ಸುದ್ದಿ

ದೇಹದ ಕೆಟ್ಟ ಕೊಬ್ಬು ಕರಗಬೇಕೆಂದರೆ ದಿನ ನಿತ್ಯ ಈ ಹಣ್ಣನ್ನು ತಿಂದರೆ ಸಾಕು,.!

95

ಹಣ್ಣುಗಳು ನಮ್ಮ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಮುಖ್ಯ  ಪಾತ್ರ ವಹಿಸುತ್ತದೆ ಹಾಗೆಯೇ ಕೊಬ್ಬನ್ನು ಕರಗಿಸುವಲ್ಲಿಯೂ ಸಹ ಸಹಾಯ ಮಾಡುತ್ತದೆ, ಒಂದೊಂದು ಹಣ್ಣಿನಲ್ಲಿ ಒಂದೊಂದು ರೀತಿಯ  ಪೋಷಕಾಂಶಗಳು ಹಾಗೂ ವಿಟಮಿನ್ ಗಳು ನಮಗೆ ಸಿಗುತ್ತದೆ . ಹೀಗಾಗಿ ಎಲ್ಲಾ ರೀತಿಯ ಹಣ್ಣುಗಳನ್ನು ತಿನ್ನುವುದರಿಂದ  ಅದರ ಲಾಭಗಳು ನಮಗೆ ಸಿಗುತ್ತದೆ. ಕೆಲವು ಹಣ್ಣುಗಳು ರುಚಿಯಲ್ಲಿ ತುಂಬಾ ಸಿಹಿಯಲ್ಲದೆ ಇದ್ದರೂ ಅದರಲ್ಲಿ ದೇಹಕ್ಕೆ ಬೇಕಾಗುವಂತಹ ಪ್ರಮುಖ ಪೋಷಕಾಂಶಗಳು ಇರುತ್ತದೆ. ಹಾಗೆಯೆ ಅದರಲ್ಲಿ ಅವಕಾಡೊ(ಬೆಣ್ಣೆ ಹಣ್ಣು) ಹಣ್ಣು ಕೂಡ ಒಂದಾಗಿದೆ. ಅವಕಾಡೊ ಹಣ್ಣು ಬಾಯಿಗೆ ರುಚಿಸದೆ ಇದ್ದರೂ ಇದರಲ್ಲಿ ಇರುವಂತಹ ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅವಕಾಡೊ ಹಣ್ಣನ್ನು ಹೆಚ್ಚಿನವರು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಲು ಹಿಂಜರಿಯುವರು. ಬೆಳಗ್ಗೆ ಉಪಾಹಾರಕ್ಕೆ ಅಥವಾ ರಾತ್ರಿ ಊಟದ ವೇಳೆ ಅವಕಾಡೊ ಸೇವನೆ ಮಾಡುವಂತಹ ಜನರ ಸಂಖ್ಯೆಯು ಕಡಿಮೆ. ಇದರ ರುಚಿಯ ಹೊರತಾಗಿಯೂ ಇದರಲ್ಲಿ ಯಾವ ಲಾಭಗಳು ಇವೆ ಎಂದು ನಾವು ಇಲ್ಲಿ ತಿಳಿಯೋಣ.

ಅವಕಾಡೊದ ಆಂಟಿಆಕ್ಸಿಡೆಂಟ್ ಯಾವುದಕ್ಕೆ ನೆರವಾಗುವುದು : ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇದ್ದರೆ ಆಗ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತದೆ. ಕೆಟ್ಟ ಕೊಲೆಸ್ಟ್ರಾಲ್  ನಿವಾರಣೆ ಮಾಡುವ ಅಂಶಗಳು  ಅವಕಾಡೊದಲ್ಲಿ ಇದೆ ಎಂದು ಸಂಶೋಧನೆಯಲ್ಲಿ  ಸಾಬೀತಾಗಿದೆ. ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಬಗ್ಗೆ ಜನರಿಗೆ ಹೆಚ್ಚಾಗಿ ತಿಳಿದಿಲ್ಲ. ಕೆಟ್ಟ ಕೊಲೆಸ್ಟ್ರಾಲ್ ಎಂದರೆ ಆಕ್ಸಿಡೀಕೃತ ಕಡಿಮೆ ಸಾಂದ್ರತೆಯಲಿಪೊಪ್ರೋಟೀನ್(ಎಲ್ ಡಿಎಲ್) ಮತ್ತು ಸಣ್ಣ ಸಾಂದ್ರತೆಯ ಎಲ್ ಡಿಎಲ್ ಕಣಗಳು. ಅದೇ ಒಳ್ಳೆಯಕೊಲೆಸ್ಟ್ರಾಲ್ ಎಂದರೆ ಅಧಿಕ ಸಾಂದ್ರತೆಯ ಲಿಪೊಪ್ರೋಟೀನ್(ಎಚ್ ಡಿಎಲ್).

ಸಂಶೋಧನೆ : ಸುಮಾರು21ರ ಹರೆಯದಿಂದ 70ರ ಹರೆಯದ 45 ಪುರುಷರು ಹಾಗೂ ಮಹಿಳೆಯರನ್ನು ಐದು ವಾರಗಳ ಕಾಲ ಅವಕಾಡೊ ನೀಡಿ ಪರೀಕ್ಷೆ ಮಾಡಲಾಯಿತು. ಈ ಪರೀಕ್ಷೆಗೆ ಒಳಪಟ್ಟವರು ಎಲ್ಲವರು ಅಧಿಕ ತೂಕ ಅಥವಾ ಬೊಜ್ಜು ಮತ್ತು ಎಲ್ಡಿಎಲ್ ಮಟ್ಟವನ್ನು ಹೆಚ್ಚು ಹೊಂದಿದ್ದರು. ಇವರೆಲ್ಲರಿಗೂ ಕೊಲೆಸ್ಟ್ರಾಲ್ ಕಡಿಮೆ ಮಾಡುವಂತಹ ಎರಡು ಬಗೆಯ ಆಹಾರ ನೀಡಲಾಯಿತು. ಇದರಲ್ಲಿ ಒಂದು ಶೇ.24ರಷ್ಟು ಕೊಬ್ಬಿನಿಂದ ಪಡೆದ ಕ್ಯಾಲರಿಯ ಹೊಂದಿರುವ ಕಡಿಮೆ ಕೊಬ್ಬಿನ ಆಹಾರ ಮತ್ತು ಎರಡನೇಯದು ಮಧ್ಯಮ ಕೊಬ್ಬು ಹೊಂದಿರುವ ಕೊಬ್ಬಿನಿಂದ ಶೇ.36ರಷ್ಟುಕ್ಯಾಲರಿ ಪಡೆಯುವ ಆಹಾರ ನೀಡಲಾಯಿತು. ಮಧ್ಯಮ ಕೊಬ್ಬು ಹೊಂದಿರುವ ಆಹಾರ ಕ್ರಮದಲ್ಲಿ ಒಂದು ಮಧ್ಯಮಗಾತ್ರದ ಅವಕಾಡೊ(136 ಗ್ರಾಂ) ನೀಡಲಾಯಿತು. ಇದರಿಂದ ಅಧ್ಯಯನಗಳು ಕಂಡುಕೊಂಡಿರುವಂತಹ ವಿಚಾರವೆಂದರೆ ದಿನಕ್ಕೊಂದು ಅವಕಾಡೊ ಸೇವಿಸಿದರೆ ದೇಹದಲ್ಲಿರುವ ಎಲ್ ಡಿಎಲ್ ಮಟ್ಟವನ್ನು ಕಡಿಮೆ ಮಾಡುತ್ತದೆ . 

ದಿನಕ್ಕೊಂದು ಬೆಣ್ಣೆಹಣ್ಣು : ರಕ್ತನಾಳಗಳಲ್ಲಿ ಶೇಖರಣೆ ಆಗಿರುವ ಕೊಬ್ಬಿನ ಪದರಗಳಿಂದಾಗಿ ಅಧಿಕ ಸಂಖ್ಯೆಯ ಜನರು ಹೃದಯದ ಕಾಯಿಲೆಗಳಿಂದಾಗಿ ಸಾವನ್ನಪ್ಪುವರು. ಈ ಪದರ ನಿರ್ಮಾಣವನ್ನು ಕಡಿಮೆ ಮಾಡಿದರೆ ಆಗ ಹೃದಯದ ಕಾಯಿಲೆಗಳನ್ನು ಅರ್ಧದಷ್ಟುತಡೆಗಟ್ಟಿದಂತೆ. ದಿನಕ್ಕೆ ಒಂದು ಅವಕಾಡೊ ತಿಂದರೆ ಅದರ ಲಾಭಗಳು ಸಿಗುವುದು. ಆದರೆ ಬೇಗ ಇದರ ಲಾಭಪಡೆಯಲು ಹೆಚ್ಚಿನ ಮಟ್ಟದಲ್ಲಿ ಸೇವನೆ ಮಾಡಿದರೆ ಅವಕಾಡೊದಲ್ಲಿ ಇರುವಂತಹ 230 ಕ್ಯಾಲರಿಯು ತೂಕಹೆಚ್ಚಳಕ್ಕೆ ಕಾರಣವಾಗಬಹುದು ಮತ್ತು ಅದರಿಂದ ಸಿಗುವ ಲಾಭಗಳು ಸಿಗದೆ ಇರಬಹುದು. ಆದ್ದರಿಂದ ನಿಮ್ಮಆಹಾರ ಕ್ರಮದಲ್ಲಿ ಅವಕಾಡೊವನ್ನು ಸೇರಿಸಿಕೊಳ್ಳಿ ಮತ್ತು ಇದನ್ನು ಮುಂದುವರಿಸಿಕೊಂಡು ಹೋಗಿ. ಇದು ಆರೋಗ್ಯಕಾರಿ ಕೊಬ್ಬನ್ನು ನೀಡುವುದು ಮಾತ್ರವಲ್ಲದೆ, ಹೃದಯದ ಕಾಯಿಲೆ ಸಮಸ್ಯೆ ನಿವಾರಣೆಮಾಡುವುದು. ಆದರೆ ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ನೀವು ಇದನ್ನು ತುಂಬಾ ಮಿತ ಪ್ರಮಾಣದಲ್ಲಿಸೇವನೆ ಮಾಡಬೇಕು.

ಅವಕಾಡೊಆಹಾರ ಕ್ರಮದಲ್ಲಿ ಹೇಗೆ ಸೇರಿಸಿಕೊಳ್ಳುವುದು? 136 ಗ್ರಾಂ ಅವಕಾಡೊಎಂದರೆ ಅದು ಮೂರನೇ ಎರಡುಕಪ್ ನಷ್ಟು ಗ್ವಾಕಮೋಲ್ ಗೆ ಸಮಾನವಾಗಿದೆ. ಎರಡು ತುಂಡು ಅವಕಾಡೊಟೋಸ್ಟ್ ಅಥವಾ ಅವಕಾಡೊ ಚಾಕಲೇಟ್ಟ್ರಫ್ಫೆಲ್ ಗೆ ಸಮಾನ. ನೀವುಒಂದೇ ಸಲ ಇದನ್ನು ಸೇವನೆಮಾಡಬಹುದು. ಬೆಳಗ್ಗೆ ಕೆಲವು ತುಂಡುಅವಕಾಡೊ ಜತೆಗೆ ಮೊಟ್ಟೆ, ಗ್ವಾಕಮೋಲ್ಅನ್ನು ಮಧ್ಯಾಹ್ನದ ಊಟಕ್ಕೆ ಮತ್ತು ರಾತ್ರಿಗೆಅವಕಾಡೊ ಚಾಕಲೇಟ್ ಬಳಸಿಕೊಳ್ಳಬಹುದು. ನೀವುಇದನ್ನು ಪಾಲಿಸಿದರೆ ನಿಮ್ಮ ಹೃದಯದ ಆರೋಗ್ಯವುಚೆನ್ನಾಗಿರುವುದು. 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ನಿಮ್ಮ ಶೌಚಾಲಯವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಹೊಸ ಟ್ರಿಕ್ಸ್..!ತಿಳಿಯಲು ಈ ಲೇಖನ ಓದಿ …

    ಹೆಚ್ಚಿನ ವಿಜ್ಞಾನಿಗಳು ಹೇಳುವಂತೆ ಶೌಚಾಲಯವು ರೋಗ ರುಜಿನಗಳ ತವರಾಗಿದೆ ಎಂದಾಗಿದೆ. ಆದ್ದರಿಂದ ನೀವು ಸ್ಥಳಕ್ಕೆ ಹೆಚ್ಚು ಆದ್ಯತೆ ನೀಡಿ ಸ್ವಚ್ಛಗೊಳಿಸಿದಂತೆ ನಿಮ್ಮ ಮನೆಯನ್ನು ರಕ್ಷಿಸಿಕೊಳ್ಳಬಹುದಾಗಿದೆ.

  • ಸುದ್ದಿ, ಸ್ಪೂರ್ತಿ

    ಮಗನನ್ನು ರೈತನನ್ನಾಗಿ ಮಾಡಲು 90 ಸಾವಿರ ಸಂಬಳದ ಸರ್ಕಾರಿ ಕೆಲಸಕ್ಕೆ ಗುಡ್‍ ಬೈ.

    ರಾಜೇಂದ್ರ ಸಿಂಗ್ ಹಾಗೂ ಅವರ ಪತ್ನಿ ಚಂಚಲ್ ಕೌರ್ ಮೂಲತಃ ರಾಜಸ್ಥಾನದ ಅಜ್ಮೇರ್ ನವರಾಗಿದ್ದು, ಈ ದಂಪತಿಗೆ 11 ವರ್ಷದ ಮಗನಿದ್ದಾನೆ. ರಾಜೇಂದ್ರ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತ ಅವರ ಪತ್ನಿ ಚಂಚಲ್ ಸರ್ಕಾರಿ ಸ್ಟ್ಯಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇಬ್ಬರು ಇಂದೋರ್ ಬಳಿಯ ಹಳ್ಳಿಯೊಂದರಲ್ಲಿ ಒಂದೂವರೆ ಎಕರೆ ಜಮೀನು ಖರೀದಿಸಿದ್ದು ಅಲ್ಲಿ ಅವರು ತಮ್ಮ ಮಗ ಗುರುಭಕ್ಷ್ ಸಿಂಗ್‍ಗೆ ರೈತನಾಗಲು ತರಬೇತಿ ನೀಡುತ್ತಿದ್ದಾರೆ. ನಾವು ದೊಡ್ಡ ನಗರದಲ್ಲಿ ವಾಸಿಸುತ್ತಿರಬಹುದು. ಲಕ್ಷಗಟ್ಟಲೇ ಹಣವನ್ನು ಸಂಪಾದನೆ…

  • ಸುದ್ದಿ

    MP ಪ್ರತಾಪ್ ಸಿಂಹರವರನ್ನು ಕಸ್ಟಡಿಗೆ ತೆಗೆದುಕೊಂಡ ಪೊಲೀಸರು!ಈ ಸುದ್ದಿ ನೋಡಿ…

    ಬಹುಭಾಷ ನಟ ಪ್ರಕಾಶ್ ರೈ ಸಲ್ಲಿಸಿದ್ದ ಮಾನನಷ್ಟ ಕೇಸಿನಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು. ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಪ್ರತಾಪ್ ಸಿಂಹ ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಆದೇಶದ ಮೇರೆಗೆ ಪೊಲೀಸರು ಪ್ರತಾಪ್ ಸಿಂಹ ಅವರನ್ನು ಕಸ್ಟಡಿಗೆ ಪಡೆದು ಕೂರಿಸಿದ್ದಾರೆ. ಮತ್ತೆ ರೀ ಕಾಲ್ ಮಾಡುವವರೆಗೆ ಕಸ್ಟಡಿಗೆ ಪಡೆಯುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ….

  • ಸುದ್ದಿ

    ಅಂತಿಮವಾಗಿ ಚೈತ್ರಾ ಕೊಟ್ಟೂರು ಮನೆಯಿಂದ ಹೊರಗೆ ಬರುವಾಗ ಸಿನಿಮಾ ಶಾಕ್ ಕೊಟ್ಟೆ ಬಂದ್ರು!ಏನದು ಗೊತ್ತಾ.?

    ಬಿಗ್ ಬಾಸ್ ಮನೆಯಲ್ಲಿ ಸಂಡೇ ಪಂಚಾಯಿತಿ ನಡೆದಿದೆ. ಅಂತಿಮವಾಗಿ ಮನೆಯಿಂದ ಚೈತ್ರಾ ಕೊಟ್ಟೂರು ಹೊರಗೆ ಬಂದಿದ್ದಾರೆ. ನಾಲ್ಕನೇ ವಾರ ಎಲಿಮಿನೇಶನ್ ನಲ್ಲಿ ಚೈತ್ರಾ ಹೊರಗೆ ಬಂದಿದ್ದಾರೆ. ಯಸ್ ಮತ್ತು ನೋ ಪ್ರಶ್ನೆಗಳ ಮೂಲಕ ಅನೇಕ ವಿಚಾರಗಳನ್ನು ಸುದೀಪ್  ಕೆಣಕಿದರು. ಮೊದಲನೇ ವಾರ ಗುರುಲಿಂಗ ಸ್ವಾಮೀಜಿ, ಎರಡನೇ ವಾರ ಚೈತ್ರಾ ವಾಸುದೇವನ್ ಮತ್ತು ಮೂರನೇ ವಾರ ದುನಿಯಾ ರಶ್ಮಿ ಹೊರಗೆ ಬಂದಿದ್ದಾರೆ. ರಾಜು. ತಾಳಿಕೋಟೆ ಅಂತಿಮ ಘಟ್ಟದವರೆಗೆ ಬಂದು ಸೇಫ್ ಆಗಿದ್ದಾರೆ. ಎರಡು ತಿಂಗಳು ಆದ ಮೇಲೆ ನಾನೊಂದು…

  • ಆರೋಗ್ಯ, ಉಪಯುಕ್ತ ಮಾಹಿತಿ

    ಪೈಲ್ಸ್ ಅಥವಾ ಮೂಲವ್ಯಾಧಿ (ಮೊಳಕೆ ರೋಗ)ದ ನಿಯಂತ್ರಣಕ್ಕೆ ಇಲ್ಲಿದೆ ಸುಲಭ ಪರಿಹಾರಗಳು.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ಪೈಲ್ಸ್ ಅಥವಾ ಮೂಲವ್ಯಾಧಿ ವಿಪರೀತ ನೋವು ನೀಡುವ ರೋಗ. ಬೇರೆಯವರಿಗೆ ಹೇಳಿಕೊಳ್ಳಲೂ ಆಗದ ಅನುಭವಿಸಲೂ ಆಗದೆ ಒಳಗೊಳಗೆ ಚಿತ್ರ ಹಿಂಸೆ ನೀಡುತ್ತದೆ. ಈ ಕಾಯಿಲೆಗೆ ಕಾರಣಗಳು:- ಬಹಳ ಹೊತ್ತು ಕೂತು ಕೆಲಸ ಮಾಡುವವರಿಗೆ, ಅತಿ ಖಾರ, ಮಸಾಲೆ ಪದಾರ್ಥಗಳ ಸೇವನೆ,ದೀರ್ಘಕಾಲದ ಮಲಬದ್ಧತೆ,ತಂಬಾಕು, ಮದ್ಯಪಾನ ಇತ್ಯಾದಿ ಚಟಗಳು, ಹಾಗೂ ದಿನವೂ ಹೆಚ್ಚು ಪ್ರಯಾಣ ಮಾಡುವವರಿಗೆ ಸಾಮಾನ್ಯವಾಗಿ ಕಾಡುವ ತೊಂದರೆ ಮೂಲವ್ಯಾಧಿ (ಮೊಳಕೆ ರೋಗ). ಇದಕ್ಕೆ ಸಾಕಷ್ಟು ಔಷಧಿ ಮಾತ್ರೆಗಳಿವೆ. ಅತ್ಯಾಧುನಿಕ ಶಸ್ತ್ರಚಿಕಿತ್ಸೆಯೂ ಲಭ್ಯ. ಆದರೂ, ಇದಕ್ಕೊಂದು ಶಾಶ್ವತ ಪರಿಹಾರ…

  • budget, karnataka

    6ನೇ ವೇತನ ಆಯೋಗದ ಗಾಳಿಸುದ್ದಿಗೆ ಕಿವಿ ಕೊಡಬೇಡಿ – ಇಲ್ಲಿದೆ ನಿಜವಾದ ಭಜೆಟ್ನ ಸುದ್ದಿ

    ನೌಕರರ ಉತ್ಪಾದಕತೆ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಯೋಗ ಮುಂದಿನ ವರದಿಯಲ್ಲಿ ಶಿಫಾರಸು ಮಾಡಲಿದೆ. ವೇತನ ಹೆಚ್ಚಳ ಹಾಗೂ ಕಾರ್ಯದಕ್ಷತೆ ಮತ್ತು ಶ್ರಮತೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಮೂಲಕ ತನ್ನ ಕಲ್ಯಾಣ ಕಾರ್ಯಕ್ರಮಗಳನ್ನು ಇನ್ನಷ್ಟು ಉತ್ತಮವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಲಿದೆ.