ಸುದ್ದಿ

ಅಂಬೇಡ್ಕರ್ ಸಂಘಗಳಿಂದ ಚೈತ್ರ ಕೋಟೂರು ವಿರುದ್ಧ ಹೋರಾಟ..!ಯಾಕೆ ಗೊತ್ತಾ?

71

ಕನ್ನಡ ನಟಿ, ಸಹಾಯಕ ನಿರ್ದೇಶಕಿ, ಬರಹಗಾರ್ತಿ ಚೈತ್ರ ಕೋಟೂರು ಇಷ್ಟುದಿನ ‘ಬಿಗ್ ಬಾಸ್’ ಮನೆಯೊಳಗೆ ವಿವಾದಕ್ಕೀಡಾಗಿದ್ದರು. ನಾಮಿನೇಟ್ ಆದಾಗೆಲ್ಲಾ, ಡೇಂಜರ್ ಝೋನ್ ನಿಂದ ಸೇಫ್ ಆಗಲು ಚೈತ್ರ ಕೋಟೂರು ಕಟ್ಟಿದ ಕಥೆಗಳು, ಮಾಡಿದ ಅವಾಂತರಗಳು ಒಂದೆರಡಲ್ಲ. ಆದರೆ ಆ ಎಲ್ಲಾ ವಿವಾದಗಳು ಇಲ್ಲಿಯವರೆಗೂ ‘ಬಿಗ್ ಬಾಸ್’ ಮನೆಯೊಳಗೆ ಮಾತ್ರ ಸೀಮಿತವಾಗಿತ್ತು. ಈಗ ನೋಡಿದ್ರೆ, ಚೈತ್ರಕೋಟೂರು ವಿರುದ್ಧ ಅಂಬೇಡ್ಕರ್ ಸೇನೆ ಹೋರಾಟಕ್ಕೆ ಇಳಿದಿದೆ.

‘ಬಿಗ್ ಬಾಸ್’ ಮನೆಯಲ್ಲಿ ಅಸ್ಪೃಶ್ಯತೆ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಚೈತ್ರ ಕೋಟೂರು ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಂಬೇಡ್ಕರ್ಸೇನೆ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದೆ. ಅಷ್ಟಕ್ಕೂ, ಚೈತ್ರ ಕೋಟೂರು ಏನು ಮಾಡಿದರು.?ಅಸ್ಪೃಶ್ಯತೆ ಬಗ್ಗೆ ಅವರ ಬಾಯಿಂದ ಬಂದ ಮಾತೇನು.? ಅಂಬೇಡ್ಕರ್ ಸೇನೆ ಕೋಪಿಸಿಕೊಳ್ಳಲು ಕಾರಣವೇನು ಅಂತೀರಾ.?

‘ಬಿಗ್ ಬಾಸ್ ಕನ್ನಡ-7’ ಕಾರ್ಯಕ್ರಮದಲ್ಲಿ ನಾಲ್ಕನೇ ವಾರದ ನಾಮಿನೇಷನ್ ಪ್ರಕ್ರಿಯೆ ನಡೆಯಿತು. ಓಪನ್ ನಾಮಿನೇಷನ್ ಆಗಿದ್ರಿಂದ ತಮ್ಮನ್ನ ಯಾರ್ಯಾರು ನಾಮಿನೇಟ್ ಮಾಡಿದರು ಮತ್ತು ಅವರುಗಳು ಕೊಟ್ಟ ಕಾರಣಗಳೇನು ಎಂಬುದು ಚೈತ್ರ ಕೋಟೂರುಗೆ ಸ್ಪಷ್ಟವಾಗಿ ತಿಳಿದು ಬಂತು. ನಾಮಿನೇಷನ್ಪ್ರಕ್ರಿಯೆಯಲ್ಲಿ ಚೈತ್ರ ಕೋಟೂರು ವಿರುದ್ದ ದೀಪಿಕಾ ದಾಸ್ ವೋಟ್ ಮಾಡಿದ್ದರು. ಆ ಬಗ್ಗೆ ಹರೀಶ್ರಾಜ್ ಬಳಿ ಚರ್ಚೆ ಮಾಡುತ್ತಿದ್ದಾಗ,”ದೀಪಿಕಾ ದಾಸ್ ಎಲ್ಲರಿಗೂ ತಿನ್ನಿಸುತ್ತಾರೆ, ತಬ್ಬಿಕೊಳ್ಳುತ್ತಾರೆ, ಮುತ್ತು ಕೊಡುತ್ತಾರೆ. ನನ್ನಮಾತ್ರ ಮುಟ್ಟಲ್ಲ. ಏನು Untouchables ನಾವು.? ಅಸ್ಪೃಶ್ಯರಾ ನಾವು..”ಎಂದು ನಗುತ್ತಾರೆ.

ಇದು ನೆಟ್ಟಿಗರನ್ನು ಕೆರಳಿಸಿದೆ. ಅಂಬೇಡ್ಕರ್ ಸೇನೆಯ ಆಕ್ರೋಶಕ್ಕೆ ಚೈತ್ರ ಕೋಟೂರು ರವರ ಈ ಮಾತೇ ಕಾರಣವಾಗಿದೆ. ಅಸ್ಪೃಶ್ಯತೆ ಬಗ್ಗೆ ಅವಹೇಳನ ಮಾಡಿದ ಚೈತ್ರ ಕೋಟೂರು ವಿರುದ್ಧ ಬೀದರ್ ಜಿಲ್ಲೆಯ ಅಂಬೇಡ್ಕರ್ ಸೇನೆ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದೆ. ಅಸ್ಪೃಶ್ಯತೆ ವಿರುದ್ಧ ಹಗುರವಾಗಿ ಮಾತನಾಡಿದ ಚೈತ್ರ ಕೋಟೂರುಗೆ ಬುದ್ಧಿಕಲಿಸಲು ನವೆಂಬರ್ 9 ರಂದು ಬಿಡದಿ ಬಳಿಯ ಬಿಗ್ ಬಾಸ್ ಮನೆ ಮುಂದೆ ಪ್ರತಿಭಟನೆ ನಡೆಸಲು ಅಂಬೇಡ್ಕರ್ ಸೇನೆ ಸಜ್ಜಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬೆಳಕಿನ ಹಬ್ಬ ದೀಪಾವಳಿಯ ಸೊಬಗು ಹೆಚ್ಚಿಸುವ ದೀಪಗಳ ಇಂದಿರುವ ಮಹತ್ವಗಳೇನು ಗೊತ್ತಾ..?

    ದೀಪಾವಳಿ, ದೀಪಗಳ ಹಬ್ಬ; ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು. ದೀಪಗಳು ಮನೆಯನ್ನು ಬೆಳಗೋದರ ಜೊತೆಗೆ ಮನಸ್ಸಿಗೆ ಮುದವನ್ನಾ ನೀಡುತ್ತವೆ. ಮನೆ ಮನಗಳನ್ನು ಬೆಳಗೋ ದೀಪಾವಳಿಗೆ ಇನ್ನೇನು ಒಂದು ವಾರವಷ್ಟೇ ಬಾಕಿ ಇದ್ದು ಸಿಲಿಕಾನ್ ಸಿಟಿಯ ಮಾರುಕಟ್ಟೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಒಂದ್ಕಡೆ ಟೆರಾಕೋಟಾ ಇಂದ ತಯಾರಾಗಿರೋ ಪುಟ್ಟ ಪುಟ್ಟ ದೀಪಗಳು. ಅವುಗಳ ಅಂದವನ್ನು ಮತ್ತಷ್ಟು ಹೆಚ್ಚಸ್ತಿರೋ ಬಣ್ಣ ಬಣ್ಣದ ದೀಪಗಳು….

  • Cinema, ಸಿನಿಮಾ

    ಕೋನೆಗೂ ಬರಲೇ ಇಲ್ಲ BBC earth ಕಾರಣ ಕೇಳಿದರೆ ಶಾಕ್ ಆಗ್ತೀರಾ

    ನಮಗೆ ಬೇಕಾಗಿರೋದು ಕನ್ನಡ, ಎಲ್ಲವನ್ನೂ ಕನ್ನಡದಲ್ಲೇ ಪಡೆಯುವುದು, ಆದರೆ ಕೆಲವರ ಪ್ರಕಾರ ಕನ್ನಡಕ್ಕೆ ಅನ್ಯ ಭಾಷೆಯಿಂದ ಬರುವುದು ತಪ್ಪಂತೆ, ಡಬ್ಬಿಂಗ್ ಭೂತವಂತೆ.

  • ಜ್ಯೋತಿಷ್ಯ

    ಶ್ರೀ ಆಂಜಿನೇಯ ಸ್ವಾಮಿಯನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ತಿಳಿಯಿರಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whapp ಮೇಷ ರಾಶಿನಿಮ್ಮ ಸಂಜೆ…

  • ಸಿನಿಮಾ

    ಬಾಲಿವುಡ್’ನ ಸೆಕ್ಸಿ ನಟಿಯರ ಸೆಕ್ಸಿ ಲುಕ್’ಗೆ ಈ ‘ಹಾಟ್ ಯೋಗಿನಿ’ ಕಾರಣ..!ತಿಳಿಯಲು ಈ ಲೇಖನ

    ಬಾಲಿವುಡ್‍ನ ಅನೇಕ ಸ್ಟಾರ್‍ಗಳ ಚಿರಯೌವ್ವನದ ಗುಟ್ಟೇ ದೀಪಿಕಾ ಮೆಹ್ತಾ. ಐಶ್ವರ್ಯ ರೈ, ಪ್ರಿಯಾಂಕ ಚೋಪ್ರ, ಬಿಪಾಷ ಬಸು, ದೀಪಿಕಾ ಪಡುಕೋಣೆ, ವಿದ್ಯಾಬಾಲನ್, ಪ್ರೀತಿ ಜಿಂಟಾ ಸೇರಿದಂತೆ ಅನೇಕ ತಾರೆಯರ ಯೋಗ ಗುರು ಈಕೆ. 1997ರಲ್ಲಿ ಈಕೆ ಪರ್ವತಾರೋಹಣ ಮಾಡುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಕೂದಲೆಳೆ ಅಂತರದಿಂದ ಸಾವಿನಿಂದ ಪಾರಾಗಿ ತನಗೆ ಎದುರಾದ ಸವಾಲನ್ನು ಎದುರಿಸಲು ಈಕೆ ಕಂಡುಕೊಂಡ ಮಾರ್ಗ ಯೋಗ.

  • ಸುದ್ದಿ

    ರಾತ್ರಿ ಉಳಿದ ಅನ್ನ ಸೇವಿಸಿ ‘ಆರೋಗ್ಯ’ ಕಾಪಾಡಿಕೊಳ್ಳಿ..!

    ಅನೇಕ ಬಾರಿ ರಾತ್ರಿ ಮಾಡಿದ ಅನ್ನ ಹಾಗೆ ಉಳಿದು ಬಿಡುತ್ತದೆ. ಈ ಅನ್ನವನ್ನು ಮರು ದಿನ ತಿನ್ನಲು ಸಾಮಾನ್ಯವಾಗಿ ಯಾರೂ ಇಷ್ಟ ಪಡುವುದಿಲ್ಲ. ಕೆಲವರು ಅದನ್ನು ಕಸಕ್ಕೆ ಹಾಕಿದ್ರೆ ಮತ್ತೆ ಕೆಲವರು ಪ್ರಾಣಿಗಳಿಗೆ ನೀಡುತ್ತಾರೆ. ಆದ್ರೆ ಇನ್ನು ಮುಂದೆ ಮಿಕ್ಕ ಅನ್ನವನ್ನು ಕಸಕ್ಕೆ ಹಾಕಬೇಡಿ. ಅದು ಆರೋಗ್ಯದ ಸಂಪತ್ತು ಎಂಬುದನ್ನು ನೆನಪಿಡಿ. ರಾತ್ರಿ ಅನ್ನ ಮಿಕ್ಕಿದ್ದರೆ, ಅದನ್ನು ಒಂದು ಮಡಿಕೆಯಲ್ಲಿ ಹಾಗೆ ಇಡಿ. ಬೆಳಿಗ್ಗೆ ಅದಕ್ಕೆ ಈರುಳ್ಳಿ ಸೇರಿಸಿ ತಿನ್ನಿರಿ. ಇದು ನಿಮ್ಮ ನೆಚ್ಚಿನ ಉಪಹಾರವಾಗದಿರಬಹುದು. ಆದ್ರೆ…