ತಂತ್ರಜ್ಞಾನ

ಜಗತ್ತಿನ ಅತೀ ಸಣ್ಣ ಉಪಗ್ರಹವನ್ನು ತಯಾರಿಸಿದ ಈ ಬಾಲಕನ ಬಗ್ಗೆ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

200

ತಮಿಳುನಾಡಿನ ಪಲ್ಲಾಪಟ್ಟಿ ಗ್ರಾಮದ 18 ವರ್ಷದ ಬಾಲಕ ರಿಫತ್‍ ಶಾರೂಕ್ 64 ಗ್ರಾಮ್ ತೂಕದ ಸ್ಯಾಟ್‍ಲೈಟ್‍ ರೂಪಿಸಿದ್ದು, ಇದು ವಿಶ್ವದ ಅತ್ಯಂತ ಕಿರಿಯ ಸ್ಯಾಟ್‍ಲೈಟ್‍ ಎಂಬ ಹಿರಿಮೆಗೆ ಪಾತ್ರವಾಗಿದೆ.

ಸ್ಯಾಟಲೈಟ್‍ ಅಂದರೆ ಉಪಗ್ರಹ ರೂಪಿಸೋದು ಅಂದರೆ ವಿಜ್ಞಾನಿಗಳಿಗೆ ಜೀವಮಾನದ ಸಾಧನೆ. ಅದಕ್ಕಾಗಿ ಹಲವಾರು ವರ್ಷಗಳ ಕಾಲ ಶ್ರಮ ವಹಿಸುತ್ತಾರೆ. ಆದರೆ ಇಲ್ಲೊಬ್ಬ 18 ವರ್ಷದ ಬಾಲಕನೊಬ್ಬ ಅತೀ ಕಿರಿಯ ಅಂದರೆ ಅಂಗೈಯಲ್ಲಿ ಹಿಡಿದುಕೊಳ್ಳಬಹುದಾದ ಸ್ಯಾಟ್‍ಲೈಟ್ ರೂಪಿಸಿ ವಿಶ್ವದ ಗಮನ ಸೆಳೆದಿದ್ದಾನೆ.

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ `ಕಲಾಂ ಸ್ಯಾಟ್‍ ಹೆಸರಿನ ಜೂನ್ 21 ರಂದು ನಾಸಾದಲ್ಲಿ ಪ್ರದರ್ಶನಗೊಳ್ಳಲಿದೆ. ಈ ಮೂಲಕ ಭಾರತದ ಬಾಲಕನ ಸಂಶೋಧನೆಯ ಸ್ಯಾಟ್‍ಲೈಟ್‍ ಮೊದಲ ಬಾರಿ ಪ್ರದರ್ಶನಗೊಳ್ಳಲಿದೆ.

ಸ್ಯಾಟಲೈಟ್ ಬಗ್ಗೆ ವಿವರಣೆ ನೀಡಿದ ರಿಫತ್‍, ಇದೊಂದು ಸಬ್‍ ಆರ್ಬಿಟ್‍ ಕಕ್ಷೆ ಯಲ್ಲಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. 240 ನಿಮಿಷಗಳ ಮಿಷನ್‍ ಸ್ಪಾನ್ ಇದಾಗಿದ್ದು 12 ನಿಮಿಷಗಳ ಕಾಲ ಕಕ್ಷೆಯಲ್ಲಿ ಕಾರ್ಯ ನಿರ್ವಹಿಸಲಿದೆ 3ಡಿ ಪ್ರಿಂಟೆಡ್‍ ಕಾರ್ಬನ್‍ ಫೈಬರ್‍ ಬಳಸಿ ಇದನ್ನು ರೂಪಿಸಲಾಗಿದೆ ಎಂದರು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ