ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉತ್ತರ ಪ್ರದೇಶದ ವ್ಯಕ್ತಿಯೊಬ್ಬರ ದೇಹದ ವಿವಿಧ ಅಂಗಾಂಗಗಳು ವಿರುದ್ಧ ದಿಕ್ಕಿನಲ್ಲಿಇರುವ ವಿಚಾರ ಆತನ ದೇಹ ತಪಾಸಣೆಯಿಂದ ಬಯಲಾಗಿದೆ. ಇಲ್ಲಿನ ಖುಷಿನಗರದ ಜಮಾಲುದ್ದೀನ್ ಎಂಬುವವರು ಇತ್ತೀಚೆಗೆ ಹೊಟ್ಟೆ ನೋವಿನ ಹಿನ್ನೆಲೆಯಲ್ಲಿಗೋರಖ್‌ಪುರ ಆಸ್ಪತ್ರೆಗೆ ತೆರಳಿದ್ದರು.

ವೈದ್ಯರು ರೋಗ ತಪಾಸಣೆಗಾಗಿ ಸ್ಕ್ಯಾನಿಂಗ್ ಮಾಡಿದಾಗ, ಅವರ ದೇಹದ ಎಲ್ಲಾ ಅಂಗಗಳು ಸಾಮಾನ್ಯವಾಗಿ ಇರಬೇಕಾದ ಜಾಗದಲ್ಲೇ ಇರಲಿಲ್ಲ. ಬದಲಿಗೆ ದೇಹದ ಮತ್ತೊಂದು ಬದಿಯಲ್ಲಿಇರುವುದು ಕಂಡು ವೈದ್ಯರೇ ಬೆರಗಾಗಿದ್ದಾರೆ.

ಕನ್ನಡಿಯಲ್ಲಿ ನೋಡಿದರೆ ಕಾಣುವಂತೆ ಆತನ ದೇಹದ ಅಂಗಾಂಗಗಳು ‘ರಿವರ್ಸ್’ ಆಗಿ ಜೋಡಿಸಲ್ಪಟ್ಟಿದ್ದವು. ‘ಸೈಟಸ್ ಇನ್‌ವರ್ಸಸ್’ ಎಂದು ಕರೆಯಲಾಗುವ ಇದೊಂದು ಅಪರೂಪದ ಪ್ರಕರಣವಾಗಿದೆ. ವಿಶ್ವದ ಕೆಲವೇ ವ್ಯಕ್ತಿಗಳ ದೇಹವು ಈ ರೀತಿ ರಚನೆಯಾಗಿರುತ್ತದೆ.

‘ಸೈಟಸ್ ಇನ್‌ವರ್ಸಸ್’ ಇದ್ದರೂ ಕೂಡಾ ವ್ಯಕ್ತಿಯ ಅಂಗಾಂಗಗಳ ಕಾರ್ಯನಿರ್ವಹಣೆಗೆ ಯಾವುದೇ ಅಡ್ಡಿಯಾಗುವುದಿಲ್ಲ. ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲಎಂದು ವೈದ್ಯರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಯಮುನಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಬಸ್ ವೊಂದು ಜಾರಿ ಹದಿನೈದು ಅಡಿ ಆಳದ ದೊಡ್ಡ ಮೋರಿಯಲ್ಲಿ ಬಿದ್ದ ಪರಿಣಾಮ ಇಪ್ಪತ್ತೊಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ನೂರಾ ಅರವತ್ತೈದು ಕಿ.ಮೀ. ಉದ್ದ ಎಕ್ಸ್ ಪ್ರೆಸ್ ಹೈವೆ ಉತ್ತರಪ್ರದೇಶದಲ್ಲಿ ನೋಯ್ಡಾ ಹಾಗೂ ಆಗ್ರಾದ ಮಧ್ಯೆ ಸಂಪರ್ಕ ಕಲ್ಪಿಸುತ್ತದೆ.ರಾಜ್ಯ ರಸ್ತೆ ಸಾರಿಗೆ ಬಸ್ ಸ್ಕಿಡ್ ಆಗಿ 50 ಅಡಿ ಆಳದ ಚರಂಡಿಗೆ ಬಿದ್ದ ಪರಿಣಾಮ ಸ್ಥಳದಲ್ಲಿಯೇ 29 ಮಂದಿ ಪ್ರಯಾಣಿಕರು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಚಾಲಕ ನಿದ್ದೆ…
ತೃತೀಯ ಲಿಂಗಿ ರಾಣಿ ಕಿಣ್ಣರ್ ದೇಶದ ಮೊದಲ ಉಬರ್ ಕ್ಯಾಬ್ ಡ್ರೈವರ್ ಆಗಿದ್ದು, ಸದ್ಯ ಉಬರ್ ಕಂಪನಿಯ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಣಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಫುಟ್ ಪಾತ್ ನಲ್ಲಿ ಭಿಕ್ಷೆ ಬೇಡುವುದನ್ನು ನಿರಾಕರಿಸಿದ್ದಾರೆ. ಹೀಗಾಗಿ ಸಮಾಜದಲ್ಲಿ ಧೈರ್ಯವಾಗಿ ಮೆಟ್ಟಿ ನಿಂತು ಇತರರಿಗೆ ಮಾದರಿಯಾಗಿದ್ದಾರೆ. ರಾಣಿ 2016ರಲ್ಲಿ ಆಟೋ ರಿಕ್ಷಾ ತೆಗೆದುಕೊಂಡು ಆ ಮೂಲಕ ತಮ್ಮ ಜೀವನ ನಡೆಸಿಕೊಳ್ಳಲು ಆರಂಭಿಸಿದ್ದರು. ಆದರೆ ರಾಣಿ ತೃತೀಯ ಲಿಂಗಿ ಎಂಬ ಕಾರಣಕ್ಕೆ ಯಾರೂ ಅವರ ಆಟೋವನ್ನು ಬಳಸಿಕೊಂಡಿರಲಿಲ್ಲ….
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಸೇದುವವರಿಗೆ ಯಾವುದಾದರೇನಂತೆ..? ಬೀಡಿ, ಸಿಗರೇಟ್. ಜೇಬಿನಲ್ಲಿ ಹಣ ತುಂಬಿರುವಾಗ ಸಿಗರೇಟ್ ನಂತಹ ದುಬಾರಿಗಳೇ ಬೇಕಾಗುತ್ತದೆ. ಆದರೆ ಈ ನಟ ಹಾಗಲ್ಲ. ಇವರು ಮೆಗಾ ಸ್ಟಾರ್ ನಟ. ಹಣ, ಪ್ರಚಾರ ಇದ್ದರೂ ಸಿಂಪ್ಲಿಸಿಟಿ ಫಾಲೋ ಮಾಡುತ್ತಾರೆ. ಮಲಯಾಳಂನ ಮೆಗಾ ಸ್ಟಾರ್ ನಟ ಮಮ್ಮೂಟಿ ಇಲ್ಲಿಯವರೆಗೂ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಮೂರು ಬಾರಿ ನ್ಯಾಷನಲ್ ಅವಾರ್ಡ್ ಪಡೆದಿದ್ದಾರೆ. ಅಲ್ಲದೇ ಇವರಿಗೆ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿದೆ. ಕೋಟಿ,…
ಐವತ್ತು ವರ್ಷಗಳ ಹಿಂದೆ ಮೃತಪಟ್ಟಿದ್ದ ಎನ್ನಲಾಗಿದ್ದ ವ್ಯಕ್ತಿಯೊಬ್ಬ ಈಗ ಜೀವಂತವಾಗಿ ದೀಪಾವಳಿ ಹಬ್ಬಕ್ಕೆ ಏಕಾಏಕಿ ಪ್ರತ್ಯಕ್ಷನಾಗಿದ್ದಾನೆ. ಆದರೆ ಸತ್ತಿದ್ದು, ಸಮಾಧಿ ಮಾಡಿದ್ದು, ಅಲ್ಲಿಂದ ಎದ್ದು ಹೋದದ್ದು ಹೇಗೆ ಎಂಬ ಪ್ರಶ್ನೆಗಳಿಗೆ ಇನ್ನು ಖಚಿತ ಉತ್ತರ ಸಿಗಲಿಲ್ಲ ಎನ್ನಲಾಗಿದೆ. ಚಳ್ಳಕೆರೆ ತಾಲೂಕಿನ ಚಿತ್ರನಾಯಕನಹಳ್ಳಿಯ ಕಾಡುಗೊಲ್ಲ ಸಮುದಾಯದ 76 ವರ್ಷದ ಈರಜ್ಜ ಮರಳಿ ಬಂದಿರುವ ವ್ಯಕ್ತಿ. ಈದುವರೆಗೆ ಆಂಧ್ರದಲ್ಲಿದ್ದ ಈತ ಮಂಗಳವಾರ ದೀಪಾವಳಿಗೆ ಮರಳಿ ಹುಟ್ಟೂರಿಗೆ ಬಂದಿದ್ದಾನೆ. ಈರಜ್ಜನ ಸಾವಿನ ಘಟನೆ ಕುರಿತು ಈತನ ಸಹೋದರ ಬೇವಿನಪ್ಪ ವಿಕ ಜತೆ ಹೇಳಿಕೊಂಡದ್ದು ಹೀಗೆ. ‘‘ಈರಣ್ಣಗೆ…
ಭಾರತವನ್ನು ಸ್ವಚ್ಛವಾಗಿಡಲು ಸ್ವಚ್ಛ ಭಾರತ್ ಅಭಿಯಾನದ ಹೆಸರಿನಲ್ಲಿ ವರ್ಷಗಳಿಂದ ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೇ ಇದೆ. ಈ ಮಧ್ಯೆ ಕಳೆದ ವರ್ಷ ಭಾರತದಲ್ಲೆ ಸ್ವಚ್ಛ ನಗರಗಳ ಸಾಲಿನಲ್ಲಿ ಎರಡನೆ ಸ್ಥಾನ ಪಡೆದುಕೊಂಡ ಛತ್ತೀಸ್‌ಗಢದ ಅಂಬಿಕಾಪುರ ಹೊಸತೊಂದು ಪ್ರಯತ್ನದ ಮೂಲಕ ವಿಶ್ವದ ಗಮನ ಸೆಳೆದಿದೆ. ಹೌದು ಛತ್ತಿಸ್ಗಢದ ಅಂಬಿಕಾಪುರ ಸ್ವಚ್ಛತಾ ಕಾರ್ಯಗಳಲ್ಲಿ ಬೇರೆ ನಗರಗಳಿಗಿಂತ ಬಹಳ ಮುಂದುವರೆದಿದೆ. ಕಳೆದ ವರ್ಷ ದೇಶದ ಸ್ವಚ್ಛ ನಗರಗಳ ಸಾಲಿನಲ್ಲಿ ಎರಡನೇ ಸ್ಥಾನ ಪಡೆದ ಹೆಗ್ಗಳಿಕೆಯನ್ನು ಗಳಿಸಿದೆ, ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ನಗರದಲ್ಲಿ…
ಒಂದಿಲ್ಲೊಂದು ಪ್ರಮಾದಕ್ಕ ಕಾರಣವಾಗುತ್ತಿರುವ ಟಿಕ್ ಟಾಕ್ ಮೊಬೈಲ್ app ಅನ್ನು ನಿಷೇಧಿಸಲು ಹಲವು ರಾಜ್ಯಗಳು ಮುಂದಾಗಿರುವ ಹೊತ್ತಲ್ಲೇ ಈ ವಿಡಿಯೋದಿಂದ ಮಹಿಳೆಯೊಬ್ಬರು ನಾಪತ್ತೆಯಾದ ತಮ್ಮ ಪತಿಯನ್ನು ಕಂಡುಕೊಂಡಿದ್ದಾರೆ. ಈ ಮೂಲಕ ವಿರಳಾತಿವಿರಳ ಪ್ರಕರಣದಲ್ಲಿ ಟಿಕ್ ಟಾಕ್ ಉಪಕಾರಕ್ಕೂ ಬಂದಂತಾಗಿದೆ! ತಮಿಳುನಾಡಿನ ವಿಲ್ಲುಪುರಂ ನ ಜಯಪ್ರಧಾ ಎಂಬ ಮಹಿಳೆ ಸುರೇಶ್ ಎಂಬುವವರನ್ನು ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದರು. ಆದರೆ 2017 ರ ಆರಂಭದಲ್ಲಿ ಸುರೇಶ್ ಅವರು ತಮ್ಮ ಊರಾದ ಕೃಷ್ಣಗಿರಿಗೆ ತೆರಳುವುದಾಗಿ ಹೇಳಿ ಹೊರಟಿದ್ದರು. ನಂತರ ಅವರು ವಾಪಸ್…