ಮನರಂಜನೆ

ಬಿಗ್ ಬಾಸ್’ನಿಂದ ಮಧ್ಯರಾತ್ರಿ ಶಾಕಿಂಗ್ ಎಲಿಮನೇಷನ್..!ರಾತ್ರೋರಾತ್ರಿ ಮನೆಯಿಂದ ಹೊರಹೋದವರು ಯಾರು?ತಿಳಿಯಲು ಮುಂದೆ ಓದಿ…

865

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಕಾರ್ಯಕ್ರಮವು ದಿನದಿಂದ ದಿನಕ್ಕೆ ವೀಕ್ಷಕರಲ್ಲಿ ಕ್ರೇಜ್ ಜಾಸ್ತಿ‌ ಮಾಡುತ್ತಿದ್ದು,ಶೋ ಮುಗಿಯೋದಕ್ಕೆ ಕೇವಲ 6 ದಿನಗಳು ಬಾಕಿ ಉಳಿದಿವೆ. ಕೆಲ ವೀಕ್ಷಕರಿಂದ ‘ಡ್ರಾಮಾ ಕ್ವೀನ್’ ಅಂತಲೇ ಕರೆಯಿಸಿಕೊಂಡಿದ್ದ ಅನುಪಮಾ ಗೌಡ ಭಾನುವಾರ ನಡೆದ ಎಲಿಮಿನೇಷನ್ ಪಂಚಾಯ್ತಿಯಲ್ಲಿ ಮನೆಗೆ ಕಳುಹಿಸಲಾಗಿತ್ತು.

ಆದರೂ ಕೂಡ ಮನೆಯಲ್ಲಿ ಚಂದನ್ ಶೆಟ್ಟಿ ನಿವೇದಿತಾ ಗೌಡ ದಿವಾಕರ್ ಜಯರಾಮ್ ಕಾರ್ಥಿಕ್ ಸಮೀರ್ ಆಚಾರ್ಯ ಶೃತಿ ಪ್ರಕಾಶ್ ಒಟ್ಟು 6 ಸದಸ್ಯರಿದ್ದರು.. ಎಲಿಮಿನೇಟ್ ಮಾಡುವಾಗ ಕೊನೆಯಲ್ಲಿ ಟ್ವಿಸ್ಟ್ ಕೊಟ್ಟ ಕಿಚ್ಚ, ನೀವೆಲ್ಲಾ ಟಾಪ್ 5 ಸ್ಪರ್ದಿಗಳಲ್ಲ ಎಂದು  ಎಲ್ಲರಿಗೂ ಶಾಕ್ ಕೊಟ್ಟಿದ್ದರು.ಇದು ವೀಕ್ಷಕರಲ್ಲಿ ಕೂಡ ಕ್ರೇಜ್ ಉಂಟುಮಾಡಿತ್ತು.

ಟಾಪ್ 5 ಸ್ಪರ್ದಿಗಳು ಯಾರು..

ಆದ್ರೆ ಸುದೀಪ್ ಹೇಳಿದಂತೆ ವಾರದ ಶುರುವಿನಲ್ಲಿಯೇ ಮನೆಯಿಂದ ಶೃತಿ ಪ್ರಕಾಶ್ ಹೊರ ಬೀಳುವ ಮೂಲಕ ಅಂತಿಮ ಐದು ಸ್ಪರ್ಧಿಗಳು ಯಾರು ಎಂಬುದು ಖಚಿತವಾಗಿದೆ. ಹೌದು, ಶೃತಿ ಎಲಿಮಿನೇಟ್ ಆಗಿದ್ದರೆ ಫಿನಾಲೆಯ ಒಂದು ಹೆಜ್ಜೆ ಬಾಕಿ ಇರುವಾಗ ಮುಗ್ಗರಿಸಿದಂತಾಗಿದೆ. ಮೊನ್ನೆಯಷ್ಟೇ ಅನುಪಮಾ ಗೌಡ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದರು. ಈಗ ಶೃತಿ ಪ್ರಕಾಶ್ ಹೊರ ಬೀಳುವ ಮೂಲಕ ಅಂತಿಮ ಐದು ಸ್ಪರ್ಧಿಗಳು ಯಾರು ಎಂಬುದು ಖಚಿತವಾಗಿದೆ. ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್, ಸಮೀರ್ ಆಚಾರ್ಯ, ದಿವಾಕರ್, ನಿವೇದಿತಾ ಗೌಡ ಅವರು ಅಂತಿಮ ಐದರಲ್ಲಿ ಸ್ಥಾನ ಪಡೆದಿದ್ದಾರೆ.

 

ಮಧ್ಯರಾತ್ರಿ ಎಲಿಮನೇಷನ್..!

ಆದ್ರೆ ಬಿಗ್’ಬಾಸ್  ಮತ್ತೊಂದು ಬಿಗ್ ಟ್ವಿಸ್ಟ್ ನೀಡಿದ್ದಾರೆ. ಹೌದು,ನಿನ್ನೆ ಮಧ್ಯರಾತ್ರಿ ಬಿಗ್ ಬಾಸ್ ಶಾಕಿಂಗ್ ನ್ಯೂಸ್ ಒಂದನ್ನು ಹೊರಹಾಕಿದ್ದಾರೆ. ಅದು ರಾತ್ರೋ ರಾತ್ರಿ‌ ಎಲಿಮನೇಷನ್.. ನಿನ್ನೆ ಮಧ್ಯರಾತ್ರಿ ಸಮೀರ್ ಆಚಾರ್ಯ ಮನೆಯಿಂದ ಹೊರ ಬಂದಿದ್ದಾರೆ ಎಂಬ ಸುದ್ದಿಗಳು ಬಂದಿವೆ.ಸದ್ಯಕ್ಕೆ ಟಿ ಆರ್ ಪಿ ಯಲ್ಲಿ ಕಿಂಗ್ ಎನಿಸಿಕೊಂಡಿರುವ, ವೀಕ್ಷಕರಲ್ಲಿ ದಿನದಿಂದ ದಿನಕ್ಕೆ ಕ್ರೇಜ್ ಉಂಟು ಮಾಡುತ್ತಿರುವ ಬಿಗ್’ಬಾಸ್ ನ ಮುಂದಿನ ನಡೆ ನಿಜಕ್ಕೂ ಕುತೂಹಲ ಮೂಡಿಸಿರುವುದು ಸತ್ಯ..

 

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ಶೆಟ್ಟರ ಕಥೆಯಲ್ಲಿ, ಬರವಣಿಗೆಯೇ ರಾಜ.. ಗರುಡ ಗಮನ ವೃಷಭ ವಾಹನ ಚಿತ್ರದ ವಿಮರ್ಶೆ

    ಒಬ್ಬೊಬ್ಬ ನಿರ್ದೇಶಕನಿಗೂ ಒಂದೊಂದು ಶೈಲಿ ಇದ್ದರೂ, ಸಿನಿಮಾ ನಿರ್ದೇಶಕರನ್ನು ಎರಡು ವರ್ಗವಾಗಿ ವಿಂಗಡಿಸಬಹುದು. ಮೊದಲನೆಯ ವರ್ಗದ ನಿರ್ದೇಶಕರು ಸಿನಿರಸಿಕರನ್ನು ರಂಜಿಸಲೆಂದೇ ಸಿದ್ದಸೂತ್ರದ ಅಂಶಗಳನ್ನು ಇಟ್ಟುಕೊಂಡು, ಜನ ಬಯಸುವ ಅಂಶಗಳನ್ನೇ ಗ್ರಹಿಸಿ, ಅಳೆದು ತೂಗಿ ಅಂಥದ್ದೇ ಸಿನಿಮಾ ಮೂಲಕ ಜನರನ್ನು ರಂಜಿಸಬಯಸುವವರು. ಹೊಸ ಪ್ರಯೋಗಗಳಿಗೆ ಹಾತೊರೆಯುವ‌ ಮನಸು ಮಾಡದವರು. ಎರಡನೆಯ ವರ್ಗದ ನಿರ್ದೇಶಕರು ತಮ್ಮೊಳಗಿನ‌ ಕಥೆಯನ್ನು ಚೌಕಟ್ಟಿನ ಹಂಗಿಲ್ಲದೆ, ಸಿದ್ಧ ಸೂತ್ರಗಳಿಗೆ ಮೊರೆ ಹೋಗದೇ, ತಮ್ಮದೇ ರೀತಿಯಲ್ಲಿ, ರೂಪಿಸಿ, ನಿರೂಪಿಸಿ ತೆರೆಗೆ ತರುವವರು. ಸದಾ ಹೊಸ ಪ್ರಯೋಗಗಳಿಗೆ‌ ಮಿಡಿಯುವವರು,…

  • ಆಧ್ಯಾತ್ಮ

    ರುದ್ರಾಕ್ಷಿ ಧರಿಸುವುದರ ಹಿಂದಿದೆ ನಿಮಗೆ ಗೊತ್ತಿಲ್ಲದ ವೈಜ್ಞಾನಿಕ ಸತ್ಯ! ಹಾಗಾದ್ರೆ ರುದ್ರಾಕ್ಷಿ ಮಹತ್ವ ಏನು ಗೊತ್ತಾ???

    ಶಿವಪರಮಾತ್ಮನ ಉಪಾಸನೆಯಲ್ಲಿ ರುದ್ರಾಕ್ಷಕ್ಕೆ ಅತ್ಯಂತ ಪ್ರಮುಖ ಸ್ಥಾನ.”ರುದ್ರ” ಹಾಗೂ “ಅಕ್ಷ” ಈ ಎರಡು ಪದಗಳಿರುವ ಶಬ್ದ ರುದ್ರಾಕ್ಷ,ಅಂದರೆ ರುದ್ರನ ಕಣ್ಣು.”ರುದ್ರಸ್ಯ ಅಕ್ಷಿಃ ರುದ್ರಾಕ್ಷಃ”. ರುದ್ರಾಕ್ಷವೆಂಬುದು ಒಂದು ಮರ.ಆ ಮರದ ಬೀಜವೇ ರುದ್ರಾಕ್ಷಿ.ಶಿವ ಪುರಾಣ,ವಿದ್ಯೇಶ್ವರ ಸಂಹಿತಾ ಹಾಗೂ ಶ್ರೀ ದೇವೀಭಾಗವತಗಳಲ್ಲಿ ರುದ್ರಾಕ್ಷಕ್ಕೆ ಸಂಬಂಧಿಸಿದ ವಿಷಯಗಳಿವೆ.ಅನೇಕ ವರ್ಷಗಳ ಸತತ ಧ್ಯಾನದ ನಂತರ ಸದಾಶಿವ ತನ್ನ ಕಣ್ಣುಗಳನ್ನು ತೆರೆದ.ಆಗ ಕಣ್ಣುಗಳಿಂದ ಅಶ್ರು ಸುರಿಯಿತು.ಆ ಕಣ್ಣಿರಿನಿಂದಲೇ ಜನ್ಯವಾದದ್ದು ರುದ್ರಾಕ್ಷವೃಕ್ಷ ಎಂಬ ಪೌರಾಣಿಕ ಕಥೆಯಿದೆ.

  • Village

    ನಿಮ್ಮ ಹಳ್ಳಿಯಲ್ಲಿ ಕರೊನಾ ಜಾಸ್ತಿ ಆಗಲು ಈ ಕಾರಣ ಇರಬಹುದು.

    ಕೊರೊನಾ ಈ ದೇಶಕ್ಕೆ ಕಾಲಿಟ್ಟಾಗ ಹಳ್ಳಿಗಳು ಕೊರೊನಾ ವೈರಸ್ ನಿಂದ ಬಹುದೂರದಲ್ಲಿದ್ದವು. ಪೇಟೆಗಳಲ್ಲಿ ಮಾತ್ರ ಜನ ಕೊರೊನಾಕ್ಕೆ ಬಲಿ ಆಗ್ತಾ ಇದ್ರು. ಆದ್ರೆ ಕೊರೊನಾ ಎರಡನೇ ಅಲೆ ಹಳ್ಳಿಗರನ್ನು ತೀವ್ರವಾಗಿ ಬಾಧಿಸುತ್ತಿದೆ. ಇದಕ್ಕೆ ಹಳ್ಳಿಗರ ಸ್ವಯಂಕೃತ ಅಪರಾಧವೇ ಕಾರಣವಾಗಿದೆ.

  • ಸುದ್ದಿ

    ಬಿಹಾರದ ರಣಬಿಸಿಲಿಗೆ 117 ಜನ ಬಲಿ- ಗಯಾದಲ್ಲಿ ಸೆಕ್ಷನ್ 144 ಜಾರಿ……!

    ಬಿಹಾರ ರಾಜ್ಯದಲ್ಲಿ ರೌದ್ರಾವತಾರ ತೋರುತ್ತಿರುವ ರಣಬಿಸಿಲ ತಾಪಕ್ಕೆ ಬಲಿಯಾದವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ಈವರೆಗೆ ಬಿಸಿಲ ಝಳಕ್ಕೆ 117 ಮಂದಿ ಮೃತಪಟ್ಟಿದ್ದಾರೆ.ಕಳೆದ 48 ಗಂಟೆಗಳಲ್ಲಿ ಮುಂಗರ್‍ನಲ್ಲಿ ಕನಿಷ್ಠ 5 ಮಂದಿ ಸಾವನ್ನಪ್ಪಿದ್ದು, ಔರಂಗಾಬಾದ್ ನಲ್ಲಿ 60, ಗಯಾದಲ್ಲಿ 35, ನವಾಡಾದಲ್ಲಿ 7, ಕೈಮುರ್ ನಲ್ಲಿ 2, ಅರ್ರಾ, ಸಮಸ್ತಿಪುರ್ ನಲ್ಲಿ ತಲಾ 1 ಮತ್ತು ನಳಂದದಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ರಣ ಬಿಸಿಲಿಗೆ ಸಾರ್ವಜನಿಕರು ಮೃತಪಡುತ್ತಿರುವ ಹಿನ್ನೆಲೆಯಲ್ಲಿ ಗಯಾ ಜಿಲ್ಲಾಧಿಕಾರಿ ಅಭಿಷೇಕ್…

  • ಸಿನಿಮಾ

    ಮಗನ ಫೋಟೋ ಹಾಕಿ ನಟ ಜಗ್ಗೇಶ್ ರವರನ್ನು ಟ್ರೊಲ್ ಮಾಡಿದ ರಮ್ಯಾ ಬೆಂಬಲಿಗರು..ಇದಕ್ಕೆ ಜಗ್ಗೇಶ್ ಕೊಟ್ಟ ಪ್ರತಿಕ್ರಿಯೆ ಏನು ಗೊತ್ತಾ..?

    ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್ ಗೆ ಹೋಲಿಸಿದ್ದ ರಮ್ಯಾರನ್ನು ಹಾಸ್ಯ ನಟ ಬುಲೆಟ್ ಪ್ರಕಾಶ್ ತರಾಟೆಗೆ ತೆಗೆದುಕೊಂಡಿದ್ದರು. ಬುಲೆಟ್ ಪ್ರಕಾಶ್ ಅವರಿಗೆ ನವರಸನಾಯಕ ಜಗ್ಗೇಶ್ ಸಾಥ್ ಕೊಟ್ಟು ಟ್ವೀಟ್ ಮಾಡಿದ್ದರು. ಈಗ ಜಗ್ಗೇಶ್ ಟ್ವೀಟ್ ಮಾಡಿದ್ದಕ್ಕೆ ಅವರ ಕುಟುಂಬದ ವಿಚಾರವನ್ನು ಎಳೆದು ರಮ್ಯಾ ಬೆಂಬಲಿಗರು ಟ್ರೋಲ್ ಮಾಡುತ್ತಿದ್ದಾರೆ. ರಮ್ಯಾ ಬಗ್ಗೆ ಈ ರೀತಿಯ ಟೀಕೆಗೆ ಮಾಡಿದಕ್ಕೆ ಅವರ ಬೆಂಬಲಿಗರು ಜಗ್ಗೇಶ್ ಅವರ ವಿದೇಶಿ ಸೊಸೆಯ ಬಗ್ಗೆ ಪ್ರಶ್ನಿಸಿದ್ದಾರೆ. ವಿದೇಶಿ ಯುವತಿಯನ್ನು ಮದುವೆಯಾಗಿರುವ ಜಗ್ಗೇಶ್ ಮಗನ ಫೋಟೋ…

  • ರಾಜಕೀಯ

    ಉಪ್ಪಿ ತಮ್ಮ ರಾಜಕೀಯ ಪಕ್ಷದ ಹೆಸರನ್ನು ಘೋಷಿಸಿದ್ದಾರೆ..!ತಿಳಿಯಲು ಇದನ್ನು ಓದಿ ..

    ನಟ ಉಪೇಂದ್ರ ರಾಜಕೀಯಕ್ಕೆ ಬರುವ ವಿಷಯ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕರು ಉಪ್ಪಿ ರಾಜಕೀಯಕ್ಕೆ ಬರಲಿ ಎಂದು ಸ್ವಾಗತಿಸುತ್ತಿದ್ದರೇ, ಇನ್ನೂ ಕೆಲವರು ಇದು ಸಿನಿಮಾದಷ್ಟು ಸುಲಭವಲ್ಲ ಎಂದು ಹೇಳುತ್ತಿದ್ದಾರೆ.