ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಐಸಿಸಿ ಅಂಡರ್ 19 ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಟೀಮ್ ಇಂಡಿಯಾ ನಾಲ್ಕನೇ ಬಾರಿಗೆ ಕಿರಿಯರ ವಿಶ್ವಕಪ್ ಎತ್ತಿ ಹಿಡಿದಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ 47.2 ಓವರುಗಳಲ್ಲಿ ಭಾರತ ವೇಗಿಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡ 216 ರನ್ ಗಳಿಗೆ ಆಲೌಟ್ ಆಯಿತು..

ಆಸ್ಟ್ರೇಲಿಯಾ ಪರವಾಗಿ ಜೋನಾಥನ್ ಮೆರ್ಲೊ 76, ಪರಮ್ ಉಪ್ಪಲ್ 34 ಜ್ಯಾಕ್ ಎಡ್ವಾರ್ಡ್ಸ್ 28 ರನ್ ಗಳಿಸಿದರು. ಭಾರತದ ಇಶಾನ್ ಪೊರೆಲ್, ಶಿವಾ ಸಿಂಗ್, ಕಮಲೇಶ್ ನಗರಕೋಟಿ, ಅನುಕೂಲ್ ರಾಯ್ ತಲಾ 2 ವಿಕೆಟ್ ಪಡೆದರು.

ಗುರಿಯನ್ನು ಬೆನ್ನತ್ತಿದ ಭಾರತಕ್ಕೆ ಆರಂಭಿಕ ಬ್ಯಾಟ್ಸಮನ್ ಗಳಾದ ಪೃಥ್ವಿ ಶಾ ಹಾಗೂ ಮಂಜೋತ್ ಕಾಲ್ರಾ ಉತ್ತಮ ಆರಂಭ ಒದಗಿಸಿದರು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಮಂಜೋತ್ ಕಾಲ್ರಾ (101) ಅಜೇಯ ಶತಕ ಬಾರಿಸಿದರು. ನಾಯಕ ಪೃಥ್ವಿ ಶಾ 29, ಶುಭಮನ್ ಗಿಲ್ 31, ಹಾರ್ವಿಕ್ ದೇಸಾಯಿ 47 ರನ್ ಗಳಿಸಿದರು. ಭಾರತ 38.5 ಓವರುಗಳಲ್ಲಿ ಗುರಿಯನ್ನು ತಲುಪಿ ಭರ್ಜರಿ ಜಯ ಗಳಿಸಿತು.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮನುಷ್ಯ ಹೆಚ್ಚು ಅಂದ್ರೆ 100, 150 ವರ್ಷ ಬದುಕಿರುವ ಸುದ್ದಿಗಳನ್ನು ನಾವು ಕೇಳಿದ್ದೇವೆ. 150 ವರ್ಷದ ವ್ಯಕ್ತಿ ಇನ್ನೂ ಬದುಕಿದ್ದಾನೆ ಎಂದ್ರೆ ಎಲ್ಲರೂ ಆಶ್ಚರ್ಯಪಡ್ತೇವೆ. ಆದ್ರೆ ಚೀನಾದಲ್ಲೊಬ್ಬ ವ್ಯಕ್ತಿ 256 ವರ್ಷ ಬದುಕಿದ್ದ.
ಮಂಡ್ಯ ಚುನಾವಣೆ ಮುಗಿದಿದೆ. ಸುಮಲತಾ ಅಂಬರೀಶ್ ಮಂಡ್ಯದ ನೂತನ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಜೋಡೆತ್ತುಗಳಾಗಿ ಸುಮಲತಾ ಅವರ ‘ವಿಜಯದ ಬಂಡಿ’ ಎಳೆದ ದರ್ಶನ್ ಮತ್ತು ಯಶ್ ಮಂಡ್ಯದ ಜನರಿಗೆ ಹೃದಯಪೂರ್ವಕವಾಗಿ ಧನ್ಯವಾದ ಹೇಳಿದರು. ಫಲಿತಾಂಶದ ನಂತರ ಮಂಡ್ಯದಲ್ಲಿ ಆಯೋಜಿಸಿದ್ದ ‘ಸ್ವಾಭಿಮಾನದ ವಿಜಯೋತ್ಸವ’ ಸಮಾರಂಭದಲ್ಲಿ ಸುಮಲತಾ, ದರ್ಶನ್, ಯಶ್ ಎಲ್ಲರೂ ಪಾಲ್ಗೊಂಡು ತಲೆ ಬಾಗಿ ನಮಸ್ಕರಿಸಿದರು. ಇದಾದ ಬಳಿಕವೂ ಜೋಡೆತ್ತುಗಳು ಮಂಡ್ಯದಲ್ಲಿ ಕಾಣಿಸಿಕೊಳ್ತಾರಾ ಎಂಬ ಅನುಮಾನಗಳು, ಪ್ರಶ್ನೆಗಳು ಕೇಳುತ್ತಲೇ ಇದೆ. 200 ಹಳ್ಳಿಗಳಿಗೂ ದರ್ಶನ್-ಯಶ್ ಭೇಟಿ ಸುಮಲತಾ ಪರ ಪ್ರಚಾರ…
ಜಿಂದಾಲ್ಗೆ ಭೂಮಿ ನೀಡೋದನ್ನು ವಿರೋಧಿಸಿ ಹೋರಾಟ ಮಾಡಿದ್ದ ಬಿಎಸ್ ಯಡಿಯೂರಪ್ಪ ಸಿಎಂ ಆದ ವಾರದಲ್ಲೇ ಅಮೆರಿಕ ಮೂಲದ ಕಂಪನಿಗೆ 250 ಕೋಟಿ ಮೌಲ್ಯದ ಭೂಮಿಯನ್ನು ರಾತ್ರೋರಾತ್ರಿ ತರಾತುರಿಯಲ್ಲಿ ನೀಡಿದ್ದಾರೆ. ಅಮೆರಿಕ ಮೂಲದ ಬಹುರಾಷ್ಟ್ರೀಯ ವೈಮಾನಿಕ ಕಂಪನಿ ಗುಡ್ರಿಚ್ಗೆ ದೇವನಹಳ್ಳಿಯ ಏರೋಸ್ಪೇಸ್ SEZ ಪಾರ್ಕ್ನ 25 ಎಕರೆ 1 ಗುಂಟೆ ಭೂಮಿಯನ್ನು ಎಕರೆಗೆ 2.50 ಕೋಟಿ ರೂಪಾಯಿಯಂತೆ ನೀಡಿದ್ದಾರೆ. ತಜ್ಞರ ವರದಿ ತರಿಸಿಕೊಳ್ಳದೇ, HLCC ಮೀಟಿಂಗ್ ಮಾಡದೇ, ಅಧಿಕಾರಿಗಳು ವಿರೋಧದ ನಡುವೆಯೂ 5 ವರ್ಷದ ಹಿಂದೆ ಅರ್ಜಿ ಸಲ್ಲಿಸಿದವರಿಗೆ…
ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಸೌಂದರ್ಯ ರಜನಿಕಾಂತ್ 2 ನೇ ಮದುವೆಗೆ ದಿನಾಂಕ ನಿಗದಿಯಾಗಿದೆ. ಫೆಬ್ರವರಿ 11 ರಂದು ಸೌಂದರ್ಯ ರಜನಿಕಾಂತ್ ವಿವಾಹ, ನಟ ಹಾಗೂ ಉದ್ಯಮಿಯಾಗಿರುವ ವಿಶಾಗನ್ ವನಂಗಮುಡಿ ಅವರೊಂದಿಗೆ ನೆರವೇರಲಿದೆ. ಈಗಾಗಲೆ ಮದುವೆ ಸಿದ್ಧತೆ ಆರಂಭವಾಗಿವೆ. ಸೌಂದರ್ಯ ರಜನಿಕಾಂತ್ ಮತ್ತು ವಿಶಾಗನ್ ವನಂಗಮುಡಿ ಅವರ ಮದುವೆಯ ಆಮಂತ್ರಣ ಪತ್ರಿಕೆಯನ್ನು ರಜನಿಕಾಂತ್ ದಂಪತಿ ಇತ್ತಿಚೆಗೆ ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ತೆಗೆದುಕೊಂಡು ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಮೊದಲು ಅಶ್ವಿನ್ ರಾಮ್ ಕುಮಾರ್ ಜೊತೆ…
ಪಾಸಿಟೀವೋ, ನೆಗೆಟಿವೋ.. ಒಟ್ನಲ್ಲಿ ಪ್ರಚಾರ ಸಿಕ್ಕರೆ ಸಾಕು ಅಂತ ಕೆಲ ಸಿನಿಮಾ ತಂಡವರು ಏನೇನೋ ಪ್ಲಾನ್ ಮಾಡ್ತಾರೆ. ನೆಗೆಟಿವ್ ಪಬ್ಲಿಸಿಟಿ ಆದರೂ ಪರ್ವಾಗಿಲ್ಲ, ಒಟ್ನಲ್ಲಿ ಹೆಚ್ಚು ಜನರನ್ನು ತಲುಪಲು ಗಾಂಧಿನಗರದ ಕೆಲ ಮಂದಿ ಸರ್ಕಸ್ ಮಾಡುವುದು ನಿಮಗೆಲ್ಲ ಗೊತ್ತೇ ಇದೆ. ಸೇಮ್ ಟು ಸೇಮ್ ಇದೇ ಸ್ಟ್ರಾಟೆಜಿಯನ್ನ ನಟಿ ಮತ್ತು ಬರಹಗಾರ್ತಿ ಚೈತ್ರ ಕೊಟ್ಟೂರು ‘ಬಿಗ್ ಬಾಸ್’ ಮನೆಯಲ್ಲಿ ಅಪ್ಲೈ ಮಾಡುತ್ತಿರುವ ಹಾಗಿದೆ. ‘ಬಿಗ್ ಬಾಸ್’ ಮನೆಯಲ್ಲಿ ಮೂರು ಹೊತ್ತು ಸುಮ್ಮನೆ ಇದ್ದರೆ, ಕ್ಯಾಮರಾಗಳು ಕೂಡ ಝೂಮ್…
ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿ ದೇವಸ್ಥಾನದ ಬಾಗಿಲು ಅ.17ರಿಂದ ತೆರೆಯಲಿದ್ದು, ಭಕ್ತರಿಗೆ 13 ದಿನಗಳ ಕಾಲ ದೇವಿಯ ದರ್ಶನ ಭಾಗ್ಯ ಲಭಿಸಲಿದೆ. ಅಕ್ಟೋಬರ್ 17ರ ಗುರುವಾರ ಮಧ್ಯಾಹ್ನ 12.30ಕ್ಕೆ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆಯಲು ಆಗಮಿಸಲಿದ್ದಾರೆ. ಆದ್ದರಿಂದ, ಜಿಲ್ಲಾಡಳಿತ ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿದೆ. ದೇವಿಯ ದರ್ಶನಕ್ಕೆ ರಾಜ್ಯ, ಹೊರ ರಾಜ್ಯದಿಂದಲೂ ಸಹಸ್ತ್ರಾರು ಸಂಖ್ಯೆಯ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆ ಕಲ್ಪಿಸಲು ಜಿಲ್ಲಾಧಿಕಾರಿ ಗಿರೀಶ್, ಅಪರ ಜಿಲ್ಲಾಧಿಕಾರಿ ನಾಗರಾಜ್, ತಹಸೀಲ್ದಾರ್…