ಸರ್ಕಾರದ ಯೋಜನೆಗಳು

ಈಗ ವಿದ್ಯಾರ್ಥಿಗಳಿಗೆ 1 ಜಿ.ಬಿ. ಉಚಿತ ಡೇಟಾ ಸಿಗಲಿದೆ..!ಹೇಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

160

ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ಕನಿಷ್ಠ 1 ಜಿ.ಬಿ. ಡೇಟಾವನ್ನು ಉಚಿತವಾಗಿ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಎಲ್ಲಾ ಸರ್ಕಾರಿ ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಆಗಸ್ಟ್ 15 ರೊಳಗೆ ಸೌಲಭ್ಯ ನೀಡಲು ಸೂಚನೆ ನೀಡಲಾಗಿದ್ದು, ವಿದ್ಯಾರ್ಥಿಗಳಿಗೆ ಉಚಿತವಾಗಿ ವೈಫೈ ಸೌಲಭ್ಯ ಕಲ್ಪಿಸಲಾಗುತ್ತದೆ.

ಕೇಂದ್ರ ಸರ್ಕಾರದಿಂದ ಎಲ್ಲಾ ಸರ್ಕಾರಿ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಿಗೆ ಸೂಚನೆ ನೀಡಲಾಗಿದ್ದು, ಹೈಸ್ಪೀಡ್ ಅಂತರ್ಜಾಲ ಸಂಪರ್ಕ ಒದಗಿಸುವ ದೂರಸಂಪರ್ಕ ಕಂಪನಿಗಳನ್ನು ಸಂಪರ್ಕಿಸಿ ಸೌಲಭ್ಯ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.

ಮಾನವ ಸಂಪನ್ಮೂಲ ಸಚಿವಾಲಯದಿಂದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪತ್ರ ಬರೆಯಲಾಗಿದ್ದು, ದೂರ ಸಂಪರ್ಕ ಕಂಪನಿಗಳು, ಅಂತರ್ಜಾಲ ಸೇವೆ ಒದಗಿಸುವ ಕಂಪನಿಗಳನ್ನು ಫೆಬ್ರವರಿ 15 ರೊಳಗೆ ಸಂಪರ್ಕಿಸಿ ಆಗಸ್ಟ್ 15 ರೊಳಗೆ ಸೌಲಭ್ಯ ಕಲ್ಪಿಸುವಂತೆ ಸೂಚಿಸಲಾಗಿದೆ.

ಕಂಪನಿಗಳು ತಮ್ಮದೇ ವೆಚ್ಚದಲ್ಲಿ ಸೌಲಭ್ಯವನ್ನು ಕಲ್ಪಿಸುವುದರಿಂದ ಸಂಸ್ಥೆಗಳ ಮೇಲೆ ಹೊರೆ ಬೀಳುವುದಿಲ್ಲ ಎಂದು ಹೇಳಲಾಗಿದೆ.ಉಚಿತವಾಗಿ ತಿಂಗಳಿಗೆ ಕನಿಷ್ಠ 1 ಜಿ.ಬಿ. ಡೇಟಾವನ್ನು 4 ಎಂ.ಬಿ.ಪಿ.ಎಸ್. ವೇಗಕ್ಕಿಂತ ಕಡಿಮೆ ಇಲ್ಲದಂತೆ ನೀಡಲಾಗುವುದು. ಮೊಬೈಲ್/ ಲ್ಯಾಪ್ ಟಾಪ್ ಗಳಿಗೆ ವಿದ್ಯಾರ್ಥಿಗಳು ಸೌಲಭ್ಯ ಪಡೆಯಬಹುದಾಗಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ