ಸಿನಿಮಾ

ರೆಬೆಲ್ ಸ್ಟಾರ್ ಅಂಬರೀಶ್ ರವರ ಆ ಎರಡು ಕನಸು ಕೊನೆಗೂ ನನಸಾಗಲೇ ಇಲ್ಲಾ…

590

ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಮಗ ಅಭಿಷೇಕ್ ಎಂದರೆ ಅಚ್ಚುಮೆಚ್ಚು, ಮಗನ ಮದುವೆ ಮಾಡಬೇಕು, ಅವನ ಮೊದಲ ಚಿತ್ರವನ್ನು ನೋಡಬೇಕು ಎಂದು ಕನಸು ಕಂಡಿದ್ದರು.

ಅಂಬರೀಶ್ ಅವರಿಗೆ ಇದ್ದಿದ್ದು ಎರಡೇ ಆಸೆ. ಒಂದು ಮುದ್ದಿನ ಮಗ ಅಭಿಷೇಕ್ ಅವರ ಮದುವೆ ಮಾಡ್ಬೇಕು, ಇನ್ನೊಂದು ಮಗನ ಮೊದಲ ಸಿನಿಮಾ ಅಮರ್ ಚಿತ್ರವನ್ನು ನೋಡಬೇಕು ಅಂತಾ. ರೆಬೆಲ್ ಸ್ಟಾರ್ ಎಂದಿಗೂ ಅವರ ಮಗನಿಗೆ ನೀನು ಹೀಗೆ ಇರಬೇಕು, ಇಂತದ್ದೆ ಮಾಡಬೇಕು ಎಂದು ಹೇಳಿದವರಲ್ಲ.

 

ಅಂಬರೀಶ್ ಅವರ ಹಾಗೆ ಅಭಿಷೇಕ್‍ಗೂ ಸಿನಿಮಾ ರಂಗದಲ್ಲಿ ಆಸಕ್ತಿ ಇತ್ತು. ಆದರಿಂದ ತಮ್ಮ ಹಾಗೆ ಮಗನೂ ಉತ್ತಮ ನಟನಾಗಬೇಕು, ಜನರು ಅವನನ್ನು ಒಪ್ಪಿಕೊಳ್ಳಬೇಕು ಎಂದು ಕನಸು ಕಂಡಿದ್ದರು.

ಮಗನ ಮದುವೆಯನ್ನು ತಾವೇ ಮುಂದೆ ನಿಂತು ಅದ್ಧೂರಿಯಿಂದ ಮಾಡಿ ಖುಷಿ ಪಡಬೇಕು ಎಂದು ಬಹಳ ಆಸೆ ಇಟ್ಟುಕೊಂಡಿದ್ದರು. ಆದ್ರೆ ಈ ಎರಡು ಆಸೆಗಳು ಕೊನೆಗೂ ರೆಬೆಲ್ ಸ್ಟಾರ್ ಪಾಲಿಗೆ ಈಡೇರಲೇ ಇಲ್ಲ. ತಾವು ಕಂಡಿದ್ದ ಕನಸನ್ನು ಕಣ್ತುಂಬಿಕೊಳ್ಳುವ ಮುನ್ನವೇ ವಿಧಿ ಅವರನ್ನು ಬರಸೆಳೆದು ಅಪ್ಪಿಕೊಂಡಿತ್ತು.

ಸಂದೇಶ್ ನಾಗರಾಜ್ ನಿರ್ಮಾಣದ ಅಮರ್ ಚಿತ್ರಕ್ಕೆ ಅಭಿಷೇಕ್ ಬಣ್ಣ ಹಚ್ಚಿದ್ರು. ಈ ಚಿತ್ರದ ಅರ್ಧ ಭಾಗದ ಚಿತ್ರೀಕರಣವನ್ನು ಅನಾರೋಗ್ಯದ ನಡುವೆಯೂ ಅಂಬರೀಶ್ ವೀಕ್ಷಣೆ ಮಾಡಿದ್ದರು. ಆದ್ರೆ ಅಭಿಷೇಕ್ ಅವರ ಮೊದಲ ಚಿತ್ರ `ಅಮರ್’ ಹಾಗೂ ಅಭಿಷೇಕ್ ಅವರ ಮದುವೆಯನ್ನು ಕಣ್ತುಂಬ ನೋಡಲಾಗಲಿಲ್ಲ. ರೆಬೆಲ್ ಸ್ಟಾರ್ ಅವರ ಕೊನೆಯ ಎರಡು ಕನಸುಗಳು ಅವರ ಪಾಲಿಗೆ ಕನಸಾಗಿಯೇ ಉಳಿಕೊಂಡಿತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮೋದಿ ಹುಟ್ಟುಹಬ್ಬಕ್ಕೆ ಜೆಡಿಎಸ್ ಶಾಸಕರಿಂದ ವಿಶೇಷ ಪೂಜೆ….!

    ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂತೆಯೇ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಮೊದಲಾದವರು ಪ್ರಧಾನಿ ಮೋದಿ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ ಹಮ್ಮಿಕೊಂಡಿದ್ದು, ಈ ಪೂಜೆಯಲ್ಲಿ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಭಾಗಿಯಾಗಿದ್ದಾರೆ. ಬಿಜೆಪಿ ನಾಯಕರೊಂದಿಗೆ ವಿಶೇಷ ಪೂಜೆ ನೆರವೇರಿಸಿದ ಮಾಜಿ ಸಚಿವ ಜಿ.ಟಿ. ದೇವೇಗೌಡ ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ. ಸಮಯ ಸಿಕ್ಕಾಗಲೆಲ್ಲ ಜೆಡಿಎಸ್ ನಾಯಕರನ್ನು ಟೀಕಿಸುತ್ತಲೇ ಬಿಜೆಪಿ ಹತ್ತಿರವಾಗುತ್ತಿದ್ದಾರೆ. ರಾಜಕೀಯ…

  • ಸುದ್ದಿ

    ಎಸ್ ಬಿಐ ಬ್ಯಾಂಕ್ ಗ್ರಾಹಕರಿಗೊಂದು ಶುಭ ಸುದ್ದಿ,.!

    ನವದೆಹಲಿ,  ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ (ಎಸ್ ಬಿಐ) ಗೃಹ ಸಾಲ, ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸಿದೆ. ಎಸ್‍ಬಿಐ ಎಲ್ಲ ಅವಧಿಯ ಸಾಲದ ಮೇಲಿನ ಮಾರ್ಜಿನಲ್ ಕಾಸ್ಟ್ ಆಫ್ ಲ್ಯಾಂಡಿಂಗ್ ರೇಟ್ 10 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದ್ದು, ಹೊಸ ಬಡ್ಡಿ ದರಗಳು ಸೆ.10ರಿಂದ ಅನ್ವಯವಾಗಲಿದೆ. ಜೊತೆಗೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ಇಳಿಕೆಯಾಗಲಿದೆ. ಎಲ್ಲ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಮೊತ್ತದ ಮೇಲೆ 20-25 ಬೇಸಿಸ್ ಪಾಯಿಂಟ್ ಕಡಿತಗೊಳಿಸಲಾಗಿದೆ. ಬಲ್ಕ್ ಡೆಪಾಸಿಟ್ ಮೇಲಿನ ದರವನ್ನು 10-20…

  • ರಾಜಕೀಯ

    ಮಣ್ಣಿನ ಮಗ ಮಾಜಿ ಪ್ರಧಾನಿ “ಹೆಚ್.ಡಿ.ದೇವೇಗೌಡ”ರಿಗೆ “ರಾಷ್ಟ್ರಪತಿ” ಸ್ಥಾನಕ್ಕೆ ಸ್ಪರ್ಧಿಸುವಂತೆ ಆಹ್ವಾನ

    ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಹ್ವಾನ ನೀಡಿದ್ದಾರೆ.

  • ಸುದ್ದಿ

    5 ಲಕ್ಷ ರೂ ಬಂಡವಾಳದಿಂದ ಮುಂಬೈ ಗೆ ತೆರೆಳಿದ ಸಿದ್ದಾರ್ಥ್ ಈಗ ದೇಶವೇ ತಲೆ ಎತ್ತಿ ನೋಡುವಂತೆ ಬೆಳೆದಿದ್ದಾರೆ …..!

    ಚಿಕ್ಕಮಗಳೂರಿನ ಖ್ಯಾತ ಉದ್ಯಮಿಯಾದ  ಸಿದ್ದಾರ್ಥ್ ರವರು  ನಿಗೂಢವಾಗಿ ಕಣ್ಮರೆಯಾಗಿರುವುದು ಅವರ ಹುಟ್ಟೂರು ಚಿಕ್ಕಮಗಳೂರಿನ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಸಿದ್ಧಾರ್ಥ್ ಅವರ ಸಂಸ್ಥೆಯಲ್ಲಿ ಮೊದಲಿನಿಂದಲೂ ವಿದ್ಯುತ್ ಕಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿರುವ ರುದ್ರೇಶ್ ಕಡೂರು ಕೆಲವೊಂದು ವಿಚಾರಗಳನ್ನು ನಮ್ಮ ಜೊತೆಗೆ ಹಂಚಿಕೊಂಡು ಕಣ್ಣೀರನ್ನು  ಹಾಕಿದ್ದಾರೆ. ಸಿದ್ಧಾರ್ಥ್ ಅವರ ತಂದೆ ನೀಡಿದ ಮಾಹಿತಿ ಪ್ರಕಾರ, 1983ರಲ್ಲಿ ಸಿದ್ಧಾರ್ಥ್ 2 ಲಕ್ಷ ರೂ. ಪಡೆದು ಮುಂಬೈಗೆ ಹೋಗಿದ್ದರು. ಅಲ್ಲಿ ಉದ್ಯಮ ಆರಂಭಿಸಿ ನಷ್ಟ ಅನುಭವಿಸಿ ಮನೆಗೆ ವಾಪಸ್ ಬಂದಿದ್ದರು. ಕೆಲ ದಿನಗಳ…

  • ಸಿನಿಮಾ

    ಕೊನೆಗೂ ತಮ್ಮ ಮಗಳ ಫೋಟೋವನ್ನು ಬಹಿರಂಗ ಮಾಡಿದ ಯಶ್ ರಾಧಿಕಾ ಪಂಡಿತ್ ದಪತಿ..ಯಾವ ಹೆಸರು ಇಟ್ಟಿದ್ದಾರೆ ನೋಡಿ…

    ಸ್ಯಾಂಡಲ್ ವುಡ್ ನ ಖ್ಯಾತ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಪುತ್ರಿಯ ಫೋಟೋ ಕೊನೆಗೂ ಬಹಿರಂಗವಾಗಿದೆ. ಅಕ್ಷಯ ತೃತೀಯ ದಿನ ಮಂಗಳವಾರದಂದು ರಾಧಿಕಾ ಪಂಡಿತ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಗಳ ಫೋಟೋ ಹಾಕಿ ಸಂಭ್ರಮಿಸಿದ್ದಾರೆ. ನಾವಿನ್ನೂ ಅವಳಿಗೆ ಹೆಸರಿಟ್ಟಿಲ್ಲ, ಅಲ್ಲಿಯವರೆಗೆ ಬೇಬಿ ವೈಆರ್ ಎಂದು ಕರೆಯೋಣ, ನಿಮ್ಮ ಪ್ರೀತಿ, ಹಾರೈಕೆ ಆಕೆಯ ಮೇಲೆಯೂ ಸದಾ ಇರಲಿ ಎಂದು ರಾಧಿಕಾ ಪಂಡಿತ್ ಕೋರಿದ್ದಾರೆ.ಯಶ್-ರಾಧಿಕಾ ಪಂಡಿತ್ ದಂಪತಿಗೆ ಕಳೆದ ವರ್ಷ ಡಿಸೆಂಬರ್ 2ರಂದು ಹೆಣ್ಣು ಮಗು…