ಸುದ್ದಿ

ವಾಸುಕಿ ಪ್ರಿಯಾಂಕಳನ್ನು ತಬ್ಬಿಕೊಂಡಿದಕ್ಕೆ ಕೋಪಗೊಂಡ ಭೂಮಿ ಮಾಡಿದ್ದೇನು ಗೊತ್ತಾ?

67

ಬಿಗ್ ಬಾಸ್ ಮನೆಯಲ್ಲಿ ಈ ಸೀಸನ್ ನಲ್ಲಿ ಯಾವುದೇ ಲವ್ವು ಇಲ್ಲ ಅಂದುಕೊಂಡವರಿಗೆ ವಾಸುಕಿ‌ ಶಾಕ್ ನೀಡುತ್ತಾ ಬರುತ್ತಿರೋದು ಇವರೇನಾ ವಾಸುಕಿ ವೈಭವ್ ಎನ್ನುವಂತಾಗಿರೋದು ಸುಳ್ಳಲ್ಲ. ಆದರೆ ಸದ್ಯ ಚಂದನ ವಿಷಯ ಮುಗಿಸಿ ಭೂಮಿ ಜೊತೆ ಮನೆಯಲ್ಲಿ ಅಡ್ಡಾಡುತ್ತಾ ಹೆಡ್ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಾಸುಕಿ ಬಗ್ಗೆ ಮನೆಯಲ್ಲೇ ದೂರುಗಳು ಹೆಚ್ಚಾಗಿದೆ.

ಹೌದು, ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಲೈಟ್ ಆಫ್ ಆದಮೇಲೆ ಪ್ರಿಯಾಂಕ ಶೈನ್ ಹಾಗೂ ವಾಸುಕಿ ಅವರು ಲಿವಿಂಗ್ ಏರಿಯಾದಲ್ಲಿ ಮಾತನಾಡುವಾಗ. ಇತ್ತೀಚೆಗೆ ವಾಸುಕಿ ಅವರು ಎಲ್ಲರನ್ನು ಹಗ್ ಮಾಡಿ ಗುಡ್ ನೈಟ್ ಹೇಳೋದು ಜಾಸ್ತಿ ಆಗೋಗಿದೆ ಎಂದು ಪ್ರಿಯಾಂಕ ಅವರು ಶೈನ್ ಬಳಿ ಹೇಳುತ್ತಿದ್ದರು. ತಕ್ಷಣ ಪ್ರತಿಕ್ರಿಯೆ ನೀಡಿದ ವಾಸುಕಿ ವೈಭವ್ ಅವರು, ಹಾಗೇನಿಲ್ಲಾ.‌ ನಿಮ್ಮನ್ನು ಕೂಡ ಹಗ್ ಮಾಡ್ತೀನಿ ಬನ್ನಿ ಎಂದು ಇದ್ದಕ್ಕಿದ್ದ ಹಾಗೆ ಪ್ರಿಯಾಂಕರನ್ನು ತಬ್ಬಿಕೊಂಡೇ ಬಿಟ್ಟರು.

ವಾಸುಕಿ ಅವರು ಪ್ರಿಯಾಂಕರನ್ನು ತಬ್ಬಿಕೊಂಡದ್ದನು ಭೂಮಿ‌ ಅವರು ಬೆಡ್ ರೂಮಿನ ಗ್ಲಾಸ್ ಬಳಿ‌ ನಿಂತು ನೋಡಿದರು. ವಾಸುಕಿ ಪ್ರಿಯಾಂಕಳನ್ನು ತಬ್ಬಿಕೊಂಡ ದೃಶ್ಯ ಕಣ್ಣುತುಂಬಿಕೊಂಡು ಕೆಂಡಾಮಂಡಲವಾದ ಭೂಮಿ ಸೀದಾ ಹೋಗಿ ಬೆಡ್ ಶೀಟ್ ಹೊದ್ದುಕೊಂಡು ಕೋಪದಲ್ಲಿಯೇ ಮಲಗಿಯೇ ಬಿಟ್ಟರು.ಇದು ವಾಸುಕಿ ಅವರ ಅರಿವಿಗೂ ಬಂತು. 

ಇನ್ನು ನೋಡಿ ಮಾರನೆಯ ಇಡೀ ಸಂಪೂರ್ಣ ದಿನ ಭೂಮಿ ಕೋಪ ಮಾಡಿಕೊಂಡಿದ್ದಾರೇನೋ ಅಂತ ಭೂಮಿ ಹಿಂದಿಂದೆಯೇ ಸುತ್ತುತ್ತಾ ಕ್ಷಮೆ ಕೇಳಿದ್ದು ಕೆಟ್ಟದಾಗಿ ಕಾಣುತಿತ್ತು. ಇತ್ತ ಭೂಮಿ ವಾಸುಕಿಯನ್ನು ತನ್ನ ಸ್ವತ್ತಂತೆ ನಡೆದುಕೊಳ್ಳುತ್ತಿರುವುದು ಪ್ರೇಕ್ಷಕರಿಗೆ ರೋದನೆಯಾಗಿದೆ.

ಪ್ರೇಕ್ಷಕರಿಗೆ ಮಾತ್ರವಲ್ಲ.. ಬಿಗ್ ಬಾಸ್ ಮನೆಯ ಸದಸ್ಯರಿಗೇ ಈ ಬಗ್ಗ್ರ್ ಅಸಹ್ಯ ಹುಟ್ಟಿತೇನೋ. ವಾಸುಕಿಯನ್ನು ಹರೀಶ್ ರಾಜ್, ಕುರಿ ಪ್ರತಾಪ್ ಸೇರಿದಂತೆ ಎಲ್ಲರೂ ವಾಸುಕಿ ವೈಭವ್ ರನ್ನು ಆಡಿಕೊಳ್ಳಲು ಶುರು ಮಾಡಿದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆಧ್ಯಾತ್ಮ

    ರೋಗಮುಕ್ತ ಜೀವನಕ್ಕಾಗಿ ಯೋಗಾಭ್ಯಾಸ ಮಾಡಿ

    ಯೋಗಾಭ್ಯಾಸದಿಂದ ವ್ಯಕ್ತಿಯ ಆತ್ಮಗೌರವ, ಹಾಗೂ ಆತ್ಮವಿಶ್ವಾಸವು ವೃದ್ಧಿಸುತ್ತದೆ. ನಿರಂತರವಾಗಿ ಯೋಗಾಭ್ಯಾಸವನ್ನು ರೂಢಿಸಿಕೊಂಡವರು ರೋಗಮುಕ್ತವಾದ ಜೀವನವನ್ನು ನಡೆಸಬಹುದು ಎಂದು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಬೆಂಗಳೂರು ಪಶ್ಚಿಮ ವಲಯದ ಸಂಚಾಲಕ ಜಯರಾಮ್ ರವರು ಅಭಿಪ್ರಾಯಪಟ್ಟರು. ತಾಲ್ಲೂಕಿನ ಶ್ರೀಕ್ಷೇತ್ರ ಕೈವಾರದ ಶ್ರೀ ಯೋಗಿನಾರೇಯಣ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಯೋಗಾಭ್ಯಾಸ ಶಿಬಿರದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಯೋಗಾಭ್ಯಾಸವನ್ನು ಎಲ್ಲಿ ಬೇಕಾದರೂ ಮಾಡಬಹುದು. ಅದಕ್ಕೆ ವಿಶೇಷ ತಯಾರಿ ಅಥವಾ ಪರಿಕರಗಳೇನೂ ಬೇಕಾಗಿಲ್ಲ. ಯೋಗದಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪ್ರಸ್ತುತ…

  • inspirational

    ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ಬಾಂಗ್ಲಾದೇಶ

    ಮೌಂಟ್ ಮೌಂಗನುಯಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ, ಕಳೆದ ತಿಂಗಳು ಅತ್ಯಂತ ಕೆಳಮಟ್ಟದಲ್ಲಿರುವ ತಂಡವಾಗಿದ್ದು, ವಿಶ್ವ ಚಾಂಪಿಯನ್ ನ್ಯೂಜಿಲೆಂಡ್ ಅನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು. ಕ್ರಿಕೆಟ್‌ನಲ್ಲಿನ ಪವಾಡಗಳ  ಪಟ್ಟಿಗೆ ಇದು ಒಂದು ಹೊಸ ಸೇರ್ಪಡೆ. ಬಾಂಗ್ಲಾದೇಶ ಟೆಸ್ಟ್‌ನಲ್ಲಿ ಮೊದಲ ಬಾರಿಗೆ ನ್ಯೂಜಿಲೆಂಡ್ ಅನ್ನು ಸೋಲಿಸಿ 17 ಪಂದ್ಯಗಳ ಅಜೇಯ ತವರಿನ ದಾಖಲೆಯನ್ನು ಮುರಿಯಿತು. ಇದು ಅವರ ಆರನೇ ವಿದೇಶಿ ಟೆಸ್ಟ್ ಗೆಲುವು. ಆದರೆ ಅಂಕಿಅಂಶಗಳು, ಟ್ರಿವಿಯಾ ಮತ್ತು ಮೈಲಿಗಲ್ಲುಗಳಿಗಿಂತಲೂ ಹೆಚ್ಚು ಎದ್ದುಕಾಣುವ ಅಂಶವೆಂದರೆ ಬಾಂಗ್ಲಾದೇಶವು ನ್ಯೂಜಿಲೆಂಡ್‌ನಲ್ಲಿ ಹೇಗೆ…

  • ಸುದ್ದಿ

    ಇಲ್ಲಿದೆ ಸಿಹಿ ಸುದ್ದಿ! ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆ…!

    ಲೋಕಸಭಾ ಚುನಾಣಾ ಫಲಿತಾಂಶ ಬಂದ ನಂತರದ ದಿನಗಳಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯೆತ್ತ ಮುಖ ಮಾಡಿ, ರಾಜ್ಯದಲ್ಲಿ ಮೇ 23 ರಿಂದ 28ವರೆಗೆ ಕೇವಲ ಆರು ದಿನಗಳಲ್ಲಿ 72 ಪೈಸೆ ಪೇಟ್ರೊಲ್ ದರ ಏರಿಕೆ ಕಂಡಿತ್ತು. ಆದರೆ ಕಳೆದೆರಡು ದಿನಗಳಿಂದ ತೈಲ ದರ ಇಳಿಕೆಯೆತ್ತ ಮುಖ ಮಾಡಿರುವುದು ಗ್ರಾಹಕರಲ್ಲಿ ಸಂತಸ ಮೂಡಿಸಿದೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಕಂಡಾಗ ವಾಹನ ಸವಾರರ ಆಕ್ರೋಶ ಹೆಚ್ಚಾಗತ್ತೆ, ಇಳಿಕೆ ಕಂಡರೆ ಅವರ ಮೊಗದಲ್ಲಿ ಮಂದಹಾಸ ಮೂಡುತ್ತದೆ. ದೇಶದ ಪ್ರಮುಖ ನಗರಗಳಲ್ಲಿ…

  • ಸುದ್ದಿ

    ಇನ್ಮುಂದೆ ಗೂಗಲ್ ಡುಯೋ ; ಡೇಟಾ ಸೇವಿಂಗ್ ಮತ್ತು ಗ್ರೂಪ್‌ ವಿಡಿಯೊ ಕಾಲಿಂಗ್‌ ಆಯ್ಕೆ ಸೇರ್ಪಡೆ..!

    ಟೆಕ್‌ ಗುರು ಎನಿಸಿಕೊಂಡಿರುವ ಗೂಗಲ್ ವಿಡಿಯೊ ಕಾಲಿಂಗ್‌ಗಾಗಿ ‘ಗೂಗಲ್ ಡುಯೋ'(Google Duo) ಆಪ್‌ ಅನ್ನು ಪರಿಚಯಿಸಿದೆ. ಈ ಆಪ್‌ನಲ್ಲಿ ವಿಡಿಯೊ ಕಾಲಿಂಗ್ ಗುಣಮಟ್ಟವು ಅತ್ಯುತ್ತಮವಾಗಿದ್ದು, ಬಹುಬೇಗನೆ ಜನಪ್ರಿಯತೆ ಪಡೆದುಕೊಂಡಿದೆ. ಸದ್ಯ ವಿಡಿಯೊ ಕಾಲಿಂಗ್ ಭಾರೀ ಟ್ರೆಂಡ್‌ ಪಡೆದುಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಮುಂದುವರೆದಿರುವ ಕಂಪನಿಯು ತನ್ನ ‘ಗೂಗಲ್ ಡುಯೋ’ ಆಪ್‌ನಲ್ಲಿ ಮತ್ತಷ್ಟು ಹೊಸತನಗಳನ್ನು ಅಳವಡಿಸಲು ಸಜ್ಜಾಗಿದೆ. ಹೌದು, ಗೂಗಲ್ ತನ್ನ ‘ಗೂಗಲ್ ಡುಯೋ’ ಆಪ್‌ನಲ್ಲಿ ಇದೀಗ ‘ಗ್ರೂಪ್‌ ವಿಡಿಯೊ ಕಾಲಿಂಗ್’ ಮತ್ತು ‘ಡಾಟಾ ಸೇವಿಂಗ್ ಮೋಡ್‌’ ಫೀಚರ್ಸ್‌ಗಳನ್ನು ಸೇರಿಸಲಿದೆ….

  • Health

    ಜಿರಲೆಗಳ ಸೂಪರ್ ಸಂಸಾರ ನೋಡಿ ಬೆರಗಾದ ವೈದ್ಯರು..!ಯಾಕೆ ಗೊತ್ತಾ?ತಿಳಿದರೆ ನೀವು ಶಾಕ್ ಆಗುವುದು ಗ್ಯಾರಂಟಿ..

    ಸ್ವಚ್ಛತೆ ಕಾಪಾಡದ ಅಡುಗೆ ಮನೆಯಂತಹ ಸ್ಥಳಗಳಲ್ಲಿ ಜಿರಲೆಗಳು ನೆಲೆ ಕಂಡುಕೊಂಡು ಕುಟುಂಬ ಬೆಳೆಸುವುದು ಸಾಮಾನ್ಯ. ಆದರೆ ದಕ್ಷಿಣ ಚೀನಾದಲ್ಲಿ ವ್ಯಕ್ತಿಯೊಬ್ಬನ ಕಿವಿಯೊಳಗೇ ಜಿರಲೆ ಸಂಸಾರ ನಡೆಸಿದೆ.ಅದನ್ನು ಕಂಡು ವೈದ್ಯರೂ ಬೆಚ್ಚಿಬಿದ್ದಿದ್ದಾರೆ.ಎಲ್ವಿ ಎಂಬ ಹೆಸರಿನ 24 ವರ್ಷದವ್ಯಕ್ತಿ ಬೆಳಿಗ್ಗೆ ಏಳುವಾಗ ಕಿವಿಯಲ್ಲಿ ವಿಪರೀತ ನೋವುಂಟಾಗುತ್ತಿತ್ತು. ಒಳಗೆ ತೀರಾ ಕಿರಿಕಿರಿ. ಏನೋ ಓಡಾಡುತ್ತಿರುವ, ಕೊರೆಯುತ್ತಿರುವ ಸದ್ದು. ಆ ನೋವನ್ನು ಸಹಿಸಿಕೊಳ್ಳಲಾಗದೆ ಆತ ಒದ್ದಾಡತೊಡಗಿದ. ಆತನ ಮನೆಯವರು ಕಿವಿಯೊಳಗೆ ಬೆಳಕು ಹಾಯಿಸಿ ನೋಡಿದಾಗ ಏನೋ ಕೀಟವೊಂದು ಒಳಗೆ ಹರಿದಾಡುತ್ತಿದೆ ಎಂದೆನಿಸಿತ್ತು.ಕೂಡಲೇ ವೈದ್ಯರ…

  • ಕರ್ನಾಟಕ

    ನೋಂದಾಯಿತ ಕಟ್ಟಡ ಕಾರ್ಮಿಕ ಮಕ್ಕಳಿಗೆ ಶಾಲಾ ಕಿಟ್ ವಿತರಣೆ

    ಕೋಲಾರ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಸರ್ಕಾರದ ಮಟ್ಟದಲ್ಲಿ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ 01ನೇ ತರಗತಿಯಿಂದ 05 ತರಗತಿಯವರೆಗೆ ಶಾಲಾ ಕಿಟ್‌ಗಳನ್ನು ಕೋಲಾರ ಜಿಲ್ಲೆÀಯ ನೋಂದಾಯಿತ ಕಟ್ಟಡ ಕಾರ್ಮಿಕ ಮಕ್ಕಳಿಗೆ ನೇರವಾಗಿ ಆಯಾ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಛೇರಿಯಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಸೆಂಟ್ರ‍್ರಿAಗ್ ಮತ್ತು ಇತರೆ ಕಟ್ಟಡ ಕಾರ್ಮಿಕರ ಸಂಘ ಅಧ್ಯಕ್ಷರಾದ ನವೀನ್ ಕುಮಾರ್…