ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನವದೆಹಲಿ: ಈ ಯುವಕ-ಯುವತಿ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಅದೇನಾಯಿಯೋ ಯುವಕ ಮದುವೆಯಾಗಲು ನಿರಾಕರಿಸಿದ. ನಮ್ಮ ಸಂಬಂಧವನ್ನು ಮುರಿದುಕೊಳ್ಳೋಣ ಎಂದು ಯುವತಿ ಬಳಿ ಹೇಳಿದ. ಅದನ್ನು ಕೇಳಿದ ಯುವತಿ ಅಳಲಿಲ್ಲ, ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ ಬದಲಿಗೆ ಕ್ರೂರವಾಗಿ ಸೇಡು ತೀರಿಸಿಕೊಂಡಳು.

ಘಟನೆ ನಡೆದಿದ್ದು ದೆಹಲಿಯ ವಿಕಾಸಪುರಿಯಲ್ಲಿ. ಜೂನ್ 11ರಂದು ಬೈಕ್ನಲ್ಲಿ ಹೋಗುತ್ತಿದ್ದರು. ಯುವಕ ಅದಾಗಲೇ ಮದುವೆ ಬೇಡ ಎಂದಿದ್ದ. ಬೈಕ್ನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಯುವತಿ ಆತನ ಬಳಿ ಹೆಲ್ಮೆಟ್ ತೆಗೆಯುವಂತೆ ಕೇಳಿದ್ದಾಳೆ. ಆತ ತೆಗೆದಕೂಡಲೇ ಮುಖಕ್ಕೆ ಆ್ಯಸಿಡ್ ಎರಚಿದ್ದಾಳೆ. ಯುವಕನ ಮುಖ ಪೂರ್ತಿಯಾಗಿ ಸುಟ್ಟುಹೋಗಿದೆ. ಅಲ್ಲದೆ ಈ ಹುಡುಗಿಯ ಕೈಯ್ಯಿಗೂ ಸುಟ್ಟಗಾಯಗಳಾಗಿವೆ.

ಅದಾದ ಬಳಿಕ ಸ್ಥಳದಲ್ಲಿ ಇದ್ದವರು ಯಾರೋ ಪೊಲೀಸರಿಗೆ ಕರೆ ಮಾಡಿ, ಬೈಕ್ನಲ್ಲಿ ಹೋಗುತ್ತಿದ್ದವರ ಮೇಲೆ ಆ್ಯಸಿಡ್ ದಾಳಿಯಾಗಿದೆ ಎಂದು ವಿಷಯ ತಿಳಿಸಿದ್ದಾರೆ. ಪೊಲೀಸರು ಕೂಡ ಮೊದಲು ಬೇರೆ ಯಾರೋ ಇವರಿಬ್ಬರ ಮೇಲೆ ಆ್ಯಸಿಡ್ ಹಾಕಿದ್ದಾರೆ ಎಂದುಕೊಂಡಿದ್ದರು.

ಆದರೆ ಆ ಯುವಕ ತನ್ನ ಬಳಿ ಯುವತಿ ಹೆಲ್ಮೆಟ್ ತೆಗೆಯುವಂತೆ ಹೇಳಿದ್ದಳು ಎಂದು ಹೇಳಿಕೆ ನೀಡಿದ ಬಳಿಕ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಂತರ ಆ ಯುವತಿ ತಾನೇ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಪರ್ಸ್ನಲ್ಲಿ ಆ್ಯಸಿಡ್ ಬಾಟಲಿಯನ್ನು ಅಡಗಿಸಿ ಇಟ್ಟುಕೊಂಡು ಯುವಕನ ಮುಖಕ್ಕೆ ಎರಚಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಿಮ್ಮ ದೇಹ ತೂಕವನ್ನು ಬೇಗನೆ ಇಳಿಸಬೇಕೆಂದಿದ್ದರೆ ಬೆಳಗಿನ ಉಪಹಾರವನ್ನು ಬಿಟ್ಟುಬಿಡಿ. ಮಧ್ಯಾಹ್ನ ಊಟದ ವರೆಗೆ ಏನೂ ತಿನ್ನದೆ ಉಪವಾಸ ವಿದ್ದರೆ ಪ್ರತಿನಿತ್ಯ ಸುಮಾರು 350 ರಷ್ಟು ಕಡಿಮೆ ಕ್ಯಾಲೊರಿ ಆಹಾರ ಸೇವಿಸಬಹುದು ಮತ್ತು ಇದರಿಂದ ದೇಹದ ತೂಕವನ್ನು ಇಳಿಸಬಹುದು ಎಂದು ಅಧ್ಯಯನವೊಂದು ಹೇಳುತ್ತದೆ.
ಯಾರೇ ನೀನು ಚೆಲುವೆ ಚಿತ್ರವು 1998ರಲ್ಲಿ ಸ್ಯಾಂಡಲ್ ವುಡ್ ಬಿಡುಗಡೆಯಾದ ಚಿತ್ರ. ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗು ನಟಿ ಸಂಗೀತ ನಟಿಸಿದ್ದರು. ಈ ಚಿತ್ರವನ್ನು ಡಿ.ರಾಜೇಂದ್ರಬಾಬುರವರು ನಿರ್ದೇಶಿಸಿದ್ದಾರೆ. ರಾಕ್ ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಕ್ಷಿಣ ಭಾರತದ ನಾಲ್ಕು ಭಾಷೆಯಲ್ಲಿ ಅಭಿನಯ ಮಾಡಿ ಮಿಂಚಿದ್ದ ಈ ನಟಿ 2000 ರಲ್ಲಿ ಸರವನ್ ಎಂಬುವವರನ್ನು ಮದುವೆ ಆದರು, ಬಳಿಕ ಯಾವುದೇ ಸಿನಿಮಾ ಮಾಡುವುದಿಲ್ಲ ಎಂದು ತಿಳಿಸಿದರು. ಇವರು ಸಿನಿಮಾದಲ್ಲಿ ಸೌಮ್ಯ ಸ್ವಭಾವದ ಪಾತ್ರಗಳಲ್ಲೇ ಅಭಿನಯ ಮಾಡಿ ಹೆಸರುವಾಸಿಯಾದವರು. ನಿಜಜೀವನದಲ್ಲೂ…
ಸಾಮಾನ್ಯವಾಗಿ ಹಿಂದೆ ಹರಳೆಣ್ಣೆ ಎಂದರೆ ಎತ್ತಿನಗಾಡಿಯ ಕೀಲುಗಳಿಗೆ ಹಾಕಲು ಅಥವಾ ತಲೆಗೆ ಮತ್ತು ಮಲಬದ್ಧತೆಗೆ ಔಷಧೀಯ ರೂಪದಲ್ಲಿ ಬಳಸಲಾಗುತ್ತಿತ್ತು. ವಾಸ್ತವವಾಗಿ ಹರಳೆಣ್ಣೆ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿದೆ.
ಬಿಹಾರ ಮೂಲದ 24ರ ಯುವಕನೊಬ್ಬ ತನ್ನ ಕನಸನ್ನು ನನಸು ಮಾಡಿಕೊಳ್ಳಲು ತನ್ನ ನ್ಯಾನೋ ಕಾರನ್ನೇ ಹೆಲಿಕಾಪ್ಟರ್ ಆಗಿ ವಿನ್ಯಾಸಗೊಳಿಸಿ ಎಲ್ಲರ ಗಮನ ಸೆಳೆದಿದ್ದಾನೆ.ಬಿಹಾರದ ಬನಿಯಾಪುರದ ಸಿಮಾರಿ ಗ್ರಾಮದ ನಿವಾಸಿ ಮಿಥಿಲೇಶ್ ಪ್ರಸಾದ್(24) ಈ ಅಪರೂಪದ ಹೆಲಿಕಾಪ್ಟರ್ ತಯಾರಿಸಿದ್ದಾನೆ. ಮಿಥಿಲೇಶ್ 12ನೇ ತರಗತಿಯವರೆಗೆ ಓದಿದ್ದಾನೆ. ಈತ ವೃತ್ತಿಯಲ್ಲಿ ಪೈಪ್ ಫಿಟ್ಟರ್ ಆಗಿದ್ದು, ತನ್ನ ಬಳಿ ಇದ್ದ ಟಾಟಾ ನ್ಯಾನೋ ಕಾರನ್ನೇ ಹೆಲಿಕಾಪ್ಟರ್ ರೀತಿ ವಿನ್ಯಾಸಗೊಳಿಸಿ ತನ್ನ ಆಸೆ ತೀರಿಸಿಕೊಂಡಿದ್ದಾನೆ. ಚಿಕ್ಕ ವಯಸ್ಸಿನಿಂದಲೂ ಹೆಲಿಕಾಪ್ಟರ್‍ಗಳನ್ನು ಮಾಡುವ ಕನಸು ಹೊಂದಿದ್ದನು. ಅದು…
ಬೈಕ್‌ಗಳ ರಾಜ ರಾಯಲ್ ಎನ್‌ಫೀಲ್ಡ್ ಬೈಕ್, ಒಂದು ಕಾಲದಲ್ಲಿ ಸಾಮಾನ್ಯ ಜನರಿಗೆ ಇದರ ಹೆಸರು ಕೇಳಿದ್ರೆ ಸಾಕು, ಮೈ ಜುಮ್ಮೆನ್ನುತ್ತಿತ್ತು. ಯಾಕೆಂದ್ರೆ ಈ ಬೈಕ್’ನ್ನು ಒಮ್ಮೆ ಆದ್ರೂ ಓಡಿಸಬೇಕು ಅಂತ ಮನಸ್ಸಿಗೂ ಬಂದ್ರೂ, ಸಾಮಾನ್ಯ ಜನರ ಕೈಗೆ ಇದು ಎಟುಕುತ್ತಿರಲಿಲ್ಲ.
ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಅವರು ತಮ್ಮ ಪತಿ ಡೇನಿಯಲ್ ವೆಬರ್ ಜೊತೆ ಸೇರಿ ಚಿಕ್ಕ ಮಕ್ಕಳಿಗಾಗಿ ಶಾಲೆಯನ್ನು ಆರಂಭಿಸಿದ್ದಾರೆ. ಮಕ್ಕಳಿಗೆ ದೈಹಿಕ ಹಾಗೂ ಬೌದ್ಧಿಕ ವಿಕಾಸಕ್ಕೆ ಕಲ್ಪಿಸುವುದು ನಮ್ಮ ಉದ್ದೇಶ. ಮಕ್ಕಳು ಕೇವಲ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಿರಬಾರದು. ಅವರು ಪ್ರಪಂಚದಲ್ಲಿ ನಡೆಯುತ್ತಿರುವ ಪ್ರತಿಯೊಂದು ವಿಷಯದ ಬಗ್ಗೆ ತಿಳಿದುಕೊಂಡಿರಬೇಕು. ಮಕ್ಕಳು ಮಜಾ ಮಾಡಬೇಕು ಎಂಬುದು ನನ್ನ ಉದ್ದೇಶ ಎಂದು ಸನ್ನಿ ಲಿಯೋನ್ ಹೇಳಿದ್ದಾರೆ. ಸನ್ನಿ ಲಿಯೋನ್ ಅವರಿಗೆ ಮಕ್ಕಳೆಂದರೆ ತುಂಬಾನೇ ಇಷ್ಟ. ಅವರು ಮೂರು ಮಕ್ಕಳ ತಾಯಿ…