ಸುದ್ದಿ

‘ಸೂರ್ಯವಂಶಿ’ ಶೂಟಿಂಗ್ ಸೆಟ್‌ನಲ್ಲೇ ಜಗಳವಾಡಿಕೊಂಡ ಅಕ್ಷಯ್‌ ಕುಮಾರ್ ಹಾಗು ರೋಹಿತ್ ಶೆಟ್ಟಿ!!

42

ಸಾಮಾನ್ಯವಾಗಿ ಸೆಟ್‌ನಲ್ಲಿ ತಂತ್ರಜ್ಞರೆಲ್ಲ ಮನೆಯವರಂತೆ ಇರುತ್ತಾರೆ. ಮನಸ್ತಾಪಗಳು ಬಂದರು ಬಹಳ ಕಾಲ ಇರುವುದಿಲ್ಲ. ಅಲ್ಲಿಂದಲ್ಲಿಗೆ ಮರೆತು ಒಂದಾಗಿ ಕೆಲಸ ಮಾಡಿಕೊಂಡು ಇರುತ್ತಾರೆ. ಆದರೆ, ‘ಸೂರ್ಯವಂಶಿ’ ಚಿತ್ರದ ಸೆಟ್‌ನಲ್ಲಿ ಮಾತ್ರ ಎಲ್ಲ ಅವಾಂತರವೇ ಆಗಿಹೋಗಿದೆ. ಆ ಚಿತ್ರದ ಹೀರೋ ಅಕ್ಷಯ್‌ಕುಮಾರ್. ನಿರ್ದೇಶನ ಮಾಡುತ್ತಿರುವುದು ರೋಹಿತ್ ಶೆಟ್ಟಿ. ಇದೀಗ ಇವರಿಬ್ಬರು ಸೆಟ್‌ನಲ್ಲಿ ಹೊಡೆದಾಡಿಕೊಂಡಿದ್ದಾರೆ. 

ಹಾಗಾದರೆ, ಅಕ್ಷಯ್‌ ಮತ್ತು ರೋಹಿತ್ ಹೀಗೆ ಹೊಡೆದಾಡಿಕೊಂಡರು? ಗಾಬರಿ ಆಗಬೇಡಿ. ಇದು ನಿಜವಾದ ಜಗಳವಲ್ಲ. ಬದಲಿಗೆ, ಕಾಮಿಡಿ ಜಗಳ. ಈ ರೀತಿ ಅವರಿಬ್ಬರು ನಡೆದುಕೊಳ್ಳಲೂ ಕಾರಣವಿದೆ. ಅದೇನೆಂದರೆ, ಇತ್ತೀಚಿಗೆ ಒಂದು ವದಂತಿ ಹಬ್ಬಿತ್ತು.

‘ಸೂರ್ಯವಂಶಿ’ ಸೆಟ್‌ನಲ್ಲಿ ಎಲ್ಲವೂ ಸರಿ ಇಲ್ಲ. ರೋಹಿತ್ ಮತ್ತು ಅಕ್ಷಯ್‌ಕುಮಾರ್ ನಡುವೆ ಜಗಳವಾಗಿದೆ. ಅಂತಿಮವಾಗಿ ಕರಣ್ ಜೋಹರ್ ಮಧ್ಯ ಪ್ರವೇಶ ಮಾಡಿ, ಈ ಜಗಳವನ್ನು ಬಿಡಿಸಿದ್ದಾರೆ ಎಂದು ರೂಮರ್ ಕೇಳಿಬಂದಿತ್ತು. ಇಂಥ ರೂಮರ್‌ಗೆ ಸರಿಯಾಗಿಯೇ ಉತ್ತರ ನೀಡಬೇಕೆಂಬ ಉದ್ದೇಶದಿಂದ ನಕಲಿ ಜಗಳ ಮಾಡಿದ್ದಾರೆ ಅಕ್ಕಿ-ರೋಹಿತ್‌.

ಈ ರೀತಿ ನಕಲಿ ಜಗಳದ ವಿಡಿಯೋವನ್ನು ಅಕ್ಷಯ್‌ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮೊದಲು ಚಿತ್ರದ ನಾಯಕಿ ಕತ್ರಿನಾ ಕೈಫ್‌, ವದಂತಿ ಹಬ್ಬಿರುವ ಸುದ್ದಿಯನ್ನು ಕ್ಯಾಮರಾಗೆ ತೋರಿಸುತ್ತಾರೆ. ಆನಂತರ ಏಕಾಏಕಿ ರೋಹಿತ್ ಮತ್ತು ಅಕ್ಷಯ್‌ ಜಗಳ ಆಡೋಕೆ ಶುರು ಮಾಡುತ್ತಾರೆ. ಸೆಟ್‌ನಲ್ಲಿರುವ ಇತರರು ಅವರನ್ನು ಸಮಾಧಾನ ಪಡಿಸಲು ಮುಂದಾಗುತ್ತಾರೆ. ಕೊನೆಗೆ ಇಬ್ಬರು ನೆಲಕ್ಕೆ ಬೀಳುತ್ತಾರೆ. ವದಂತಿಗಳಿಗೆ ಹೀಗೂ ಉತ್ತರ ನೀಡಬಹುದೇ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಂಬಂಧ

    ಚಿಕಿತ್ಸೆಗೆ ಹಣ ನೀಡೆಂದು ಅಪ್ಪನನ್ನು ಬೇಡಿದ್ದ ಕ್ಯಾನ್ಸರ್ಪೀಡಿತ ಬಾಲಕಿ- ಆಕೆಯ ಸಾವಿನ ನಂತರ ವೈರಲ್ ಆಯ್ತು ಈ ವಿಡಿಯೋ !!!

    ಡ್ಯಾಡಿ, ನೀನು ನಿನ್ನ ಬಳಿ ಹಣ ಇಲ್ಲ ಅಂತ ಹೇಳ್ತೀಯ. ಆದ್ರೆ ನಮ್ಮ ಬಳಿ ಈ ಮನೆನಾದ್ರೂ ಇದೆ. ಪ್ಲೀಸ್ ಈ ಮನೆಯನ್ನ ಮಾರಿ ನನ್ನ ಚಿಕಿತ್ಸೆಗೆ ಹಣ್ಣ ಕಟ್ಟಿ ಡ್ಯಾಡಿ. ಇಲ್ಲ ಅಂದ್ರೆ ನಾನು ಹೆಚ್ಚು ದಿನ ಬದುಕಲ್ಲ ಅಂತ ಹೇಳಿದ್ದಾರೆ. ಪ್ಲೀಸ್ ಏನಾದ್ರೂ ಮಾಡಿ ನನ್ನ ಉಳಿಸ್ಕೋ ಡ್ಯಾಡಿ….. ಹೀಗಂತ 13 ವರ್ಷದ ಹೆಣ್ಣುಮಗಳೊಬ್ಬಳು ತನ್ನ ಕ್ಯಾನ್ಸರ್ ಚಿತ್ಸೆಗಾಗಿ ಹಣ ಕೊಡಿ ಅಂತ ಅಪ್ಪನನ್ನ ಬೇಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮತ್ತೊಂದು ವಿಪರ್ಯಾಸವೆಂದರೆ ಮೇ 14ರಂದು ಈ ಬಾಲಕಿ ಸಾವನ್ನಪ್ಪಿದ್ದಾಳೆ.

  • ರಾಜಕೀಯ

    ರಾಹುಲ್ ಗಾಂಧಿಯವರಿಗೆ ಯಾವಾಗ ಮದುವೆ ಎಂದು ಕೇಳಿದ್ದು ಯಾರು ಗೊತ್ತಾ…? ತಿಳಿಯಲು ಈ ಲೇಖನ ಓದಿ…

    ಕಾಂಗ್ರೆಸ್ಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಯಾವಾಗ ಮದುವೆಯಾಗ್ತಾರೆ ಅನ್ನೋ ಕುತೂಹಲ ಸಾಮಾನ್ಯವಾಗಿ ಎಲ್ಲರಲ್ಲೂ ಇದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ರಾಹುಲ್ ಗಾಂಧಿ ಉತ್ತರಿಸಿದ್ದಾರೆ.

  • ಜ್ಯೋತಿಷ್ಯ

    ದಿನ ಭವಿಷ್ಯ ಶುಕ್ರವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(22 ಮಾರ್ಚ್, 2019) ನಿಮ್ಮ ಶೀಘ್ರ ಕ್ರಮ ನಿಮ್ಮ ಸುದೀರ್ಘವಾದ ಸಮಸ್ಯೆಯನ್ನು ಪರಿಹರಿಸುತ್ತದೆ. ನೀವು ಜನರು ನಿಮ್ಮಿಂದ…

  • ಸಿನಿಮಾ

    ‘ಒಂದು ಮೊಟ್ಟೆಯ ಕಥೆ’ಇದು ಕನ್ನಡದ ಸಿನಿಮಾ!ಈ ಸಿನಿಮಾ ಹೇಗಿದೆ ಗೊತ್ತಾ?ಈ ಲೇಖನಿ ಓದಿ…

    ಲೂಸಿಯಾ, ಯೂ ಟರ್ನ್ ಮುಂತಾದ ಯಶಸ್ವೀ ಚಿತ್ರಗಳ ನಿರ್ದೇಶಕ ಪವನ್ ಕುಮಾರ್ ಹೊಸದೊಂದು ಚಿತ್ರವನ್ನು ನಿರ್ಮಿಸಿದ್ದಾರೆ. ಆ ಚಿತ್ರದ ಹೆಸರು ‘ಒಂದು ಮೊಟ್ಟೆಯ ಕಥೆ’. ಹಾಗಂತ ಇದು ಕೋಳಿ ಮೊಟ್ಟೆಯ ಕಥೆಯಲ್ಲ. ನಮ್ಮ ನಿಮ್ಮೆಲರ ನಡುವೆ ಓಡಾಡೋ ಹಲವಾರು ಮೊಟ್ಟೆ ತಲೆಗಳ ಕಥೆ. ಅಂದ್ರೆ ತಲೆಯ ಮೇಲೆ ಕೂದಲಿಲ್ಲದೇ ಎಲ್ಲರಿಂದ ‘ಮೊಟ್ಟೆ, ಬಾಲ್ಡಿ, ಚೊಂಬು, ಟಕ್ಲು’ ಎಂದೆಲ್ಲಾ ಕರೆಸಿಕೊಳ್ಳುವವರ ಕಥೆ.

  • Archive

    RRR ಚಲನಚಿತ್ರಕ್ಕೆ ಆಸ್ಕರ್ ಪ್ರಶಸ್ತಿ

    ಇತಿಹಾಸ ಸೃಷ್ಟಿಸಿದ RRR  ಚಿತ್ರ ದಕ್ಷಿಣ ಭಾರತ ಚಲನಚಿತ್ರ ಒಂದಕ್ಕೆ ಮೊದಲ ಆಸ್ಕರ್ ಪ್ರಶಸ್ತಿಯ ಗೌರವ ನಾಟು ನಾಟು..’, ‘ಲಿಫ್ಟ್​ ಮಿ ಅಪ್​’, ‘ದಿಸ್ ಈಸ್ ಲೈಫ್​’, ಹೋಲ್ಡ್ ಮೈ ಹ್ಯಾಂಡ್, ಅಪ್ಲೌಸ್​ ಹಾಡುಗಳು ರೇಸ್​​ನಲ್ಲಿದ್ದವು. ಈ ಪೈಕಿ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದಿದೆ. ‘ಆರ್​ಆರ್​ಆರ್’ ಚಿತ್ರದ ‘ನಾಟು ನಾಟು..’ ಹಾಡು ದಾಖಲೆ ಬರೆದಿದೆ. 95ನೇ ಸಾಲಿನ ಅಕಾಡೆಮಿ ಅವಾರ್ಡ್ ಕರ‍್ಯಕ್ರಮದಲ್ಲಿ ಈ ಹಾಡು ‘ಬೆಸ್ಟ್​ ಒರಿಜಿನಲ್​ ಸಾಂಗ್​’ ವಿಭಾಗದಲ್ಲಿ ಆಸ್ಕರ್ ಬಾಚಿಕೊಂಡಿದೆ. ಎಂ.ಎಂ. ಕೀರವಾಣಿ…

  • ಸುದ್ದಿ

    884 ವರ್ಷಗಳಿಂದ ರಾಮಾನುಜಾಚಾರ್ಯರ ಮೂಲ ಶರೀರವನ್ನು ಯಾವುದೇ ರಾಸಾಯನಿಕಗಳ ಪ್ರಯೋಗವಿಲ್ಲದೆ ಸಂರಕ್ಷಿಸಿ ಇಡಲಾಗಿದೆ…!

    ನಂಬಲೇಬೇಕಾದ ಆದರೆ ನಂಬಲು ಸಾಧ್ಯವೇ ಇಲ್ಲದ ಸತ್ಯವಿದು. ವೈಷ್ಣವ ಪರಂಪರೆಯ ದಾರ್ಶನಿಕರಲ್ಲಿ ಒಬ್ಬರಾದ ವಿಶಿಷ್ಟಾದ್ವೈತ ಪ್ರತಿಪಾದಕ, ಸನಾತನ ಧರ್ಮ ರಕ್ಷಕ ಭಗವಾನ್ ರಾಮಾನುಜಾಚಾರ್ಯರ ಮೂಲ ಶರೀರವನ್ನು ಕಳೆದ 884 ವರ್ಷಗಳಿಂದ ಜೋಪಾನವಾಗಿಡಲಾಗಿದೆ!! ತಮ್ಮ ಆರಾಧ್ಯ ರಾಮಾನುಜಾಚಾರ್ಯರ ಶರೀರವನ್ನು ಇನ್ನೂ ಸುಸ್ಥಿತಿಯಲ್ಲೇ ಇಡಲಾಗಿದೆ ಎನ್ನುವ ವಿಚಾರವೇ ಹೆಚ್ಚಿನ ವೈಷ್ಣವರಿಗೆ ಗೊತ್ತಿಲ್ಲ. ತಿರುಚರಾಪಳ್ಳಿಯ ಶ್ರೀರಂಗಮ್ ನ ರಂಗನಾಥ ಸ್ವಾಮಿ ಮಂದಿರದಲ್ಲಿ ರಾಮಾನುಜಾಚಾರ್ಯರ ಮೂಲ ಶರೀರವನ್ನು ಇಡಲಾಗಿದೆ. ವೈಯಕ್ತೀಕರಣ ತತ್ತ್ವಶಾಸ್ತ್ರದ ದೃಢವಾದ ಪ್ರತಿಪಾದಕರಾದ ಆಚಾರ್ಯರು ಭಗವಂತ ಮತ್ತು ವೈಯಕ್ತಿಕ ಆತ್ಮಗಳು ಗುಣಾತ್ಮಕವಾಗಿ…