ಸುದ್ದಿ

ಅನಾಮಧೇಯ 40 ಲಕ್ಷ ರೂ. ಬ್ಯಾಂಕಿಗೆ ಬಂತೆಂದು ಎಗ್ಗಿಲ್ಲದೆ ಖರ್ಚು ಮಾಡಿದ ದಂಪತಿಗೆ ಮುಂದೆ ಕಾದಿತ್ತು ಶಿಕ್ಷೆ!

46

ಚೆನ್ನೈ,  ತಮ್ಮ ಬ್ಯಾಂಕ್ ಖಾತೆಗೆ ಅನಾಮಧೇಯವಾಗಿ ಬಂದ 40 ಲಕ್ಷ ರೂ. ಹಣವನ್ನು ಖರ್ಚು ಮಾಡಿದ ಕಾರಣಕ್ಕಾಗಿ ಸ್ಥಳೀಯ ಕೋರ್ಟ್ 3 ವರ್ಷ ಶಿಕ್ಷೆ ವಿಧಿಸಿದ ಘಟನೆ ತಮಿಳುನಾಡಿನ ತಿರುಪೂರಿನಲ್ಲಿ ನಡೆದಿದೆ. ತಿರುಪೂರು ಮೂಲದ ಎಲ್ ಐಸಿ ಏಜೆಂಟ್ ವಿ. ಗುಣಶೇಖರನ್ ಹಾಗೂ ಆತನ ಪತ್ನಿ ರಾಧಾ ಶಿಕ್ಷೆಗೆ ಒಳಗಾಗಿರುವ ದಂಪತಿ.

2012ರಲ್ಲಿ ತಿರುಪೂರು ಮೂಲದ ಎಲ್ ಐಸಿ ಏಜೆಂಟ್ ವಿ.ಗುಣಶೇಖರನ್ ಎಂಬುವವರ ಅಕೌಂಟಿಗೆ ಅನಾಮಧೇಯವಾಗಿ 40 ಲಕ್ಷ ರೂ. ಜಮೆಯಾಗಿತ್ತು. ಹಣ ಬಂದ ಖುಷಿಗೆ ಎಲ್ಲಿಂದ ಬಂತು, ಯಾರು ವರ್ಗಾವಣೆ ಮಾಡಿದರು ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳದ ದಂಪತಿ ಆಸ್ತಿಯನ್ನು ಖರೀದಿ, ಮಗಳ ಮದುವೆ ಸೇರಿದಂತೆ ಹಣವನ್ನು ಹಿಗ್ಗಾಮುಗ್ಗಾ ಖರ್ಚು ಮಾಡಲು ಶುರು ಮಾಡಿದರು. ಹಣವನ್ನು ವಾಪಸ್ ಮರಳಿಸಲು ಪ್ರಯತ್ನಿಸಲಿಲ್ಲ.

ಆದರೆ ಹಣ ಕಳಿಸಿದವರಿಗೆ ತಾಪತ್ರಯ ಶುರುವಾಗಿದ್ದು 8 ತಿಂಗಳ ನಂತರ. ಸಂಸದರ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿಯಡಿ ಮೂಲಸೌಕರ್ಯ ಯೋಜನೆಗಾಗಿ ಲೋಕೋಪಯೋಗಿ ಇಲಾಖೆ ಕಳುಹಿಸಿದ ಹಣ ಇದಾಗಿತ್ತು. ಲೋಕೋಪಯೋಗಿ ಅಧಿಕಾರಿಗಳು ತಮ್ಮ ಇಲಾಖೆಯ ಇಂಜಿನಿಯರ್ ಅವರ ಕಾರ್ಪೋರೇಷನ್ ಬ್ಯಾಂಕಿನ ಅಕೌಂಟಿಗೆ ಕಳಿಸುವ ಬದಲು ತಪ್ಪಾಗಿ ಗುಣಶೇಖರನ್ ಅವರಿಗೆ ಕಳಿಸಿಬಿಟ್ಟಿದ್ದರು.

ಸರ್ಕಾರಿ ಇಲಾಖೆಯಾದ ಕಾರಣ 8 ತಿಂಗಳುಗಳು ಯಾರೊಬ್ಬರು ತಲೆಕೆಡಿಸಿಕೊಂಡಿರಲಿಲ್ಲ. ಇಂಜಿನಿಯರ್ ಅವರ ಅಕೌಂಟಿಗೆ ಹಲವು ತಿಂಗಳ ಕಾಲ ಹಣ ಬರದ ಕಾರಣ ಇಲಾಖೆಯ ಅಧಿಕಾರಿಗಳು ಬ್ಯಾಂಕ್ ಸಿಬ್ಬಂದಿ ಮೂಲಕ ಅಕೌಂಟ್ ಪರಿಶೀಲಿಸಿದಾಗ ಬೇರೆ ಅಕೌಂಟಿಗೆ ಹಣ ವರ್ಗಾವಣೆಯಾಗಿರುವುದು ತಿಳಿಯಿತು. ನಂತರ ಗುಣಶೇಖರ್ ಅವರನ್ನು ಸಂಪರ್ಕಿಸಿ ಹಣ ಮರು ವರ್ಗಾವಣೆ ಮಾಡಲು ತಿಳಿಸಿ ಕಾಲಾವಕಾಶವನ್ನು ನೀಡಿದ್ದರು. ಆದರೆ ನಿಗದಿತ ಕಾಲಾವಕಾಶದಲ್ಲಿಯೂ ಹಣ ಮರಳಿಸದ ಕಾರಣ ಇಲಾಖೆಯು ಗುಣ ಶೇಖರ್ ಅವರ ಮೇಲೆ 2015 ರಲ್ಲಿ ದೂರು ದಾಖಲಿಸಿದರು. ಸರ್ಕಾರಿ ಹಣವನ್ನು ದುರುಪಯೋಗ ಪಡಿಸಿಕೊಂಡ ಕಾರಣ ಸ್ಥಳೀಯ ನ್ಯಾಯಾಲಯ ಜಂಟಿ ಖಾತೆ ಹೊಂದಿದ್ದ ಗುಣಶೇಖರ್ ದಂಪತಿಗೆ 3 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ