ಸುದ್ದಿ

ಇಲ್ಲಿದೆ ನೋಡಿ ಮದ್ಯ ಪ್ರಿಯರಿಗೊಂದು ಸಿಹಿಸುದ್ದಿ…!

301
ಗೋವಾ ಪ್ರವಾಸಮಾಡ ಹೊರಟಿರುವ ಪ್ರವಾಸಿಗರೂ ಮತ್ತು ಮದ್ಯ ಪ್ರಿಯರಿಗೆ ಸಿಹಿ ಸುದ್ದಿ ಇದ್ದು, ಇನ್ನು ಮುಂದೆ ಗೋವಾದಿಂದಹೆಚ್ಚು ಮದ್ಯದ ಬಾಟಲಿಗಳನ್ನು ಮನೆಗೊಯ್ಯಲು ಅಲ್ಲಿನ ಸರ್ಕಾರ ಅವಕಾಶ ನೀಡಿದೆ.  ಅಚ್ಚರಿ ಪಡಬೇಡಿಇದು ನಿಜ…. ಹೌದು.. ಗೋವಾ ಪ್ರವಾಸಕ್ಕೆ ಹೋಗುವ ಮದ್ಯಪ್ರಿಯರಿಗೆ ಅಲ್ಲಿನ ಸರ್ಕಾರ ಸಿಹಿ ಸುದ್ದಿನೀಡಿದ್ದು, ಇನ್ನು ಮುಂದೆ ಪ್ರವಾಸ ಮುಗಿಸಿ ಮನೆಗೆ ಮರಳುವ ಇತರೆ ರಾಜ್ಯಗಳ ಪ್ರವಾಸಿಗರು ಹೆಚ್ಚುವರಿಮದ್ಯದ ಬಾಟಲಿಗಳನ್ನು ಮನೆಗೆ ಕೊಂಡೊಯ್ಯಬಹುದು. 
ಆದಾಯ ಕೊರತೆಯಿಂದ ಕಂಗೆಟ್ಟಿರುವ ಗೋವಾ ಸರ್ಕಾರ ಇಂತಹುದೊಂದು ಪ್ರಸ್ತಾವನೆಯನ್ನು ಮುಂದಿಟ್ಟಿದ್ದು, ಶೀಘ್ರದಲ್ಲಿಯೇ ಈ ಕುರಿತಂತೆ ನಿರ್ಣಯ ಕೈಗೊಳ್ಳಲಿದೆ. ಆ ಮೂಲಕ  ಕದ್ದು ಮುಚ್ಚಿ ಹೆಚ್ಚಿನ ಮದ್ಯದ ಬಾಟೆಲ್‌ ಗಳನ್ನು ಗಡಿ ದಾಟಿಸುವ ಮದ್ಯ ಪ್ರಿಯರು ಇನ್ನು ಮುಂದೆ ರಾಜಾರೋಷವಾಗಿಯೇ ಅಧಿಕೃತವಾಗಿಯೇ ಎರಡಕ್ಕಿಂತಲೂ ಹೆಚ್ಚಿನ ಮದ್ಯದ ಬಾಟೆಲ್‌ಗಳನ್ನು ಇತರೆ ರಾಜ್ಯಗಳಿಗೆ ಕೊಂಡೊಯ್ಯಬಹುದಾಗಿದೆ.
ಇಲ್ಲಿಯ ವರೆಗೂ ಗೋವಾದಲ್ಲಿ ಮಾರುವ ಮದ್ಯವನ್ನು ಡಿಯು ಮತ್ತು ಡಮನ್‌ ಕೇಂದ್ರಾಡಳಿತ ಪ್ರದೇಶಗಳಿಗೆ ಬಿಟ್ಟರೆ ಬೇರೆ ರಾಜ್ಯಗಳಿಗೆ ಸಾಗಿಸುವಂತಿರಲಿಲ್ಲ. ಆದರೆ, ಪ್ರಸ್ತುತ ಕಾನೂನು ಎಷ್ಟೇ ಬಿಗಿಯಾಗಿದ್ದರೂ ಕೆಲವು ಪ್ರವಾಸಿಗರು ಚೆಕ್‌ ಪೋಸ್ಟ್‌ಗಳಲ್ಲಿ ಲಂಚ ನೀಡಿಯಾದರೂ, ಹೆಚ್ಚಿನ ಮದ್ಯವನ್ನು ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದಾರೆ. ಇಂತಹ ಪ್ರವಾಸಿಗರಿಂದ ಆಗುವ ಲಾಭವನ್ನು ತಾನೇ ಪಡೆಯಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
ಈ ಬಗ್ಗೆ ಗೋವಾವಿಧಾನಸಭೆಯಲ್ಲಿ ಮಾತನಾಡಿರುವ ಸಿಎಂ ಪ್ರಮೋದ್ ಸಾವಂತ್ ಅವರು, ಗೋವಾದಿಂದ ಅನಧಿಕೃತವಾಗಿ ಚೆಕ್ ಪೋಸ್ಟ್ಗಳಲ್ಲಿ ಅಧಿಕಾರಿಗಳಿಗೆ ಲಂಚ ನೀಡಿ ಅಕ್ರಮವಾಗಿ ಮದ್ಯ ಸಾಗಿಸಲಾಗುತ್ತಿದೆ. ಪ್ರಮುಖವಾಗಿ ಕರ್ನಾಟಕಮತ್ತು ಮಹಾರಾಷ್ಟ್ರಕ್ಕೆ ಹೆಚ್ಚಿನ ಪ್ರಮಾಣದ ಮದ್ಯ ರವಾನೆಯಾಗುತ್ತಿದೆ. ಆದರೆ ಇದರಿಂದ ಸರ್ಕಾರಕ್ಕೆಯಾವುದೇ ರೀತಿಯ ಲಾಭವಾಗುತ್ತಿಲ್ಲ. ಆದರ ಬದಲಿಗೆ ನಾವೇ ಅನುಮತಿ ನೀಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆಹಣ ಬರುವಂತೆ ಮಾಡಬಹುದು. ಅಂತೆಯೇ ಗೋವಾ ಮದ್ಯವನ್ನೂ ಈ ಮೂಲಕ ಪ್ರಚುರ ಪಡಿಸಿದಂತಾಗುತ್ತದೆ. ನಮ್ಮಆದಾಯದ ಮೂಲ ಕೂಡ ಹೆಚ್ಚಳವಾಗುತ್ತದೆ. ಈ ಬಗ್ಗೆ ತಾವು ನೆರೆಯ ರಾಜ್ಯಗಳ ಸರ್ಕಾರದೊಂದಿಗೆ ಚರ್ಚೆ ಮಾಡಲುಸಿದ್ಧ ಎಂದು ಹೇಳಿದರು.  ಪ್ರಸ್ತುತ ಗೋವಾದಿಂದವಿಮಾನದಲ್ಲಿ ವಾಪಸಾಗುವ ಪ್ರವಾಸಿಗರಿಗೆ ವಿಮಾನದಲ್ಲಿ ಮಾತ್ರ ಎರಡು (750 ಎಂಎಲ್ ನ) ‘ಐಎಂಎಲ್‌ಎಫ್‌'(ಭಾರತದಲ್ಲಿ ತಯಾರಾದ ವಿದೇಶಿ ಮದ್ಯ) ಬಾಟೆಲ್‌ ಗಳನ್ನು ಕೊಂಡೊಯ್ಯಲು ಅವಕಾಶವಿದೆ. ಆದರೆ ರಸ್ತೆ ಮಾರ್ಗದಮೂಲಕ ಮದ್ಯ ಕೊಂಡೊಯ್ಯಲು ಅವಕಾಶವಿಲ್ಲ. 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಸ್ಮಯ ಜಗತ್ತು

    ಏಳು ವರ್ಷದ ನಂತರವೂ ತನ್ನ ಪೋಷಕನನ್ನು ಗುರುತು ಹಿಡಿದು ಆತನ ಹಿಂದೆ ಬಿದ್ದ ಜಿಂಕೆ..!ಈ ಲೇಖನ ಓದಿ ಶಾಕ್ ಆಗ್ತೀರಾ…

    ತಮ್ಮನ್ನು ಸಾಕಿದವರನ್ನು ಹಾಗೂ ತಮ್ಮ ಬಗ್ಗೆ ಕಾಳಜಿ ವಹಿಸಿದವರನ್ನು ಪ್ರಾಣಿಗಳು ಎಂದಿಗೂ ವು ರೆಯುವುದಿಲ ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯ, ಇದಕ್ಕೆ ಜೀವಂತ ನಿದರ್ಶನ ಬಳ್ಳಾರಿಯ ಜಿಂಕೆ ಮರಿ ಯಾಗಿದೆ.

  • ಸಿನಿಮಾ

    ಈ ನಟನ ಬಳಿ ಇರುವ ಐಷಾರಾಮಿ ವ್ಯಾನಿಟಿ ವ್ಯಾನ್’ನ ವಿಶೇಷತೆಗಳು ಏನು ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ನಟ, ನಟಿಯರು ಶೂಟಿಂಗ್‌ಗೆ ತೆರಳುವಾಗ ಅವರೊಂದಿಗೆ “ವ್ಯಾನಿಟಿ ವ್ಯಾನ್‌’ ಕೂಡಾ ತೆರಳುವುದು ಸಾಮಾನ್ಯ. ಕೆಲವರದ್ದು ಸಾಮಾನ್ಯ ಸೌಲಭ್ಯ ಇರುವ ವ್ಯಾನ್‌ ಆದರೆ ಇನ್ನು ಕೆಲವರನ್ನು ಅತ್ಯಾಧುನಿಕ ಸೌಲಭ್ಯ ಇರುವ ವ್ಯಾನಿಟಿ ವ್ಯಾನ್‌. ಈ ಅತ್ಯಾಧುನಿಕ ವ್ಯಾನಿಟಿ ವ್ಯಾನ್‌ ಹೊಂದಿರುವವರ ಸಾಲಿಗೆ ಇದೀಗ ನಟ ಶಾರುಖ್‌ ಖಾನ್‌ ಕೂಡಾ ಸೇರ್ಪಡೆಯಾಗಿದ್ದಾರೆ.

  • ಉಪಯುಕ್ತ ಮಾಹಿತಿ

    ಹಸುವಿನ ತುಪ್ಪದಲ್ಲಿ ಅಡಗಿದೆ ಪೋಷಕಾಂಶಗಳ ಆಗರ..!ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ…

    ಅಪ್ಪಟ ದೇಸಿ ತುಪ್ಪಕ್ಕೆ ಭೇಷ್ ಎನ್ನಲೇಬೇಕು ಆದರೆ ಒಂದು ಎಚ್ಚರಿಕೆ, ಏನೆಂದರೆ ತುಪ್ಪವನ್ನು ಸೇವಿಸಲು ಒಂದು ಮಿತಿ ಇದೆ. ಅತಿಯಾದರೆ ಅಮೃತವೂ ವಿಷ ವೆನ್ನುವಂತೆ ತುಪ್ಪದ ಅತಿಸೇವನೆ ದೇಹದಲ್ಲಿ ಕೊಬ್ಬಿನ ಸಂಗ್ರಹ ಹೆಚ್ಚಿಸಲು ಕಾರಣ ವಾಗುತ್ತದೆ. ತುಪ್ಪವನ್ನು ತುಪ್ಪದಂತೆಯೇ ತಿನ್ನಬೇಕು ಎನ್ನುವ ಕಾರಣಕ್ಕೆ ಚಮಚಕ್ಕಿಂತಲೂ ಚಿಕ್ಕದಾದ ಮಿಳ್ಳೆ ಎಂಬ ಉಪ ಕರಣವನ್ನು ನಮ್ಮ ಹಿರಿಯರು ಉಪಯೋಗಿಸುತ್ತಾ ಬಂದಿ ದ್ದಾರೆ. ಇದರ ಆಳ ಕಡಿಮೆ ಇದ್ದು, ಅಗಲ ಕೊಂಚ ಜಾಸ್ತಿ ಇರುವ ಕಾರಣ ಹೆಚ್ಚು ತುಪ್ಪ ಸುರಿದಂತೆ ಅತಿಥಿಗಳಿಗೆ ಅನ್ನಿಸಿದರೂ ನಿಜವಾಗಿ ಕೊಂಚವೇ ತುಪ್ಪ ತಟ್ಟೆಗೆ ಬಿದ್ದಿರುತ್ತದೆ!

  • ಸುದ್ದಿ

    ಬಯಲಾಯ್ತು ಜೆಡಿಎಸ್ ಶಾಸಕ ಮಾತನಾಡಿರುವ ಆಡಿಯೋ..!ಆ ಆಡಿಯೋದಲ್ಲಿ ಮಾತನಾಡಿದ್ದು ಏನು ಗೊತ್ತಾ?

    ಮಂಡ್ಯದಲ್ಲಿ ಪ್ರಚಾರಕ್ಕೆ ಹೊರಗಿನಿಂದ ಜನ ಕರೆಸುತ್ತಿದ್ದಾರಾ ಎಂಬ ಅನುಮಾನವೊಂದು ಕ್ಷೇತ್ರದ ಮತದಾರರನ್ನು ಕಾಡುತ್ತಿದೆ. ಯಾಕಂದ್ರೆ ಸಂಸದ ಶಿವರಾಮೇಗೌಡರು, ಜೆಡಿಎಸ್ ಕಾರ್ಯಕರ್ತನ ಜೊತೆ ಮಾತನಾಡಿರುವ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜೆಡಿಎಸ್ ಸಂಸದ ಎಲ್.ಆರ್. ಶಿವರಾಮೇಗೌಡ ಅವರು, ನಾಗಮಂಗಲ ತಾಲ್ಲೂಕಿನ ಚೀಣ್ಯ ಗ್ರಾಮದ ರಮೇಶ್ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಈ ಆಡಿಯೋದಲ್ಲಿ ರಮೇಶ್, ಜೆಡಿಎಸ್ ಪರ ಪ್ರಚಾರಕ್ಕೆ ಜನರನ್ನು ಕರೆ ತರುವುದಾಗಿ ಹೇಳಿದ್ದಾರೆ. ಈ ಆಡಿಯೋ ನೋಡಿ… ಬೆಂಗಳೂರಿನಿಂದ ಪ್ರಚಾರಕ್ಕೆ ಜನರನ್ನು…

  • ನೀತಿ ಕಥೆ

    ಸ್ವರ್ಗ..ನರಕಗಳ ನಡುವೆ ಇರುವ ವ್ಯತ್ಯಾಸವೇನೆಂದು ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ …

    ಅದೊಂದು ಶಾಲೆ…ಅದರಲ್ಲಿ ಒಬ್ಬ ವಿದ್ಯಾರ್ಥಿಗೆ ಯಾವುದಾದರೂ ಹೊಸ ವಿಷಯವನ್ನು ತಿಳಿದುಕೊಳ್ಳುವು ದೆಂದರೆ ಬಹಳ ಇಷ್ಟ. ಈ ನಿಟ್ಟಿನಲ್ಲಿ ಒಂದು ದಿನ ಆ ಹುಡುಗ ತನ್ನ ಟೀಚರ್ ಬಳಿ ಸ್ವರ್ಗ ಹಾಗೂ ನರಕ ಎಂದರೇನು. ಇವೆರಡರ ನಡುವೆ ಇರುವ ವ್ಯತ್ಯಾಸವೇನು? ಎಂದು ಪ್ರಶ್ನಿಸುತ್ತಾನೆ.

  • ಆಧ್ಯಾತ್ಮ

    ಬ್ರಹ್ಮ ಬರೆದ ಹಣೆಯ ಬರಹವನ್ನು ಬದಲಾಯಿಸುವ ಮಾಹಾ ಮಂತ್ರವಿದು.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ what ಕಮಲಾಸನ ಪಾಣಿನಂ ಲಾಲಾಟೆ…