ಉಪಯುಕ್ತ ಮಾಹಿತಿ

ಮೊಡವೆ ಕಲೆಗಳು ಒಂದೇ ದಿನದಲ್ಲಿ ಮಾಯವಾಗಲು ಆಲ್ಮಂಡ್ ನಿಂದ ಈಗೆ ಮಾಡಿದರೆ ಸಾಕು,.!

73

ಪ್ರಾಯದ ಸಮಯದಲ್ಲಿ ಪ್ರತಿಯೊಬ್ಬರಿಗೂ ಮುಖದಲ್ಲಿ ಮೊಡವೆ ಗುಳ್ಳೆಗಳು ಮೂಡುವುದು ಸಹಜ. ಕೇವಲ ಒಂದು ಅಥವಾ ಎರಡು ಗುಳ್ಳೆಗಳು ಬಂದರೆ ಪರವಾಗಿಲ್ಲ ಎನ್ನಬಹುದು. ಆದರೆ ಇಡೀ ಮುಖದ ತುಂಬಾ ತುಂಬಿಕೊಂಡು ಮುಖದ ಅಂದವನ್ನೇ ಹಾಳು ಮಾಡಿ ಬಿಡುತ್ತವೆ. ಮತ್ತು ವಾಸಿಯಾದ ನಂತರವೂ ಸಹ ಅವುಗಳ ಕಲೆಗಳು ಮುಖದ ಚರ್ಮದ ಮೇಲೆ ದೀರ್ಘಕಾಲ ಹಾಗೆಯೇ ಉಳಿದು ಮುಖದ ಮೇಲೆ ಕಪ್ಪು ಬಣ್ಣ ಚುಕ್ಕೆಗಳ ರೀತಿಯಲ್ಲಿ ಮೆತ್ತಿಕೊಂಡಂತೆ ಕಾಣುತ್ತದೆ. ಇಷ್ಟೇ ಅಲ್ಲದೆ ಚಿಕನ್ ಪಾಕ್ಸ್ ನಿಂದ ಬಳಲುತ್ತಿರುವವರು ಸಹ ಮುಖದ ಮೇಲೆ ಮೊಡವೆಗಳ ಕಲೆಗಳ ರೀತಿ ಸಣ್ಣ ಸಣ್ಣ ಗುರುತುಗಳನ್ನು ಹೊಂದಿರುತ್ತಾರೆ.

 ಈ ರೀತಿಯ ಕಿರಿ ಕಿರಿ ಉಂಟುಮಾಡುವ ಯಾವುದೇ ಬಗೆಯ ಸಮಸ್ಯೆಗಳಿಂದ ನೀವು ಬಳಲುತ್ತಿದ್ದರೆ, ಈ ಲೇಖನದಲ್ಲಿ ನಾವು ತಿಳಿಸಿರುವ ಒಂದು ಸರಳ ಮನೆ ಮದ್ದು ಕೇವಲ 1 ನಿಮಿಷದಲ್ಲಿ ನಿಮಗೆ ಪರಿಹಾರ ಒದಗಿಸಿ ಕೊಡುತ್ತದೆ.ಬಹಳ ಪ್ರಯೋಜನಕಾರಿಯಾಗಿ ಕೆಲಸ ಮಾಡುವ ಈ ಸರಳ ಮನೆ ಮದ್ದಿನ ತಯಾರಿಕೆಗೆ ನಿಮಗೆ ಬೇಕಾಗಿರುವುದು ಕೇವಲ ಎರಡು ಬಾದಾಮಿ ಬೀಜಗಳು ಮತ್ತು ಸ್ವಲ್ಪ ಮೊಸರು. ಈ ಮನೆ ಮದ್ದನ್ನು ತಯಾರು ಮಾಡಲು ನಿಮಗೆ ಅಬ್ಬಬ್ಬಾ ಎಂದರೆ ಎರಡು ನಿಮಿಷ ಹಿಡಿಯಬಹುದು. ಹಾಗಾದರೆ ನೈಸರ್ಗಿಕವಾಗಿ ಬಾದಾಮಿ ಬೀಜಗಳನ್ನು ಮತ್ತು ಮೊಸರನ್ನು ಬಳಸಿಕೊಂಡು ತಯಾರು ಮಾಡುವ ಮನೆ ಮದ್ದನ್ನು ನೋಡೋಣ ಬನ್ನಿ.

ಕಲೆಗಳನ್ನು ಹೋಗಲಾಡಿಸುವ ಮನೆ ಮದ್ದನ್ನು ತಯಾರು ಮಾಡುವ ಬಗೆ:

  • ಮೊದಲಿಗೆ ಗ್ಯಾಸ್ ಸ್ಟವ್ ಆನ್ ಮಾಡಿ ಚಿಮಟ ಅಥವಾ ಇಕ್ಕಳದ ಸಹಾಯದಿಂದ 2 ಬಾದಾಮಿ ಬೀಜಗಳನ್ನು ಸುಟ್ಟು ಕೊಳ್ಳಿ. ( ನಿಮಗೆ ಮುಖದ ಮೇಲೆ ಹೆಚ್ಚಿನ ಕಲೆಗಳಿದ್ದರೆ, ನೀವು ಹೆಚ್ಚಿನ ಬಾದಾಮಿ ಬೀಜಗಳನ್ನು ತೆಗೆದುಕೊಳ್ಳಬಹುದು )
  • ಬಾದಾಮಿ ಬೀಜಗಳು ಸಂಪೂರ್ಣವಾಗಿ ರೋಸ್ಟ್ ಆದ ಮೇಲೆ ಅವುಗಳನ್ನು ಒಂದು ಚಿಕ್ಕ ಬಟ್ಟಲಿನಲ್ಲಿ ಹಾಕಿಡಿ.
  • ಬಿಸಿ ಆರಿದ ಮೇಲೆ ಸುಟ್ಟ ಬಾದಾಮಿ ಬೀಜಗಳನ್ನು ಒಂದು ಮಿಕ್ಸರ್ ಜಾರ್ ನಲ್ಲಿ ಹಾಕಿ ನುಣ್ಣಗೆ ಪುಡಿ ಆಗುವವರೆಗೂ ಗ್ರಾಯ್ನ್ಡ್ ಮಾಡಿಕೊಳ್ಳಿ. ಇದು ಪುಡಿಯಾದ ಮೇಲೆ ನೋಡಲು ಕಲ್ಲಿದ್ದಲಿನ ಪುಡಿಯಂತೆ ಕಾಣುವುದರಿಂದ ಇದನ್ನು ” ಆಲ್ಮಂಡ್ ಚಾರ್ಕೋಲ್ ಪೌಡರ್ ” ಎಂತಲೂ ಕರೆಯುತ್ತಾರೆ.
  • ಈ ಪುಡಿಗೆ ಈ ಸಮಯದಲ್ಲಿ 1/4 ಟೀ ಚಮಚದಷ್ಟು ಗಟ್ಟಿ ಮೊಸರನ್ನು ಹಾಕಿ.
  • ಈಗ ಮೊಸರು ಮತ್ತು ಸುಟ್ಟ ಬಾದಾಮಿ ಪುಡಿಯನ್ನು ಚೆನ್ನಾಗಿ ಕಲಸಿ ಗಟ್ಟಿಯಾದ ಪೇಸ್ಟ್ ತಯಾರಿಸಿಕೊಳ್ಳಿ.
  • ಈಗ ನಿಮ್ಮ ಮೊಡವೆ ಕಲೆಗಳಿಗೆ ಮನೆಯಲ್ಲೇ ತಯಾರು ಮಾಡಿದ ಮನೆ ಮದ್ದು ರೆಡಿ ಆಗಿದೆ. ಇದನ್ನು ನಿಮ್ಮ ಮೊಡವೆ ಕಲೆಗಳು ಇರುವ ಜಾಗಕ್ಕೆ ಹಚ್ಚಿಕೊಳ್ಳಿ.

ಮುಖದ ಮೇಲಿನ ಕಪ್ಪು ಕಲೆಗಳಿಗೆ ಆಲ್ಮಂಡ್ ಚಾರ್ಕೋಲ್ ಪೌಡರ್ ಅನ್ನು ಹಚ್ಚಿಕೊಳ್ಳುವ ಬಗೆ :

  • ಕೆಲವೊಂದು ಕ್ರೀಮ್ ಗಳಿಗೆ ಇಂತಹದೇ ಸಮಯವೆಂದು ಇರುತ್ತದೆ. ಆದರೆ ನೀವು ತಯಾರು ಮಾಡಿದೆ ಬಾದಾಮಿ ಪುಡಿ ಮತ್ತು ಮೊಸರಿನ ಮನೆ ಮದ್ದಿಗೆ ಇಂತಹದೇ ಸಮಯವೆಂದು ಯಾವುದೇ ಅಡೆತಡೆ ಇಲ್ಲ. ನಿಮ್ಮ ಬಿಡುವಿನ ಸಮಯದಲ್ಲಿ ಅಂದರೆ ಬೆಳಗ್ಗೆ ಅಥವಾ ಸಂಜೆಯ ಹೊತ್ತಿನಲ್ಲಿ ನೀವು ಇದನ್ನು ಹಚ್ಚಿಕೊಳ್ಳಬಹುದು.
  • ಈ ಪೇಸ್ಟನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳುವ ಮೊದಲು ನಿಮ್ಮ ಮುಖವನ್ನು ಶುದ್ಧವಾದ ನೀರಿನಿಂದ ಚೆನ್ನಾಗಿ ತೊಳೆದು ಪಾಟಿಂಗ್ ಟವೆಲ್ ನ ಮುಖಾಂತರ ನಿಮ್ಮ ಮುಖವನ್ನು ಯಾವುದೇ ನೀರಿನ ಅಂಶ ಇಲ್ಲದಂತೆ ಚೆನ್ನಾಗಿ ಒತ್ತಿಕೊಳ್ಳಿ.
  • ನಿಮ್ಮ ಮುಖ ಚೆನ್ನಾಗಿ ಒಣಗಿದ ಮೇಲೆ, ನೀವು ತಯಾರು ಮಾಡಿಕೊಂಡ ಆಲ್ಮಂಡ್ ಚಾರ್ಕೋಲ್ ಕ್ರೀಮ್ ಅನ್ನು ಕಲೆಗಳಿರುವ ಜಾಗಕ್ಕೆ ಹಚ್ಚಿ.
  • ನಂತರ 1 – 2 ಗಂಟೆಗಳ ಕಾಲ ಇದನ್ನು ಹಾಗೇ ಒಣಗಲು ಬಿಡಿ. ಒಂದು ವೇಳೆ ನೀವು ಯಾವುದಾದರೂ ಕೆಲಸದ ಅವಸರದಲ್ಲಿ ಇದ್ದರೆ, ಕಡೆಯ ಪಕ್ಷ 30 ನಿಮಿಷಗಳವರೆಗೆ ಆದರೂ ಹಾಗೆ ಬಿಡಿ.
  • ಈಗ ನಿಮ್ಮ ಮುಖವನ್ನು ತಣ್ಣಗಿರುವ ಶುದ್ಧವಾದ ನೀರಿನಲ್ಲಿ ತೊಳೆದುಕೊಳ್ಳಿ ಮತ್ತು ಟವೆಲ್ ನಿಂದ ಒತ್ತಿಕೊಂಡು ಮುಖದ ಚರ್ಮವನ್ನು ಒಣಗಲು ಬಿಡಿ.
  • ಈ ತಂತ್ರದಿಂದ ನಿಮ್ಮ ಮುಖದಲ್ಲಿ ಎಂತಹದೇ ಕಲೆಗಳಿದ್ದರೂ ನಿಧಾನವಾಗಿ ಬಣ್ಣಗುಂದುತ್ತಾ ಬರುತ್ತವೆ. ಒಂದು ವಾರದಲ್ಲಿ 3 – 4 ಬಾರಿ ಈ ಪ್ರಯತ್ನವನ್ನು ಮಾಡಿದ್ದೇ ಆದಲ್ಲಿ ಸಂಪೂರ್ಣವಾಗಿ ಕಲೆಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ವಿಘ್ನ ವಿನಾಯಕನನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ whapp ಮೇಷ ರಾಶಿ ನಿಮ್ಮ…

  • ಸುದ್ದಿ

    ಬೆಂಗಳೂರಿನಾದ್ಯಂತ ಈ ದಿನದಂದು ಮದ್ಯ ಮಾರಾಟ ಬಂದ್ ಆಗಲಿದೆ ಕಾರಣವೇನು ಗೊತ್ತಾ,.?

    ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ  ಈದ್ ಮಿಲಾದ್ ಪ್ರಯುಕ್ತ ನವಂಬರ್ 10 ರಂದು  ಬೆಂಗಳೂರಿನಾದ್ಯಂತ ಮದ್ಯಬಂದ್ ಮಾಡಿ ಪೊಲೀಸ್ ಆಯುಕ್ತ ಆದೇಶ ಹೊರಡಿಸಿದ್ದಾರೆ. ಶಾಂತಿ‌ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮದ್ಯಮಾರಟ ನಿಷೇಧ ಮಾಡಿ ಆದೇಶ ಬೆಂಗಳೂರು ನಗರ ಪೊಲೀಸ್ ಆಯುಕ್ತ  ಭಾಸ್ಕರ್ರಾವ್ ಇಂದು ಮಂಗಳವಾರ ಆದೇಶ ಹೊರಡಿಸಿದ್ದಾರೆ. ಇದರಿಂದ ಎಲ್ಲರು  ಸಂತೋಷದಿಂದ ಹಬ್ಬವನ್ನು ಆಚರಿಸಲಿ ಎಂಬ ಉದ್ದೇಶವಷ್ಟೇ. ಇದೇ ನವೆಂಬರ್ 10 ರಂದು ಭಾನುವಾರ ಬೆಳಗ್ಗೆ 6 ರಿಂದ ಅದೇ ದಿನ ಮಧ್ಯರಾತ್ರಿ 12 ಗಂಟೆವರೆಗೂ ಮದ್ಯ…

  • bank, ಬ್ಯಾಂಕ್, ಸಾಲ, ಹಣ

    ಮುದ್ರಾ ಯೋಜನೆ ಬಗ್ಗೆ ತಿಳಿಯಿರಿ, ಸ್ವಯಂ ಉದ್ಯೋಗಿಗಳಾಗಿ

    ಪ್ರಧಾನಿಮಂತ್ರಿಯವರು `ಮುದ್ರ ಯೋಜನೆ’ ಯನ್ನು ಜಾರಿಗೊಳಿಸಿದ್ದಾರೆಂಬುದು ನಿಮಗೆಲ್ಲಾ ಗೊತ್ತಿಲ್ಲದೇ ಇರೋ ವಿಚಾರವೇನೂ ಅಲ್ಲ. ಆದ್ರೆ ಈ ಯೋಜನೆ ಏನು..? ಎಂಥಾ..? ಈ ಯೋಜನೆ ಅಡಿಯಲ್ಲಿ ಸಾಲ ತಗೋಳೋಕೆ ಇರೋ ಮಾನದಂಡಗಳೇನು..? ಅಂತೆಲ್ಲಾ ಸ್ವಲ್ಪ ಸಂಕ್ಷಿಪ್ತವಾಗಿ ತಿಳಿಸ್ತಾ ಇದ್ದೀವಿ. ಇಂಥಾ ಯೋಜನೆಗಳು ಅರ್ಹರಿಗೆ ತಲುಪಲೇ ಬೇಕು ಅಂತಾದ್ರೆ ನಾವು ನೀವು ಎಲ್ಲರೂ.., ಜನರಿಗೆ ಯೋಜನೆ ಬಗ್ಗೆ ಮಾಹಿತಿ ನೀಡೋ ಕೆಲಸ ಮಾಡ್ಬೇಕು..! ಫ್ರೆಂಡ್ಸ್, ಸರಿ.., ಯೋಜನೆ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ ನೀಡ್ತಾ ಇದ್ದೀವಿ..ಪ್ರತಿಯೊಬ್ಬರಿಗೂ ಈ ಮಾಹಿತಿ ಮುಟ್ಟಿಸುವ ಕೆಲಸವನ್ನು ನೀವು ಮಾಡೇ ಮಾಡ್ತೀರ ಅನ್ನೋ ನಂಬಿಕೆ ನಮಗಿದೆ.

  • ಉದ್ಯೋಗ

    ಕಾವೇರಿ ವಾಟರ್ ಮ್ಯಾನೇಜ್ಮೆಂಟ್ ಅಥಾರಿಟಿ ನೇಮಕಾತಿ 2020

    ಕಾವೇರಿ ವಾಟರ್ ಮ್ಯಾನೇಜ್ಮೆಂಟ್ ಅಥಾರಿಟಿ ನೇಮಕಾತಿ 2020 ರಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆ ಕಾವೇರಿ ವಾಟರ್ ಮ್ಯಾನೇಜ್ಮೆಂಟ್ ಪ್ರಾಧಿಕಾರವು ಜೂನಿಯರ್ ಎಂಜಿನಿಯರ್ ಉದ್ಯೋಗ ಖಾಲಿ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸುತ್ತದೆ, ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಆಗಸ್ಟ್ 2020 ಅಧಿಸೂಚನೆ ವಿವರಗಳು  ಜೂನಿಯರ್ ಎಂಜಿನಿಯರ್ ಬಿ.ಟೆಕ್ / ಬಿ.ಇ. ಉದ್ಯೋಗದ ಸ್ಥಳ ನವದೆಹಲಿ, ಬೆಂಗಳೂರು ಒಟ್ಟು ಖಾಲಿ ಹುದ್ದೆಗಳು 4 ದಿನಾಂಕ ಸೇರಿಸಲಾಗಿದೆ 17/08/2020 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13/10/2020 ಕಾವೇರಿ ವಾಟರ್ ಮ್ಯಾನೇಜ್ಮೆಂಟ್ ಅಥಾರಿಟಿ ನೇಮಕಾತಿ…

  • ಸಿನಿಮಾ

    ‘ಹೆಬ್ಬುಲಿ’ ಜಾಗಕ್ಕೆ ‘ಚಕ್ರವರ್ತಿ’ ಎಂಟ್ರಿ! ‘ಸಂತೋಷ್’ ಯಾರಿಗೆ?

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಚಿತ್ರಮಂದಿರಕ್ಕೆ ಅಪ್ಪಳಿಸಲು ತಯಾರಾಗಿದೆ. ಈಗಾಗಲೇ ರಿಲೀಸ್ ಡೇಟ್ ಅನೌನ್ಸ್ ಮಾಡಿರುವ ‘ಚಕ್ರವರ್ತಿ’ ಅಭಿಮಾನಿಗಳಲ್ಲಿ ಈಗೊಂದು ಗೊಂದಲ ಕಾಡುತ್ತಿದೆ.[‘ಬಾಹುಬಲಿ’ ಮೀರಿಸಿದ ದರ್ಶನ್ ‘ಚಕ್ರವರ್ತಿ’] ಗಾಂಧಿನಗರದಲ್ಲಿ ‘ಚಕ್ರವರ್ತಿ’ ಚಿತ್ರಕ್ಕೆ ಯಾವುದು ಪ್ರಮುಖ ಚಿತ್ರಮಂದಿರವೆಂಬುದು ಈಗ ಪ್ರಶ್ನೆಯಾಗಿದೆ. ಸದ್ಯ, ದರ್ಶನ್ ಸಿನಿಮಾಗಳ ನೆಚ್ಚಿನ ಚಿತ್ರಮಂದಿರಗಳಲ್ಲಿ ಸುದೀಪ್ ಅಭಿನಯದ ‘ಹೆಬ್ಬುಲಿ’ ಮತ್ತು ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಪ್ರದರ್ಶನವಾಗುತ್ತಿದೆ. ಹೀಗಿರುವಾಗ ‘ಚಕ್ರವರ್ತಿ’ಯ ಎಂಟ್ರಿ ಎಲ್ಲಿ ಎಂಬುದು ಕುತೂಹಲ…