ಸುದ್ದಿ

BPL ಕಾರ್ಡ್ ಇದ್ದವರು ರೆಷೆನ್ ಬೇಕೆಂದರೆ ಜುಲೈ 31 ಒಳಗೆ ಈ ಕೆಲಸ ಮಾಡಬೇಕು…..!

276

ಪಡಿತರ ಸೋರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ, ಇದನ್ನು ತಡೆಯಲು ಆಹಾರ ನಾಗರಿಕ ಸರಬರಾಜು ಇಲಾಖೆ ಕ್ರಮ ಕೈಗೊಂಡಿದ್ದು ನೈಜ ಫಲಾನುಭವಿಗಳಿಗೆ ಮಾತ್ರ ಪಡಿತರ ವಿತರಿಸಲು ಮುಂದಾಗಿದೆ. ಹೀಗಾಗಿ ನೀವು ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದ್ದು ನಿಮಗೆ ಪಡಿತರ ಕೂಡ ಸಿಗುವುದಿಲ್ಲ.

ಹೌದು, ಜುಲೈ 31ರ ಒಳಗೆ ನೀವು ನಿಮ್ಮ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಬೇಕು. ಒಂದು ವೇಳೆ ನೀವು ಇ-ಕೆವೈಸಿ ಮಾಡಿಸದಿದ್ದಲ್ಲಿ ನಿಮ್ಮ ಕಾರ್ಡ್ ರದ್ದಾಗಲಿದ್ದು, ಆಗಸ್ಟ್ ನಿಂದ ನಿಮಗೆ ರೇಷನ್ ಕೂಡ ಸಿಗುವುದಿಲ್ಲ.
ರೇಷನ್ ಕಾರ್ಡ್ ನಲ್ಲಿ ಹೆಸರು ಹೊಂದಿರುವ ಪ್ರತಿಯೊಬ್ಬರೂ ಜುಲೈ 31 ರೊಳಗೆ ಆಧಾರ್ ದೃಡೀಕರಣ ಮಾಡಿಸಬೇಕು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆದೇಶ ಹೊರಡಿಸಿದೆ.

ಪಡಿತರ ಚೀಟಿಯಲ್ಲಿನ ಎಲ್ಲಾ ಸದಸ್ಯರು ಇ-ಕೆವೈಸಿ ಮಾಡಿಸಲು ಯಾವುದೇ ರೀತಿಯ ಹಣ ಕೊಡಬೇಕಾಗಿಲ್ಲ. ಇದು ಸಂಪೂರ್ಣ ಉಚಿತವಾಗಿದ್ದು, ಪಡಿತರ ಪಡೆಯುವ ಎಲ್ಲಾ ನ್ಯಾಯಬೆಲೆ(ರೇಷನ್ ಶಾಪ್) ಅಂಗಡಿಗಳಲ್ಲಿ ಆಧಾರ್ ಧೃಡೀಕರಣ ಮಾಡಿಸಿಕೊಳ್ಳಬಹುದಾಗಿದೆ.

ಜುಲೈ 31ರ ಒಳಗೆ ರೇಷನ್ ಕಾರ್ಡ್ ನಲ್ಲಿ ಹೆಸರು ಹೊಂದಿರುವ ಕುಟುಂಬದ ಎಲ್ಲಾ ಸದಸ್ಯರು ನ್ಯಾಯಬೆಲೆ ಅಂಗಡಿಗೆ ಹೋಗಿ ಖಡ್ಡಾಯವಾಗಿ ಬಯೋಮೆಟ್ರಿಕ್ ನೀಡಬೇಕಿದೆ. ಬಯೋಮೆಟ್ರಿಕ್ ನೀಡಿದವರಿಗೆ ಮಾತ್ರ ರೇಷನ್ ಸಿಗಲಿದೆ ಎಂದು ಹೇಳಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಹೈಕೋರ್ಟ್ ಮಹತ್ವದ ತೀರ್ಪು:LLR ಇದ್ದರೂ ಅಪಘಾತವಾದ ವೇಳೆ ಪರಿಹಾರ ನೀಡಬೇಕು…!

    ವಾಹನ ಕಲಿಕಾ ಪರವಾನಗಿ (ಎಲ್ಎಲ್ಆರ್) ಹೊಂದಿದ್ದು, ಅಂತಹ ಸಂದರ್ಭದಲ್ಲಿ ಅಪಘಾತವಾದರೆ ವಿಮಾ ಕಂಪನಿಗಳು ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹತ್ತು ವರ್ಷಗಳ ಹಿಂದಿನ ಪ್ರಕರಣವೊಂದರ ತೀರ್ಪು ಈಗ ಹೊರಬಿದ್ದಿದ್ದು, ಎಲ್ಎಲ್ಆರ್ ಇದ್ದ ವೇಳೆ ಅಂತವರು ವಾಹನ ಚಾಲನೆ ಮಾಡುವಾಗ ಡಿಎಲ್ ಹೊಂದಿದ ಪರಿಣಿತರು ಇರಬೇಕೆಂಬ ನಿಯಮವಿದೆ. ಆದರೆ ಇದು ದ್ವಿಚಕ್ರವಾಹನಕ್ಕೋ ಅಥವಾ ನಾಲ್ಕು ಚಕ್ರ ವಾಹನಕ್ಕೋ ಎಂಬುದರ ಕುರಿತು ಸ್ಪಷ್ಟತೆ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ನಿಯಮ ನಾಲ್ಕು ಚಕ್ರ ವಾಹನಗಳಿಗೆ…

  • ಸುದ್ದಿ

    ಏರ್ಟೆಲ್ ಬಂಪರ್ ಆಫರ್! ಪ್ರಿಪೇಡ್ ಪ್ಲಾನ್ ಜೊತೆಗೆ 4 ಲಕ್ಷ ವಿಮೆ ಸೌಲಭ್ಯ ಪಡೆಯಬಹುದು…!

    ದೇಶದ ಟೆಲಿಕಾಂ ರಂಗದಲ್ಲಿ ಭಾರೀ ಪೈಪೋಟಿ ಬೆಳೆದಿರುವ ಹಿನ್ನೆಲೆಯಲ್ಲಿ ಎಲ್ಲಾ ಪ್ರಮುಖ ಟೆಲಿಕಾಂ ಕಂಪನಿಗಳನ್ನು ಗ್ರಾಹಕರನ್ನು ಆಕರ್ಷಿಸಲು ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿವೆ. ಈ ನಿಟ್ಟಿನಲ್ಲಿ ಏರ್ಟೆಲ್ ಕೂಡ ಹಿಂದೆ ಬಿದ್ದಿಲ್ಲ. ಆರ್ಥಿಕವಾಗಿ ಸುರಕ್ಷಿತವಾದ ಭಾರತವನ್ನು ನಿರ್ಮಿಸಲು ಮೊಬೈಲ್ ಸೇವೆಗಳ ಕಾರ್ಯತಂತ್ರದ ಭಾಗವಾಗಿ ಭಾರ್ತಿ ಏರ್‌ಟೆಲ್ ತನ್ನ ಗ್ರಾಹಕರಿಗೆ ವಿಮಾ ರಕ್ಷಣೆಯ ರಕ್ಷಣೆಯೊಂದಿಗೆ ಪ್ರಿಪೇಡ್ ಯೋಜನೆಯನ್ನು ನೀಡಲು ಭಾರ್ತಿ ಆಕ್ಸಾ ಲೈಫ್ ಇನ್ಶುರೆನ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಏರ್ಟೆಲ್ ರೂ. 599 ಯೋಜನೆ ಭಾರ್ತಿ ಏರ್ಟೆಲ್ ಭಾರ್ತಿ ಆಕ್ಸಾ…

  • ವಿಚಿತ್ರ ಆದರೂ ಸತ್ಯ

    ಪ್ರಸಿದ್ದ ರಾಜಕಾರಣಿಗಳಂತೆಯೇ ಕಾಣುವ ಈ ವ್ಯಕ್ತಿಗಳ ಪೋಟೋಗಳನ್ನು ನೋಡಿದ್ರೆ ನೀವ್ ಶಾಕ್ ಆಗ್ತೀರಾ..!

    ಒಬ್ಬರಂತೆ ಮತ್ತೊಬ್ಬರು ಇರುತ್ತಾರೆ ಎಂದು ಕೇಳಿರುತ್ತೇವೆ ಅಲ್ಲಲ್ಲಿ ನೋಡಿರುತ್ತೇವೆ.ಆದ್ರೆ ಅಂತಹ ವ್ಯೆಕ್ತಿಗಳನ್ನು ಕಂಡಾಗ ನಮಗೆ ರೋಮಾಂಚನವಾಗುತ್ತದೆ.ಅಂತಹದರಲ್ಲಿ ಕೆಲವು ಪ್ರಸಿದ್ದ ರಾಜಕಾರಣಿಗಳಂತೆ ಕಾಣುವ ಬೇರೆ ವ್ಯೆಕ್ತಿಗಳ ಕೆಲವು ಚಿತ್ರಗಳು ಇಲ್ಲಿವೆ.

  • ಸಂಬಂಧ

    ವರದಕ್ಷಿಣೆ ಬೇಡಿಕೆ ನೀಡಿದ ವರನ ಕುಟುಂಬದವರಿಗೆ ,ಮದುವೆಯಲ್ಲಿ ‘ವಧು’ ನೀಡಿದ ಶಾಕ್ ಏನು ಗೊತ್ತಾ..?ತಿಳಿಯಲು ಇದನ್ನು ಓದಿ..

    ಮದುವೆಯ ದಿನ ವರನ ಕುಟುಂಬದವರು ನಗದು, ಒಡವೆ ಸೇರಿದಂತೆ ಒಂದು ಕೋಟಿ ಮೌಲ್ಯದ ವರದಕ್ಷಿಣೆಗೆ ಬೇಡಿಕೆಯಿಟ್ಟಿದ್ದರಿಂದ ಯುವತಿಯೊಬ್ಬಳು, ವೈದ್ಯನೊಂದಿಗೆ ನಿಗದಿಯಾಗಿದ್ದ ತನ್ನ ಮದುವೆಯನ್ನೇ ಸ್ಥಗಿತಗೊಳಿಸಿದ್ದಾಳೆ. ಡಾ. ರಾಶಿ ವರದಕ್ಷಿಣೆ ವಿರುದ್ಧ ಹೀಗೆ ಸಿಡಿದೆದ್ದ ವಧು.

  • ಸಿನಿಮಾ

    ಸಿಕ್ಕಿಬಿದ್ದ ವಿನೋದ್ ರಾಜ್ ರವರ ಹಣವನ್ನು ಲಪಟಾಯಿಸಿದ್ದ ಕಳ್ಳ..!

    ನೆಲಮಂಗಲದಲ್ಲಿ ನಟ ವಿನೋದ್ ರಾಜ್‍ಗೆ ಯಮಾರಿಸಿ 1 ಲಕ್ಷ ದರೋಡೆ ಮಾಡಿದ್ದ ಖದೀಮನನ್ನ ಪೊಲೀಸರು ಬಂಧಿಸಿದ್ದಾರೆ.ಕಳೆದ ತಿಂಗಳು ಅಭಿಮಾನಿಗಳ ಸೋಗಿನಲ್ಲಿ ಬಂದು ನಟ, ವಿನೋದ್ ರಾಜ್ ಅವರನ್ನು ಮಾತನಾಡಿಸುತ್ತಲೇ ಕಾರು ಪಂಚರ್ ಮಾಡಿದ್ದರು, ಕಾರಿನಲ್ಲಿದ್ದ 1 ಲಕ್ಷ ಹಣವನ್ನ ಖದೀಮರು ಕದ್ದು ಎಸ್ಕೇಪ್ ಆಗಿದ್ದರು. ಈ ಗ್ಯಾಂಗ್‍ನ ಬೆನ್ನಟ್ಟಿದ್ದ ನೆಲಮಂಗಲ ಪೊಲೀಸರು ಕೊನೆಗೆ ಓಜಿಕುಪ್ಪಂ ಗ್ಯಾಂಗ್‍ನ ರಾಜು ಹೈಟೆಕ್ ರಾಜುನನ್ನ ಬಂಧಿಸಿದ್ದಾರೆ. ಬಂಧಿತ ರಾಜು ಅಲಿಯಾಸ್ ಹೈಟೆಕ್ ರಾಜು ಐಷಾರಾಮಿ ಜೀವನ ಮಾಡುತ್ತಿದ್ದ.ಇವನು ಧರಿಸುತ್ತಿದ್ದ ಶರ್ಟ್, ಪ್ಯಾಂಟ್‍ಗಳು…

  • ಆರೋಗ್ಯ

    ರಾತ್ರಿ ಮಲಗುವ ಮೊದಲು ಬೆಲ್ಲ ತಿಂದರೆ ಏನಾಗುತ್ತದೆ ಗೊತ್ತಾ, ಬಹಳಷ್ಟು ಜನರಿಗೆ ಗೊತ್ತಿಲ್ಲ ಬೆಲ್ಲದ ಮಹತ್ವ.

    ಹಳೆಯ ಕಾಲದಲ್ಲಿ ಜನರು ಬೆಲ್ಲವನ್ನು ಮಾತ್ರ ಸಿಹಿ ವಸ್ತುವಾಗಿ ಹೆಚ್ಚು ಸೇವಿಸುತ್ತಿದ್ದರು ಆದರೆ ಕಾಲ ಕಳೆದಂತೆ ಇತ್ತೀಚಿನ ದಿನಗಳಲ್ಲಿ ಜನರು ಸಿಹಿ ಎಂದರೆ ಸಕ್ಕರೆಯ ಮೊರೆ ಹೋಗುತ್ತಾರೆ, ಸಕ್ಕರೆ ಸಿಹಿಯಾಗಿ ಹೆಚ್ಚು ಪ್ರಚಾರ ಪಡೆದಿದೆ. ನಮ್ಮ ಆಯುರ್ವೇದದಲ್ಲಿ ಉತ್ತಮ ಆಹಾರವು ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಬಹಳಷ್ಟು ಜನರಿಗೆ ಗೊತ್ತಿರಲು ಸಾಧ್ಯವಿಲ್ಲ ಬೆಲ್ಲವನ್ನು ತಿನ್ನುವುದರಿಂದ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ 12, ಆಂಟಿಆಕ್ಸಿಡೆಂಟ್ಸ್, ಕ್ಯಾಲ್ಸಿಯಂ ಮತ್ತು ಫೈಬರ್ ನಂತಹ ಸಾಕಷ್ಟು ಪೋಷಕಾಂಶಗಳು ದೊರೆಯುತ್ತವೆ….