inspirational

ಪ್ರಯಾಣಿಕರ ಉಪಯೋಗಕ್ಕಾಗಿ ಆಟೋವನ್ನೇ ಮನೆಯಂತೆ ಮಾಡಿದ ಚಾಲಕ ಸಿಗುತ್ತೆ ಹಲವು ಸೌಲಭ್ಯ..!

48

ಚಾಲಕರೊಬ್ಬರು ತನ್ನ ಆಟೋವನ್ನು ಮನೆಯಂತೆ ಮಾಡಿ ಪ್ರಯಾಣಿಕರಿಗೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು, ಇವರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸತ್ಯವನ್ ಗೈಟ್ ಅವರು ಪ್ರಯಾಣಿಕರ ಪ್ರಯಾಣ ಸುಖಕರವಾಗಿರಲಿ ಎಂದು ತಮ್ಮ ಆಟೋದಲ್ಲಿ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿದ್ದಾರೆ. ಸತ್ಯವನ್ ಅವರ ಆಟೋದಲ್ಲಿ ವಾಶ್‍ ಬೇಸಿನ್, ಮೊಬೈಲ್ ಫೋನ್ ಚಾರ್ಜಿಂಗ್ ಪಾಯಿಂಟ್, ಗಿಡಗಳು ಇನ್ನಿತರ ಸೌಲಭ್ಯಗಳು ಕಾಣಬಹುದು.

ವಿಶೇಷ ಏನಂದರೆ ಸತ್ಯವನ್ ಅವರು ಹಿರಿಯ ನಾಗರಿಕರಿಗೆ ಒಂದು ಕಿ.ಮೀವರೆಗೆ ಸವಾರಿ ಮಾಡಲು ಯಾವುದೇ ಹಣ ಪಡೆಯುವುದಿಲ್ಲ. ಅಲ್ಲದೆ ಸತ್ಯವನ್ ತಮ್ಮ ಆಟೋ ಹಿಂದೆ ‘ಮುಂಬೈನ ಮೊದಲ ಹೋಂ ಸಿಸ್ಟಮ್ ಆಟೋ ರಿಕ್ಷಾ’ ಎಂದು ಬರೆಸಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಸತ್ಯವನ್, ನೀವು ನನ್ನ ಆಟೋದಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಳ್ಳಹುದು. ಇಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತೆ. ವಾಶ್ ಬೇಸಿನ್ ಕೂಡ ಇದೆ. ಹಿರಿಯ ನಾಗರಿಕರಿಗೆ ಒಂದು ಕಿ.ಮೀವರೆಗೆ ಸವಾರಿ ಮಾಡಲು ನಾನು ಯಾವುದೇ ಹಣ ಪಡೆಯುವುದಿಲ್ಲ. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಬೇಕು ಎಂಬ ಉದ್ದೇಶದಿಂದ ಆಟೋವನ್ನು ಈ ರೀತಿ ಬದಲಾಯಿಸಿದೆ ಎಂದು ತಿಳಿಸಿದ್ದಾರೆ.

ಸತ್ಯವನ್ ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಹಲವರು, ‘ಒಳ್ಳೆಯ ಕೆಲಸ’, ‘ಉತ್ತಮ ಕಾರ್ಯ ಮಾಡುತ್ತಿದ್ದಿರಿ’, ‘ಕೇವಲ ಮುಂಬೈಯವರು ಈ ರೀತಿ ಮಾಡಬಹುದು’ ಎಂದು ಕಮೆಂಟ್ ಮಾಡಿ ಹೊಗಳುತ್ತಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಹುಟ್ಟುತ್ತಲೇ ದಾಖಲೆಯನ್ನ ನಿರ್ಮಿಸಿದ ಪುಟ್ಟ ಮಗು, ಮಗುವನ್ನ ನೋಡಿ ಶಾಕ್.

    ಸ್ನೇಹಿತರೆ ಪ್ರಪಂಚದಲ್ಲಿ ಅನೇಕ ಅದ್ಭುತಗಳು ನಡೆಯುತ್ತಲೇ ಇರುತ್ತದೆ, ಇನ್ನು ಕೆಲವು ಅದ್ಬುತಗಳನ್ನ ಮನುಷ್ಯ ಸೃಷ್ಟಿ ಮಾಡಿದರೆ ಇನ್ನು ಕೆಲವು ಅದ್ಬುತಗಳನ್ನ ದೇವರು ಸೃಷ್ಟಿ ಮಾಡುತ್ತಾನೆ. ತುಂಬಾ ಕತ್ತಲು ಮತ್ತು ಏನೇನೋ ಶಬ್ದಗಳ ನಡುವೆ ಒಂದು ಮಗು ತಾಯಿಯ ಹೊಟ್ಟೆಯಲ್ಲಿ 9 ತಿಂಗಳುಗಳ ಕಾಲ ಇದ್ದು ಆಚೆ ಬರುತ್ತದೆ, ಸ್ನೇಹಿತರೆ ಈಗ ತಾನೇ ಹುಟ್ಟಿದ ಮಗು ಏನು ದಾಖಲೆಯನ್ನ ಮಾಡಲು ಸಾಧ್ಯ ನೀವೇ ಹೇಳಿ, ಆದರೆ ನಾವು ಹೇಳುವ ಈ ಮಗು ಹುಟ್ಟುವಾಗಲೇ ದೊಡ್ಡ ದಾಖಲೆಯನ್ನ ಮಾಡಿದ್ದು ವೈದ್ಯಲೋಕಕ್ಕೆ…

  • ಉಪಯುಕ್ತ ಮಾಹಿತಿ

    “ಸೊನ್ನೆ” (ಝೀರೋ) ಕಂಡುಹಿಡಿದದ್ದು ಭಾರತ.ಹಾಗಿದ್ರೆ ಉಳಿದ ನಂಬರಗಳನ್ನು ಕಂಡುಹಿಡಿದಿದ್ದು ಯಾರು ಗೊತ್ತೇ.?ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

    ಬ್ರಹ್ಮ ಗುಪ್ತ ಇದನ್ನು ಡೆವಲಪ್ ಮಾಡಿ ಈಗಿನ ಸೊನ್ನೆ ರೂಪಕ್ಕೆ ತಂದ? ಹಾಗಿದ್ದರೆ ಕೇವಲ ಒಂದೂವರೆ ಸಾವಿರ ವರ್ಷದ ಹಿಂದೆ ಬಂದಿದ್ದಾ ಸೊನ್ನೆ ? ಅದರ ಮೊದಲು ಏನಿತ್ತು ? ಉಳಿದ ನಂಬರಗಳು ಯಾರು ಕಂಡುಹಿಡಿದಿದ್ದು ?

  • ಸುದ್ದಿ

    ಗೌರಿ ಲಂಕೇಶ್ ಹತ್ಯೆ ಪ್ರಕರಣ ಬೇಧಿಸಿದ ವಿಶೇಷ ತನಿಖಾ ತಂಡಕ್ಕೆ 25 ಲಕ್ಷ ರು. ಬಹುಮಾನ ಘೋಷಿಸಿದೆ !

    ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣ ಭೇದಿಸಿ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಪಡೆದ ಹೆಚ್ಚುವರಿ ಪೊಲೀಸ್‌ ಆಯುಕ್ತ ಬಿ.ಕೆ.ಸಿಂಗ್‌ ನೇತೃತ್ವದ ತನಿಖಾ ತಂಡಕ್ಕೆ ರಾಜ್ಯ ಸರ್ಕಾರ 25 ಲಕ್ಷ ರು. ಬಹುಮಾನ ಘೋಷಿಸಿದೆ. ಕೊಲೆ ಪ್ರಕರಣ ಭೇದಿಸಿದ ತನಿಖಾ ತಂಡಕ್ಕೆ 25 ಲಕ್ಷ ರು. ಬಹುಮಾನ ನೀಡುವಂತೆ ಕೋರಿ ಇತ್ತೀಚೆಗೆ ಬಿ.ಕೆ.ಸಿಂಗ್‌ ಅವರು ಗೃಹ ಇಲಾಖೆಗೆ ಪತ್ರ ಬರೆದಿದ್ದರು.ಸತತವಾಗಿ ಒಂದು ವರ್ಷ ಪರಿಶ್ರಮಪಟ್ಟವಿಶೇಷ ತನಿಖಾ ತಂಡ ಆರೋಪಿಗಳನ್ನು ಮುಂಬೈ ಸೇರಿದಂತೆ ವಿವಿಧೆಡೆ ಬಂಧಿಸಿತ್ತು. ತಂಡದ ಒಟ್ಟು 91 ಮಂದಿ…

  • corona

    ಕೋವಿಡ್-19 ಮಾರ್ಗಸೂಚಿ ಪಾಲನೆಗೆ ಸೂಚನೆ

    ಜಿಲ್ಲೆಯಲ್ಲಿ ಕೋವಿಡ್-19 ಪರಿಸ್ಥಿತಿಯು ನಿಯಂತ್ರಣದಲ್ಲಿದೆ. ಆದಾಗ್ಯೂ, ಪ್ರಪಂಚದ ಕೆಲವು ದೇಶಗಳಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಏರಿಕೆಯಾಗಿದ್ದು, ಮುಂಬರುವ ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಯ ಸಂದರ್ಭಗಳಲ್ಲಿ ಎಚ್ಚರ ವಹಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಯಂತೆ, ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು, ಜಿಲ್ಲೆಯ ಕೋವಿಡ್-19 ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಈ ಅಂಶಗಳ ಹಿನ್ನೆಲೆಯಲ್ಲಿ, ಪೂರ್ವಭಾವಿಯಾಗಿ ಸಾರ್ವಜನಿಕರು ಈ ಕ್ರಮಗಳನ್ನು ಪಾಲಿಸುವುದು ಅವಶ್ಯವಾಗಿದೆ. ಮುಚ್ಚಿದ ಸಂರಕ್ಷಣೆಗಳಾದ  (closed spaces) ಪಬ್, ಬಾರ್, ರೆಸ್ಟೋರೆಂಟ್, ಸಿನೆಮಾ ಹಾಲ್‌ಗಳು, ಶಾಪಿಂಗ್ ಮಾಲ್, ಕಛೇರಿಗಳು…

  • ಆಧ್ಯಾತ್ಮ, ಜ್ಯೋತಿಷ್ಯ

    ಚಂಡಿಯಾಗ ಎಂದರೇನು,? ಯಾರು ಯಾವಾಗ ಮಾಡಬೇಕು,? ಇದರಿಂದಾಗುವ ಲಾಭಗಳೇನು ಗೊತ್ತಾ..??

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಜ್ಯೋತಿಷ್ಯರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು9901077772 ದೇವಿ ಉಪಾಸನೆಯ ಪ್ರಮುಖ ಭಾಗವೇ ದುರ್ಗಾಸಪ್ತಶತಿ ಪಾರಾಯಣ. ದುರ್ಗಾಸಪ್ತಶತಿಯಲ್ಲಿ 700 ಶ್ಲೋಕಗಳಿವೆ. ಪ್ರತಿಯೊಂದು ಶ್ಲೋಕವನ್ನು ಮಂತ್ರರೂಪಕವಾಗಿ ಚರುವಿನ ಮೂಲಕ ಮಾಡುವ ಯಜ್ಞವೇ ಚಂಡಿಕಾಯಾಗ. ಚಂಡಿಕಾಯಾಗದ ಮೂಲಕ ಮಹಾಲಕ್ಷ್ಮಿ,…