ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈಗ ಚಳಿಗಾಲ. ಅಂದರೆ ಸಣ್ಣ ಪುಟ್ಟ ಕಾಯಿಲೆಗಳಿಗೆ ಆಹ್ವಾನ ಕೊಡುವ ಕಾಲ. ನೀವು ಬೇಡ ಎಂದರೂ ಅವುಗಳು ಮಾತ್ರ ನಿಮ್ಮನ್ನು ಬಿಡುವುದಿಲ್ಲ. ವರ್ಷ ಪೂರ್ತಿ ಈ ಸಮಯಕ್ಕಾಗಿಯೇ ಹೊಂಚು ಹಾಕಿ ಕಾದು ಕುಳಿತಿರುತ್ತವೆ. ಅಕ್ಟೋಬರ್, ನವೆಂಬರ್ ತಿಂಗಳು ಪ್ರಾರಂಭವಾಗುತ್ತಿದ್ದ ಹಾಗೆ ಮೈಯಲ್ಲಿ ಬೆವರು ಕಡಿಮೆಯಾಗಿ ಮೂಗಿನಲ್ಲಿ ಶೀತ ದ್ರವ ಹರಿಯಲು ಪ್ರಾರಂಭವಾಗುತ್ತದೆ. ಇದನ್ನು ಹಾಗೇ ಬಿಟ್ಟರೆ ಒಂದರ ಹಿಂದೆ ಒಂದು ಕೊಂಡಿಯಂತೆ ಶೀತ, ಕೆಮ್ಮು, ಜ್ವರ ಹೀಗೆ ಒಂದೊಂದಾಗಿ ಬಂದು ಅಂಟಿಕೊಳ್ಳುತ್ತವೆ. ಅಷ್ಟು ದಿನಗಳವರೆಗೆ ಬೆಳಗ್ಗೆ ಎದ್ದು ಆಫೀಸಿನ ಕಡೆ ಮುಖ ಮಾಡುತ್ತಿದ್ದವರು ಹಠಾತ್ತನೆ ಆಸ್ಪತ್ರೆಯ ಕಡೆಗೆ ಓಡುವಂತೆ ಮಾಡುತ್ತವೆ. ಆದರೆ ಮುಂಜಾಗೃತಾ ಕ್ರಮವಾಗಿ ಕಾಯಿಲೆ ಬಂದ ಮೇಲೆ ಅದರ ಜೊತೆ ಹೆಣಗಾಡುವುದಕ್ಕಿಂತ ಬರದ ಹಾಗೆ ತಡೆಯುವುದು ಒಳಿತಲ್ಲವೇ? ಆ ಸಮಯದಲ್ಲಿ ಮಾತ್ರೆ ಅಥವಾ ಔಷಧಿಗಳು ನಮ್ಮ ಬಳಿ ಇಲ್ಲದೆ ಹೋದರೂ, ಕನಿಷ್ಠ ಪಕ್ಷ ಮನೆ ಮದ್ದು ಎಂದು ಪ್ರಸಿದ್ಧವಾಗಿರುವ ನಮ್ಮ ಅಡುಗೆ ಮನೆಯ ಹಲವಾರು ಆಹಾರ ಪದಾರ್ಥಗಳು ನಮಗೆ ಬಹಳ ಉಪಯೋಗವಾಗುತ್ತವೆ. ಇದರಲ್ಲಿ ಕೆಲವೊಂದು ಹಣ್ಣು-ತರಕಾರಿಗಳು ಸಹ ಸೇರಿವೆ.
ಇಂತಹ ಚಳಿಗಾಲಕ್ಕೆ ಎಂದೇ ಔಷಧಿಯಾಗಿ ಮಾರ್ಪಾಡಾಗುವ ಒಂದು ಹಣ್ಣು ಮತ್ತು ಅದರ ಹುಳಿ ಸಿಹಿ ಮಿಶ್ರಿತ ರಸ ನಮಗೆ ಆ ಕ್ಷಣದಲ್ಲಿ ತ್ವರಿತಗತಿಯಲ್ಲಿ ಕೆಮ್ಮನ್ನು ಉಪಶಮನ ಮಾಡುವ ಅದ್ಭುತ ಶಕ್ತಿಯನ್ನು ಹೊಂದಿದೆ. ಈ ಹಣ್ಣು ಮಿಕ್ಕ ಎಲ್ಲಾ ಸಮಯದಲ್ಲಿ ಕೇವಲ ರುಚಿಗಾಗಿ ಅದರ ಹಳದಿ ಬಣ್ಣದ ಹೋಳುಗಳ ಮೇಲೆ ಉಪ್ಪು ಖಾರ ಸವರಿಕೊಂಡು ತಿನ್ನಲು ಮಾತ್ರ ಯೋಗ್ಯ ಎಂದು ನೀವು ಅಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ. ಸಾಮಾನ್ಯವಾಗಿ ಇದರ ಅದ್ಭುತ ಆರೋಗ್ಯ ಪ್ರಯೋಜನಗಳು ಇದುವರೆಗೂ ನಿಮಗೆ ತಿಳಿದಿರುವುದಿಲ್ಲ ಎಂದುಕೊಳ್ಳುತ್ತೇವೆ. ವಿಶೇಷವಾಗಿ ಕೆಮ್ಮಿನ ಸಮಸ್ಯೆಗೆ ಈ ಹಣ್ಣು ಮತ್ತು ಅದರ ರಸ ಉಪಯೋಗಿಸಲ್ಪಡುತ್ತದೆ. ಇಷ್ಟೊಂದು ಈ ಹಣ್ಣಿನ ಬಗ್ಗೆ ಹೇಳಬೇಕಾದರೆ ಇದು ಯಾವುದೋ ಒಂದು ವಿಶೇಷವಾದ ಹಣ್ಣೇ ಆಗಿರಬೇಕು ಎಂದು ನಿಮ್ಮ ಮನಸ್ಸಿನಲ್ಲಿ ಬಂದಿದೆ ಎಂಬುದು ನಮಗೆ ಗೊತ್ತು
.ಹಾಗಾದರೆ ಈ ಹಣ್ಣು ಯಾವುದು? ಅದೇ ನಿಮ್ಮ ನೆಚ್ಚಿನ ಪೈನಾಪಲ್ ಹಣ್ಣು. ಹೌದು ನಾವು ಇದುವರೆಗೂ ಹೇಳಿದ್ದು ಇದರ ಬಗ್ಗೆಯೇ. ಪೈನಾಪಲ್ ಹಣ್ಣು ನಮ್ಮ ಎಂತಹದೇ ಕೆಮ್ಮಿಗೂ ಸಹ ಪೂರ್ಣ ವಿರಾಮ ವನ್ನು ಹಾಕಬಲ್ಲ ಶಕ್ತಿಯನ್ನು ಹೊಂದಿದೆ. ಕೆಮ್ಮಿಗೆ ಇದೊಂದು ಮನೆಮದ್ದು ಎಂದರೂತಪ್ಪಾಗುವುದಿಲ್ಲ. ಕೇವಲ ಪೈನಾಪಲ್ ಹಣ್ಣನ್ನು ತಿಂದರೆ ಕೆಮ್ಮು ದೂರಾಗುತ್ತದೆ ಅಥವಾ ಈ ಹಣ್ಣಿನ ಜೊತೆ ಬೇರೆ ಇನ್ಯಾವುದೇ ಆಹಾರ ಪದಾರ್ಥವನ್ನು ಬಳಸಬೇಕೇ ಎಂಬುದರ ಬಗ್ಗೆ ಈ ಲೇಖನದಲ್ಲಿ ಸ್ಪಷ್ಟತೆಯನ್ನು ಕೊಡಲಾಗಿದೆ.
ಪೈನಾಪಲ್ ಹಣ್ಣಿನ ರುಚಿ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ.ಅದರ ಹುಳಿ ಸಿಹಿ ಮಿಶ್ರಣದ ಜ್ಯೂಸು ಸಹ ಎಂತಹವರ ಬಾಯಲ್ಲೂ ನೀರು ತರಿಸುತ್ತದೆ. ಮನುಷ್ಯನ ದೇಹಕ್ಕೆ ಉಂಟಾಗುವ ಯಾವುದೇ ಬಗೆಯ ಸಣ್ಣ ಪುಟ್ಟ ಕಾಯಿಲೆಗಳನ್ನು ನಿಯಂತ್ರಣ ಮಾಡುವುದರಲ್ಲಿ ಪೈನಾಪಲ್ ನಲ್ಲಿರುವ ಆಂಟಿ – ಆಕ್ಸಿಡೆಂಟ್ ಗಳು ಸಹಾಯ ಮಾಡುತ್ತವೆ. ನಮ್ಮ ಜೀರ್ಣಾಂಗದ ಉತ್ತಮ ಕಾರ್ಯ ಚಟುವಟಿಕೆಗೆ ಪೈನಾಪಲ್ ಹಣ್ಣು ಸಹಕಾರಿ. ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ನಮಗೆ ಎದುರಾಗುವ ಕೆಮ್ಮು ಮತ್ತು ಶೀತದಂತಹ ಕಾಯಿಲೆಗಳಿಗೆ ಪೂರ್ಣವಿರಾಮ ಹಾಕುತ್ತದೆ.
ಪೈನಾಪಲ್ ಜ್ಯೂಸ್ ಅನ್ನು ಕೆಮ್ಮಿಗೆ ಒಂದು ಔಷಧಿಯಾಗಿ ಉಪಯೋಗಿಸಬಹುದು. ಏಕೆಂದರೆ ಪೈನಾಪಲ್ ಹಣ್ಣಿನ ರಸದಲ್ಲಿ ಬ್ರೊಮೆಲೈನ್ ಎಂಬ ಎಂಜೈಮ್ ಇದ್ದು ಇದರ ಆಂಟಿ – ಇಂಪ್ಲಾಮೇಟರಿ ಗುಣ ಲಕ್ಷಣಗಳು ಕೆಮ್ಮು ಮತ್ತು ಶೀತದಿಂದ ಉಂಟಾಗುವ ಯಾವುದೇ ಬಗೆಯ ಸೋಂಕುಗಳನ್ನು ಮತ್ತು ಅಲರ್ಜಿಗಳನ್ನು ಕಡಿಮೆ ಮಾಡುತ್ತದೆ. ಫೈನಾಪಲ್ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ನೆಗಡಿ ಕೆಮ್ಮಿನಂತಹ ಲಕ್ಷಣಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಇದರ ಬಗ್ಗೆ ಹಲವಾರು ಅಧ್ಯಯನಗಳು ಕೂಡ ತಮ್ಮ ಸಂಶೋಧನೆಯಲ್ಲಿ ತಿಳಿಸಿವೆ.
ಆರೋಗ್ಯ ತಜ್ಞರ ಪ್ರಕಾರ ” ಯಾವುದೇ ಒಬ್ಬ ಮನುಷ್ಯ ತನ್ನ ದೇಹಕ್ಕೆ ಯೋಗ, ವ್ಯಾಯಾಮದಂತಹ ಹವ್ಯಾಸಗಳನ್ನು ರೂಡಿಸಿ ಆಗಾಗ ಜೇನು ತುಪ್ಪದ ಜೊತೆಗೆ ಸ್ವಲ್ಪ ಬಿಸಿ ನೀರಿನ ಆವಿಯನ್ನು ತೆಗೆದುಕೊಂಡು ಪೈನಾಪಲ್ ಹಣ್ಣಿನ ರಸವನ್ನು ಸೇವಿಸುತ್ತಿದ್ದರೆ ಅದರಲ್ಲಿರುವ ಬ್ರೊಮೆಲೈನ್ ಎಂಜೈಮ್ ತನ್ನ ಆಂಟಿ – ಇನ್ಫಾಮೇಟರಿ ಗುಣ ಲಕ್ಷಣಗಳಿಂದ ಕೆಮ್ಮು ಮತ್ತು ಅದಕ್ಕೆ ಸಂಬಂಧಿಸಿದ ಇನ್ನಿತರ ಲಕ್ಷಣಗಳನ್ನು ನಿಗ್ರಹಿಸುತ್ತದೆ ಎಂದು ಹಲವಾರು ಸಂಶೋಧನಾ ಅಧ್ಯಯನಗಳು ದೃಢಪಡಿಸಿವೆ ” ಎಂದು ಹೇಳುತ್ತಾರೆ.
ಪೈನಾಪಲ್ ಅಥವಾ ಅನಾನಸ್ ಹಣ್ಣಿನ ರಸವನ್ನು ಕೆಮ್ಮಿಗೆ ಹೇಗೆ ಉಪಯೋಗಿಸಬೇಕು?
ನಾವು ಮೇಲೆ ಹೇಳಿದ ರೀತಿಯಲ್ಲಿ ಕೇವಲ ಪೈನಾಪಲ್ ಹಣ್ಣಿನ ರಸ ಕೆಮ್ಮಿನ ನಿವಾರಣೆಗೆ ಮಾಡುವ ಪ್ರಯೋಗಕ್ಕಿಂತ ಅದರ ಜೊತೆ ಇನ್ನಿತರೆ ಪ್ರಾಚೀನ ಕಾಲದಿಂದ ಪ್ರಸಿದ್ಧವಾದ ಮನೆ ಮದ್ದುಗಳನ್ನು ಬಳಸಿ ಉಪಯೋಗಿಸುವುದರಿಂದ ಹೆಚ್ಚಿನ ಪ್ರಯೋಜನ ಉಂಟಾಗುತ್ತದೆ. ಹಾಗಾದರೆ ಪೈನಾಪಲ್ ಹಣ್ಣಿನ ರಸದ ಜೊತೆಯಲ್ಲಿ ಉಪಯೋಗಿಸಲ್ಪಡುವ ಮನೆ ಮದ್ದುಗಳು ಯಾವುವು ಮತ್ತು ಅವುಗಳಿಂದ ಉಂಟಾಗುವ ಪ್ರಯೋಜನಗಳು ಏನೇನು ಎಂದು ಈಗ ನೋಡೋಣ ಬನ್ನಿ.
ಪೈನಾಪಲ್ ಜ್ಯೂಸ್ ಮತ್ತು ಜೇನುತುಪ್ಪ :ಇದೊಂದು ಸರಳ ವಿಧಾನವಾಗಿದ್ದು ಕೆಮ್ಮಿನ ಉಪಶಮನಕ್ಕೆ ಬಳಸುವ ಸಾಧಾರಣ ಮನೆ ಮದ್ದಾಗಿದೆ. ಆದರೂ ಕೂಡ ಇದು ಬಹಳ ಪ್ರಸಿದ್ದಿಯನ್ನು ಪಡೆದ ಕೇವಲ ಎರಡು ವಸ್ತುಗಳನ್ನು ಒಳಗೊಂಡ ಮತ್ತು ಅದ್ಭುತ ಪ್ರಯೋಜನಗಳನ್ನು ಹೊಂದಿರುವ ಒಂದು ಮನೆ ಔಷಧಿಯಾಗಿದೆ. ನೀವು ಇಲ್ಲಿ ಮಾಡಬೇಕಾಗಿರುವುದು ಇಷ್ಟೇ. ಅರ್ಧ ಕಪ್ ನಷ್ಟು ಉಗುರು ಬೆಚ್ಚಗಿನ ಪೈನಾಪಲ್ ಜ್ಯೂಸ್ ಗೆ ಒಂದು ಟೇಬಲ್ ಚಮಚದಷ್ಟು ಶುದ್ಧವಾದ ಜೇನು ತುಪ್ಪವನ್ನು ಹಾಕಿ ಚೆನ್ನಾಗಿ ಕಲಸಿ. ಈ ಮಿಶ್ರಣವನ್ನು ಬಿಸಿ ಇರುವಾಗಲೇ ಕುಡಿಯಿರಿ. ಇಲ್ಲಿ ಜೇನು ತುಪ್ಪ ಮತ್ತು ಪೈನಾಪಲ್ ಎರಡೂ ಸಹ ಕೆಮ್ಮನ್ನು ಗುಣಪಡಿಸುವ ಅಂಶಗಳನ್ನು ತಮ್ಮಲ್ಲಿ ಹೊಂದಿದ್ದು ಕೆಮ್ಮಿಗೆ ಉತ್ತಮ ಚಿಕಿತ್ಸೆಯನ್ನು ಒದಗಿಸುತ್ತವೆ.
ಪೈನಾಪಲ್ ಜ್ಯೂಸ್ ನ ಜೊತೆಗೆ ಉಪ್ಪು, ಮೆಣಸು ಮತ್ತು ಜೇನು ತುಪ್ಪದ ಸಮ್ಮಿಶ್ರಣ : ಆಯುರ್ವೇದ ಪದ್ಧತಿಯಲ್ಲಿ ಈ ಎಲ್ಲಾ ಆಹಾರ ಪದಾರ್ಥಗಳು ಸಹ ಕೆಮ್ಮನ್ನು ಉಪಶಮನ ಮಾಡುವ ಅತ್ಯದ್ಭುತ ಶಕ್ತಿಶಾಲಿ ಗುಣ ಲಕ್ಷಣವನ್ನು ಹೊಂದಿರುವ ವಸ್ತುಗಳು. ಇನ್ನು ಇವುಗಳ ಮಿಶ್ರಣ ಮಾಡುವ ಚಮತ್ಕಾರ ಕೇಳಬೇಕೇ?
ಒಂದು ಕಪ್ ನಷ್ಟು ಪೈನಾಪಲ್ ಜ್ಯೂಸ್ ಗೆ ಸುಮಾರು ಮುಕ್ಕಾಲು ಟೇಬಲ್ ಚಮಚದಷ್ಟು ಜೇನು ತುಪ್ಪ, ಚಿಟಿಕೆ ಉಪ್ಪು ಮತ್ತು ಚಿಟಿಕೆಯಷ್ಟು ಕಪ್ಪು ಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಅಪರೂಪದ ಜ್ಯೂಸ್ ಅನ್ನು ಒಂದು ಸಲಕ್ಕೆ ಕಾಲು ಕಪ್ ನಂತೆ ದಿನಕ್ಕೆ ಮೂರು ಬಾರಿ ಸೇವಿಸಿ. ಆದರೆ ನೆನಪಿಡಿ, ಇದು ಶೀತ, ಕೆಮ್ಮು ಗಳಿಗೆ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕಾರಣ ಇಲ್ಲಿರುವ ಎಲ್ಲಾ ಪದಾರ್ಥಗಳು ಉಷ್ಣ ಗುಣವನ್ನು ಹೊಂದಿರುವುದರಿಂದ. ಇದನ್ನು ಸೇವಿಸಿದ ಮೇಲೆ ನಿಮ್ಮ ದೇಹದ ನೀರಿನ ಅಂಶ ಕಡಿಮೆಯಾಗುವ ಸಂಭವ ಹೆಚ್ಚಿರುತ್ತದೆ. ಅದರಿಂದ ಇಡೀ ದಿನ ಸಾಕಷ್ಟು ನೀರನ್ನು ಕುಡಿಯಲು ಸೂಚಿಸಲಾಗಿದೆ.
ಕೆಲವೊಂದು ಎಚ್ಚರಿಕೆಗಳು :ಇಲ್ಲಿ ನೀವು ಪೈನಾಪಲ್ ಜ್ಯೂಸ್ ನ ಸೇವಿಸುವ ಪ್ರಮಾಣದ ಬಗ್ಗೆ ಎಚ್ಚರಿಕೆ ವಹಿಸಿ. ಒಂದು ವೇಳೆ ಇದನ್ನು ಸೇವಿಸಿದ ನಂತರ ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಇನ್ನೊಮ್ಮೆ ಕುಡಿಯಲು ಹೋಗಬೇಡಿ. ಅದೂ ಅಲ್ಲದೇ ಪೈನಾಪಲ್ ಜ್ಯೂಸ್ ಅನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿಗೆ ಕುಡಿಯಬೇಡಿ. ಆಹಾರ ತಜ್ಞರು ಹೇಳುವ ಪ್ರಕಾರ ಪೈನಾಪಲ್ ಜ್ಯೂಸ್ ಮನುಷ್ಯನ ದೇಹದಲ್ಲಿ ಕರುಳಿನ ಭಾಗದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಂಟು ಮಾಡುತ್ತದೆ. ಅಷ್ಟೇ ಅಲ್ಲದೆ ಕೆಲವರಿಗೆ ಅಲರ್ಜಿಯ ಪ್ರತಿಕ್ರಿಯೆ, ಹೃದಯ ಬಡಿತದ ಹೆಚ್ಚುವಿಕೆ ಮತ್ತು ಹೆಂಗಸರಲ್ಲಿ ಮುಟ್ಟಿಗೆ ಸಂಬಂಧಪಟ್ಟ ತೊಂದರೆಗಳು ಎದುರಾಗುತ್ತವೆ. ಆದ್ದರಿಂದ ಪೈನಾಪಲ್ ಜ್ಯೂಸ್ ನ ಪ್ರಮಾಣದ ಬಗ್ಗೆ ವಿಪರೀತ ಗಮನ ವಹಿಸುವುದು ಒಳ್ಳೆಯದು ಮತ್ತು ಇದನ್ನು ಸೇವಿಸುವ ಮುಂಚೆ ಎಷ್ಟು ಪ್ರಮಾಣ ಸೇವಿಸಬೇಕೆಂದು ನಿಮಗೆ ನೀವೇ ತೀರ್ಮಾನ ಮಾಡುವುದನ್ನು ಬಿಟ್ಟು ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆಯನ್ನು ಪಡೆಯುವುದು ಉತ್ತಮ.ಶುಂಠಿ ಚಹಾವನ್ನು ಒಮ್ಮೆ ಪ್ರಯತ್ನಿಸಿ. ಏಕೆಂದರೆ ಶುಂಠಿಯಲ್ಲಿ ಕೆಮ್ಮನ್ನು ಹೋಗಲಾಡಿಸುವ ವಿಶೇಷ ಗುಣ ಲಕ್ಷಣವಿದೆ.
ಬಿಸಿ ನೀರಿನ ಆವಿಯನ್ನು ನಿಯಮಿತವಾದ ರೀತಿಯಲ್ಲಿ ಆಗಾಗ ತೆಗೆದುಕೊಳ್ಳುತ್ತಿರಿ. ಕೆಮ್ಮು-ಶೀತ ಸಮಯದಲ್ಲಿ ನಮ್ಮ ದೇಹದಿಂದ ನಮಗೆ ಗೊತ್ತಿಲ್ಲದ ಹಾಗೆ ವಿಪರೀತ ನೀರಿನ ಅಂಶ ಬೆವರಿನ ಮುಖಾಂತರ ದೇಹದಿಂದ ಹೊರ ಹೋಗುತ್ತಿರುತ್ತದೆ. ಆದ್ದರಿಂದ ದೇಹದಲ್ಲಿ ನೀರಿನಂಶದ ಮಟ್ಟದ ಸಮತೋಲನವನ್ನು ಕಾಯ್ದುಕೊಳ್ಳಲು ಹೆಚ್ಚಿಗೆ ನೀರನ್ನು ಅಥವಾ ದ್ರವಾಹಾರಗಳನ್ನು ಸೇವಿಸಿ. ದಿನಕ್ಕೆರಡು 2 ಬಾರಿಯಂತೆ ಉಪ್ಪು ಮಿಶ್ರಿತ ನೀರನ್ನು ಬಾಯಿಗೆ ಹಾಕಿಕೊಂಡು ಬಾಯಿ ಮುಕ್ಕಳಿಸಿ. ಶೀತದ ಸಮಯದಲ್ಲಿ ಕೆಮ್ಮನ್ನು ಗುಣಪಡಿಸುವ ಕೆಲವೊಂದು ಸೂಪ್ ಗಳನ್ನು ಮಾಡಿಕೊಂಡು ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಿ. ಮೇಲೆ ತಿಳಿಸಿದ ಮತ್ತು ಇದುವರೆಗೂ ಚರ್ಚಿಸಿದ ಎಲ್ಲಾ ವಿಷಯಗಳು ಕೇವಲ ನಿಮಗೆ ಶೀತದಿಂದ ಉಂಟಾದ ಕೆಮ್ಮಿಗೆ ಪರಿಹಾರಗಳು ಎಂದು ನೀವು ಭಾವಿಸಬೇಕು. ನಿಮಗೆ ಒಂದು ವೇಳೆ ದೀರ್ಘಕಾಲದಿಂದ ಇನ್ನಾವುದೇ ಕೆಮ್ಮಿನ ಸಮಸ್ಯೆ ಇದ್ದರೆ ದಯಮಾಡಿ ಈ ಮನೆ ಮದ್ದುಗಳ ಮೇಲೆ ಅವಲಂಬಿತ ರಾಗುವುದನ್ನು ನಿಲ್ಲಿಸಿ ವೈದ್ಯರ ಬಳಿ ಹೋಗಿ ಔಷಧಿಗಳನ್ನು ತೆಗೆದುಕೊಳ್ಳುವುದು ಉತ್ತಮ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಟೆಕ್ ದೈತ್ಯ ಕಂಪನಿ ಆಪಲ್, ಅದರ ಕೀಬೋರ್ಡ್ ಆಪರೇಟಿಂಗ್ ಸಿಸ್ಟಮ್, ಐಒಎಸ್ 2ರ ಇತ್ತೀಚಿನ ಆವೃತ್ತಿಯಲ್ಲಿ ಕನ್ನಡ
ನೀವು ಮೊಬೈಲ್ ಪ್ರಿಯರೇ? ಮೊಬೈಲ್ ಇಲ್ಲದೆ ನಿಮಗೆ ನಿದ್ದೆ ಬರುವುದಿಲ್ಲವೇ? ನೀವು ಹೋದಲ್ಲೆಲ್ಲ ಮೊಬೈಲ್ ಬೇಕೇ ಬೇಕೆನಿಸುತ್ತದೆಯೆ? ಹಾಗಿದ್ದರೇ ಇಲ್ಲಿ ಕೇಳಿ….ಯಾವುದೇ ಕಾರಣಕ್ಕೂ ಈ ಎಂಟು ಕಡೆ ನಿಮ್ಮ ಮೊಬೈಲನ್ನು ಬಳಸಲೇಬೇಡಿ. ನಿಮ್ಮ ಹತ್ತಿರಕ್ಕೂ ಇಟ್ಟುಕೊಳ್ಳಬೇಡಿ. ನೀವು ಮಲಗುವ ಕೊಠಡಿ : ಸಾಮಾನ್ಯವಾಗಿ ಮಲಗುವ ಕೋಣೆಯಲ್ಲಿ ಮೊಬೈಲನ್ನು ಎಲ್ಲರೂ ಇಟ್ಟುಕೊಂಡೇ ಇರುತ್ತಾರೆ. ಕಾರಣ ಬರುವ ಮೆಸೇಜ್ ಗಳನ್ನು ಓದುವುದು, ರಾತ್ರಿ ಮೆಸೇಜುಗಳನ್ನು ಓದಿಯೇ ಮಲಗುವುದು. ಇದೆಲ್ಲದರ ಜೊತೆಗೆ ಅಲಾರಾಂ ಇಟ್ಟುಕೊಳ್ಳುವುದು ಅಭ್ಯಾಸ ಆಗಿ ಬಿಟ್ಟಿರುತ್ತದೆ. ಆದರೆ ನೆನಪಿಡಿ ಇದು…
ವಿದ್ಯಾರ್ಥಿನಿಯೊಬ್ಬಳು ಯುವಕನೊಬ್ಬನನ್ನು ತಬ್ಬಿಕೊಂಡ ಕಾರಣ ಯೂನಿವರ್ಸಿಟಿ, ಅವಳನ್ನು ಕಾಲೇಜಿನಿಂದ ಉಚ್ಚಾಟಿಸಿದ್ದು, ಇದೀಗ ಅಪ್ಪುಗೆಯೇ ಆಕೆಯ ವಿದ್ಯಾರ್ಥಿ ಜೀವನಕ್ಕೆ ಸಂಚಕಾರ ತಂದಿದೆ. ಈಜಿಪ್ಟ್ ನ ಅಲ್-ಅಝರ್ ಯೂನಿವರ್ಸಿಟಿ, ವಿದ್ಯಾರ್ಥಿನಿಯ ಈ ವರ್ತನೆಯಿಂದ ಸಂಸ್ಥೆಯ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಹೇಳಿ ಈ ಕ್ರಮಕೈಗೊಂಡಿದೆ. ಅಲ್-ಅಝರ್ ಯೂನಿವರ್ಸಿಟಿಯ ಮನ್ಸೌರಾದಲ್ಲಿರುವ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳಿಗೆ ಯುವಕನೊಬ್ಬ ಮಂಡಿಯೂರಿ ಹೂವಿನ ಬೊಕ್ಕೆ ಕೊಟ್ಟಿದ್ದು, ಬಳಿಕ ಇಬ್ಬರೂ ಪರಸ್ಪರ ಅಪ್ಪಿಕೊಂಡಿದ್ದರು. ಇದರ ವಿಡಿಯೊ ಎಲ್ಲ ಕಡೆ ಹರಿದಾಡಿದ್ದು, ಯೂನಿವರ್ಸಿಟಿಯ ಆಡಳಿತ ಮಂಡಳಿಯವರೆಗೂ ತಲುಪಿತ್ತು. ಅವಿವಾಹಿತ ಮಹಿಳೆ-ಪುರುಷ…
ಒಂದು ಕಡೆ ಬಿದ್ದಿರುವ ಕಲ್ಲು ತನ್ನಿಂದ ತಾನೇ ಚಲಿಸುತ್ತದೆ ಎಂದರೆ ಅದು ಕಲ್ಪನೆಯಾಗಿರಬೇಕಷ್ಟೆ. ಆದರೆ ಇಲ್ಲಿರುವ ಕಲ್ಲುಗಳು ಆಶ್ಚರ್ಯ ಎನ್ನುವಂತೆ ಚಲಿಸುತ್ತವೆ.
34 ವರ್ಷದ ವ್ಯಕ್ತಿಯೊಬ್ಬ ಯುವತಿ ಸ್ನಾನ ಮಾಡುತ್ತಿದ್ದಾಗ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ವಿಡಿಯೋ ಮೂಲಕ ಬ್ಲ್ಯಾಕ್ಮೇಲ್ ಮಾಡಿ ನಿರಂತರವಾಗಿ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್ಗಡದ ರಾಜ್ನಂದ್ಗಾಂವ್ನಲ್ಲಿ ನಡೆದಿದೆ. 22 ವರ್ಷದ ಯುವತಿಯ ಮೇಲೆ ಆರೋಪಿ ಅತ್ಯಾಚಾರ ಮಾಡಿದ್ದು, ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ರವಿ ಕನ್ನೌಜೆ ಎಂದು ಗುರುತಿಸಲಾಗಿದ್ದು, ಈತ ಚ್ಚುಯಿಖಾದನ್ ಪಟ್ಟಣದ ಪುರೈನಾ ಗ್ರಾಮದ ಮೂಲದವಾಗಿದ್ದಾನೆ. ಅಷ್ಟೇ ಅಲ್ಲದೇ ಆರೋಪಿ ಯುವತಿಯ ದೂರದ ಸಂಬಂಧಿಯಾಗಿದ್ದು, ಯುವತಿ ನರ್ಸಿಂಗ್ ವಿದ್ಯಾರ್ಥಿನಿ ಎಂದು ಪೊಲೀಸ್ ಅಧಿಕಾರಿ ನರೇಂದ್ರ…
ದೇಹದ ತೂಕವನ್ನು ಇಳಿಸುವುದು ಇತ್ತೀಚಿನ ದಿನಗಳಲ್ಲಿ ಒಂದು ಸವಾಲಾಗಿ ಪರಿಣಮಿಸಿದೆ. ದೇಹಕ್ಕೆ ಶ್ರಮ ನೀಡದಿರುವುದು, ಅನಾರೋಗ್ಯಕರ ಆಹಾರ ಶೈಲಿ, ಅನಿಯಂತ್ರಿತ ಬೊಜ್ಜು ಪದಾರ್ಥಗಳ ಸೇವನೆ, ಒತ್ತಡ ಈ ಎಲ್ಲವೂ ಸೇರಿ ದೇಹದ ತೂಕವನ್ನು ಹೆಚ್ಚಿಸುತ್ತವೆ.