ಸಿನಿಮಾ

ರೆಬೆಲ್ ಸ್ಟಾರ್ ಅಂಬಿ ಅಂತ್ಯಕ್ರಿಯೆಗೆ, ರಮ್ಯ ಬಾರದೆ ಇರಲು ಕಾರಣವೇ ಇದು!

405

ಶನಿವಾರದಂದು ವಿಧಿವಶರಾದ ಕನ್ನಡ ಚಿತ್ರರಂಗದ ಖ್ಯಾತ ನಟ ಅಂಬರೀಶ್ ಅವರ ಅಂತ್ಯಕ್ರಿಯೆ, ಸೋಮವಾರದಂದು ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿದೆ.ಅಂಬರೀಶ್ ನಿಧನದ ಸಂದರ್ಭದಲ್ಲಿ ಸಂತಾಪ ಕೋರಿ ಟ್ವೀಟ್ ಮಾಡಿದ್ದ ನಟಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಮಾಜಿ ಸಂಸದೆ ರಮ್ಯಾ, ಅಂತ್ಯಕ್ರಿಯೆಗೆ ಬಾರದಿರುವುದು ಅಂಬರೀಶ್ ಅಭಿಮಾನಿಗಳನ್ನು ಕೆರಳಿಸಿತ್ತು.

ಅಂಬರೀಶ್ ಸಾವಿಗೀಡಾದ ಸುದ್ದಿ ತಿಳಿದಾಗಿನಿಂದಲೂ ಇಡೀ ಕನ್ನಡ ಚಿತ್ರೋದ್ಯಮ ಮಾತ್ರವಲ್ಲದೆ ಹಲವು ಭಾಷೆಗಳ ಚಿತ್ರರಂಗದ ಖ್ಯಾತನಾಮರು, ಅಂತಿಮ ದರ್ಶನದಿಂದ ಅಂತ್ಯಸಂಸ್ಕಾರದವರೆಗೆ ಹಾಜರಾಗಿದ್ದರೂ ರಮ್ಯಾ ಮಾತ್ರ ಕಾಣಿಸಿಕೊಂಡಿರಲಿಲ್ಲ.
ರಮ್ಯ ಅಂಬರೀಶ್ ಅಂತಿಮ ದರ್ಶನಕ್ಕೆ ಬಾರದಿರಲು ಕಾರಣ?

ರಮ್ಯಾ ಅವರು ಆಸ್ಟಿಯೋಕ್ಲ್ಯಾಟೋಮಾ(Osteoclastoma) ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆಸ್ಟಿಯೋಕ್ಲ್ಯಾಟೋಮಾ ಎನ್ನುವುದು ಮೂಳೆಗಳಿಗೆ ಸಂಬಂಧಿಸಿದ ರೋಗವಾಗಿದೆ. ರಮ್ಯಾ ಅವರ ಕಾಲಿನ ಎಲುಬುಗಳ ನಡುವೆ ಉಂಟಾಗಿರುವ ಸಮಸ್ಯೆ ಇದಾಗಿದ್ದು, ಕೊಂಚ ನಿರ್ಲಕ್ಷ್ಯ ವಹಿಸಿದ್ರು ಮಾರಕ ಕಾಯಿಲೆ ಕ್ಯಾನ್ಸರ್ ಗೆ ತುತ್ತಾಗುತ್ತಿದ್ರಂತೆ. ಹೀಗಾಗಿ ಅವರು ಚಿಕಿತ್ಸೆ ಪಡೆದು ಅಕ್ಟೊಬರ್ ನಿಂದ ವಿಶ್ರಾಂತಿ ಪಡೆಯುತ್ತಿದ್ದಾರಂತೆ. ಈ ಕುರಿತು ಸ್ವತಃ ರಮ್ಯಾ ಅವರೇ ತಮ್ಮ ಇನ್ ಸ್ಟಾಗ್ರಾಂನಲ್ಲಿ ಕಾಲಿನ ಚಿತ್ರ ಹಾಕಿ ಬರೆದುಕೊಂಡಿದ್ದಾರೆ.

ಆಸ್ಟಿಯೋಕ್ಲ್ಯಾಟೋಮಾ ಎಂಬುದು ಒಂದು ಅಪರೂಪದ ಕಾಯಿಲೆಯಾಗಿದ್ದು, ಇದೀಗ ಮಾಜಿ ಸಂಸದೆ ಈ ರೋಗಕ್ಕೆ ತುತ್ತಾಗಿದ್ದಾರೆ. ಈ ಕಾಯಿಲೆ 10 ಲಕ್ಷ ಮಂದಿಯಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತದೆ.ದಿವ್ಯ ಸ್ಪಂದನ ಎಂಬ ಹುಡುಗಿ ಸ್ಯಾಂಡಲ್‍ವುಡ್‍ನಲ್ಲಿ ರಮ್ಯಾ ಆಗಿ ಬೆಳೆಯುವಲ್ಲಿ ಅಂಬಿ ಆಶೀರ್ವಾದವಿತ್ತು. ಅಲ್ಲದೇ ನಟಿಯಾಗಿದ್ದ ರಮ್ಯಾ ಮಂಡ್ಯದಲ್ಲಿ ಗೆದ್ದು ಸಂಸದೆಯಾಗಿದ್ದರು. ಆದರೆ ಅಂಬರೀಶ್ ನಿಧನಕ್ಕೆ ಕೇವಲ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದರು. ಇದರಿಂದ ಸಿಟ್ಟಿಗೆದ್ದ ಅಂಬಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ರಮ್ಯಾಗೆ ಛೀಮಾರಿ ಹಾಕಿದ್ದರು. ಅಲ್ಲದೇ ಮಂಡ್ಯದ ಜನತೆ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ