ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚೆನ್ನೈ, ತಮ್ಮ ಬ್ಯಾಂಕ್ ಖಾತೆಗೆ ಅನಾಮಧೇಯವಾಗಿ ಬಂದ 40 ಲಕ್ಷ ರೂ. ಹಣವನ್ನು ಖರ್ಚು ಮಾಡಿದ ಕಾರಣಕ್ಕಾಗಿ ಸ್ಥಳೀಯ ಕೋರ್ಟ್ 3 ವರ್ಷ ಶಿಕ್ಷೆ ವಿಧಿಸಿದ ಘಟನೆ ತಮಿಳುನಾಡಿನ ತಿರುಪೂರಿನಲ್ಲಿ ನಡೆದಿದೆ. ತಿರುಪೂರು ಮೂಲದ ಎಲ್ ಐಸಿ ಏಜೆಂಟ್ ವಿ. ಗುಣಶೇಖರನ್ ಹಾಗೂ ಆತನ ಪತ್ನಿ ರಾಧಾ ಶಿಕ್ಷೆಗೆ ಒಳಗಾಗಿರುವ ದಂಪತಿ.
2012ರಲ್ಲಿ ತಿರುಪೂರು ಮೂಲದ ಎಲ್ ಐಸಿ ಏಜೆಂಟ್ ವಿ.ಗುಣಶೇಖರನ್ ಎಂಬುವವರ ಅಕೌಂಟಿಗೆ ಅನಾಮಧೇಯವಾಗಿ 40 ಲಕ್ಷ ರೂ. ಜಮೆಯಾಗಿತ್ತು. ಹಣ ಬಂದ ಖುಷಿಗೆ ಎಲ್ಲಿಂದ ಬಂತು, ಯಾರು ವರ್ಗಾವಣೆ ಮಾಡಿದರು ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳದ ದಂಪತಿ ಆಸ್ತಿಯನ್ನು ಖರೀದಿ, ಮಗಳ ಮದುವೆ ಸೇರಿದಂತೆ ಹಣವನ್ನು ಹಿಗ್ಗಾಮುಗ್ಗಾ ಖರ್ಚು ಮಾಡಲು ಶುರು ಮಾಡಿದರು. ಹಣವನ್ನು ವಾಪಸ್ ಮರಳಿಸಲು ಪ್ರಯತ್ನಿಸಲಿಲ್ಲ.
ಆದರೆ ಹಣ ಕಳಿಸಿದವರಿಗೆ ತಾಪತ್ರಯ ಶುರುವಾಗಿದ್ದು 8 ತಿಂಗಳ ನಂತರ. ಸಂಸದರ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿಯಡಿ ಮೂಲಸೌಕರ್ಯ ಯೋಜನೆಗಾಗಿ ಲೋಕೋಪಯೋಗಿ ಇಲಾಖೆ ಕಳುಹಿಸಿದ ಹಣ ಇದಾಗಿತ್ತು. ಲೋಕೋಪಯೋಗಿ ಅಧಿಕಾರಿಗಳು ತಮ್ಮ ಇಲಾಖೆಯ ಇಂಜಿನಿಯರ್ ಅವರ ಕಾರ್ಪೋರೇಷನ್ ಬ್ಯಾಂಕಿನ ಅಕೌಂಟಿಗೆ ಕಳಿಸುವ ಬದಲು ತಪ್ಪಾಗಿ ಗುಣಶೇಖರನ್ ಅವರಿಗೆ ಕಳಿಸಿಬಿಟ್ಟಿದ್ದರು.
ಸರ್ಕಾರಿ ಇಲಾಖೆಯಾದ ಕಾರಣ 8 ತಿಂಗಳುಗಳು ಯಾರೊಬ್ಬರು ತಲೆಕೆಡಿಸಿಕೊಂಡಿರಲಿಲ್ಲ. ಇಂಜಿನಿಯರ್ ಅವರ ಅಕೌಂಟಿಗೆ ಹಲವು ತಿಂಗಳ ಕಾಲ ಹಣ ಬರದ ಕಾರಣ ಇಲಾಖೆಯ ಅಧಿಕಾರಿಗಳು ಬ್ಯಾಂಕ್ ಸಿಬ್ಬಂದಿ ಮೂಲಕ ಅಕೌಂಟ್ ಪರಿಶೀಲಿಸಿದಾಗ ಬೇರೆ ಅಕೌಂಟಿಗೆ ಹಣ ವರ್ಗಾವಣೆಯಾಗಿರುವುದು ತಿಳಿಯಿತು. ನಂತರ ಗುಣಶೇಖರ್ ಅವರನ್ನು ಸಂಪರ್ಕಿಸಿ ಹಣ ಮರು ವರ್ಗಾವಣೆ ಮಾಡಲು ತಿಳಿಸಿ ಕಾಲಾವಕಾಶವನ್ನು ನೀಡಿದ್ದರು. ಆದರೆ ನಿಗದಿತ ಕಾಲಾವಕಾಶದಲ್ಲಿಯೂ ಹಣ ಮರಳಿಸದ ಕಾರಣ ಇಲಾಖೆಯು ಗುಣ ಶೇಖರ್ ಅವರ ಮೇಲೆ 2015 ರಲ್ಲಿ ದೂರು ದಾಖಲಿಸಿದರು. ಸರ್ಕಾರಿ ಹಣವನ್ನು ದುರುಪಯೋಗ ಪಡಿಸಿಕೊಂಡ ಕಾರಣ ಸ್ಥಳೀಯ ನ್ಯಾಯಾಲಯ ಜಂಟಿ ಖಾತೆ ಹೊಂದಿದ್ದ ಗುಣಶೇಖರ್ ದಂಪತಿಗೆ 3 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅನೇಕರು ನಿಯಮಿತ ಆದಾಯ ಗಳಿಸುವ ದಾರಿ ಹುಡುಕುತ್ತಾರೆ. ನೌಕರಿ ಬಿಟ್ಟು ಸ್ವಂತ ಬ್ಯುಸಿನೆಸ್ ಶುರು ಮಾಡಿ, ಕೈತುಂಬ ಲಾಭ ಗಳಿಸುವ ಬ್ಯುಸಿನೆಸ್ ಹುಡುಕಾಟ ನಡೆಸುತ್ತಾರೆ. ಅಂತವರಿಗೆ ಮೊಟ್ಟೆ ಮಾರಾಟಕ್ಕಾಗಿ ಕೋಳಿ ಸಾಕಣಿಕೆ ಬೆಸ್ಟ್. 1,500 ಕೋಳಿಗಳನ್ನು ಸಾಕಿ ಸಣ್ಣ ಮಟ್ಟದಲ್ಲಿಯೂ ನೀವು ಮೊಟ್ಟೆ ಮಾರಾಟ ಶುರು ಮಾಡಬಹುದು. ಈ ಬ್ಯುಸಿನೆಸ್ ಶುರು ಮಾಡಲು ನಿಮಗೆ 7-9 ಲಕ್ಷ ರೂಪಾಯಿಯಷ್ಟು ಖರ್ಚು ಬರುತ್ತದೆ. ಒಮ್ಮೆ ಕ್ಲಿಕ್ ಆದ್ರೆ ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿ ಆದಾಯ ಪಡೆಯಬಹುದು. ಉತ್ತಮ…
ಸಿಲಿಕಾನ್ ಸಿಟಿಯ ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಹೂವು ಮಾರುತ್ತಿದ್ದ ಬಾಲಕಿಯನ್ನು ವಸತಿ ಶಾಲೆಗೆ ಸೇರಿಸಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಸಂಗೀತಾಳ ತಂದೆ, ತಾಯಿಯ ಮನವೊಲಿಸಿ ಕೊನೆಗೂ ಬಾಲಕಿಗೆ ಶಿಕ್ಷಣ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಾಲಕಿ ರಾಮನಗರದ ಕೈಲಾಂಚದಲ್ಲಿರುವ ವಸತಿ ಶಾಲೆಯಲ್ಲಿ 7ನೇ ತರಗತಿಗೆ ದಾಖಲಾತಿ ಪಡೆದಿದ್ದಾಳೆ. ಮನೆಯಲ್ಲಿ ಕಡು ಬಡತನವಿರುವ ಕಾರಣಕ್ಕೆ ತಂದೆ ತಾಯಿ ಇದ್ದರೂ ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಸಂಗೀತಾ ಹೂವು ಮಾರುತ್ತಿದ್ದಳು. ಸಂಗೀತ ತಂದೆ…
ನಿಮ್ಮ ಗುರಿಯನ್ನು ತಲುಪಲು ಶ್ರಮ ಪಡಬೇಕು. ಶ್ರಮ ಪಟ್ಟಾಗಲೇ ಅದಕ್ಕೆ ಪ್ರತಿಫಲ ಸಿಗುವುದು. ಗಂಡ ಇಲ್ಲದ ಈ 22 ವರ್ಷದ ಹೆಣ್ಣು ತಾನು ಆಟೋ ಓಡಿಸಿ ತನ್ನ ಚಿಕ್ಕ ಮಗುವಿನೊಂದಿಗೆ ಜೀವನ ಸಾಗಿಸುತ್ತಿದ್ದಾಳೆ .
ಈಗಾಗಲೇ ಮಿಲನ ಪ್ರಕಾಶ್ ಅವರು ಕತೆ ಓಕೆ ಮಾಡಿಕೊಂಡಿದ್ದು, ಆ ಬಗ್ಗ ದರ್ಶನ್ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ಕೂಡ ಮಾಡಿದ್ದಾರೆ. ಸದ್ಯಕ್ಕೆ ದರ್ಶನ್ ಅವರು ‘ಒಡೆಯ’ ಚಿತ್ರದ ಬಾಕಿ ದೃಶ್ಯಗಳು ಹಾಗೂ ‘ರಾಬರ್ಟ್’ ಚಿತ್ರದ ಶೂಟಿಂಗ್ನಲ್ಲಿದ್ದಾರೆ. ಕುರುಕ್ಷೇತ್ರ ಅಬ್ಬರವೇ ಕಮ್ಮಿಯಾಗಿಲ್ಲ ಆಗಲೇ ‘ಒಡೆಯಾ’ ರಿಲೀಸ್ ಡೇಟ್ ಫಿಕ್ಸ್,ಇದರ ನಡುವೆ ‘ಗಂಡುಗಲಿ ಮದಕರಿನಾಯಕ’ ಸಿನಿಮಾ. ಈ ಮೂರೂ ಚಿತ್ರಗಳ ನಂತರ ಪ್ರಕಾಶ್ ಅವರ ಸಿನಿಮಾ ಸೆಟ್ಟೇರುತ್ತಾ ಅಥವಾ ಇವುಗಳ ನಡುವೆಯೇ ಇವರ ಎರಡನೇ ಸಿನಿಮಾ ಶುರುವಾಗುತ್ತದ ಎಂಬುದು…
ಮಕ್ಕಳು 18 ವರ್ಷಕ್ಕಿಂತ ಚಿಕ್ಕವರಿದ್ದರೆ, ಸರ್ಕಾರಿ ಅಥವಾ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆಂದಾದ್ರೆ ಇಲ್ಲೊಂದು ಸುವರ್ಣಾವಕಾಶವಿದೆ. ಮಕ್ಕಳಿಗೆ 1 ಲಕ್ಷದಿಂದ 10 ಸಾವಿರದವರೆಗೆ ಹಣ ಗೆಲ್ಲುವ ಅವಕಾಶವನ್ನು ಕೇಂದ್ರ ಸರ್ಕಾರ ನೀಡ್ತಿದೆ.
ಪ್ಲಾಸ್ಟಿಕ್ ಬಾಟಲಿಗಳನ್ನು ಮರಳಿನಿಂದ ತುಂಬಿಸಿಲಾಗುತ್ತದೆ, ನಂತರ ಬಾಟಲಿಗಳನ್ನು ಮೇಲೆ ತೋರಿಸಿರುವ ಚಿತ್ರದಂತೆ ಸಾಲಲ್ಲಿ ಜೋಡಿಸಲಾಗುತ್ತದೆ, ಮರಳು ಮತ್ತು ಸಿಮೆಂಟ್ ಅನ್ನು ಬೆರೆಸಿ ನಿರ್ಮಾಣಗೊಂಡ ಬಾಟಲಿಯ ಗೋಡೆಯ ಮೇಲೆ ಹಾಕಲಾಗುತ್ತದೆ, ಇದು ಬಾಟಲಿಗಳನ್ನು ಹಿಡಿದಿಡಲು ಸಹಕಾರಿಯಾಗುರ್ತದೆ ಹಾಗು ಘನ ಗೋಡೆಯನ್ನು ಹೊಂದುತ್ತದೆ.