ಶ್ರದ್ಧಾಂಜಲಿ

ಹಿರಿಯ ನಟಿ ಜಮುನಾ ನಿಧನ

66

ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ನಟಿಸಿದ್ದ ಹಿರಿಯ ನಟಿ ಜಮುನಾ ಅವರು ಇಂದು (ಜನವರಿ 27) ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಹೈದರಾಬಾದ್ನಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಜಮುನಾ ಅವರು 1936 ಆಗಸ್ಟ್ 30 ರಂದು ಹಂಪಿಯಲ್ಲಿ ಜನಿಸಿದರು. 1953ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಹಲವು ದಶಕಗಳ ಕಾಲ ಚಿತ್ರರಂಗಕ್ಕಾಗಿ ಶ್ರಮಿಸಿದರು. ಅವರ ಅಗಲಿಕೆಗೆ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.

ಜಮುನಾ ಪಾರ್ಥಿವ ಶರೀರವನ್ನು ಬೆಳಗ್ಗೆ 11ಗಂಟೆಗೆ ಹೈದರಾಬಾದ್ನಲ್ಲಿರುವ ಫಿಲಂ ಚೇಂಬರ್ಗೆ ತರಲಾಗುತ್ತದೆ. ಅಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸತ್ಯಭಾಮ ಪಾತ್ರದ ಮೂಲಕ ಜಮುನಾ ಹೆಚ್ಚು ಗುರುತಿಸಲ್ಪಟ್ಟರು. ಕನ್ನಡದಲ್ಲಿ ಜಮುನಾ 8 ಚಿತ್ರಗಳಲ್ಲಿ ನಟಿಸಿದ್ದರು. ‘ತೆನಾಲಿ ರಾಮಕೃಷ್ಣ’, ‘ಭೂಕೈಲಾಸಮೊದಲಾದ ಸಿನಿಮಾಗಳಲ್ಲಿ ಜಮುನಾ ಬಣ್ಣ ಹಚ್ಚಿದ್ದರು. ತೆಲುಗಿನಲ್ಲಿ ಸುಮಾರು 100 ಚಿತ್ರಗಳಲ್ಲಿ ಅವರು ನಟಿಸಿದ್ದರು.

About the author / 

KOLAR NEWS CHANDRU

KOLAR NEWS CHANDRU editor : kolar news paper/ www.nammakolar.com presschandrukolar@gmail.com mobile-9448715409 kolar.karnataka.563101

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ನೀವೂ ಪ್ರತೀ ದಿವಸ ತಪ್ಪದೆ ಸ್ನಾನ ಮಾಡುತ್ತೀರಾ.!

    ಕೊರೆಯುವ, ಥರಗುಟ್ಟುವ ಚಳಿಯಲ್ಲಿ ಕೆಲವರು ಪ್ರತಿದಿನ ಸ್ನಾನ ಮಾಡಲು ಇಷ್ಟ ಪಡುವುದಿಲ್ಲ. ಅನೇಕರು ಪ್ರತಿದಿನ ಸ್ನಾನ ಮಾಡ್ತಾರೆ. ಪ್ರತಿದಿನ ಸ್ನಾನ ಮಾಡೋರು ಬೆಸ್ಟ್ ಅಂತಾ ನೀವು ಹೇಳಬಹುದು. ಆದ್ರೆ ಸಂಶೋಧನೆಯೊಂದು ನಿಮಗೆ ಆಶ್ಚರ್ಯವಾಗುವಂತಹ ಸಂಗತಿ ಹೇಳಿದೆ. ಪ್ರತಿದಿನ ಸ್ನಾನ ಮಾಡೋರು ಗಮನ ಇಟ್ಟು ಓದಿ. ಪ್ರತಿದಿನ ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ. ಹಾಗೆ ಮಾಡುವವರು ಹೆಚ್ಚಿನ ಬಾರಿ ಅನಾರೋಗ್ಯಕ್ಕೆ ತುತ್ತಾಗ್ತಾರಂತೆ. ಯಸ್, ಸಂಶೋಧನೆಯೊಂದು ಈ ವಿಷಯವನ್ನು ಹೇಳಿದೆ. ನಮ್ಮ ದೇಹಕ್ಕೆ ಎಣ್ಣೆಯ ಅವಶ್ಯಕತೆ ಇದೆ. ದೇಹದಲ್ಲಿರುವ ತೈಲದ ಅಂಶ…

  • ಆರೋಗ್ಯ

    ಮೊಳಕೆ ಬಂದ ಹೆಸರು ಕಾಳಿನ ಲಾಭಗಳೇನು? ಈ ಅರೋಗ್ಯ ಮಾಹಿತಿ ನೋಡಿ.

    ಬ್ಯುಸಿ ಜೀವನ ಶೈಲಿಯಲ್ಲಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ತೋರಿಸೋಕೆ ಸಮಯ ಸಿಗ್ತಿಲ್ಲ. ಅದರಲ್ಲೂ ಇತ್ತೀಚಿನ ಕಾಲಘಟ್ಟದಲ್ಲಿ ಆರೋಗ್ಯಕರ ಆಹಾರಕ್ಕಿಂತ ಫಾಸ್ಟ್ ಫುಡ್‍ಗಳ ಹಾವಳಿಯೇ ಹೆಚ್ಚಾಗಿದೆ. ಆದ್ದರಿಂದ ಆರೋಗ್ಯಕರ ಆಹಾರಗಳು ಯಾವುದು? ಅದರ ಲಾಭಗಳೇನು..? ಎನ್ನುವ ವಿಷಯವೇ ಅನೇಕರಿಗೆ ತಿಳಿದಿಲ್ಲ. ಫಾಸ್ಟ್ ಫುಡ್ಸ್ ಗಳ ರುಚಿಗೆ ಮನಸೋತ ಮಂದಿಗೆ ಅದರಿಂದ ಅಷ್ಟೇ ಫಾಸ್ಟಾಗಿ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿದಿರಲ್ಲ. ಹೌದು, ಇಂತಹ ಆರೋಗ್ಯಕ್ಕೆ ಮಾರಕವಾದ ಜೀವನ ಶೈಲಿಯ ಮಧ್ಯೆ ಆರೋಗ್ಯಕರ ಆಹಾರಗಳನ್ನು ಜನ ಮರೆತಿದ್ದಾರೆ. ಸೊಪ್ಪು ತರಕಾರಿ,…

  • ದೇಗುಲ ದರ್ಶನ, ದೇವರು

    ಮಕ್ಕಳಾಗದ ದಂಪತಿ ಒಮ್ಮೆ ಈ ದೇಗುಲಕ್ಕೆ ಭೇಟಿ ನೀಡಿ. ನಿಮ್ಮ ಇಷ್ಟಾರ್ಥವನ್ನು ಈಡೇರಿಸಿಕೊಳ್ಳಿ.!

    ಬೆಳ್ತಂಗಡಿಯಿಂದ ಆರು ಕಿ.ಮೀ. ಅಂತರದ ಕಾರ್ಕಳ ರಸ್ತೆಯಲ್ಲಿ ಬಂದರೆ ಬದ್ಯಾರ್ ಎಂಬಲ್ಲಿ ಇಳಿದು ಮತ್ತೆ ಒಂದು ಕಿ.ಮೀ. ಸಾಗಿದರೆ ಪುರಾತನವಾದ ಸಂತಾನ ಗೋಪಾಲಕೃಷ್ಣ ದೇವಸ್ಥಾನ ತಲುಪಬಹುದು. ಕರಾವಳಿಯಲ್ಲಿ ಇಂತಹ ದೇವಾಲಯವಿರುವುದು ಒಂದೆರಡು ಮಾತ್ರ. ಈ ಬಾರಿಯ ಜಾತ್ರೆ 2020ರ ಜನವರಿ ಇಂದ ನಡೆಯಲಿದೆ. ಮಕ್ಕಳಿಲ್ಲದ ದಂಪತಿ ಇಷ್ಟಾರ್ಥ ಪ್ರಾಪ್ತಿಯಾದಾಗ ನಿರ್ಮಾಣ ಮಾಡಿದ್ದ ಈ ದೇವಾಲಯಕ್ಕೆ ಆರುನೂರು ವರ್ಷಗಳ ಇತಿಹಾಸವಿದೆ. ಚಾಲುಕ್ಯ ಶಿಲ್ಪ ಶೈಲಿಯ ವೇಣುಗೋಪಾಲನ ವಿಗ್ರಹ ಇಲ್ಲಿದೆ. ಪ್ರತ್ಯೇಕವಾಗಿ ದುರ್ಗೆ ಮತ್ತು ದೈವಗಳಿಗೂ ಆರಾಧನೆ ನಡೆಯುತ್ತದೆ. 2012ರಲ್ಲಿ ದೇವಾಲಯ…

  • ಸುದ್ದಿ

    ಬಿಸಿಬಿಸಿ ಕಾಫಿ ಕುಡಿಯಿರಿ:ʼತೂಕʼ ಇಳಿಸಿಕೊಳ್ಳಿ…..!

    ಬಿಸಿ ಬಿಸಿ ಕಾಫಿ ಹೀರುವುದರಿಂದ ಮನಸ್ಸು ಉಲ್ಲಾಸಿತವಾಗಿ ರಿಲ್ಯಾಕ್ಸ್‌ ಅನಿಸುತ್ತದೆ. ಒತ್ತಡ ಕಡಿಮೆ ಮಾಡಿ ಫ್ರೆಶ್‌ನೆಸ್‌ ನೀಡುವ ಈ ಪೇಯದ ಹೊಸ ಆರೋಗ್ಯ ಪ್ರಯೋಜನವೊಂದು ಬೆಳಕಿಗೆ ಬಂದಿದೆ.ಹೊಸ ಅಧ್ಯಯನವೊಂದು ಕಾಫಿ ಸೇವನೆಯಿಂದ ದೇಹ ತೂಕವೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ ಎಂದು ಹೇಳಿದೆ. ನಮ್ಮ ದೇಹದಲ್ಲಿರುವ ಬ್ರೌನ್‌ ಫ್ಯಾಟ್‌ ಅನ್ನು ಪರೋಕ್ಷ ಅಥವಾ ನೇರವಾಗಿ ಸಕ್ರಿಯಗೊಳಿಸುವ ಅಂಶಗಳು ಕಾಫಿಯಲ್ಲಿದೆ ಎಂದು ಹೇಳಿರುವ ಈ ಅಧ್ಯಯನ, ಬಿಳಿ ಕೊಬ್ಬು ಕ್ಯಾಲೋರಿಗಳನ್ನು ಸಂಗ್ರಹಿಸುವ ಕೆಲಸ ಮಾಡಿದರೆ, ಕಂದು ಕೊಬ್ಬು ಕೊಬ್ಬನ್ನು ಕರಗಿಸಿ…

  • ಸುದ್ದಿ

    ಟೀ ಕುಡಿಯಲು ಬಂದಾಗ ಹುಚ್ಚ ವೆಂಕಟ್ ಮೇಲೆ ಹಲ್ಲೆ. ಯುವಕರ ವಿರುದ್ಧಐಪಿಸಿ ಸೆಕ್ಷನ್ ಪ್ರಕರಣ.

    ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರ ಮೇಲೆ ಹಲ್ಲೆ ಮಾಡಿದ್ದ ಪ್ರಕರಣ ಸಂಬಂಧಿಸಿದಂತೆ ಈಗ ಆರೋಪಿಗಳ ಮೇಲೆ ಆಕ್ಷನ್ ತೆಗೆದುಕೊಳ್ಳಲಾಗಿದೆ. ಇದರ ಹಿನ್ನೆಲೆ ನಟ ನವರಸನಾಯಕ ಜಗ್ಗೇಶ್ ಪೊಲೀಸರಿಗೆ ಧನ್ಯವಾದವನ್ನು ತಿಳಿಸಿದ್ದಾರೆ. ಹುಚ್ಚ ವೆಂಕಟ್ ಅವರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಮಂಡ್ಯದ ಗ್ರಾಮಾಂತರ ಪೊಲೀಸರು ಇದರ ವಿರುದ್ಧ ಕ್ರಮವನ್ನು ತೆಗೆದುಕೊಂಡಿದ್ದಾರೆ. ಇದರ ಬಗ್ಗೆ ಟ್ವೀಟ್ ಮಾಡಿದ ನವರಸ ನಾಯಕ ಜಗ್ಗೇಶ್ ಅವರು, ವೆಂಕಟ್ ಮೇಲೆ ಕೈಮಾಡಿದವರ ಮೇಲೆ ದಾಖಲು ಮಾಡಿದ ಮಂಡ್ಯ ರವರಿಗೆ ಕಲಾಪ್ರೇಮಿಗಳು ಧನ್ಯವಾದ…