ಸುದ್ದಿ

ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಟ್ರೈಲರ್ ಗೆ ಸ್ಟಾರ್ ನಟರ ಅಭಿಪ್ರಾಯವೇನು ಗೊತ್ತಾ,.!

25

ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷೆಯ ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅವನೇ ಶ್ರೀಮನ್ನಾರಾಯಣ ಐದು ಭಾಷೆಯಲ್ಲಿ ರಿಲೀಸ್ ಆಗಿದ್ದು ಎಲ್ಲಾ ಭಾಷೆಯ ಚಿತ್ರಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರಕ್ಷಿತ್ ಮತ್ತು ತಂಡ ಸುಮಾರು ಮೂರು ವರ್ಷಗಳಿಂದ ಪಟ್ಟ ಶ್ರಮ ಈ ಟ್ರೈಲರ್ ನಲ್ಲಿ ಎದ್ದು ಕಾಣುತ್ತಿದೆ. ಒಂದು ವಿಭಿನ್ನ ರೀತಿಯ ಸಿನಿಮಾ ಇದಾಗಿದ್ದು ಚಿತ್ರಾಭಿಮಾನಿಗಳ ಜೊತೆಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ಕೂಡ ಮೆಚ್ಚಿಕೊಂಡಿದ್ದಾರೆ. ಅವನೇ ಶ್ರೀಮನ್ನಾರಾಯಣನ ಟ್ರೈಲರ್ ನೋಡಿ ಸ್ಟಾರ್ಸ್ ಹೇಳಿದ್ದೇನು?

“ಅವನೇ ಶ್ರೀಮನ್ನಾರಾಯಣ ಅದ್ಬುತವಾದ ಟ್ರೈಲರ್. ಚಿತ್ರತಂಡದ ಶ್ರಮ ಈ ಟ್ರೈಲರ್ ನಲ್ಲಿ ಕಾಣುತ್ತಿದೆ. ರಕ್ಷಿತ್ ಶೆಟ್ಟಿ ಮತ್ತೆ ನಮ್ಮನ್ನು ಹೆಮ್ಮೆ ಪಡುವಂತೆ ಮಾಡಿದ್ದೀರಿ. ಒಳ್ಳೆಯದಾಗಲಿ” ಎಂದು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದಾರೆ.

ಟ್ರೈಲರ್ ನ ಪ್ರತಿಯೊಂದು ಫ್ರೇಮ್ ನಲ್ಲಿ ಚಿತ್ರತಂಡದ ಕಠಿಣ ಶ್ರಮ ಎದ್ದು ಕಾಣುತ್ತಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ” ಎಂದು ನಟ ನಿರೂಪ್ ಭಂಡಾರಿ ಹೇಳಿದ್ದಾರೆ. ಇನ್ನು ಅನೂಪ್ ಭಂಡಾರಿ ಕೂಡ ಹಾಡಿ ಹೊಗಳಿದ್ದಾರೆ. “ಒಂದು ಹಿಟ್ ನೀಡಿದ ನಂತರ ಒಂದು ಚಿತ್ರಕ್ಕಾಗಿ ಮೂರು ವರ್ಷಗಳನ್ನು ಕಳೆಯುವುದು ನಿಜವಾದ ಪ್ಯಾಶನ್. ಇಡೀ ತಂಡಕ್ಕೆ ಬೆಸ್ಟ್ ವಿಶಸ್” ಎಂದು ಹೇಳಿದ್ದಾರೆ.

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ “ಅವನೇ ಶ್ರೀಮನ್ನಾರಾಯಣ ಅದ್ಬುತವಾದ ಟ್ರೈಲರ್. ಚಿತ್ರತಂಡದ ಶ್ರಮ ಈ ಟ್ರೈಲರ್ ನಲ್ಲಿ ಕಾಣುತ್ತಿದೆ. ರಕ್ಷಿತ್ ಶೆಟ್ಟಿ ಮತ್ತೆ ನಮ್ಮನ್ನು ಹೆಮ್ಮೆ ಪಡುವಂತೆ ಮಾಡಿದ್ದೀರಿ. ಒಳ್ಳೆಯದಾಗಲಿ” ಎಂದು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದಾರೆ.

ಅವನೇ ಶ್ರೀಮನ್ನಾರಯಣ’ನನ್ನು ಹೊಗಳಿದ ಸುದೀಪ್ “ಒಂದು ದಿನ ಮುಂಚಿತವಾಗಿಯೆ ಟ್ರೈಲರ್ ಕಳುಹಿಸಿದ್ದಕ್ಕೆ ಧನ್ಯವಾದಗಳು ರಕ್ಷಿತೆ ಶೆಟ್ಟಿ. ಒಂದು ಪದದಲ್ಲಿ ಹೇಳಬೇಕೆಂದರೆ ಇದು ಕ್ರಾಫ್ಟೆಡ್. ಒಂದು ಕೇಂದ್ರ ಬಿಂದು ತಲುಪಲು ಒಂದು ತಂಡ ಒಟ್ಟಿಗೆ ಇದ್ದು, ಒಟ್ಟಿಗೆ ಕೆಲಸ ಮಾಡಿ, ಒಟ್ಟಿಗೆ ಯೋಚಿಸಿ ಮತ್ತು ಒಟ್ಟಿಗೆ ಕಾರ್ಯಗತಕ್ಕೆ ತಂದಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ” ಎಂದು ಹೇಳಿದ್ದಾರೆ

ಮಲಯಾಳಂ ನಟ ನಿವಿನ್ ಪೌಲಿ “ಪ್ರತಿ ಫ್ರೇಮ್ ಕೂಡ ಅದ್ಭುತವಾಗಿದೆ. ಮಲಯಾಳಂ ಚಿತ್ರರಂಗಕ್ಕೆ ಸ್ವಾಗತ. ಅದ್ದೂರಿಯಾದ ದೃಶ್ಯ ವಿದು” ಎಂದು ಮಲಯಾಳಂ ಟ್ರೈಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ತಮಿಳು ನಟ ಧನುಷ್ “ಚಮತ್ಕಾರ, ಸಾಹಾಸ, ಕ್ರಿಯೆ ಮತ್ತು ಭವ್ಯತೆ ಎಲ್ಲವನ್ನು ಹೊಂದಿದೆ ಅಭಿನಂದನೆಗಳು. ಇಡಿ ತಂಡಕ್ಕೆ ಒಳ್ಳೆಯದಾಗಲಿ” ಎಂದು ತಮಿಳು ನಟ ಧನುಷ್ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಮೆಚ್ಚಿಕೊಂಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ