ಸುದ್ದಿ

ಬಿಗ್ ಬಾಸ್ ರಲ್ಲಿ ದೀಪಿಕಾನ ಅಪ್ಪಿಕೊಂಡು ಸ್ವಿಮ್ಮಿಂಗ್ ಪೂಲ್‍ಗೆ ಬಿದ್ದ ಕಿಶನ್,.!

42

ಸೋಮವಾರ ಬಿಗ್ ಬಾಸ್ ಮನೆಯ ಸದಸ್ಯರಿಗೆ ಮನರಂಜನೆ ಸಲುವಾಗಿ ‘ಚಕ್ರವ್ಯೂಹ’ ಎಂಬ ಟಾಸ್ಕ್ ನೀಡಿದ್ದರು. ಈ ಟಾಸ್ಕ್ ನಲ್ಲಿ ಕ್ಯಾಪ್ಟನ್ ಶೈನ್ ಗಾರ್ಡನ್ ಏರಿಯಾದಲ್ಲಿ ಇರಿಸಲಾಗಿದ್ದ ಚಕ್ರವನ್ನು ತಿರುಗಿಸಬೇಕಿತ್ತು. ಈ ವೇಳೆ ಮುಳ್ಳಿನ ಬಳಿ ಯಾರ ಹೆಸರು ನಿಲ್ಲುತ್ತದೋ ಅವರು ಮನೆಯ ಸದಸ್ಯರು ಹೇಳುವಂತೆ ಮಾಡಬೇಕು ಎಂದು ಹೇಳಿದ್ದರು.

ಶೈನ್ ಮೊದಲು ಚಕ್ರ ತಿರುಗಿಸಿದಾಗ ಚಂದನಾ ಅವರ ಹೆಸರು ಬಂತು. ಆಗ ಮನೆಯ ಸದಸ್ಯರು ಚಂದನಾರಿಗೆ ಕುಡಿದ ನಶೆಯಲ್ಲಿ ಇರುವಂತೆ ನಟಿಸಬೇಕು ಎಂದಿದ್ದರು. ಚಂದನಾ ಮನೆಯ ಸದಸ್ಯರು ಹೇಳಿದಂತೆ ಮಾಡಿದ್ದರು. ಇದಾದ ಬಳಿಕ ಚಕ್ರ ತಿರುಗಿಸಿದಾಗ ದೀಪಿಕಾ ಅವರ ಹೆಸರು ಬಂತು. ಈ ವೇಳೆ ಮನೆಯ ಸದಸ್ಯರು ದೀಪಿಕಾ ಅವರಿಗೆ ಸ್ವಿಮ್ಮಿಂಗ್ ಪೂಲ್‍ನಲ್ಲಿ ಸ್ವಿಮ್ ಮಾಡಿ ನಂತರ ನಾಟಿ ಟೀಚರ್ ಆಗಿ ಮನೆ ಮಂದಿಗೆ ಪಾಠ ಮಾಡಬೇಕು ಎಂದು ಹೇಳಿದರು. 

ದೀಪಿಕಾ ಮನೆಯ ಸದಸ್ಯರ ಮಾತಿನಂತೆ ಈಜುಕೊಳದಲ್ಲಿ ಸ್ವಿಮ್ಮಿಂಗ್ ಮಾಡಿ ಬಳಿಕ ಎಲ್ಲರಿಗೂ ಪಾಠ ಮಾಡುತ್ತಿದ್ದರು. ಈ ವೇಳೆ ದೀಪಿಕಾ, ನಾನು ಏನು ಪಾಠ ಮಾಡುತ್ತಿದ್ದೆ ಎಂದು ಕೇಳಿದಾಗ ಕಿಶನ್ ಟೀ-ಶರ್ಟ್ ಮೇಲೆ ಎತ್ತುವುದನ್ನು ಹೇಳಿಕೊಡುತ್ತಿದ್ದೀರಿ ಎಂದು ಪ್ರತಿಕ್ರಿಯಿಸಿದ್ದಾರೆ. ಆಗ ದೀಪಿಕಾ, ಕಿಶನ್ ಅವರ ಮೈಕ್ ತೆಗೆದು ಅವರನ್ನು ಸ್ವಿಮ್ಮಿಂಗ್ ಪೂಲ್‍ನಲ್ಲಿ ಬೀಳಿಸಲು ಮುಂದಾಗಿದ್ದಾರೆ. ಈ ವೇಳೆ ಕಿಶನ್ ತಕ್ಷಣ ದೀಪಿಕಾ ಅವರನ್ನು ಅಪ್ಪಿಕೊಂಡು ಸ್ವಿಮ್ಮಿಂಗ್ ಪೂಲ್‍ನಲ್ಲಿ ಬಿದ್ದಿದ್ದಾರೆ.

ಸ್ವಿಮ್ಮಿಂಗ್ ಪೂಲ್‍ನಲ್ಲಿ ಬೀಳುವಾಗ ದೀಪಿಕಾ ಮೈಕ್ ಧರಿಸಿದ್ದರು. ಆದರೆ ಇದನ್ನು ಅರಿಯದ ಕಿಶನ್ ತಕ್ಷಣ ನೀರಿಗೆ ಬಿದ್ದಿದ್ದಾರೆ. ಈ ವೇಳೆ ಮನೆಯ ಸದಸ್ಯರು ಮೈಕ್ ಎಂದು ಕಿರುಚಿದ್ದಾರೆ. ಬಳಿಕ ಆ ಮೈಕ್ ಹಾಳಾಗಿದ್ದು, ಬಿಗ್ ಬಾಸ್ ಮನೆಯಲ್ಲಿದ್ದ ಸಕ್ಕರೆ ಡಬ್ಬವನ್ನು ತೆಗೆದುಕೊಂಡಿದ್ದಾರೆ. ಇದೆಲ್ಲಾ ಆದ ಬಳಿಕ ಕಿಶನ್ ಕ್ಯಾಮೆರಾ ಮುಂದೆ ಹೋಗಿ ಬಿಗ್ ಬಾಸ್ ಬಳಿ ಕ್ಷಮೆ ಕೇಳಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಕೂದಲು ಉದುರುತ್ತಿದ್ದರೆ. ಅದನ್ನು ತಡೆಗಟ್ಟಲು ಸುಲಭ ಉಪಾಯ ಇಲ್ಲಿದೆ ನೋಡಿ.!

    ಇಂದಿನ ದಿನದಲ್ಲಿ ಸಾಮಾನ್ಯವಾದ ವಿಚಾರವಾಗಿಬಿಟ್ಟಿದೆ. ಮಾಲಿನ್ಯ, ನೀರಿನಲ್ಲಿ ಬೆರೆಸುವ ರಾಸಾಯನಿಕ ಸೇರಿ, ನಗರಗಳಲ್ಲಿಪುರುಷರು ಹಾಗೂ ಮಹಿಳೆಯರಿಬ್ಬರಲ್ಲೂ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚಾಗುತ್ತಿದೆ. ಕೂದಲು ಉದುರುವಿಕೆ ತಡೆಗಟ್ಟಲು ಮನೆಯಲ್ಲೇ ಏನು ಮಾಡಬಹುದು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ ಕೂದಲನ್ನು ಉದ್ದ ಬಿಡದಿರಿ ಪ್ರತಿ 8 ಅಥವಾ 10 ವಾರಗಳಿಗೊಮ್ಮೆ ಕೂದಲನ್ನು ಸಣ್ಣದಾಗಿ ಕಟ್ಟಿಂಗ್‌ ಮಾಡಿಸಿರುವುದರಿಂದ ಕೂದಲು ಉದುರುವಿಕೆ ತಡೆಯಲು ಸಾಧ್ಯ. ಇದರಿಂದ ಕೂದಲಿನ ಬೆಳವಣಿಗೆ ಕೊಂಚ ವೇಗ ಪಡೆದುಕೊಳ್ಳುತ್ತದೆ. ಉದ್ದ ಕೂದಲಿಗೆ ಬೇಗನೆ ನಾಶವಾಗುತ್ತದೆ, ತುಂಡಾಗುತ್ತದೆ. ಇದಕ್ಕಾಗಿ…

  • ಜ್ಯೋತಿಷ್ಯ

    ಮನೆಯಲ್ಲಿ ಈ ಶಂಖ ಇದ್ದರೆ ಏನಾಗುತ್ತೆ ಗೊತ್ತಾ.!?

    ಶಂಖದ ಬಗ್ಗೆ ನೀವು ಸಾಕಷ್ಟು ತಿಳಿದಿರುತ್ತೀರಿ. ಪ್ರತಿಯೊಂದು ಶುಭ ಕಾರ್ಯದಲ್ಲೂ ಇದನ್ನು ಬಳಸ್ತಾರೆ. ದೇವರ ಪೂಜೆಯಿಂದ ಹಿಡಿದು ಮದುವೆ ಸಮಾರಂಭದಲ್ಲಿಯೂ ಶಂಖವನ್ನು ಶುಭವೆಂದು ಪರಿಗಣಿಸಲಾಗಿದೆ. ಈ ಶಂಖದಿಂದ ನೀವು ಇಚ್ಛಿಸಿದಷ್ಟು ಪ್ರೀತಿ ಜೊತೆಗೆ ಹಣ ಸಿಗಲಿದೆ ಎಂಬ ವಿಷ್ಯ ನಿಮಗೆ ಗೊತ್ತಾ? ತಾಯಿ ಲಕ್ಷ್ಮಿ ಕೈನಲ್ಲಿ ಹಿಡಿದಿರುವ ಶಂಖ ದಕ್ಷಿಣಾವರ್ತಿ. ಇದನ್ನು ಲಕ್ಷ್ಮಿ ಶಂಖವೆಂದೂ ಕರೆಯುತ್ತಾರೆ. ಇದು ಬಲಮುರಿ ಶಂಖವಾಗಿದೆ. ಸಾಮಾನ್ಯವಾಗಿ ಸಿಗುವ ಶಂಖಗಳು ಎಡಮುರಿ ಶಂಖಗಳಾಗಿರುತ್ತವೆ. ದಕ್ಷಿಣಾವರ್ತಿ ಶಂಖವನ್ನು ತಾಯಿ ಲಕ್ಷ್ಮಿ ಎದುರು ಕೆಂಪು ಬಟ್ಟೆಯಲ್ಲಿಟ್ಟು…

  • ಜ್ಯೋತಿಷ್ಯ

    ದೇವಿ ಕೃಪೆಯಿಂದ ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 8 ಜನವರಿ, 2019 ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವಸಂಧರ್ಭದಲ್ಲಿ ನಿಮ್ಮನ್ನು ಸಿಲುಕಿಸುತ್ತಾರೆ- ಯಾವುದೇ ಕ್ರಮ ಕೈಗೊಳ್ಳುವ…

  • ಉಪಯುಕ್ತ ಮಾಹಿತಿ, ಸರ್ಕಾರದ ಯೋಜನೆಗಳು

    24 ಗಂಟೆ ಇನ್ಮುಂದೆ ವಿದ್ಯುತ್ ಪೂರೈಕೆ, ಪವರ್ ಕಟ್ ಮಾಡಿದರೆ ವಿತರಕರಿಗೆ ದಂಡ..!ತಿಳಿಯಲು ಈ ಲೇಖನ ಓದಿ..

    ವಿದ್ಯುತ್ ಕಳ್ಳತನ ತಡೆಗೆ ಪ್ರೀಪೇಯ್ಡ್ ಅಥವಾ ಸ್ಮಾರ್ಟ್ ಮೀಟರ್ ಅಳವಡಿಸುವುದು ಕಡ್ಡಾಯಗೊಳಿಸುವುದರೊಂದಿಗೆ, ಈ ವರ್ಷದ ಅಂತ್ಯದೊಳಗೆ ತಡೆ ರಹಿತ ವಿದ್ಯುತ್ ನೀಡಲು ಸರಕಾರ ಚಿಂತಿಸಿದೆ.

  • ಸುದ್ದಿ

    ಆರ್ಥಿಕವಾಗಿ ಕುಸಿಯುತ್ತಿರುವ ಪಾಕ್ ಗೆ ಎಫ್‍ಎಟಿಎಫ್‍ನಿಂದ ಕೊನೆಯ ಎಚ್ಚರಿಕೆ

    ಉಗ್ರರಿಗೆ ಹಣಕಾಸು ನೀಡುವ ಹಾಗೂ ಅಕ್ರಮ ಹಣ ವರ್ಗಾವಣೆ ಮಾಡುತ್ತಿರುವ ಜಾಲ ಹತ್ತಿಕ್ಕಿ, ಅಕ್ಟೋಬರ್ ಒಳಗಾಗಿ ಅವರ ವಿರುದ್ಧ ನಿರ್ದಿಷ್ಟ ಕ್ರಮ ಕೈಗೊಳ್ಳದೇ ಇದ್ದಲ್ಲಿ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್(ಎಫ್‍ಎಟಿಎಫ್) ಎಚ್ಚರಿಕೆ ನೀಡಿದೆ.ಫ್ಲೋರಿಡಾದ ಒರ್ಲಾಂಡೋದಲ್ಲಿ ನಡೆದ ಉಗ್ರರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆಯಾದ ಹಣಕಾಸು ಕ್ರಮ ಕ್ರಿಯಾ ಪಡೆಯ (ಎಫ್‍ಎಟಿಎಫ್) ವಾರ್ಷಿಕ ಮಹಾಸಭೆಯಲ್ಲಿ ಉಗ್ರರನ್ನು ಹತ್ತಿಕ್ಕುವಲ್ಲಿ ಪಾಕಿಸ್ತಾನದ ವೈಫಲ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಲಾಯಿತು. ಪ್ರಸ್ತುತವಾಗಿ ಎಫ್‍ಎಟಿಎಫ್ ಅಲ್ಲಿ…