಡುವುದು ಸಾಮಾನ್ಯ. ಆದರೆ ಅಧ್ಯಯನಗಳ ಪ್ರಕಾರ ಹೀಗೆ ಮಾಡೋದ್ರಿಂದ ಬೊಜ್ಜು/ಸ್ಥೂಲಕಾಯ ಸಮಸ್ಯ ಬರುವುದು ಜಾಸ್ತಿ ಎಂದು ವರದಿಯಾಗಿದೆ

  • ಸುದ್ದಿ

    ಮಧುಮಗಳಿಲ್ಲದೆ ಮದುವೆ ಮಾಡಿ ಮಗನ ಕನಸನ್ನು ನನಸು ಮಾಡಿದ ಪೋಷಕರು…!

    ವಧುವಿಲ್ಲದೆ ತನ್ನ 27 ವರ್ಷದ ಮಗನಿಗೆ ಅದ್ಧೂರಿಯಾಗಿ ಮದುವೆ ಮಾಡಿಸುವ ಮೂಲಕ ಮಗನ ಕನಸನ್ನು ನನಸು ಮಾಡಿದ ತಂದೆ… ಅಜಯ್ ಬಾರೋಟ್ ಸಣ್ಣ ಮಗುವಿರುವಾಗಲೇ ಆತನ ಹೆತ್ತವರು ಮಗ ದೊಡ್ಡವನಾದ ಬಳಿಕ ಆತನಿಗೆ ಅದ್ಧೂರಿಯಾಗಿ ಮದುವೆ ಮಾಡಬೇಕು ಎಂಬ ಕನಸು ಕಂಡಿದ್ದರು. ಆದರೆ ಅಜಯ್ ಬೆಳವಣಿಗೆಯಲ್ಲಿ ಕುಂಠಿತವಾದ ಕಾರಣ ಆತನಿಗೆ ಸಂಗಾತಿ ಹುಡುಕಲು ಮನೆಯವರಿಗೆ ಕಷ್ಟವಾಯಿತು. ಯಾಕಂದರೆ ಅಜಯ್ ಬೆಳೆಯುತ್ತಾ ಅಂಗವೈಕಲ್ಯದಿಂದ ಬಳಲತೊಡಗಿದ. ಹೀಗಾಗಿ ಆತನಿಗೆ ವಧು ಇಲ್ಲದೆ ಮದುವೆ ಮಾಡಲು ಕುಟುಂಬ ತೀರ್ಮಾನ ಮಾಡಿತ್ತು. ಹಾಗೆಯೇ…

  • ಆರೋಗ್ಯ, ಉಪಯುಕ್ತ ಮಾಹಿತಿ

    ಕಡಲೆ ಕಾಯಿಯಲ್ಲಿದೆ ಈ 6 ಅದ್ಭುತ ಆರೋಗ್ಯದ ಗುಟ್ಟುಗಳು..!

    ಬಡವರ ಬಾದಾಮಿ ಎಂದೇ ಕರೆಯುವ ಕಡಲೆಕಾಯಿಯಲ್ಲಿ ಪ್ರೊಟೀನ್, ಕೊಬ್ಬು, ಫೈಬರ್, ಕ್ಯಾಲ್ಸಿಯಂ ಅಪಾರ ಪ್ರಮಾಣದಲ್ಲಿರುತ್ತದೆ. ಇದು ಸದಾ ನೀವು ಯಂಗ್ ಆಗಿ ಕಾಣುವಂತೆ ಮಾಡುವುದಲ್ಲದೆ, ಮೂಳೆಗಳನ್ನು ಬಲಪಡಿಸಿ ಫಿಟ್ ಆಗಿರಲು ನೆರವಾಗುತ್ತೆ. ಹಾಗಾದ್ರೆ ಕಡಲೆ ಕಾಯಿಯನ್ನು ತಿನ್ನುವುದರಿಂದ ಇನ್ನು ಹಲವಾರು ಪ್ರಯೋಜನಗಳಿವೆ.. *ಪ್ರತಿದಿನ ಕಡಲೆ ಕಾಯಿಯನ್ನು ಸೇವನೆ ಮಾಡುವುದರಿಂದ ಗ್ಯಾಸ್ ಮತ್ತು ಎಸಿಡಿಟಿ ಸಮಸ್ಯೆ ಶಮನವಾಗುತ್ತದೆ.ಜೊತೆಗೆ ಕರುಳಿನ ಕಾಯಿಲೆಗಳನ್ನು ನಿವಾರಿಸುತ್ತದೆ. *ದಿನಾಲೂ ಪುರುಷ ಹಾಗೂ ಮಹಿಳೆ ಕಡಲೆ ಕಾಯಿಯನ್ನು ಸೇವನೆ ಮಾಡುವುದರಿಂದ ಹಾರ್ಮೋನುಗಳು ಸಮತೋಲನದಲ್ಲಿದ್ದು ಅವರ ಲೈಂಗಿಕ…

  • ಉಪಯುಕ್ತ ಮಾಹಿತಿ

    ಪ್ಲಾಸ್ಟಿಕ್ ಪಾತ್ರೆಯಲ್ಲಿ ತಿಂಡಿ ಹಾಕಿಡುತ್ತೀರಾ? ಹಾಗಾದ್ರೆ ಈ ಲೇಖನ ಓದಿ ..

    ಹೆಚ್ಚಿನವರ ಮನೆಯಲ್ಲಿ ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸದೇ ಇರುವುದಿಲ್ಲ. ಆದರೆ ಉಳಿದ ತಿಂಡಿಗಳನ್ನು ಪ್ಲಾಸ್ಟಿಕ್ ವಸ್ತುಗಳಲ್ಲಿ ಹಾಕುವ ಮುನ್ನ ಯೋಚಿಸಿ.

  • ಸುದ್ದಿ

    ಮಳೆರಾಯನ ಅಬ್ಬರಕ್ಕೆ ತುಂಬಿದ ನದಿಗಳು,ವಾಹನ ಸವಾರರು ಭೋರ್ಗರೆದು ಹರಿಯುತ್ತಿರುವ ನೀರಿನ ಮಧ್ಯೆಯೇ ದುಸ್ಸಾಹಸ ಮಾಡುತ್ತಿದ್ದಾರೆ…!

    ಬೆಳಗಾವಿ, ಚಿಕ್ಕೋಡಿ, ರಾಯಚೂರಿನಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು ಕೃಷ್ಣಾ ನದಿ ವ್ಯಾಪ್ತಿಯಲ್ಲಿರುವ ಬರುವ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ರಸ್ತೆಗಳು ಜಲಾವೃತವಾಗಿದ್ದು, ಕಾರು ಬೈಕ್‍ಗಳು ಆಟಿಕೆಯಂತಾಗಿವೆ, ಆದರೂ ಕೂಡ ವಾಹನ ಸವಾರರು ಮಾತ್ರ ಭೋರ್ಗರೆದು ಹರಿಯುತ್ತಿರುವ ನೀರಿನ ಮಧ್ಯೆಯೇ ದುಸ್ಸಾಹಸ ಮಾಡುತ್ತಿದ್ದಾರೆ. ಬೆಳಗಾವಿಯ ದೆಸೂರು-ಖಾನಾಪೂರ ಮಧ್ಯೆ ಇರುವ ಕೊಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನೀರು ತುಂಬಿ ಹರಿಯುತ್ತಿದ್ದರೂ ಕೂಡ ವಾಹನ ಸವಾರರು ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ವೇಗದಿಂದ ಹರಿಯುತ್ತಿರುವ ನೀರನ್ನೇ ಲೆಕ್ಕಿಸದೇ ವಾಹನ ಸವಾರರು ಕೊಳ್ಳ ದಾಟುತ್ತಿದ್ದಾರೆ. ಸ್ಥಳದಲ್ಲಿ…