ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮದುವೆ ನಿಶ್ಚಯವಾದ ಬಳಿಕ, ವಧು- ವರರು ಮಂಟಪಕ್ಕೆ ಬರಲಾರದೆ , ಊಟದ ವಿಚಾರವಾಗಿ, ಅಥವಾ ಮಂಟಪದಲ್ಲಿಯೇ ಮುರಿದ ಮದುವೆಗಳು, ಹೀಗೆ ಮದುವೆ ನಿಂತು ಹೋದ ಅನೇಕ ಘಟನೆಗಳು ನಡೆದಿರುವುದನ್ನು ಕೇಳಿರ್ತೀರಿ.
ಆದ್ರೆ ವಿಚಿತ್ರ ಎಂದರೆ ಮಂಟಪದಲ್ಲಿಯೇ ಅಣ್ಣನ ತಾಳಿ ಕಟ್ಟಬೇಕಾದ ವಧುವಿಗೆ, ತಮ್ಮ ತಾಳಿ ಕಟ್ಟಿದ ಅಚ್ಚರಿಯ ಘಟನೆಯೊಂದು ತಮಿಳುನಾಡಿನ ವೆಲ್ಲೂರುನಲ್ಲಿ ನಡೆದಿದೆ.
ಹೌದು, ಎಲ್ಲಿ ಅಂತಿರಾ- ವೆಲ್ಲೂರು ಸಮೀಪದ ತಿರುಪತ್ತೂರಿನ ಸೆಲ್ಲಾರ್ ಪೇಟೆಯ ಇಲವಂಪಟ್ಟಿಯ ಮುರುಗನ್ ದೇವಾಲಯದಲ್ಲಿ ನಡೆಯುವ ಶುಭಕಾರ್ಯಕ್ಕೆ ಬಂಧು-ಬಾಂಧವರೆಲ್ಲಾ ಸೇರಿದ್ದರು. ವರ ಇನ್ನೇನು ಕೆಲವೇ ನಿಮಿಷಗಳಲ್ಲಿ ವಧುವಿಗೆ ತಾಳಿ ಕಟ್ಟಲು ತಯಾರಾಗಿದ್ದನು. ಅಂತೆಯೇ ವಧುವರರನ್ನು ಹಸೆಮಣೆ ಮೇಲೆ ಕೂರಿಸಿ ಪುರೋಹಿತರು ವೇದ ಮಂತ್ರ ಉಚ್ಚರಿಸುತ್ತಿದ್ದರು.
ಸಿನಿಮೀಯ ರೀತಿಯಲ್ಲಿ ನಡೆಯಿತು ಮದುವೆ!
ತದನಂತರ ಬಳಿಕ ವರನ ಕೈಯಲ್ಲಿ ತಾಳಿ ಕೊಟ್ಟು ವಧುವಿನ ಕೊರಳಿಗೆ ಕಟ್ಟುವಂತೆ ಸೂಚಿಸಿದ್ರು. ಹೀಗಾಗಿ ಮದುಮಗ ತಾಳಿ ಕಟ್ಟಲು ವಧುವಿನ ಬಳಿ ಹೋಗುತ್ತಿದ್ದಂತೆಯೇ ಅಲ್ಲೇ ಇದ್ದ ಮದುಮಗನ ತಮ್ಮ ಅಣ್ಣನ ಸೈಡಿಗೆಳೆದು ತಾಳಿ ಕಸಿದುಕೊಂಡು ತಾನೇ ವಧುವಿಗೆ ತಾಳಿ ಕಟ್ಟಿದ್ದಾನೆ.
ಅಣ್ಣ ಮದುವೆಯಾಗಬೇಕಿದ್ದ ಯುವತಿಗೆ ಹೀಗೆ ತಮ್ಮ ತಾಳಿ ಕಟ್ಟಿದ್ದರಿಂದ ಅಲ್ಲಿದ್ದವರೆಲ್ಲಾ ಒಂದು ಬಾರಿ ಅವಕ್ಕಾದ್ರು. ಆದ್ರೆ ಈ ಘಟನೆಯ ಅಸಲಿ ವಿಷಯವೇನೆಂದರೆ ವರನ ತಮ್ಮ ಹಾಗೂ ವಧು ಮೊದಲೇ ಪ್ರೀತಿಸಿದ್ದರು ಎಂಬ ವಿಷಯ ಗೊತ್ತಾಗಿದೆ.
ಆದ್ರೆ ಈ ವಿಚಾರ ಮನೆಯವರಿಗೆ ಗೊತ್ತಿರಲಿಲ್ಲ. ಇತ್ತ ಅಣ್ಣ ಅದೇ ಯುವತಿ ಜೊತೆ ಮದುವೆ ನಿಶ್ಚಯ ಮಾಡಿಕೊಂಡಿದ್ದ. ತಾನು ಪ್ರೀತಿಸಿದ ಯುವತಿ ಅಣ್ಣನ ಮಡದಿಯಾಗುವುದನ್ನು ಸಹಿಸಲಾರದ ತಮ್ಮ ಅಣ್ಣನನ್ನು ತಳ್ಳಿ ತಾಳಿ ಕಸಿದುಕೊಂಡು ತಾನೇ ತಾಳಿ ಕಟ್ಟಿದ್ದಾನೆ.
ಈ ಮದುವೆಗೆ ಕೊನೆಗೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಮದುವೆಯಾಗಲು ಬಂದಿದ್ದ ವರ ಮಾತ್ರ ಕಣ್ಣೀರುಡುತ್ತಾ ಮಂಟಪದಿಂದ ಹೊರನಡೆದಿದ್ದಾನೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಾಮಾನ್ಯವಾಗಿಮಧ್ಯಾಹ್ನ ಊಟ ಮಾಡಿದ ಬಳಿಕಸ್ವಲ್ಪ ನಿದ್ರೆ ಮಾಡಬೇಕು ಎಂದುಹೇಳುವುದನ್ನು ನಾವೆಲ್ಲರೂ ಕೇಳಿದ್ದೇವೆ. ಆದರೆ ಊಟವಾದ ತಕ್ಷಣವೇಮಲಗಿದರೆ ಆಗ ಜೀರ್ಣಕ್ರಿಯೆ ಮೇಲೆಪರಿಣಾಮ ಬೀರುವುದು ಮತ್ತು ಆಹಾರವು ಜೀರ್ಣವಾಗದೆಹಾಗೆ ಇರುವುದು.ಹೊಟ್ಟೆ ತುಂಬಾ ಊಟ ಮಾಡಿದ ಬಳಿಕ ನಮಗನಿಸುವುದು ನಿದ್ರೆ ಮಾಡಬೇಕು ಎಂದು. ಅದು ಮಧ್ಯಾಹ್ನವೇ ಆಗಿರಬಹುದು ಅಥವಾ ರಾತ್ರಿಯ ಊಟವೇ ಆಗಿರಬಹುದು. ಯಾಕೆಂದರೆ ಹೊಟ್ಟೆ ಭಾರವಾದ ಕೂಡಲೇ ದೇಹದಲ್ಲಿ ಜಡತ್ವ ತುಂಬುವುದು. ಇದು ನಿದ್ರೆಗೆ ಜಾರುವಂತೆ ಮಾಡುವುದು. ಆದರೆ ಊಟವಾದ ತಕ್ಷಣವೇ ಮಲಗುವುದು ಸರಿಯಾದ ಕ್ರಮವಲ್ಲ ಮತ್ತು ಇದು ಆರೋಗ್ಯದ…
ಲಕ್ನೋ: ತನ್ನ ಮೂರು ಚಿಕ್ಕ ಮಕ್ಕಳು ಮತ್ತು ತನ್ನ ಹೆಂಡತಿಯನ್ನು ಕೊಂದು ಪತಿಯೂ ನೇಣಿಗೆ ಶರಣಾದ ಘಟನೆ ಉತ್ತರ ಪ್ರದೇಶದ ಘಜಿಯಾಬಾದ್ನ ಮಸೂರಿ ಎಂಬ ಗ್ರಾಮದಲ್ಲಿ ನಡೆದಿದೆ. ಪತ್ನಿ ಮತ್ತು ಮಕ್ಕಳನ್ನು ಕೊಂದು ನೇಣು ಹಾಕಿಕೊಂಡ ಪತಿಯನ್ನು 37 ವರ್ಷದ ಪ್ರದೀಪ್ ಎಂದು ಗುರುತಿಸಲಾಗಿದೆ. ಇನ್ನು ಕೊಲೆಯದ ಪತ್ನಿಯೂ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಳು ಎನ್ನಲಾಗಿದೆ. ಈ ಘಟನೆಯಲ್ಲಿ ಎಂಟು ವರ್ಷ, ಐದು ವರ್ಷ ಮತ್ತು ಮೂರು ವರ್ಷದ ಮಕ್ಕಳನ್ನು ಹತ್ಯೆ ಮಾಡಿದ್ದಾನೆ. ಈ ಘಟನೆ ಗುರುವಾರ ರಾತ್ರಿ…
ಸ್ಯಾಂಡಲ್ವುಡ್ ನಟಿ ಶ್ರುತಿ ಹರಿಹರನ್ ಅವರು ತಮ್ಮ ಮಗಳ ನಾಮಕರಣವನ್ನು ನೆರವೇರಿಸಿದ್ದಾರೆ. ಸದ್ಯ ನಾಮಕರಣದ ಫೋಟೋವನ್ನು ಶ್ರುತಿ ಅವರ ಪತಿ ರಾಮ್ ಕಲರಿ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಶ್ರುತಿ ಹರಿಹರನ್ ಮುದ್ದಿನ ಮಗಳು ಹೇಗಿದ್ದಾಳೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಆದ್ರೀಗ ಶ್ರುತಿ ಮಗಳ ಮೊದಲ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶ್ರುತಿ ಪತಿ ರಾಮ್ ಮಗಳ ನಾಮಕರಣದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಮುದ್ದು ಮಗಳಿಗೆ ಶ್ರುತಿ ದಂಪತಿ ಇಟ್ಟ ಹೆಸರೇನು ಗೊತ್ತಾ?…
ಇಂಗ್ಲಿಷ್ ಸಂಬಳಕ್ಕಾದರೆ, ಕನ್ನಡ ಉಂಬಳಕ್ಕೆ ಎಂಬ ಮಾತು ನಾಡಿನಲ್ಲಿ ಪ್ರಚಲಿತದಲ್ಲಿದೆ. ಆದರೆ, ಕನ್ನಡ ನಮ್ಮ ಸಂಬಳ ಹಾಗೂ ಉಂಬಳ ಎರಡಕ್ಕೂ ಆಗಬೇಕು. ಈ ದಿಸೆಯಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದ್ದು, ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ದೊರಕಿಸಿಕೊಡುವ ದಿಸೆಯಲ್ಲಿ ಪ್ರಯತ್ನ ನಡೆಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಎರಡು ಸಂಸ್ಥೆಗಳು ಸೇರಿ ವಿವಿಧ ಕ್ಷೇತ್ರಗಳ ಸಾಧಕರಿಗೆ ೨೦೧೯ನೇ ಸಾಲಿನ ‘ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಿ. ಮಾತನಾಡಿದ…
ಕೈಯಲ್ಲಿ ಊಟ ಮಾಡುವುದು ನಮ್ಮ ಹಿಂದಿನ ಕಾಲದಿಂದಲೂ ರೂಡಿಯಲ್ಲಿದೆ, ಆದರೆ ಇದು ಕೇವಲ ರೂಡಿಯಲ್ಲ, ಇದು ನಮ್ಮ ಸಂಪ್ರದಾಯ. ಇತ್ತೀಚಿಗೆ ದೊಡ್ಡ ದೊಡ್ಡ ನಗರಗಳಲ್ಲಿ ಕೈಯಲ್ಲಿ ಊಟ ಮಾಡುವುದೇ ಮರೆಯಾಗಿದೆ. ಚಮಚಗಳನ್ನ ಬಳಕೆ ಮಾಡುವುದೇ ಹೆಚ್ಚಾಗಿದೆ. ಅನಿವಾರ್ಯವಾಗಿ ಕೈಯಲ್ಲಿ ತಿನ್ನುವವರು ಕೂಡ ಕಡಿಮೆಯಾಗಿದ್ದರೆ. ಕೈಯಲ್ಲಿ ಊಟ ಮಾಡುವುದರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಎಂದು ತಿಳಿದುಕೊಳ್ಳಿ.
ಕರ್ನಾಟಕದ ಮುಂಬರುವ ವಿಧಾನಸಭಾ ಚುನಾವಣೆ 2018 ಕುರಿತಂತೆ ಸಿ ಫೋರ್ ಸಂಸ್ಥೆಯು ಚುನಾವಣಾ ಪೂರ್ವ ಸಮೀಕ್ಷೆ ನಡೆಸಿ, ಆಗಸ್ಟ್ 20 ರಂದು ಪ್ರಕಟಿಸಿದೆ.