ಸುದ್ದಿ

ಅಂಬಾನಿ ಮನೆಯ ಒಂದು ತಿಂಗಳ ಕರೆಂಟ್ ಬಿಲ್ ಕೇಳಿದರೆ ಶಾಕ್, ನೋಡಿ ಭಾರತದ ಐಷಾರಾಮಿ ಮನೆ.

201

ಭಾರತದ ಹೆಸರಾಂತ ಉದ್ಯಮಿ ಮುಖೇಶ್ ಅಂಬಾನಿ ಯಾರಿಗೆ ಗೊತ್ತಿಲ್ಲ ಹೇಳಿ ? ಇನ್ನು ಇತ್ತೀಚಿನ ದಿನಗಳಲ್ಲಿ ಜಿಯೋ ಸಿಮ್ ಅನ್ನು ಜಾರಿಗೆ ತಂದ ಮೇಲೆ ಆಟ ಆಡುವ ಹುಡುಗರಿಂದ ಹಿಡಿದು ಹಲ್ಲಿಲ್ಲದ ಮುದುಕರವರೆಗೂ ಅಂಬಾನಿ ಎಂದರೆ ಯಾರು ಎಂಬುದು ತಿಳಿದಿದೆ..ಯುವ ಪೀಳಿಗೆ ಅವರಿಗಂತೂ ಅವರನ್ನು ಜಿಯೋ ಅಂಬಾನಿ ಎಂದೇ ಕರೆಯುತ್ತಾರೆ. ಅಲ್ಲದೆ ಭಾರತ ದೇಶದ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಅವರೇ ಮೊದಲ ಸ್ಥಾನ..ಇನ್ನು ಎಲ್ಲರೂ ಸಹ ಮುಕೇಶ್ ಅವರ ಬಗ್ಗೆ ತಿಳಿದುಕೊಂಡಿರುತ್ತಾರೆ. ಆದರೆ ಅವರ ಮನೆಯ ಬಗ್ಗೆ ಯಾರೂ ಕೂಡ ತಿಳಿದುಕೊಂಡಿರಲು ಸಾಧ್ಯವೇ ಇಲ್ಲ.!. ಅವರ ಮನೆ ಬರೋಬ್ಬರಿ 27 ಮಹಡಿಗಳನ್ನ ಹೊಂದಿದ್ದು, ಸುಮಾರು 4 ಲಕ್ಷ ಚದರ ಇದೆ, ಇನ್ನು ಈ ಮನೆಯನ್ನ ನಿರ್ಮಾಣ ಮಾಡಿರುವವರು ಚಿಕಾಗೋದ ವಿನ್ಯಾಸಗಾರರಾಗಿದ್ದಾರೆ.

ತಮಗೆ ಗೊತ್ತಿರುವುದಿಲ್ಲ ಮುಖೇಶ್ ಅಂಬಾನಿ ಅವರ ಮನೆ ಹೇಗೆ ನಿರ್ಮಾಣವಾಗಿದೆ ಎಂದರೆ ಈ ಮನೆ ಯಾವುದೇ ಪ್ರಕೃತಿ ವಿಕೋಪಕ್ಕೆ ತುತ್ತಾಗುವುದಿಲ್ಲ.! ಭೂಕಂಪ ಆದರೂ ಕೂಡ ಈ ಮನೆಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಇನ್ನು ಈ ಮನೆಯ 27 ಅಂತಸ್ತುಗಳಲ್ಲಿ ಎಲ್ಲಾ ಅಂತಸ್ತು ಕೂಡ ಬೇರೆ ಬೇರೆ ತರನಾಗಿಯೇ ಇದೆ ಮತ್ತು ಕೆಳಗಿನ ಆರು ಅಂತಸ್ತುಗಳನ್ನ ಕೇವಲ ಕಾರುಗಳ ಪಾರ್ಕಿಂಗ್ ಮಾಡಲು ಮಾಡಲಾಗಿದೆ. ಇನ್ನು ಇದರ ಜೊತೆಗೆ ಈ ಮನೆಯ ಒಳಗಡೆ ಜಿಮ್, ಐಸ್ ಕ್ರೀಮ್ ಪಾರ್ಲರ್, ಯೋಗ, ಈಜುಕೊಳ, ಚಿತ್ರಮಂದಿರ, ಸ್ಟುಡಿಯೋ ಹೀಗೆ ಹಲವು ರೀತಿಯ ಸಕಲ ಸೌಕರ್ಯಗಳು ಇರುವ ಮನೆ ಮುಖೇಶ್ ಅಂಬಾನಿಯವರದ್ದು ಆಗಿದೆ.

ಇನ್ನು ಈ ಶ್ರೀಮಂತನ ಮನೆಯಲ್ಲಿ ಬರೋಬ್ಬರಿ 600 ಜನ ಕೆಲಸ ಮಾಡುತ್ತಿದ್ದಾರೆ. ಆದರೆ ಇಷ್ಟು ದೊಡ್ಡದಾದ ಮನೆಯಲ್ಲಿ ಕೇವಲ ಐದು ಜನ ಮಾತ್ರ ವಾಸ ಮಾಡುತ್ತಿದ್ದಾರೆ. ಮುಖೇಶ್ ಅಂಬಾನಿ ಸೇರಿದಂತೆ ಅವರ ಪತ್ನಿ ನೀತಾ ಅಂಬಾನಿ ಮತ್ತು ಮೂರು ಮಕ್ಕಳು ಮಾತ್ರ ಮನೆಯಲ್ಲಿ ನೆಲೆಸಿದ್ದಾರೆ ..ಇನ್ನು ಬೇಸಿಗೆಯ ಸಮಯದಲ್ಲಂತೂ ಮುಂಬೈನಲ್ಲಿ ಜೀವನ ಮಾಡುವುದು ಬಹಳ ಕಷ್ಟಕರವಾಗಿರುತ್ತದೆ. ಆ ಸಮಯದಲ್ಲಿ ಸಿಕ್ಕಾಪಟ್ಟೆ ಸೆಕೆ ಇದ್ದು, ಜನರೆಲ್ಲ ಬೆವರಿ ಬೆವರಿ ಬೇಸತ್ತು ಹೋಗುತ್ತಾರೆ..ಆದರೆ ಮುಖೇಶ್ ಅಂಬಾನಿ ಅವರ ಮನೆಯಲ್ಲಿ ಒಂದು ಕೋಣೆಯನ್ನು ನಿರ್ಮಿಸಲಾಗಿದ್ದು, ಅದರಲ್ಲಿ ಸೆಕೆ ಎಂಬುದು ಆಗುವುದೇ ಇಲ್ಲ .. ಉರಿಯುವ ಬಿಸಿಲಿದ್ದರೂ ಕೂಡ ಆ ಕೋಣೆಗೆ ಹೋಗಿ ಬಿಟ್ಟರೆ ಚಳಿಗಾಲದ ವಾತಾವರಣ ಅನಾವರಣ ಗೊಂಡಿರುತ್ತದೆ.. ಇನ್ನು ಮನೆಯ ಸದಸ್ಯರು ದೇವರಿಗೆ ಪೂಜೆ ಮಾಡಲು ದೊಡ್ಡ ದೇವಸ್ಥಾನವನ್ನೇ ಮನೆಯಲ್ಲಿ ನಿರ್ಮಿಸಲಾಗಿದೆ..ಅಲ್ಲದೇ ಮನೆಯ ಮೇಲೆ ಮೂರೂ ಎಲಿಪ್ಯಾಡ್ ಕೂಡ ಇದೆ..

ಈ ರೀತಿಯಾದ ವಿಶೇಷತೆಗಳು ಪ್ರತಿಯೊಂದು ಮಹಡಿಯಲ್ಲೂ ತುಂಬಿದ್ದು,ಅಲ್ಲಿನ ಸಾರ್ವಜನಿಕರಿಗೆ ಒಂದು ಯಕ್ಷ ಪ್ರಶ್ನೆ ಕಾಡುತ್ತಲೇ ಇದೆ.. ಅದೇನೆಂದರೆ ಇಷ್ಟು ದೊಡ್ಡ ಮನೆಗೆ ಪ್ರತಿ ತಿಂಗಳು ಎಷ್ಟು ಕರೆಂಟ್ ಬಿಲ್ ಬರಬಹುದು ಎಂಬುದು..ಪ್ರತಿ ತಿಂಗಳು ಅಂಬಾನಿಯವರು ವಿದ್ಯುತ್ ಸಂಸ್ಥೆಗೆ ಎಷ್ಟು ಹಣವನ್ನು ಪಾವತಿಸುತ್ತಾರೆ ಎಂದು ತಿಳಿದರೆ ಒಂದು ಕ್ಷಣ ಶಾಕ್ ಆಗುತ್ತೀರಾ..

ಈ ಮನೆಯ ಕರೆಂಟ್ ಬಿಲ್ ಒಂದು ತಿಂಗಳಿಗೆ ಸುಮಾರು 71 ಲಕ್ಷ ರೂಪಾಯಿ ಆಗಿದೆ, ಇಷ್ಟು ಸವಲತ್ತುಗಳನ್ನ ಹೊಂದಿರುವ ಈ ಮನೆ ಪ್ರಪಂಚದಲ್ಲೇ ಅತೀ ದುಬಾರಿಯಾದ ಮನೆ ಆಗಿದೆ. ..ಈ ಶ್ರೀಮಂತ ಒಂದು ತಿಂಗಳು ಪಾವಿತಿಸುವ ಮನೆಯ ಕರೆಂಟ್ ಬಿಲ್ ಏನಾದರೂ ಮಧ್ಯಮವರ್ಗದ ವ್ಯಕ್ತಿಗೆ ಸಿಕ್ಕರೆ ಅವರ ಜೀವನವೇ ಸೆಟ್ಟಲ್ ಆಗಿ ಬಿಡುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ