ದೇಶ-ವಿದೇಶ

ಜಗತ್ತಿನ ಹತ್ತು ಸರ್ವಾಧಿಕಾರಿಗಳ ಶಾಸನದ ಬಗ್ಗೆ ನಿಮಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ ..

1256

ಜಗತ್ತಿನ ಸರ್ವಾಧಿಕಾರಿಗಳಲ್ಲಿ 10 ಹತ್ತು ಮಂದಿ ಅಗ್ರ ಗಣ್ಯರು ಇವರೇ ವಿಶ್ವದ ಹತ್ತು ಸರ್ವಾಧಿಕಾರಿಗಳು ಅಲ್ಲಿ ಇವರು ಹೇಳಿದ್ದೇ ಶಾಸನ, ಮಾಡಿದ್ದೇ ಕಾನೂನು.

ಅಡಾಲ್ಫ್ ಹಿಟ್ಲರ್:-

ಜರ್ಮನಿಯ ನಾಜಿ ಪಾರ್ಟಿ ಮುಖ್ಯಸ್ಥರಾಗಿದ್ದ ಹಿಟ್ಲರ್ 1933ರಿಂದ 1945ರ ವರೆಗೆ ಜರ್ಮನಿ ಚಾನ್ಸಲರ್ಆಗಿದ್ದ. ಎರಡನೆ ಮಹಾಯುದ್ಧಕ್ಕೆ ಕಾರಣೀಭೂತನಾದ ವ್ಯಕ್ತಿ ಈತ. ಜರ್ಮನರೇ ಶ್ರೇಷ್ಠ ಎಂಬ ಅಭಿಪ್ರಾಯ ಹೊಂದಿದ್ದ ಹಿಟ್ಲರ್ ಯಹೂದಿಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಿಸಿದ್ದ.

ಜೋಸೆಫ್ ಸ್ಟಾಲಿನ್:-

ಅವಿಭಜಿತ ರಷ್ಯದ ಅಧ್ಯಕ್ಷ ರಾಗಿದ್ದ ಸ್ಟಾಲಿನ್ ಜಗತ್ತು ಕಂಡ ಮತ್ತೊಬ್ಬ ಕಟು ಸರ್ವಾಧಿಕಾರಿ. ಎರಡನೆ ಮಹಾಯುದ್ಧದಲ್ಲಿ ಇವರ ಪಾತ್ರವೂ ಇತ್ತು. ಸ್ಟಾಲಿನ್ ಕೂಡ ತನ್ನ ರಾಜಕೀಯ ವಿರೋಧಿಗಳನ್ನು ಸದೆಬಡಿಯುವಲ್ಲಿ ನಿಸ್ಸೀಮನಾಗಿದ್ದ.

ಮಾವೊ ಜೆಡಾಂಗ್:-

ಚೀನಾದ ಕ್ರಾಂತಿಕಾರಿ ಕಮ್ಯುನಿಷ್ಟ್ ಪಕ್ಷ ದ ಸಂಸ್ಥಾಪಕ. ಇವರ ರಾಜಕೀಯ ನೀತಿಗಳು ಮಾವೋಯಿಸಂ ಅಥವಾ ಮಾರ್ಕಿಸಮ್-ಲೆನಿನಿಸಮ್-ಮಾವೋಯಿಸಂ ಎಂದು ಖ್ಯಾತಿ ಗಳಿಸಿವೆ. ತಮ್ಮ ನೀತಿಗಳ ಅನುಷ್ಠಾನಕ್ಕೆ ದಮನಕಾರಿ ನೀತಿಯನ್ನು ಅಳವಡಿಸಿಕೊಂಡಿದ್ದ.

ಕಿಮ್ ಜಾಂಗ್ :-

ಉತ್ತರ ಕೊರಿಯಾದ ಸರ್ವಾಧಿಕಾರಿ. ಹಾಲಿ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರ ತಂದೆ. 1994 ರಿಂದ 2011 ರವರೆಗೆ ಅಧಿಕಾರದಲ್ಲಿದ್ದರು. ಹಿಟ್ಲರ್‌ಗಿಂತಲೂ ಕ್ರೂರ್ ಸರ್ವಾಧಿಕಾರಿ ಎಂದು ಬಣ್ಣಿಸಲಾಗುತ್ತದೆ.

ಸದ್ದಾಮ್ ಹುಸೇನ್:-

ಇರಾಕ್ ಅಧ್ಯಕ್ಷರಾಗಿದ್ದ ಸದ್ದಾಮ್ ಹುಸೇನ್ ಜಗತ್ತು ಕಂಡ ಮತ್ತೊಬ್ಬ  ಸರ್ವಾಧಿಕಾರಿ. ಅರಬ್ ಸೋಷಿಯಲಿಸ್ಟ್ ಪಾರ್ಟಿ ಬಾತ್‌ನ ಅಧ್ಯಕ್ಷ ರಾಗಿದ್ದ ಹುಸೇನ್ 1979ರಿಂದ 2003 ರವರೆಗೂ ಇರಾಕ್‌ನ ನಾಯಕನಾಗಿದ್ದ. ಸಮೂಹನಾಶಕ ಅಸ್ತ್ರಗಳನ್ನು ಹೊಂದಿದ್ದಾನೆಂದು ಆರೋಪಿಸಿ ಅಮೆರಿಕ ಇರಾಕ್ ಮೇಲೆ ಯುದ್ಧ ಮಾಡಿ ಸದ್ದಾಮ್‌ನನ್ನು ಸದೆಬಡಿಯಿತು.

ಇದಿ ಅಮಿನ್:-

 

ಉಗಾಂಡದ ಮೂರನೇ ಅಧ್ಯಕ್ಷ ಹಾಗೂ ಕ್ರೂರಿ ಸರ್ವಾಧಿಕಾರಿ. ಈತನ ಆಡಳಿತಾವಧಿಯಲ್ಲಿ 3 ಲಕ್ಷ ಕ್ಕೂ ಹೆಚ್ಚು ಕೊಲೆಗಳಾಗಿವೆ. ಸಾಮೂಹಿಕ ಹತ್ಯೆಗಳ ಹಿಂದಿನ ರೂವಾರಿಯೂ ಈತನೇ. ಉಗಾಂಡ ಎಂಬ ಚಿಕ್ಕ ರಾಷ್ಟ್ರ ಈತನ ಸರ್ವಾಧಿಕಾರದಿಂದಲೇ ಹೊರ ಜಗತ್ತಿಗೆ ಗೊತ್ತಾಗಿದ್ದು.

ಮೊಹಮ್ಮದ್ ಗಡ್ಡಾಫಿ:-

ಲಿಬಿಯಾದ ಸರ್ವಾಧಿಕಾರಿ. 42 ವರ್ಷಗಳು ಲಿಬಿಯಾದಲ್ಲಿ ಆಡಳಿತ ನಡೆಸಿದ ಗಡಾಫಿ ತನ್ನದೇ ಸ್ವಂತ ಜನರನ್ನು ಕೊಲೆ ಮಾಡಿಸಿದ್ದಾನೆ. ಈತನ ಆಡಳಿತದಲ್ಲಿ ಪ್ರತಿಭಟನೆಗಳಿಗೆ ಅವಕಾಶವೇ ಇರಲಿಲ್ಲ. ಆಧುನಿಕ ಜಗತ್ತು ಕಂಡ ಅತಿ ಕೆಟ್ಟ ಸರ್ವಾಧಿಕಾರಿ.

ಪೋಲ್ ಪಾಟ್:-

ಕಾಂಬೋಡಿಯಾದ ಸರ್ವಾಧಿಕಾರಿ. 1975 ರಿಂದ 1979 ರವರೆಗೆ ಅಧ್ಯಕ್ಷ ನಾಗಿದ್ದ. ಕಾಂಬೋಡಿಯಾದಲ್ಲಿ ನಡೆದ ಸಾಮೂಹಿಕ ಹತ್ಯೆಗೆ ಪಾಟ್ ಕಾರಣ. ಹಸಿವು, ಜೈಲು ಶಿಕ್ಷೆ, ಕೊಲೆಗಳಿಂದಾಗಿ ಕಾಂಬೋಡಿಯಾದಲ್ಲಿ 1೦ ಲಕ್ಷ ಜನರು ತಮ್ಮ ಪ್ರಾಣ ಬಿಟ್ಟಿದ್ದಾರೆ. ನಗರಗಳಿಂದ ಜನರನ್ನು ಓಡಿಸಿದ್ದಾನೆ.

ಆಗಸ್ಟೋ ಪಿನೊಚೆಟ್:-

ಚಿಲಿಯನ್ನು 20 ವರ್ಷ ಕ್ಕೂ ಹೆಚ್ಚು ಕಾಲ ಆಳಿದ್ದಾನೆ ಈ ಆಗಸ್ಟೋ. ಅಧಿಕಾರದ ಮೊದಲ ಮೂರು ವರ್ಷ ದಲ್ಲಿ 1 ಲಕ್ಷ ಕ್ಕೂ ಹೆಚ್ಚು ತನ್ನ ವಿರೋಧಿಗಳನ್ನು ಸೆರೆಮನೆಗೆ ತಳ್ಳಿದ. ತನ್ನ ರಾಜಕೀಯ ವಿರೋಧಿ ಗಳನ್ನು ಮುಲಾಜಿಲ್ಲದೇ ಕೊಲ್ಲುತ್ತಿದ್ದ.

ಗೆಂಘಿಸ್ ಖಾನ್:-

ಮಂಗೋಲ್ ಬುಡಕಟ್ಟು ತನ್ನ ಆಳ್ವಿಕೆಯಲ್ಲಿ ಕ್ರೂರ ಮತ್ತು ದಯೆಯಿಲ್ಲದ ಮಿಲಿಟರಿ ತಂತ್ರಗಳೊಂದಿಗೆ ಕೊಲ್ಲಿಸುತ್ತಾನೆ ಟಾಟರ್ ಸೈನ್ಯದಿಂದ ತನ್ನ ತಂದೆಯ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ತೆಮುಜಿನ್ ಅವರು ಟಾಟರ್ ಪುರುಷನನ್ನು ಕೊಂದರು. ಗೆಂಘಿಸ್ ಖಾನ್ 1227 ರಲ್ಲಿ ನಿಧನರಾದರು.ಅವರ ಸಾವಿನ ಕಾರಣ ನಿಗೂಢವಾಗಿ ಉಳಿದಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ